ಬರಾಕ್ ಒಬಾಮ ಅಧ್ಯಕ್ಷರಾಗಿದ್ದ 6 ಮುಸ್ಲಿಂ ದೇಶದ ಮೇಲೆ 26,000 ಬಾಂಬ್ ಹಾಕಲಾಗಿದೆ. ಇದೀಗ ಒಬಾಮ ಭಾರತದ ಅಲ್ಪ ಸಂಖ್ಯಾತ ಹಕ್ಕು ದಮನವಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.
ನವದೆಹಲಿ(ಜೂ.25): ಭಾರತದಲ್ಲಿ ಅಲ್ಪಸಂಖ್ಯಾತ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ ಅನ್ನೋ ಆರೋಪ ಚರ್ಚೆ ಜೋರಾಗುತ್ತಿದೆ. ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ನೀಡಿದ ಸ್ಫೋಟಕ ಹೇಳಿಕೆ ಬಳಿಕ ಈ ವಾದ ವಿವಾದ ಜೋರಾಗಿದೆ. ಇದೀಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಬರಾಕ್ ಒಬಾಮಾ ಅಮೇರಿಕ ಅಧ್ಯಕ್ಷರಾಗಿದ್ದ ವೇಳೆ 6 ಮುಸ್ಲಿಂ ರಾಷ್ಟ್ರಗಳ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. 26,000 ಬಾಂಬ್ ದಾಳಿ ನಡೆಸಲಾಗಿದೆ. ಆಗ ಎಲ್ಲಿ ಹೋಗಿತ್ತು ಅಲ್ಪಸಂಖ್ಯಾತ ಹಕ್ಕುಗಳ ದಮನ ಎಂದು ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಮರಿಕ ಭೇಟಿ ವೇಳೆ ಬರಾಕ್ ಒಬಾಮ ಈ ರೀತಿ ಹೇಳಿಕೆ ನೀಡಿರುವುದು ಅಚ್ಚರಿ ತಂದಿದೆ. ಭಾರತ ಹಾಗೂ ಅಮೆರಿಕ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಪ್ರಧಾನಿ ಮೋದಿ ಭೇಟಿಯಿಂದ ಹೊಸ ಅಧ್ಯಾಯ ಆರಂಭಗೊಂಡಿದೆ. ಇದರ ನಡುವೆ ಸುಳ್ಳು ಆರೋಪಗಳನ್ನು, ಆಧಾರ ರಹಿತ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅಲ್ಪಸಂಖ್ಯಾತರಿಗೆ ಕಿರುಕುಳ ವಿಚಾರ: ಭಾರತದಲ್ಲಿನ ‘ಹುಸೇನ್ ಒಬಾಮ’ಗಳ ಮೇಲೆ ಕ್ರಮ; ಅಸ್ಸಾಂ ಸಿಎಂ ಪ್ರತಿಕ್ರಿಯೆ
ಒಬಾಮಾ ಅಧ್ಯಕ್ಷರಾಗಿದ್ದ 6 ಮುಸ್ಲಿಂಂ ದೇಶಗಳ ಮೇಲೆ ಬರೋಬ್ಬರಿ 26,000 ಬಾಂಬ್ ದಾಳಿ ನಡೆಸಲಾಗಿದೆ. ಇದೀಗ ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕು ದಮನವಾಗುತ್ತಿದೆ ಅನ್ನೋ ಒಬಾಮಾ ಆರೋಪ ಮಾಡುತ್ತಿದ್ದಾರೆ. ಭಾರತದಲ್ಲಿ ಎಲ್ಲರಿಗೂ ಮುಕ್ತ ಸ್ವಾತಂತ್ರ್ಯವಿದೆ. ಪ್ರತಿಯೊಬ್ಬರ ಹಕ್ಕುಗಳನ್ನು ರಕ್ಷಿಸಲಾಗುತ್ತಿದೆ ಎಂದಿದ್ದಾರೆ.
