ಬಾಂಗ್ಲಾದೇಶ: 1971ರ ಯುದ್ಧದಲ್ಲಿ ಪಾಕ್ ಸೇನೆ ಶರಣಾಗಿದ್ದನ್ನು ಬಿಂಬಿಸುವ ಐತಿಹಾಸಿಕ ಪ್ರತಿಮೆಯೂ ಧ್ವಂಸ
1971ರಲ್ಲಿ ಈಗಿನ ಪಾಕಿಸ್ತಾನದಿಂದ ಸಂಪೂರ್ಣವಾಗಿ ಬೇರ್ಪಟ್ಟು ಪ್ರತ್ಯೇಕ ಬಾಂಗ್ಲಾದೇಶವೆನಿಸಿಕೊಂಡಾಗ ಅಂದಿನ ಬಾಂಗ್ಲಾ ಪಾಕಿಸ್ತಾನ ಯುದ್ಧದಲ್ಲಿ ಪಾಕಿಸ್ತಾನ ಸೇನೆಯೂ ಸೋತು ಶರಣಾದ ಕ್ಷಣವನ್ನು ನೆನಪಿಸುವ ಐತಿಹಾಸಿಕ ಪ್ರತಿಮೆಯನ್ನು ಬಾಂಗ್ಲಾದೇಶದಲ್ಲಿ ದುಷ್ಕರ್ಮಿಗಳು ಹೊಡೆದುರುಳಿಸಿ ಧ್ವಂಸ ಮಾಡಿದ್ದಾರೆ.
ನವದೆಹಲಿ: ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿಸಿ ಆರಂಭವಾದ ದಂಗೆ ನಂತರ ಶೇಕ್ ಹಸೀನಾ ಸರ್ಕಾರದ ವಿರುದ್ಧ ತಿರುಗಿ ರಾಜಕೀಯ ತಿರುವು ಪಡೆದುಕೊಂಡ ವೇಳೆ ಈ ದಂಗೆಯ ಹಿಂದೆ ಪಾಕಿಸ್ತಾನ ಹಾಗೂ ಚೀನಾದ ಕೈವಾಡವಿದೆ ಎಂಬ ಸುದ್ದಿಯೊಂದು ಹಬ್ಬಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಈಗ ದೇಶದಲ್ಲಿ ಅಸ್ಥಿರತೆ ಸೃಷ್ಟಿಸಿರುವ ದಂಗೆಕೋರರು, ಸ್ವಾತಂತ್ರ ಬಾಂಗ್ಲಾದೇಶದ ಹಿರಿಮೆ ಎನಿಸಿದ್ದ ದೇಶ ನಿರ್ಮಾಣದ ಐತಿಹಾಸಿಕ ಕುರುಹು ಎಂದೇ ಗುರುತಿಸಲ್ಪಟ್ಟಿದ್ದ ಪ್ರತಿಮೆಗಳನ್ನು ಧ್ವಂಸ ಮಾಡಿದ್ದಾರೆ. 1971ರಲ್ಲಿ ಈಗಿನ ಪಾಕಿಸ್ತಾನದಿಂದ ಸಂಪೂರ್ಣವಾಗಿ ಬೇರ್ಪಟ್ಟು ಪ್ರತ್ಯೇಕ ಬಾಂಗ್ಲಾದೇಶವೆನಿಸಿಕೊಂಡಾಗ ಅಂದಿನ ಬಾಂಗ್ಲಾ ಪಾಕಿಸ್ತಾನ ಯುದ್ಧದಲ್ಲಿ ಪಾಕಿಸ್ತಾನ ಸೇನೆಯೂ ಸೋತು ಶರಣಾದ ಕ್ಷಣವನ್ನು ನೆನಪಿಸುವ ಐತಿಹಾಸಿಕ ಪ್ರತಿಮೆಯನ್ನು ಬಾಂಗ್ಲಾದೇಶದಲ್ಲಿ ದುಷ್ಕರ್ಮಿಗಳು ಹೊಡೆದುರುಳಿಸಿ ಧ್ವಂಸ ಮಾಡಿದ್ದಾರೆ.
ಪ್ರತ್ಯೇಕ ಸ್ವಾತಂತ್ರ ಬಾಂಗ್ಲಾದೇಶಕ್ಕಾಗಿ ಹೋರಾಡಿದ್ದ ಯೋಧರು ಹಾಗೂ ಅಂದಿನ ಮಹತ್ವದ ಒಪ್ಪಂದದ ಭಾಗವಾಗಿ ಈ ಐತಿಹಾಸಿಕ ಸ್ವಾತಂತ್ರ ಪ್ರತಿಮೆಗಳನ್ನು ನಿರ್ಮಿಸಲಾಗಿತ್ತು. ಆದರೆ ದುಷ್ಕರ್ಮಿಗಳು ಸ್ವಾತಂತ್ರ ಬಾಂಗ್ಲಾದ ಪ್ರಾಣವೆನಿಸುವ ಅದನ್ನೇ ಒಡೆದು ಹುಡಿ ಹುಡಿ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಈ ಧ್ವಂಸಗೊಂಡ ಪ್ರತಿಮೆಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ.
