ನೀಲಿ ಬೆಂಕಿಯುಗುಳುವ ಜ್ವಾಲಾಮುಖಿ: ಯುರೋಪಿಯನ್ ಸ್ಪೇಸ್ ಏಜೆನ್ಸಿ ಸೆರೆ ಹಿಡಿದ ಅಪರೂಪದ ದೃಶ್ಯ
ಜ್ವಾಲಾಮುಖಿ ಬೆಂಕಿಯುಗುಳುವುದು ನಿಮಗೆ ಗೊತ್ತೆ ಇದ್ದೆ. ಬಹುತೇಕ ಜ್ವಾಲಾಮುಖಿಗಳು ಕೆಂಪು ಹಾಗೂ ರಕ್ತವರ್ಣದ ಬೆಂಕಿಯ ಕೆನ್ನಾಲಿಗೆ ಚಾಚುತ್ತವೆ. ಆದರೆ ಇಂಡೋನೇಷಿಯಾದ ಈ ಜ್ವಾಲಾಮುಖಿಯೊಂದು ಪ್ರಕಾಶಮಾನವಾದ ನೀಲಿ ಬಣ್ಣದ ಜ್ವಾಲೆಗಳನ್ನು ಸೃಷ್ಟಿಸುತ್ತಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜ್ವಾಲಾಮುಖಿ ಬೆಂಕಿಯುಗುಳುವುದು ನಿಮಗೆ ಗೊತ್ತೆ ಇದ್ದೆ. ಬಹುತೇಕ ಜ್ವಾಲಾಮುಖಿಗಳು ಕೆಂಪು ಹಾಗೂ ರಕ್ತವರ್ಣದ ಬೆಂಕಿಯ ಕೆನ್ನಾಲಿಗೆ ಚಾಚುತ್ತವೆ. ಆದರೆ ಇಂಡೋನೇಷಿಯಾದ ಈ ಜ್ವಾಲಾಮುಖಿಯೊಂದು ಪ್ರಕಾಶಮಾನವಾದ ನೀಲಿ ಬಣ್ಣದ ಜ್ವಾಲೆಗಳನ್ನು ಸೃಷ್ಟಿಸುತ್ತಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಇಎಸ್‌ಎ ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿದಿದೆ. ಇದು ಭೂಮಿ ಮೇಲಿನ ಅತೀದೊಡ್ಡ ಆಸಿಡ್ ಬ್ಯಾರಲ್ ಅನ್ನು ಎಂದು ಭೂಗರ್ಭ ಶಾಸ್ತ್ರಜ್ಞರು ಈ ಜ್ವಾಲಾಮುಖಿಯನ್ನು ಬಣ್ಣಿಸಿದ್ದಾರೆ.
ಐರೋಪ್ಯದಲ್ಲಿ ಆಚರಣೆಯಲ್ಲಿರುವ ಹಾಲ್ಲೋವೀನ್ ಹಬ್ಬದ ಅಂಗವಾಗಿ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಈ ವಿಶೇಷ ವೀಡಿಯೋವನ್ನು ಬಿಡುಗಡೆ ಮಾಡಿದೆ. ಅಲ್ಲದೇ ಇದನ್ನು ಭೂಮಿ ಮೇಲಿನ ಅತ್ಯಂತ ಭಯಾನಕ ಸ್ಥಳ ಎಂದು ಕರೆದಿದೆ. ವೀಡಿಯೋದಲ್ಲಿ ಮಹಿಳೆಯೊಬ್ಬರು ಈ ಜ್ವಾಲಾಮುಖಿ ಇರುವ ಪ್ರದೇಶ ಹಾಗೂ ಅದರ ವಿಶೇಷತೆ ಬಗ್ಗೆ ವಿವರಿಸಿದ್ದಾರೆ.
'ಆಕೆಗಾಗಿ' ಹೈ ಹೀಲ್ಡ್ ಶೂ ಧರಿಸಿ ಮೈಲು ದೂರ ನಡೆದ ಪುರುಷರು: ವೀಡಿಯೋ
ಇಂಡೋನೇಷ್ಯಾದ ಪೂರ್ವ ಜಾವಾದಲ್ಲಿರುವ ಕವಾಹ್ ಇಜೆನ್ ಲೇಕ್ ಎಂಬಲ್ಲಿ ಈ ಜ್ವಾಲಾಮುಖಿ ಇದ್ದು, ನೀಲಿ ಜ್ವಾಲೆಗಳನ್ನು ಉಗುಳುವ ಆಮ್ಲದಿಂದ ಕೂಡಿದೆ. ಭೂಗರ್ಭ ಶಾಸ್ತ್ರಜ್ಞರು ಇದನ್ನು ಭೂಮಿ ಮೇಲೆ ಇರುವ ಅತಿದೊಡ್ಡ ಆಸಿಡ್ ಬ್ಯಾರೆಲ್ ಎಂದು ಕರೆದಿದ್ದಾರೆ. ಈ ಜ್ವಾಲಾಮುಖಿಯಲ್ಲಿರುವ ಹೆಚ್ಚಿನ ಪ್ರಮಾಣದ ಸಲ್ಫ್ಯೂರಿಕ್ ಆಮ್ಲ ಹಾಗೂ ವಿವಿಧ ಖನಿಜಗಳು ಈ ಜ್ವಾಲಾಮುಖಿಗೆ ನೀಲಿ ಹಾಗೂ ಹಸಿರು ಮಿಶ್ರಿತ ಬಣ್ಣವನ್ನು ನೀಡಿದೆ.
ಹಮಾಸ್ ಉಗ್ರರ ಸುರಂಗ ಧ್ವಂಸಕ್ಕೆ 'ಸ್ಪಾಂಜ್ ಬಾಂಬ್' ಬಳಕೆಗೆ ಇಸ್ರೇಲ್ ಸಿದ್ಧತೆ: ಏನಿದು ಸ್ಪಾಂಜ್ ಬಾಂಬ್?