ಮೋದಿಗೆ ಈಜಿಪ್ಟನ ಅತ್ಯುನ್ನತ ನಾಗರೀಕ ಪ್ರಶಸ್ತಿ ಸಿಕ್ಕಿದೆ. ಇದರೊಂದಿಗೆ ಮೋದಿ 13 ರಾಷ್ಟ್ರಗಳ ಅತ್ತುನ್ನತ ನಾಗರಿಕ ಗೌರವ ಪಡೆದುಕೊಂಡಿದ್ದಾರೆ. ಈ ಪ್ರಶಸ್ತಿಗಳ ಪೈಕಿ 6 ಪ್ರಶಸ್ತಿಗಳನ್ನು ಮುಸ್ಲಿಂ ರಾಷ್ಟ್ರಗಳು ನೀಡಿ ಗೌರವಿಸಿದೆ. ಹಾಗಾಗಿ ಒಬಾಮ ಅವರು ಮಾಡುತ್ತಿರುವ ಆರೋಪಗಳು ಆಧಾರರಹಿತವಾಗಿವೆ. ಭಾರತದ ಕುರಿತಾಗಿ ಪ್ರಧಾನಿ ಮೋದಿ ಅವರು ಎಲ್ಲರ ಎದುರು ಮಾತನಾಡುವಾಗ, ಅಮೆರಿಕದ ಮಾಜಿ ಅಧ್ಯಕ್ಷರು ಭಾರತದ ಮುಸ್ಲಿಮರ ಬಗ್ಗೆ ಮಾತನಾಡಿರುವುದು ಆಶ್ಚರ್ಯ ಮೂಡಿಸಿದೆ. ಒಬಾಮ ಅವರು ಸಿರಿಯಾ, ಯೆಮನ್, ಸೌದಿ ಮತ್ತು ಇರಾಕ್ ಮೇಲೆ ಬಾಂಬ್ ದಾಳಿ ನಡೆಸಿರಲಿಲ್ಲವೇ. ಇದಾದ ಬಳಿಕವೂ ಅವರು ಈ ರೀತಿಯ ಆರೋಪ ಮಾಡಿದರೆ ಜನ ನಂಬುತ್ತಾರೆಯೇ ಎಂದು ಅವರು ಅವರು ಪ್ರಶ್ನಿಸಿದ್ದಾರೆ.
ದಶಕದ ಹಿಂದೆ ಸಾಮಾನ್ಯ ವ್ಯಕ್ತಿಯಾಗಿ ಶ್ವೇತಭವನ ನೋಡಿದ್ದೆ, ನೆನಪು ಬಿಚ್ಚಿಟ್ಟ ಪ್ರಧಾನಿ ಮೋದಿ!
ಮೋದಿ ಅಮೆರಿಕ ಭೇಟಿ ಕೈಗೊಂಡಿದ್ದ ಸಮಯದಲ್ಲಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಬರಾಕ್ ಒಬಾಮ, ‘ಭಾರತದಲ್ಲಿ ಮುಸ್ಲಿಮರ ರಕ್ಷಣೆಯ ಬಗ್ಗೆ ಗಮನ ಹರಿಸುವುದು ಪ್ರಮುಖ ವಿಷಯವಾಗಿದೆ. ಈ ಕುರಿತಾಗಿ ಬೈಡೆನ್ ತಿಳಿಹೇಳಬೇಕಿದೆ’ ಎಂದು ಹೇಳಿದ್ದರು. ಬರಾಕ್ ಒಬಾಮ ಆರೋಪದ ಬೆನ್ನಲ್ಲೇ ಕೆಲ ಪತ್ರಕರ್ತರು ಇದೇ ಪ್ರಶ್ನೆಯನ್ನು ಮೋದಿಗೆ ಕೇಳಲಾಗಿತ್ತು. ಅಮೆರಿಕ ಭೇಟಿಯಲ್ಲಿ ಕೇಳಿದ ಈ ಪ್ರಶ್ನಗಳಿಗೆ ಮೋದಿ ಖಡಕ್ ತಿರುಗೇಟು ನೀಡಿದ್ದರು.
