ಮರಿಯನ್ನು ಜೋಪಾನ ಮಾಡುವ ಆನೆಗಳ ಹಿಂಡು ಸೋಲಾರ್‌ ಬೇಲಿ ದಾಟಲು ಸಹಾಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಕೊಯಮತ್ತೂರು: ಆನೆಗಳು ಅತ್ಯಂತ ಬುದ್ಧಿವಂತ ಪ್ರಾಣಿಗಳು ತಮ್ಮ ಮರಿಗಳನ್ನು ತುಂಬಾ ಜಾಗರೂಕವಾಗಿ ನೋಡುವ ಅವುಗಳು ಮರಿಗಳ ರಕ್ಷಣೆಯಲ್ಲಿ ಸದಾ ಮುಂದು ಹಾಗೆಯೇ ಇಲ್ಲಿ ಆನೆಗಳ ಹಿಂಡಿನ ವಿಡಿಯೋವೊಂದು ವೈರಲ್ ಆಗಿದ್ದು, ಆನೆಗಳ ನಡೆ ಮೆಚ್ಚುಗೆಗೆ ಪಾತ್ರವಾಗಿದೆ. ಕೊಯಮತ್ತೂರಿನ ಹೊರವಲಯದ ನರಸೀಪುರಂನಲ್ಲಿ ಎರಡು ಆನೆಗಳು ಸೋಲಾರ್‌ ಬೇಲಿಯನ್ನು ದಾಟಲು ತಮ್ಮ ಮರಿಗೆ ಸಹಾಯ ಮಾಡಿದ ವೀಡಿಯೊ ಇದಾಗಿದೆ. ಐದು ಆನೆಗಳು ಆಹಾರ ಮತ್ತು ನೀರು ಹುಡುಕಿಕೊಂಡು ಕೃಷಿ ಭೂಮಿಗೆ ಬಂದಿರುವುದನ್ನು ವೀಡಿಯೊ ತೋರಿಸುತ್ತದೆ. ಆನೆಗಳ ಹಿಂಡಿನಲ್ಲಿ ಮೊದಲೆರಡು ಆನೆಗಳು ಸೋಲಾರ್ ಬೇಲಿಯನ್ನು ದಾಟಿದರೆ, ಇಬ್ಬರು ಮರಿ ಹಾದು ಹೋಗಲು ಬೇಲಿಯನ್ನು ತಗ್ಗಿಸುತ್ತಿರುವುದನ್ನು ಕಾಣಬಹುದು.

ಆನೆಯ ಹಿಂಡು ತಮ್ಮ ಗುಂಪಿನಲ್ಲಿರುವ ಮರಿಯನ್ನು ತುಂಬಾ ಜೋಪಾನವಾಗಿ ಕಾಪಾಡುವ ದೃಶ್ಯ ಈ ವಿಡಿಯೋದಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರು ಜೋರಾಗಿ ಬೊಬ್ಬೆ ಹೊಡೆಯುತ್ತಿರುವುದು ವಿಡಿಯೋದ ಹಿನ್ನೆಲೆಯಲ್ಲಿ ಕೇಳಿ ಬರುತ್ತಿದೆ. ಈ ವಿಡಿಯೋ ಗಮನಿಸಿದರೆ ಕಾಡು ಪ್ರಾಣಿಗಳ ಬಗ್ಗೆ ಸಾರ್ವಜನಿಕರ ದೃಷ್ಟಿಕೋನ ಬದಲಾಗಿದೆ ಎಂದು ತಿಳಿದು ಬರುತ್ತದೆ. 

Scroll to load tweet…

ಬಂಡೀಪುರದಲ್ಲಿ ಅಪರೂಪದ ದೃಶ್ಯ ಸೆರೆ : ಅವಳಿ ಮರಿಗಳೊಂದಿಗೆ ಕಾಣಿಸಿಕೊಂಡ ಆನೆ

ತಮಿಳುನಾಡು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪರಿಸರ, ಹವಾಮಾನ ಬದಲಾವಣೆ ಮತ್ತು ಅರಣ್ಯ ಇಲಾಖೆ, ಸುಪ್ರಿಯಾ ಸಾಹು (Supriya Sahu) ಅವರು ಟ್ವಿಟ್ಟರ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆನೆ ಕುಟುಂಬದಿಂದ ಮುದ್ದು ಕುಟ್ಟಿ (ಮರಿ)ಗೆ Z ಕೆಟಗರಿಯ ಭದ್ರತೆ. ‘ಕುಟ್ಟಿ ಹೋಗಲಿ’ ಎಂದು ಗ್ರಾಮಸ್ಥರು ಸಹಾನುಭೂತಿಯಿಂದ ಹೇಳುವುದನ್ನು ನಾನು ಕೇಳುತ್ತಿದ್ದೇನೆ. ಬೊಲುವಂಪಟ್ಟಿ ಅರಣ್ಯದ (Boluvampatti forest) ರೇಂಜ್‌ ಅಫೀಸರ್ ಶರಣವಣನ್‌ (Saravanan) ಹೇಳುವಂತೆ ಇದೊಂದು ಹೃದಯವನ್ನು ಬೆಚ್ಚನೆಗೊಳಿಸುವ ಕ್ಷಣ ಎಂದು ಸುಪ್ರಿಯಾ ಸಾಹು ಬರೆದುಕೊಂಡಿದ್ದಾರೆ.

ಹಾಸನದ ಅನ್ನಭಾಗ್ಯ ಅಕ್ಕಿ ಮೇಲೆ ಆನೆ ಕಣ್ಣು!
ಶುಕ್ರವಾರ ರಾತ್ರಿ ಕಾಡಾನೆಗಳ ಹಿಂಡು ಕೃಷಿ ಜಮೀನಿಗೆ ನುಗ್ಗಿದ್ದವು. ನರಸೀಪುರ ಅರಣ್ಯದಿಂದ ಕೃಷಿಭೂಮಿ ಕೇವಲ ಮೂರು ಕಿ.ಮೀ. ಅಂತರದಲ್ಲಿದೆ. ನಮ್ಮ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಾಣಿಗಳನ್ನು ಕಾಡಿಗೆ ತಿರುಗಿಸಿದರು. ಆದರೆ, ಶನಿವಾರ ಆನೆಗಳು ಮತ್ತೆ ಕೃಷಿ ಭೂಮಿಗೆ ಮರಳಿದ್ದವು. ನಮ್ಮ ಸಿಬ್ಬಂದಿ ಪಟಾಕಿ ಮತ್ತು ಹಾರ್ನ್‌ಗಳನ್ನು ಬಳಸಿ ಅವರನ್ನು ಬೇರೆಡೆಗೆ ಓಡಿಸಿದರು. ಬೆಳೆ ಹಾಗೂ ಆಸ್ತಿಪಾಸ್ತಿಗೆ ಹೆಚ್ಚಿನ ಹಾನಿಯಾಗಿಲ್ಲ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.