ಫ್ರಾನ್ಸ್‌ನಲ್ಲಿ ನಡೆದ ವೈನ್ ಫೆಸ್ಟಿವಲ್‌ ಅಂಗವಾಗಿ 400ಕ್ಕೂ ಹೆಚ್ಚು ಡ್ರೋನ್‌ಗಳು ಜೊತೆಯಾಗಿ ಆಗಸದಲ್ಲಿ ಸುಂದರ ಚಿತ್ತಾರ ಬಿಡಿಸಿದ್ದು ಈ ಸುಂದರ ಕ್ಷಣಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಆಕಾಶದಲ್ಲಿ ಲೋಹದ ಹಕ್ಕಿಗಳು ಚಿತ್ತಾರ ಬಿಡಿಸಿದ್ದನ್ನಾ ಇಷ್ಟು ದಿನ ನೀವು ಏರ್‌ ಶೋಗಳಲ್ಲಿ ನೋಡಿರಬಹುದು. ಆದರೆ ಇಲ್ಲಿ ಡ್ರೋನ್‌ಗಳು ಆಕಾಶದಲ್ಲಿ ಬೆಳಕಿನ ಚಿತ್ತಾರ ಮೂಡಿಸುತ್ತಾ ವೈನ್ ಸರ್ವ್‌ ಮಾಡಿವೆ..! ಫ್ರಾನ್ಸ್‌ನಲ್ಲಿ ನಡೆದ ವೈನ್ ಫೆಸ್ಟಿವಲ್‌ ಅಂಗವಾಗಿ 400ಕ್ಕೂ ಹೆಚ್ಚು ಡ್ರೋನ್‌ಗಳು ಜೊತೆಯಾಗಿ ಆಗಸದಲ್ಲಿ ಸುಂದರ ಚಿತ್ತಾರ ಬಿಡಿಸಿದ್ದು ಈ ಸುಂದರ ಕ್ಷಣಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ನೀವು ವೈನ್ ಪ್ರಿಯರ ಹೌದು ಆಗಿದ್ದಲ್ಲಿ ಅದಕ್ಕೂ ಒಂದು ದಿನವಿದೆ ಎಂಬುದು ನಿಮಗೆ ಗೊತ್ತಾ? ಆಲ್ಕೊಹಾಲ್‌ಯುಕ್ತವಾದ ಈ ವೈನ್‌ಗೂ ಒಂದು ದಿನವಿದೆ. ನಮ್ಮ ದೇಶದಲ್ಲಿ ವೈನ್ ವಿದೇಶದಷ್ಟು ಜನಪ್ರಿಯವಲ್ಲ ಆದರೆ ಇದು ವಿದೇಶಗಳಲ್ಲಿ ತುಂಬಾ ಜನಪ್ರಿಯ ಪಾನೀಯವಾಗಿರುವುದರಿಂದ ಇದರ ಅಸ್ತಿತ್ವವನ್ನು ಆಚರಿಸಲಾಗುತ್ತದೆ. ಹಾಗೆಯೇ ಫ್ರಾನ್ಸ್‌ನ ಬೋರ್ಡೆಕ್ಸ್‌ನಲ್ಲಿ ಜೂನ್‌ 23 ಹಾಗೂ 24 ರಂದು ವೈನ್ ಹಬ್ಬವನ್ನು ಆಚರಿಸಲಾಗಿತ್ತು. ಅದರ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೆರಗುಗೊಳಿಸುತ್ತಿದೆ. ಈ ಹಬ್ಬವನ್ನು ಮತ್ತಷ್ಟು ವೈಭವಯುತಗೊಳಿಸುವ ಸಲುವಾಗಿ ಆಕಾಶದಲ್ಲಿ ಬೆಳಕಿನ ಚಿತ್ತಾರ ಮೂಡಿಸಲಾಗಿತ್ತು. 400ಕ್ಕೂ ಹೆಚ್ಚು ಡ್ರೋನ್‌ಗಳು ಆಕಾಶದಲ್ಲಿ ವೈನ್ ಬಾಟಲ್ ಹಾಗೂ ವೈನ್‌ ಗ್ಲಾಸ್‌ನ ರೂಪದಲ್ಲಿ ಬೆಳಕಿನ ಚಿತ್ತಾರ ಮೂಡಿಸಿ ಗಮನ ಸೆಳೆದವು. ವೈನ್ ಬಾಟಲ್‌ನಿಂದ ಗ್ಲಾಸ್‌ಗೆ ವೈನ್ ಸುರಿಯುವಂತಹ ದೃಶ್ಯಗಳು ಅಲ್ಲಿ ರೂಪುಗೊಂಡು ನೋಡುಗರ ಕಣ್ಣುಗಳಿಗೆ ಮುದ ನೀಡಿದವು. ಈ ವೀಡಿಯೋವನ್ನು ದ ಫಿಜೆನ್ ಎಂಬ ಟ್ವಿಟ್ಟರ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, 6 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ. 

