ಬರ್ಮಿಂಗ್‌ಹ್ಯಾಮ್‌ನಲ್ಲಿ ಕಸ ಸಂಗ್ರಹಕಾರರ ಪ್ರತಿಭಟನೆಯಿಂದ ನಗರದಲ್ಲಿ ಕಸದ ರಾಶಿ ಹೆಚ್ಚಾಗಿದೆ. ಇದರಿಂದ ಇಲಿಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಪರಿಸ್ಥಿತಿ ನಿಭಾಯಿಸಲು ಮಿಲಿಟರಿ ಸಿಬ್ಬಂದಿಯನ್ನು ಕರೆಯಲು ಸರ್ಕಾರ ಮುಂದಾಗಿದೆ.
ಲಂಡನ್: ಪೌರ ಕಾರ್ಮಿಕರು ಅಥವಾ ಕಸ ಸಂಗ್ರಹಕಾರರು ನಗರದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ಒಂದು ದಿನ ಕೆಲಸ ಮಾಡದೇ ಹೋದರೂ ನಗರ ಗಬ್ಬೆದ್ದು ನಾರುವುದರಲ್ಲಿ ಯಾವುದೇ ಸಂಶಯವಿಲ್ಲ, ಇದಕ್ಕೊಂದು ಉದಾಹರಣೆ ಬರ್ಮಿಂಗ್‌ಹ್ಯಾಮ್‌ನ ಈ ದೃಶ್ಯಾವಳಿಗಳು. ಒಂದು ಕಾಲದಲ್ಲಿ ಇಡೀ ಪ್ರಪಂಚವನ್ನು ಆಳಿದ ಬ್ರಿಟಿಷ್ ರಾಜಮನೆತನದ ವೈಭವಕ್ಕೆ ಹೆಸರಾಗಿರುವ ಬರ್ಮಿಂಗ್ ಹ್ಯಾಮ್ ನಗರದಲ್ಲಿ ಈಗ ಜನ ಪ್ರವಾಸಿಗರು ಅಕ್ಷರಶಃ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.
ಯುನೈಟೆಟ್ ಕಿಂಗ್ಡಮ್(UK)ಅಂದರೆ ಬ್ರಿಟನ್‌ನ ಬರ್ಮಿಂಗ್ ಹ್ಯಾಮ್‌ನಲ್ಲಿ ಕಸ ಸಂಗ್ರಹಕಾರರ ಪ್ರತಿಭಟನೆಯಿಂದಾಗಿ ಇಡೀ ನಗರ ಗಬ್ಬು ವಾಸನೆ ಹೊಡೆಯುತ್ತಿದೆ. ದಾರಿಬದಿಗಳಲ್ಲಿ ಎಸೆದ ಕಸವೂ ಇಲಿ ಹೆಗ್ಗಣಗಳಿಗೆ ಪೌಷ್ಠಿಕ ಆಹಾರದಂತಾಗಿದ್ದು, ಬೆಕ್ಕಿನ ಗಾತ್ರದ ಇಲ್ಲಿ ಹೆಗ್ಗಣಗಳು ರಸ್ತೆಗಳಲ್ಲಿ ಓಡಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಈ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾವಿರಾರು ಜನ ವೀಕ್ಷಿಸಿದ್ದಾರೆ. ಅಲ್ಲದೇ ಹಲವು ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ.