'1971ರ ಹುತಾತ್ಮರ ಸ್ಮಾರಕ ಪ್ರತಿಮೆಯನ್ನು, ಈ ರೀತಿ ನೋಡುವುದಕ್ಕೆ ಬೇಸರವೆನಿಸುತ್ತಿದೆ ಭಾರತ ವಿರೋಧಿ ವಿಧ್ವಂಸಕರು ಬಾಂಗ್ಲಾದೇಶದ ಮುಜಿಬ್ನಗರದಲ್ಲಿ ಇವುಗಳನ್ನು ಧ್ವಂಸ ಮಾಡಿದ್ದಾರೆ. ಭಾರತೀಯ ಸಾಂಸ್ಕೃತಿಕ ಕೇಂದ್ರಗಳು, ದೇಗುಲಗಳು, ಹಿಂದೂಗಳ ಮನೆಗಳನ್ನು ಮತೀಯವಾದಿಗಳು ಧ್ವಂಸಗೊಳಿಸಿದ ಪ್ರಕರಣದ ನಂತರ ಈ ಘಟನೆ ನಡೆದಿದೆ. ಅಲ್ಲಿನ ಮುಸ್ಲಿಂ ನಾಗರಿಕರು ಅಲ್ಲಿರುವ ಇತರ ಅಲ್ಪಸಂಖ್ಯಾತರ ಮನೆಗಳನ್ನು ಶ್ರದ್ಧಾಕೇಂದ್ರಗಳನ್ನು ರಕ್ಷಿಸಿದರು ಎಂದು ವರದಿಗಳಲ್ಲಿ ಕೇಳಲ್ಪಟ್ಟ ನಂತರವೂ ಅಲ್ಲಿ ಈ ರೀತಿಯ ಘಟನೆ ನಡೆದಿದೆ.'
ಬಾಂಗ್ಲಾದಲ್ಲಿ ಗಲಭೆಗೆ ಸೌದಿಯಲ್ಲಿ ಕುಳಿತು ಸಂಚು ರೂಪಿಸಿದ್ದ ಚೀನಾ, ಪಾಕ್
'ಹೀಗಾಗಿ ಈ ದಂಗೆಕೋರರ ಅಜೆಂಡಾ ಏನು ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ಹೀಗಾಗಿ ಯೂನುಸ್ ಅವರ ಹಂಗಾಮಿ ಸರ್ಕಾರವೂ ಈ ಬಗ್ಗೆ ತುರ್ತು ಕ್ರಮ ಕೈಗೊಂಡು ದೇಶದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಂಡು ಎಲ್ಲಾ ಬಾಂಗ್ಲಾದೇಶಿಗರ ಹಿತವನ್ನು ನಂಬಿಕೆಯನ್ನು ರಕ್ಷಿಸಬೇಕು' ಎಂದು ಬರೆದುಕೊಂಡಿರುವ ಶಶಿ ತರೂರ್, ಬಾಂಗ್ಲಾದೇಶದ ಹಂಗಾಮಿ ಪ್ರಧಾನಿಗೆ ಈ ಪೋಸ್ಟ್ ಟ್ಯಾಗ್ ಮಾಡಿದ್ದಾರೆ. ಇದರ ಜೊತೆಗೆ ಇಂತಹ ಸಂಕಷ್ಟದ ಸಮಯದಲ್ಲಿ ಬಾಂಗ್ಲಾದೇಶದ ಜನರೊಂದಿಗೆ ಇರುತ್ತದೆ ಆದರೆ ಇಂತಹ ಅರಾಜಕತೆಯ ಅತೀರೇಕವನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಶಶಿ ತರೂರ್ ಬರೆದುಕೊಂಡಿದ್ದಾರೆ.