ಇದು ಕವಾಹ್ ಇಜೆನ್‌ನಲ್ಲಿನ (Kawah Ijen) ಅತ್ಯಂತ ಅದ್ಭುತವಾದ ನೈಸರ್ಗಿಕ ವಿದ್ಯಮಾನವಾಗಿದೆ. ಈ ಜ್ವಾಲಾಮುಖಿಯ ಒಳಗಿರುವ ಸಲ್ಫ್ಯೂರಿಕ್ ಅನಿಲಗಳಿಂದ ಈ ವಿಶೇಷವಾದ ನೀಲಿಜ್ವಾಲೆಗಳು ಹೊರಹೊಮ್ಮುತ್ತವೆ. ಈ ನೀಲಿ ಜ್ವಾಲೆಗಳಿಂದಾಗಿ ಈ ಜ್ವಾಲಾಮುಖಿ ರಾತ್ರಿಯ ವೇಳೆ ಅಮೋಘವಾಗಿ ಕಾಣಿಸುತ್ತವೆ ಎಂಬುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ.
ಜಾವಾ ದ್ವೀಪದ ಪೂರ್ವ ಭಾಗದಲ್ಲಿರುವ ಈ ಅದ್ಭುತ ಜ್ವಾಲಾಮುಖಿಯಲ್ಲಿ ಅನಿಲಗಳು ಹಗಲು ರಾತ್ರಿ ಉರಿಯುತ್ತವೆ, ಆದರೆ ಅದರ ವಿಶಿಷ್ಟವಾದ ನೀಲಿ ಬಣ್ಣವನ್ನು (blue flames) ಕತ್ತಲೆಯಾದ ನಂತರ ಮಾತ್ರ ಕಾಣಲು ಸಾಧ್ಯ. ಹಗಲಿನಲ್ಲಿ ಸಾಂಪ್ರದಾಯಿಕ ಗಣಿಗಾರರು ಬಹಳ ಧೈರ್ಯ ಮಾಡಿ, ಅತ್ಯಂತ ವಿಷಕಾರಿಗ್ಯಾಸ್‌ನಿಂದ ತುಂಬಿರುವ ಈ ಜ್ವಾಲಾಮುಖಿಯ ತೀರದಿಂದ ಗಂಧಕದ ಬೃಹತ್ ತುಂಡುಗಳನ್ನು ಹೊರತೆಗೆಯುವ ಕೆಲಸ ಮಾಡುತ್ತಾರೆ.
ನೂರಾರು ಜನರು ತಮ್ಮ ಬೆತ್ತದ ಬುಟ್ಟಿಗಳಲ್ಲಿ ಪ್ರಕಾಶಮಾನವಾದ ಹಳದಿ ಬಣ್ಣದಿಂದ ಕೂಡಿದ, ನೈಸರ್ಗಿಕವಾದ ದಪ್ಪನೆ ಇರುವ ಈ ತುಂಡುಗಳನ್ನು ತುಂಬಿಸಲು ಪ್ರತಿದಿನವೂ ಬಹಳ ಅಪಾಯಕಾರಿಯಾದ ಕೆಲಸವನ್ನು ಮಾಡುತ್ತಾರೆ. ಇವರಲ್ಲಿ ಕೆಲವರು ರಕ್ಷಣಾತ್ಮಕ ಮುಖವಾಡಗಳನ್ನು ಧರಿಸುತ್ತಾರೆ. ಆದರೆ ಮತ್ತೂ ಕೆಲವರಿಗೆ ಈ ರಕ್ಷಣಾ ಉಪಕರಣವನ್ನು ಕೊಳ್ಳಲು ಸಹ ಹಣವಿಲ್ಲದಷ್ಟು ಅಸಹಾಯಕರಾಗಿದ್ದಾರೆ. ಹೀಗಾಗಿ ಅವರು ರಕ್ಷಣೆಗಾಗಿ ತಮ್ಮ ಮುಖವನ್ನು ಒದ್ದೆ ಬಟ್ಟೆಯಿಂದ ಮುಚ್ಚಿಕೊಳ್ಳುತ್ತಾರೆ. ಇಲ್ಲಿ ಕಾಣಿಸುವ ದಟ್ಟವಾದ ಹೊಗೆ ಇವರ ಕಣ್ಣುಗಳಲ್ಲಿ ಕಣ್ಣೀರು ಬರುವಂತೆ ಮಾಡುತ್ತದೆ. ಹೀಗೆ ಇವರು ಬಹಳ ಕಷ್ಟಪಟ್ಟು ಸಂಗ್ರಹಿಸಿದ ಈ ಗಂಧಕದ ತುಂಡುಗಳನ್ನು ಸ್ಥಳೀಯ ಕಾರ್ಖಾನೆಗಳು ಖರೀದಿಸುತ್ತವೆ. ಈ ಗಂಧಕವನ್ನು ಸಕ್ಕರೆ ಸಂಸ್ಕರಿಸಲು, ಬೆಂಕಿಕಡ್ಡಿ ಮಾಡಲು, ಔಷಧಿಗಳ ತಯಾರಿಗೆ ಬಳಸಲಾಗುತ್ತದೆ.
ಈ ವೀಡಿಯೋ ನೋಡಿದ ಅನೇಕರು ಜ್ವಾಲಾಮುಖಿ ಸುರಿಸುವ ಈ ನೀಲಿ ಬಣ್ಣದ ಜ್ವಾಲೆಯ ಮನನೋಹಕ ದೃಶ್ಯಕ್ಕೆ ಬೆರಗಾಗಿದ್ದಾರೆ.