Asianet Suvarna News Asianet Suvarna News

ಹಮಾಸ್‌ ಉಗ್ರರ ಸುರಂಗ ಧ್ವಂಸಕ್ಕೆ 'ಸ್ಪಾಂಜ್ ಬಾಂಬ್' ಬಳಕೆಗೆ ಇಸ್ರೇಲ್ ಸಿದ್ಧತೆ: ಏನಿದು ಸ್ಪಾಂಜ್ ಬಾಂಬ್?

ಗಾಜಾ ಪಟ್ಟಿಯಲ್ಲಿ ಹಮಾಸ್‌ ಉಗ್ರರು ನಿರ್ಮಿಸಿರುವ ಸುರಂಗಗಳು ಇಸ್ರೇಲಿ ಪಡೆಗಳಿಗೆ ಸವಾಲಾಗಿದ್ದು, ಎಷ್ಟೇ ವಾಯುದಾಳಿ ನಡೆಸಿದರೂ ಅಬೇಧ್ಯವಾಗಿವೆ ಎಂಬುದು ಗೊತ್ತಿರುವ ವಿಚಾರ. ಹೀಗಾಗಿ ಇಂಥ ಭಯೋತ್ಪಾದಕ ಸುರಂಗಗಳನ್ನು ನಾಶಮಾಡಲು ಇಸ್ರೇಲ್‌ ‘ಸ್ಪಾಂಜ್‌ ಬಾಂಬ್‌’ ತಂತ್ರದ ಮೊರೆ ಹೋಗಿದೆ.

Israel has resorted sponge bomb  to destroy terrorist tunnels by Hamas militants in the Gaza Strip akb
Author
First Published Oct 29, 2023, 7:02 AM IST

ಟೆಲ್‌ ಅವಿವ್/ಗಾಜಾ: ಗಾಜಾ ಪಟ್ಟಿಯಲ್ಲಿ ಹಮಾಸ್‌ ಉಗ್ರರು ನಿರ್ಮಿಸಿರುವ ಸುರಂಗಗಳು ಇಸ್ರೇಲಿ ಪಡೆಗಳಿಗೆ ಸವಾಲಾಗಿದ್ದು, ಎಷ್ಟೇ ವಾಯುದಾಳಿ ನಡೆಸಿದರೂ ಅಬೇಧ್ಯವಾಗಿವೆ ಎಂಬುದು ಗೊತ್ತಿರುವ ವಿಚಾರ. ಹೀಗಾಗಿ ಇಂಥ ಭಯೋತ್ಪಾದಕ ಸುರಂಗಗಳನ್ನು ನಾಶಮಾಡಲು ಇಸ್ರೇಲ್‌ ‘ಸ್ಪಾಂಜ್‌ ಬಾಂಬ್‌’ ತಂತ್ರದ ಮೊರೆ ಹೋಗಿದೆ.

ಇಸ್ರೇಲ್-ಹಮಾಸ್ ಯುದ್ಧವು ಈಗ 3 ವಾರ ಕಳೆದಿದ್ದು, ಹಮಾಸ್‌ ಉಗ್ರರು ಈಗಲೂ ತಾವು 90ರ ದಶಕದಿಂದಲೇ ನಿರ್ಮಿಸಿರುವ ಸುರಂಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಲ್ಲಿಯೇ ಇಸ್ರೇಲ್‌ನ ಸುಮಾರು 200ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಇರಿಸಿಕೊಂಡಿದ್ದಾರೆ. ಸುರಂಗದಲ್ಲಿನ ಉಗ್ರರು ತಮ್ಮ ವಿರುದ್ಧ ತಿರುಗಿ ಬೀಳುವ ಭೀತಿಯು ಇಸ್ರೇಲ್‌ನ ಸುಗಮ ಭೂದಾಳಿಗೆ ಅಡಚಣೆಯಾಗಿದೆ. ಹೀಗಾಗಿ ಈ ಭದ್ರಕೋಟೆಗಳನ್ನು ಭೇದಿಸಲು ಸ್ಪಾಂಜ್ ಬಾಂಬ್‌ (sponge bomb) ಪ್ರಯೋಗಕ್ಕೆ ಇಸ್ರೇಲ್‌ ಸೇನೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ವರದಿಗಳು ಹೇಳಿವೆ. ಆದರೆ ಇಸ್ರೇಲಿ ಸೇನೆ ಅಧಿಕೃತವಾಗಿ ಇದನ್ನು ಬಳಕೆ ಮಾಡುವ ಬಗ್ಗೆ ಈವರೆಗೂ ಹೇಳಿಕೆ ನೀಡಿಲ್ಲ.