ಫ್ರಿಜ್‌ನಲ್ಲಿ ನೀರು, ಜ್ಯೂಸ್ ಫ್ರೀಜ್ ಆಗುತ್ತೆ, ಅಲ್ಕೋಹಾಲ್ ಯಾಕೆ ಆಗಲ್ಲ?

ಡ್ರೋನ್‌ಗಳನ್ನು ಬಳಸಿ ಈ ಚಿತ್ತಾರ ಬಿಡಿಸಿರುವುದಕ್ಕೆ ನೆಟ್ಟಿಗರು ಕೂಡ ಫುಲ್ ಖುಷ್ ಆಗಿದ್ದು, ವೀಡಿಯೋ ಕಣ್ತುಂಬಿಕೊಳ್ಳುತ್ತಿದ್ದಾರೆ. ಅನೇಕರು ಇದೊಂದು ಸೂಪರ್ ಹಾಗೂ ವಿಭಿನ್ನವಾದ ಮಾರ್ಕೇಟಿಂಗ್ ಟೆಕ್ನಿಕ್ ಎಂದು ಕಾಮೆಂಟ್ ಮಾಡಿದ್ದಾರೆ. ಡ್ರೋನ್‌ಗಳು ಗ್ರಾಫಿಕ್ ಡಿಸೈನ್ ಹಾಗೂ ಮಾರ್ಕೇಟಿಂಗ್‌ ಅನ್ನು ಬೇರೆಯದೇ ಹಂತಕ್ಕೆ ಕೊಂಡೊಯ್ದಿವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ವೈನ್ ರುಚಿ ಹೆಚ್ಚಿಸಲು ಡ್ರೋನ್‌ಗಳಿರುವಾಗ ಹಬ್ಬಕ್ಕೆ ಪಟಾಕಿ ಏಕೆ ಬೇಕು ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಬೋರ್ಡೆಕ್ಸ್‌ನ (Bordeaux) ಪ್ರವಾಸೋದ್ಯಮ ವೆಬ್‌ಸೈಟ್ ಪ್ರಕಾರ, ಬೋರ್ಡೆಕ್ಸ್ ಮತ್ತು ನೌವೆಲ್ಲೆಅಕ್ವಿಟೈನ್ (Nouvelle-Aquitaine) ಪ್ರದೇಶದಲ್ಲಿ ವಾರ್ಷಿಕ ವೈನ್ ಉತ್ಸವವನ್ನು ಜೂನ್ 22-25 ರವರೆಗೆ ನಡೆಸಲಾಗಿತ್ತು. ಈ ನಾಲ್ಕು ದಿನದ ಉತ್ಸವದಲ್ಲಿ, ಈ ಉತ್ಸವಕ್ಕೆ ಭೇಟಿ ನೀಡುವ ಪ್ರವಾಸಿಗರು ಬೋರ್ಡೆಕ್ಸ್ ಪ್ರದೇಶ ವ್ಯಾಪ್ತಿಯ ವೈನ್‌ಗಳ ದೊಡ್ಡ ವೈವಿಧ್ಯತೆಯನ್ನು ಕಾಣಬಹುದಾಗಿದೆ. ಈ ಬಾರಿಯ ಪ್ರದರ್ಶನದಲ್ಲಿ 400 ಡ್ರೋನ್‌ಗಳು ಆಕಾಶದಲ್ಲಿ ವೈನ್ ಸರ್ವ್ ಮಾಡುವ ಚಿತ್ತಾರ ಮೂಡಿಸಿ ವೀಕ್ಷಕರಿಗೆ ಮನೋರಂಜನೆ ನೀಡಿದವು.

ವೈನ್ ಕುಡಿಯೋದ್ರಿಂದ ಮಹಿಳೆಯರಿಗೆ ಕಾಡುತ್ತೆ ಈ ಸಮಸ್ಯೆಗಳು!

Scroll to load tweet…