ರೈಲಿನಲ್ಲೆ ಇಡೀ ಪ್ರಪಂಚ ಸುತ್ತುವ ಅವಕಾಶ, ಕೈನಲ್ಲಿ ಕಾಸಿದ್ರೆ ಇಂದೇ ಬುಕ್ ಮಾಡಿ
ಬರ್ಮಿಂಗ್ ಹ್ಯಾಮ್ ನಗರದಲ್ಲಿ ಸರಿಸುಮಾರು ಒಂದು ತಿಂಗಳಿನಿಂದಲೂ ಕಸ ಸಂಗ್ರಹಗಾರರು ಪ್ರತಿಭಟನೆ ನಡೆಸುತ್ತಿದ್ದಾರಂತೆ ಹಾಗಿದ್ದರೆ ಅಲ್ಲಿನ ಪರಿಸ್ಥಿತಿ ಹೇಗಿರಬಹುದು ನೀವೇ ಊಹಿಸಿ..! ಪರಿಣಾಮ ನಗರದ ರಸ್ತೆ ಬದಿಗಳಲ್ಲೆಲ್ಲಾ ರಾಶಿ ರಾಶಿ ಕಸದ ಚೀಲಗಳು ಬಿದ್ದಿವೆ. ಇವು ಇಲಿ ಹೆಗ್ಗಣಗಳಂತಹ ಸಸ್ತನಿಗಳಿಗೆ ಬೂರಿ ಭೋಜನ ನೀಡುತ್ತಿವೆ. ಹೀಗಾಗಿ ತಿಂದು ಕೊಬ್ಬಿದ ಬೆಕ್ಕಿನ ಗಾತ್ರದ ಇಲ್ಲಿ ಹೆಗ್ಗಣಗಳು ರೆಸ್ತೆಗಳಲ್ಲಿ ಓಡಾಡುತ್ತಾ ಜನರ ಕಣ್ಣಿಗೆ ಕಾಣಿಸಿಕೊಂಡು ಗಾಬರಿಗೊಳಿಸುತ್ತಿವೆ. ಹೀಗಾಗಿ ಇಲ್ಲಿ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ಇದರಿಂದ ಸಾಂಕ್ರಾಮಿಕ ಕಾಯಿಲೆಗಳನ್ನು ಹರಡುವ ಭೀತಿ ಎದುರಾಗಿದೆ. ಹೀಗಾಗಿ ಈಗ ಅಲ್ಲಿನ ಆಡಳಿತವೂ ಇಲಿಗಳನ್ನು ಓಡಿಸಿ ನಗರದ ಸ್ಥಿತಿಯನ್ನು ಮೊದಲಿನಂತೆ ನಿಭಾಯಿಸಲು ಮಿಲಿಟಿರಿ ಸಿಬ್ಬಂದಿಯನ್ನು ಕರೆಯುವುದಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ.
ಕಸದ ಸಂಗ್ರಹಣೆಯಿಂದಾಗುವ ಸಂಬಂಧಿತ ಸಾರ್ವಜನಿಕ ಆರೋಗ್ಯ ಅಪಾಯಗಳನ್ನು ಪರಿಹರಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಇದನ್ನು ಮಾಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ ಎಂದು ವರದಿಯಾಗಿದೆ. ಅದೇನೆ ಇರಲಿ ಕಸ ಆಯುವವರ ಒಂದು ತೀವ್ರವಾದ ಮುಷ್ಕರ ಆಡಳಿತವನ್ನು ಹೇಗೆ ಅಲುಗುವಂತೆ ಮಾಡಿದೆ ನೋಡಿ.
ಮೈಮೇಲಿರುವ ಬಟ್ಟೆ ಬಿಟ್ಟರೆ ಬೇರೇನೂ ಉಳಿದಿಲ್ಲ: ಮುರ್ಷಿದಾಬಾದ್ ವಕ್ಫ್ ಹಿಂಸಾಚಾರ ಸಂತ್ರಸ್ತರ ಗೋಳು
ಆದರೆ ಇಲ್ಲಿನ ನಗರದಲ್ಲಿ ರಾಶಿ ಹಾಕಲ್ಪಟ್ಟಿರುವ ಕಸದ ರಾಶಿಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹಲವರು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ವಾವ್ ಯುಕೆ ಎಂದು ವ್ಯಂಗ್ಯವಾಡಿದ್ದಾರೆ. ಹೋ ದೇವರೆ ಇದು ಅಮೆರಿಕಾಗಿಂತಲೂ ಕೆಟ್ಟದಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಬ್ರಿಟಿಷ್ ಆರ್ಮಿಯ ಸೈನಿಕರು ಈಗ ಕಸ ಆಯುವವರು ಆಗಬಹುದು ಎಂಬುದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಬ್ರಿಟಿಷ್ ಆರ್ಮಿಗೆ ತನ್ನದೇ ಆದ ಘನತೆ ಇದ್ದು, ದೇಶ ಕಾಯುವ ಯೋಧರನ್ನು ಕಸ ಆಯುವುದಕ್ಕೆ ಬಳಸಲು ಯುಕೆ ಮುಂದಾಗಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ.
