ಇದೆಂಥಾ ಸಿಂಹ : ಎಮ್ಮೆಗಳ ಹಿಂಡು ನೋಡಿ ಮರ ಏರಿದ ಕಾಡಿನ ರಾಜ!
- ಎಮ್ಮೆಗಳ ಹಿಂಡು ನೋಡಿ ಮರವೇರಿದ ಸಿಂಹ
- ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಸಿಂಹಗಳು ಯಾವಾಗಲೂ ಧೈರ್ಯಕ್ಕೆ ಹೆಸರುವಾಸಿ, ಕಾಡಿನ ರಾಜ ಎಂದು ಕರೆಯಲ್ಪಡುವ ಸಿಂಹಗಳು ತನ್ನ ಬೇಟೆ ನೋಡಿದಾಗ ಮೇಲೆ ಎಗರಿ ಬೀಳುವುದೇ ಹೆಚ್ಚು. ಇತರ ಪ್ರಾಣಿಗಳು ಅಷ್ಟೇ ಸಿಂಹವನ್ನು ನೋಡಿದಾಗ ಜೀವ ಉಳಿಸಿಕೊಳ್ಳಲು ಸ್ಥಳದಿಂದ ಓಡಲು ಶುರು ಮಾಡುತ್ತವೆ. ಆದರೆ ಇಲ್ಲೊಂದು ಕಡೆ ವಿಡಿಯೋದಲ್ಲಿ ಎಮ್ಮೆಗಳ ಹಿಂಡು ನೋಡುತ್ತಿದ್ದಂತೆ ಸಿಂಹವೊಂದು ಮರವೇರಿದ್ದು ಕೆಳಗೆ ಎಮ್ಮೆಗಳ ದೊಡ್ಡ ಹಿಂಡಿದೆ.
ಎಮ್ಮೆಗಳ ಹಿಂಡಿನಿಂದ ತಪ್ಪಿಸಿಕೊಳ್ಳಲು ಸಿಂಹವೊಂದು ಮರವನ್ನು ಹತ್ತಲು ಪ್ರಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಜನ ಅಚ್ಚರಿಗೊಳಗಾಗಿದ್ದಾರೆ. ದಣಿದಿದ್ದ ಸಿಂಹ ಮರದಲ್ಲಿ ಕ್ರಮೇಣ ತನ್ನ ಹಿಡಿತವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ ಮತ್ತು ವೀಡಿಯೊ ಥಟ್ಟನೆ ಕೊನೆಗೊಂಡಾಗ ತೊಗಟೆಯ ಕೆಳಗೆ ಜಾರಲು ಪ್ರಾರಂಭಿಸುತ್ತದೆ. ಆದರೆ ಈ ವೀಡಿಯೊವನ್ನು ಎಲ್ಲಿ ಸೆರೆ ಹಿಡಿಯಲಾಗಿದೆ ಎಂಬ ಬಗ್ಗೆ ಉಲ್ಲೇಖವಿಲ್ಲ.
ನಾಲ್ಕು ವಾರಗಳ ಹಿಂದೆ ಪೋಸ್ಟ್ ಮಾಡಿದ ಈ ವೀಡಿಯೊವನ್ನು 22,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಎಮ್ಮೆಗಳಿಗೆ ಹೆದರಿದ ಸಿಂಹ ಮರವೇರಿ ಅದರ ಜೀವ ಉಳಿಸಿಕೊಳ್ಳಲು ನೋಡುತ್ತಿರುವ ದೃಶ್ಯವನ್ನು ನೋಡಿದ ಜನ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯ ಮಾಡುತ್ತಿದ್ದಾರೆ.
ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಧುತ್ತನೇ ಎದುರಾದ ಸಿಂಹ... ದೇವರನಾಮ ಜಪಿಸಿದ ಸವಾರರು.. ವೈರಲ್ ವಿಡಿಯೋ
ಮರವನ್ನು ಗಟ್ಟಿಯಾಗಿ ಹಿಡಿದುಕೋ ನಿನ್ನ ಅಪ್ಪ ಬರುತ್ತಿದ್ದಾರೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲವೊಮ್ಮೆ ಬೇಟೆಗಾರನು ಬೇಟೆಯಾಗುತ್ತಾನೆ ಎಂದು ಮತ್ತೊರ್ವ ಕಾಮೆಂಟ್ ಮಾಡಿದ್ದಾರೆ. ಸಿಂಹ ಬೇರೆಡೆ ಓಡುವ ಬದಲು ಮರವೇಕೆ ಏರುತ್ತಿದೆ ಎಂದು ಇನ್ನೂ ಅನೇಕರು ಕಾಮೆಂಟ್ ಮಾಡಿದ್ದಾರೆ. 2015 ರಲ್ಲಿ ಕೀನ್ಯಾದಿಂದ (Kenya) ಇದೇ ರೀತಿಯ ಘಟನೆ ವರದಿಯಾಗಿತ್ತು, ಕೋಪಗೊಂಡ ಎಮ್ಮೆಗಳ ಹಿಂಡಿನಿಂದ ಪಾರಾಗಲೂ ಸಿಂಹವು ಮರವನ್ನು ಏರಿತ್ತು.
