Asianet Suvarna News Asianet Suvarna News

ಅಮ್ಮನ ಜೀವ ಉಳಿಸಿದ್ದಕ್ಕೆ ಧನ್ಯವಾದಗಳು: ಮೋದಿ ಸರ್ಕಾರಕ್ಕೆ ಶೇಕ್ ಹಸೀನಾ ಪುತ್ರನ ಕೃತಜ್ಞತೆ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರ ಪುತ್ರ ಸಜೀಬ್ ವಾಜೀದ್ ಜಾಯ್‌ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ತನ್ನ ತಾಯಿಯ ಜೀವ ಉಳಿಸಿದ ಭಾರತದ ಪ್ರಧಾನಿ ಮೋದಿ ಹಾಗೂ ಭಾರತ ಸರ್ಕಾರಕ್ಕೆ ಅವರು ಧನ್ಯವಾದ ಹೇಳಿದ್ದಾರೆ.  

Thank you for saving my mothers life Sheikh Hasina son s gratitude to Indian Government and PM Modi akb
Author
First Published Aug 10, 2024, 1:58 PM IST | Last Updated Aug 10, 2024, 1:58 PM IST

ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರ ಪುತ್ರ ಸಜೀಬ್ ವಾಜೀದ್ ಜಾಯ್‌ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ತನ್ನ ತಾಯಿಯ ಜೀವ ಉಳಿಸಿದ ಭಾರತದ ಪ್ರಧಾನಿ ಮೋದಿ ಹಾಗೂ ಭಾರತ ಸರ್ಕಾರಕ್ಕೆ ಅವರು ಧನ್ಯವಾದ ಹೇಳಿದ್ದಾರೆ.  ಬಾಂಗ್ಲಾದೇಶದಲ್ಲಿ ಸರ್ಕಾರದ ವಿರುದ್ಧ ದಂಗೆ ತೀವ್ರಗೊಂಡ ವೇಳೆ ಬಾಂಗ್ಲಾದ ಸೇನಾ ಹೆಲಿಕಾಪ್ಟರ್ ಮೂಲಕ ಶೇಕ್ ಹಸೀನಾ ದೇಶ ತೊರೆದು ಭಾರತಕ್ಕೆ ಆಗಮಿಸಿದ್ದರು. ಭಾರತದ ರಾಫೆಲ್ ಯುದ್ಧ ವಿಮಾನದ ಬೆಂಗಾವಲಿನ ಮೂಲಕ ಶೇಕ್ ಹಸೀನಾ ಅವರು ದೆಹಲಿಯ ಹಿಂಡನ್ ವಾಯುನೆಲೆಗೆ ಬಂದಿಳಿದಿದ್ದರು. 

ನನ್ನ ತಾಯಿಯ ಜೀವ ಉಳಿಸುವಲ್ಲಿ ಮೋದಿ ಅವರ ಸರ್ಕಾರದ ಕೈಗೊಂಡ ಕ್ಷಿಪ್ರ ಕಾರ್ಯಗಳಿಗಾಗಿ ಭಾರತ ಸರ್ಕಾರಕ್ಕೆ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ವೈಯಕ್ತಿಕ ಕೃತಜ್ಞತೆಗಳು. ನಾನು ಶಾಶ್ವತವಾಗಿ ಈ ಕಾರ್ಯಕ್ಕಾಗಿ ಕೃತಜ್ಞನಾಗಿರುವೆ.  ನನ್ನ ಎರಡನೇ ಸಂದೇಶ ಎಂದರೆ  ಭಾರತ ಜಾಗತಿಕ ಮಟ್ಟದಲ್ಲಿ ನಾಯಕತ್ವದ ಪಾತ್ರವನ್ನು ತೆಗೆದುಕೊಳ್ಳುವ ಅಗತ್ಯವಿದೆ. ಹಾಗೂ ಬಾಂಗ್ಲಾದೇಶದಲ್ಲಿ ಇತರ ವಿದೇಶಿ ಶಕ್ತಿಗಳು ಪರಿಸ್ಥಿತಿಯ ಲಾಭಪಡೆದುಕೊಂಡು ಸರ್ವಾಧಿಕಾರ ಮಾಡಲು ಬಿಡಬಾರದು. ಏಕೆಂದರೆ ಬಾಂಗ್ಲಾದೇಶ ಭಾರತದ ನೆರೆಯ ರಾಷ್ಟ. ಇದು ಭಾರತದ ಪೂರ್ವ ಭಾಗ. 