ಒತ್ತೆಯಾಳು ಬಿಡುಗಡೆ ನಿರಾಕರಿಸಿ ಹಮಾಸ್, ಗಾಜಾ ಮೇಲೆ ದಾಳಿ ತೀವ್ರಗೊಳಿಸಿದ ಇಸ್ರೇಲ್!

ಏನಿದು ಸ್ಪಾಜ್‌ ಬಾಂಬ್‌?:

ಸ್ಪಾಂಜ್‌ ಬಾಂಬ್‌ಗಳೆಂದರೆ ಇತರ ಬಾಂಬ್‌ಗಳ ರೀತಿ ಸ್ಫೋಟಗೊಳ್ಳುವ ಬಾಂಬ್‌ಗಳಲ್ಲ. ಬದಲಾಗಿ ಇದು ರಾಸಾಯನಿಕ ಬಾಂಬ್‌ (chemical bomb) ಆಗಿದ್ದು, ಇದರಿಂದ ಹೊರಸೂಸುವ ರಾಸಾಯನಿಕವು ಸುರಂಗದ ದ್ವಾರಗಳು ಅಥವಾ ಕಿಂಡಿಗಳನ್ನು ಮುಚ್ಚಿಬಿಡುತ್ತದೆ. ಇದರಿಂದಾಗಿ ಸುರಂಗದಲ್ಲಿ ಇರುವ ಉಗ್ರರಿಗೆ ಹೊರಬರಲು ಆಗುವುದಿಲ್ಲ. ಆಗ ಇಸ್ರೇಲಿ ಸೇನೆಯು (Israeli army) ಸುಲಭವಾಗಿ ಭೂಕಾರ್ಯಾಚರಣೆ ನಡೆಸಬಹುದಾಗಿದೆ.

ಸ್ಪಾಂಜ್‌ ಬಾಂಬ್‌ ಕೆಲಸ ಹೇಗೆ?:

2 ದೊಡ್ಡ ಪ್ಲಾಸ್ಟಿಕ್‌ ಚೀಲಗಳಲ್ಲಿ 2 ವಿವಿಧ ಥರದ ರಾಸಾಯನಿಕಗಳನ್ನು ತುಂಬಿ ಇಟ್ಟಿರುತ್ತಾರೆ. ಈ 2 ಚೀಲಗಳನ್ನು ಒಂದು ಲೋಹದ ಕಂಬಕ್ಕೆ ಕಟ್ಟಿರುತ್ತಾರೆ. ಬಾಂಬ್‌ ಎಸೆದಾಗ ಈ ಎರಡೂ ಚೀಲಗಳು ಕಂಬದಿಂದ ಬೇರ್ಪಡುತ್ತವೆ. ಆಗ ಎರಡೂ ಚೀಲದಲ್ಲಿನ ವಿವಿಧ ರಾಸಾಯನಿಕಗಳು ಬೇರ್ಪಡುತ್ತವೆ ಹಾಗೂ ಆ ದ್ರವವು ನೊರೆಯಾಗಿ ಪರಿವರ್ತನೆಯಾಗುತ್ತದೆ. ಆ ನೊರೆಯು ಆ ನಂತರ ಗಟ್ಟಿಯಾಗುತ್ತದೆ ಹಾಗೂ ಸುರಂಗಗಳ ರಂಧ್ರಗಳು ಮತ್ತು ಬಾಗಿಲುಗಳನ್ನು ಮುಚ್ಚಿಬಿಡುತ್ತದೆ. ಇದರಿಂದ ಹಮಾಸ್ ಉಗ್ರರು ಸುರಂಗದಿಂದ ಹೊರಬರಲು ಆಗುವುದಿಲ್ಲ ಹಾಗೂ ಅವರ ಹೊಂಚು ದಾಳಿಯು (ಆ್ಯಂಬುಷ್‌) ವಿಫಲಗೊಳ್ಳುತ್ತದೆ.

ಇಸ್ರೇಲ್‌ ಭಾರಿ ದಾಳಿ ಮಾಡಿದ್ರೂ ಹಮಾಸ್‌ ಸುರಂಗ ಸೇಫ್‌: ಪೂರ್ಣ ಪ್ರಮಾಣದ ಭೂದಾಳಿ ಹಿಂದೇಟಿಗೂ ಇದೇ ಕಾರಣ!

ಆದರೆ ಇದರ ರಾಸಾಯನಿಕ ಮಿಶ್ರಣ ಅಪಾಯಕಾರಿ. ಈ ಹಿಂದೆ ಇದರ ಪ್ರಯೋಗದ ವೇಳೆ ಕೆಲವು ಇಸ್ರೇಲಿ ಸೈನಿಕರು ಕಣ್ಣು ಕಳೆದುಕೊಂಡಿದ್ದೂ ಉಂಟು ಎಂದು ವರದಿಗಳು ಹೇಳಿವೆ.

Follow Us:
Download App:
  • android
  • ios