ಮೊಸಳೆ ಬಾಯಿಯಿಂದ ಕ್ಷಣದಲ್ಲಿ ಎಸ್ಕೇಪ್ ಆದ ಸಿಂಹ.. ವಿಡಿಯೋ
ಎಮ್ಮೆಗಳು ಸಿಂಹವನ್ನು ನೋಡಿ ಓಡಿಹೋಗುವ ಬದಲು ಮರದ ಕೆಳಗೆ ಜಮಾಯಿಸಿ ಸಿಂಹ ಬೀಳುವುದನ್ನು ಕಾಯುತ್ತಿದ್ದವು ಎಂದು ಡೈಲಿ ಮೇಲ್ ವರದಿ ಮಾಡಿದೆ. ಕೀನ್ಯಾದ (Kenya) ಮಸಾಯಿ ಮಾರಾ ಮೀಸಲು ಅರಣ್ಯ (Maasai Mara reserve) ಪ್ರದೇಶದಲ್ಲಿ ತನ್ನ ಹೆಂಡತಿಯೊಂದಿಗೆ ಹೋಗುತ್ತಿದ್ದಾಗ ಮಾಜಿ ಸೇನಾ ಅಧಿಕಾರಿಯೊಬ್ಬರು ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಕಳೆದ ವರ್ಷ, ತಾಂಜಾನಿಯಾದಲ್ಲಿ ವೈಲ್ಡ್ ಸಫಾರಿ ವೇಳೆ ಸಿಂಹಗಳ ಗುಂಪು ರಸ್ತೆಯಲ್ಲೇ ಮಲಗಿ ಟ್ರಾಫಿಕ್ ಜಾಮ್‌ಗೆ ಕಾರಣವಾಗಿದ್ದವು. ಈ ಘಟನೆ ಪ್ರವಾಸಿಗರಿಗೆ ಮುದ ನೀಡಿತ್ತು.
ಕೆಲ ತಿಂಗಳ ಹಿಂದೆ ಮಹಿಳೆಯೊಬ್ಬಳು ಸಿಂಹವನ್ನು ತನ್ನೆರಡು ಕೈಯಲ್ಲಿ ಎತ್ತಿಕೊಂಡು ಹೋಗುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಸತ್ಯಾಸತ್ಯತೆ ಬಗ್ಗೆ ತಿಳಿದು ಬಂದಿಲ್ಲ. ಆದರೆ ಇದು ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯದ ಹೊಳೆ ಸೃಷ್ಟಿಸಿದ್ದಂತು ನಿಜ. ಇಂಟರ್‌ನೆಟ್‌ನಲ್ಲಿ ಇತ್ತೀಚೆಗೆ ನಾವು ನೋಡುತ್ತಿರುವುದೆಲ್ಲವೂ ಸತ್ಯ ಎಂದು ಹೇಳಲಾಗದು. ಅದರಲ್ಲೂ ಮಹಿಳೆಯೊಬ್ಬರು ಸಿಂಹವನ್ನು ತನ್ನೆರಡು ಕೈಯಲ್ಲಿ ಹಿಡಿದು ಎತ್ತಿಕೊಂಡು ಹೋಗುವುದೆಂದರೆ ನಂಬಲು ಸಾಧ್ಯವೇ ಇಲ್ಲ. ಅದಾಗ್ಯೂ ಈ ಸುದ್ದಿ ನೆಟಿಜನ್‌ಗಳಿಗೆ ಉಂಟಾದ ಗೊಂದಲದ ಹೊರತಾಗಿಯೂ ನಿಜವಾದದು ಎಂದು ತಿಳಿದು ಬಂದಿದೆ.
ಈ ವಿಡಿಯೋದಲ್ಲಿ ಹಿಜಾಬ್ ಧರಿಸಿರುವ ಸಣ್ಣ ವಯಸ್ಸಿನ ಮಹಿಳೆಯೊಬ್ಬರು ರಸ್ತೆಯಲ್ಲಿ ಓಡಾಡುತ್ತಿದ್ದ ಸಿಂಹವನ್ನು ಅದು ಹೊರಳಾಡುತ್ತಿದ್ದರು, ತನ್ನೆರಡು ಕೈಗಳಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಈ ವಿಡಿಯೋದ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆ ಮಾಡಿದ್ದರು. ಅಲ್ಲದೇ ಈ ವಿಡಿಯೋ ದೃಶ್ಯಾವಳಿಗಳು ಕೂಡ ಅಷ್ಟೊಂದು ಸ್ಪಷ್ಟವಾಗಿರಲಿಲ್ಲ. ಹೀಗಾಗಿ ಜೊತೆ ಜೊತೆಗೆ ಹಾಸ್ಯ ಹಾಗೂ ತಮಾಷೆಯ ಟ್ರೋಲ್‌ಗಳು ಹರಿದಾಡುತ್ತಿದ್ದವು.