ಹಸೀನಾರ ತಕ್ಷಣದ ರಾಜಾಶ್ರಯ ಬೇಡಿಕೆಗೆ ಬ್ರಿಟನ್‌ ತಿರಸ್ಕಾರ? ಅಮೆರಿಕಾದಿಂದಲೂ ವೀಸಾ ನಿರಾಕರಣೆ

ಶೇಕ್ ಹಸೀನಾರ ಸರ್ಕಾರ ಬಾಂಗ್ಲಾದೇಶದಲ್ಲಿ ಶಾಂತಿ ಸ್ಥಾಪಿಸಿತ್ತು ಎಂಬುದಕ್ಕೆ ಸಾಬೀತಾಗಿರುವ ದಾಖಲೆಗಳಿದ್ದು, ಅದನ್ನು ಯಾರು ತಳ್ಳಿ ಹಾಕುವಂತಿಲ್ಲ, ಜೊತೆಗೆ ದೇಶದ ಆರ್ಥಿಕ ಬೆಳವಣಿಗೆಗೆ ಅವರ ಸರ್ಕಾರ ಕೊಡುಗೆ ನೀಡಿದೆ. ದೇಶದಲ್ಲಿ ನಡೆಯುತ್ತಿದ್ದ ದಂಗೆಯನ್ನು ನಿಲ್ಲಿಸಿ ಉಪಖಂಡದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಅವರು ಕೆಲಸ ಮಾಡಿದ್ದಾರೆ.  ನಾವು ಮಾಡಬಹುದು ಎಂಬುದನ್ನು ಸಾಬೀತು ಮಾಡಿದ ಏಕೈಕ ಸರ್ಕಾರ ಅದು. ಇತರ ಸರ್ಕಾರಗಳು ಪ್ರಯತ್ನಿಸಿ ವಿಫಲಗೊಂಡವು ಎಂದು ಶೇಕ್ ಹಸೀನಾ ಪುತ್ರ ಸುದ್ದಿಸಂಸ್ಥೆ ಎಎನ್ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

ಬಾಂಗ್ಲಾದಲ್ಲಿ ಹಿಂದೂ ಗಾಯಕನ ಮನೆಗೆ ಬೆಂಕಿ: ಸುಟ್ಟು ಬೂದಿಯಾಯ್ತು 3,000 ಸಂಗೀತ ಪರಿಕರಗಳು

ಶೇಖ್ ಹಸೀನಾ ರಾಜಾಶ್ರಯಕ್ಕೆ ಎಲ್ಲಿಯೂ ಅರ್ಜಿ ಸಲ್ಲಿಸಿಲ್ಲ
ಶೇಕ್ ಹಸೀನಾ ರಾಜಾಶ್ರಯಕ್ಕಾಗಿ ಬ್ರಿಟನ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಭಾರತಕ್ಕೆ ಆಗಮಿಸಿದ ಶೇಕ್ ಹಸೀನಾ ನಂತರ ಬ್ರಿಟನ್‌ಗೆ ತೆರಳಲಿದ್ದಾರೆ ಎಂದು ವರದಿ ಆಗಿತ್ತು. ಆದರೆ ಹಸೀನಾ ಪುತ್ರ ತಮ್ಮ ತಾಯಿ ಶೇಕ್ ಹಸೀನಾ ರಾಜಾಶ್ರಯಕ್ಕಾಗಿ ಎಲ್ಲಿಯೂ ಅರ್ಜಿ ಸಲ್ಲಿಸಿಲ್ಲ ಎಂದು ಹೇಳಿದ್ದಾರೆ. ಅಮೆರಿಕಾವೂ ಶೇಕ್ ಹಸೀನಾ ಅವರಿಗೆ ವೀಸಾ ತಿರಸ್ಕರಿಸಿದ್ದಾರೆ ಹಾಗೂ ಬ್ರಿಟನ್ ಕೂಡ ಶೇಕ್ ಹಸೀನಾ ಅವರ ತಕ್ಷಣದ ಅಥವಾ ತಾತ್ಕಾಲಿಕವಾದ ರಾಜಾಶ್ರಯದ ಬೇಡಿಕೆಯನ್ನು ತಿರಸ್ಕರಿಸಿದೆ ಎಂದು ಈ ಹಿಂದೆ ವರದಿಯಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹಸೀನಾ ಪುತ್ರ, ಹಸೀನಾ ಅವರು ಯಾವ ದೇಶಕ್ಕೂ ರಾಜಾಶ್ರಯಕ್ಕಾಗಿ ಅರ್ಜಿ ಸಲ್ಲಿಸಿಲ್ಲ ಹಾಗೂ ಯಾವ ದೇಶವೂ ಕೂಡ ಅವರ ಅರ್ಜಿಯನ್ನು ತಿರಸ್ಕರಿಸಿಲ್ಲ ಎಂದು ಹೇಳಿದ್ದಾರೆ.

 

Latest Videos
Follow Us:
Download App:
  • android
  • ios