ಬಾಂಗ್ಲಾದಲ್ಲಿ ತಾಲಿಬಾನ್ ರೀತಿ ಹಿಂಸೆ: ಅಲ್ಲೇ ಇದ್ದಿದ್ರೆ ನಮ್ಮ ಕಥೆ ಹರೋಹರ
ಅಂದಹಾಗೆ 1971ರ ಯುದ್ಧವೂ ಕೇವಲ ಬಾಂಗ್ಲದೇಶವನ್ನು ಸ್ವಾತಂತ್ರಗೊಳಿಸಿಲ್ಲ ಇದರ ಜೊತೆಗೆ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಿತ್ತು. ಈಗ ದಂಗೆಕೋರರಿಂದ ಧ್ವಂಸಗೊಂಡಿರುವ ಸ್ಮಾರಕವೂ ಅಂದಿನ ಪಾಕಿಸ್ತಾನದ ಸೇನೆಯ ಮೇಜರ್ ಜನರಲ್ ಅಮಿರ್ ಅಬ್ದುಲ್ ಖಾನ್ ನಿಯಾಜಿ ಸೋತು ಭಾರತೀಯ ಸೇನೆ ಹಾಗೂ ಬಾಂಗ್ಲಾದೇಶದ ಮುಕ್ತಿವಾಹಿನಿಗೆ ಶರಣಾಗುವುದನ್ನು ಬಿಂಬಿಸುತ್ತಿತ್ತು. ಅಂದಿನ ಯುದ್ಧದಲ್ಲಿ ಪಾಕಿಸ್ತಾನದ ಮೇಜರ್ ಜನರಲ್ ನಿಯಾಜಿ ಅವರು ತಮ್ಮ 93 ಸಾವಿರ ಯೋಧರೊಂದಿಗೆ ಭಾರತದ ಪೂರ್ವ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಗ್ ಇನ್ ಚೀಫ್ ಲೆಫ್ಟಿನೆಂಟ್ ಜನರಲ್ ಜಗ್ಜಿತ್ ಸಿಂಗ್ ಆರೋರಾ ಅವರಿಗೆ ಶರಣಾಗಿದ್ದರು. ಇದು 2ನೇ ಮಹಾಯುದ್ಧದ ನಂತರ ನಡೆದ ಅತೀದೊಡ್ಡ ಸೇನಾ ಶರಣಾಗತಿ ಎನಿಸಿತ್ತು.
ಹಸೀನಾ ಆಘಾತಗೊಂಡಿದ್ದಾರೆ, ಚೇತರಿಸಿಕೊಂಡು ಮುಂದಿನ ಕ್ರಮ ಅವರೇ ನಿರ್ಧರಿಸಲಿ: ಜೈಶಂಕರ್
ಆದರೆ ಈಗ, ಅಂದು ಪೂರ್ವ ಪಾಕಿಸ್ತಾನ ಎನಿಸಿದ್ದ ಬಾಂಗ್ಲಾವೂ ಸ್ವಾತಂತ್ರ ಬಾಂಗ್ಲಾದೇಶವೆನಿಸಿಕೊಳ್ಳಲು ಕಾರಣವಾದ ದೇಶದ ಅತ್ಯುಚ್ಛ ಸ್ಮಾರಕ ಎನಿಸಿದ್ದ ಇಂತಹ ಪ್ರತಿಮೆಗಳನ್ನೇ ದಂಗೆಕೋರರು ಧ್ವಂಸಗೊಳಿಸಿರುವುದ ನೋಡಿದ್ದರೆ ಇದರ ಹಿಂದೆ ಬೇರೆನೋ ಅಂತಾರಾಷ್ಟ್ರೀಯ ಮಟ್ಟದ ಮಸಲತ್ತುಗಳಿರುವುದು ನಿಜ ಎಂಬುದು ಸಾಬೀತಾಗುತ್ತಿದೆ. ಬಾಂಗ್ಲಾದೇಶದಲ್ಲಿ ಮೊನ್ನೆ ವಿದ್ಯಾರ್ಥಿ ದಂಗೆ ತೀವ್ರಗೊಂಡು ಹಿಂಸಾಚಾರಕ್ಕೆ ತಿರುಗಿ ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ರಾಜೀನಾಮೆ ನೀಡಿ ದೇಶ ತೊರೆದಾದ ನಂತರ ಅಲ್ಲಿನ ದಂಗೆಗೆ ಪಾಕಿಸ್ತಾನ ಹಾಗೂ ಚೀನಾ ಸೌದಿಯಲ್ಲಿ ಕುಳಿತು ಸಂಚು ರೂಪಿಸಿವೆ ಎಂಬ ಸುದ್ದಿಗಳಾಗಿದ್ದವು.
ಅಮ್ಮನ ಜೀವ ಉಳಿಸಿದ್ದಕ್ಕೆ ಧನ್ಯವಾದಗಳು: ಮೋದಿ ಸರ್ಕಾರಕ್ಕೆ ಶೇಕ್ ಹಸೀನಾ ಪುತ್ರನ ಕೃತಜ್ಞತೆ