ಕ್ರೂಸ್‌ ಹಡಗಿನಲ್ಲಿ ಪ್ರಪಂಚ ಪರ್ಯಟನೆಗಾಗಿ ತಮ್ಮೆಲ್ಲಾ ಆಸ್ತಿ ಮನೆ ಮಾರಿದ ದಂಪತಿ

 ಅಮೆರಿಕಾದ ಈ ಜೋಡಿಯೊಂದು ಕ್ರೂಸ್ ಹಡಗಿನಲ್ಲಿ ಪ್ರಪಂಚ ಪರ್ಯಟನೆಗಾಗಿ ತಮ್ಮ ಬಳಿ ಇದ್ದ, ಮನೆ, ಆಸ್ತಿ ಸೇರಿದಂತೆ ಎಲ್ಲಾ ವ್ಯವಹಾರಗಳನ್ನು ಮಾರಾಟ ಮಾಡಿದ್ದಾರೆ.

A US couple who sold all their possessions to go on a world cruise feels that living in this cruise is much cheaper than living on land akb

ನ್ಯೂಯಾರ್ಕ್: ಪ್ರಪಂಚ ಸುತ್ತಬೇಕು ಹಲವು ದೇಶಗಳನ್ನು ನೋಡಬೇಕು ಎಂಬುದು ಅನೇಕರ ಕನಸು. ಆದರೆ ಅದಕ್ಕೆ ಕೈತುಂಬಾ ಕಾಸು ಕೂಡ ಬೇಕು. ಹೀಗಾಗಿ ಅನೇಕರು ತಮ್ಮ ಕನಸುಗಳಿಗೆ ಬ್ರೇಕ್ ಹಾಕಿ ಸುಮ್ಮನೇ ಕುಳಿತು ಬಿಡುತ್ತಾರೆ. ಆದರೆ ಅಮೆರಿಕಾದ ಈ ಜೋಡಿಯೊಂದು ಕ್ರೂಸ್ ಹಡಗಿನಲ್ಲಿ ಪ್ರಪಂಚ ಪರ್ಯಟನೆಗಾಗಿ ತಮ್ಮ ಬಳಿ ಇದ್ದ, ಮನೆ, ಆಸ್ತಿ ಸೇರಿದಂತೆ ಎಲ್ಲಾ ವ್ಯವಹಾರಗಳನ್ನು ಮಾರಾಟ ಮಾಡಿದ್ದಾರೆ. ಬರೀ ಅಷ್ಟೇ ಇಲ್ಲ ಭೂಮಿ ಮೇಲೆ ವಾಸಿಸೋದಕ್ಕಿಂತ ಕ್ರೂಸ್‌ ಹಡಗಿನಲ್ಲಿ ವಾಸಿಸುವುದಕ್ಕೆ ತಗಲುವ ವೆಚ್ಚ ಕಡಿಮೆ ಎಂದು ಹೇಳಿದ್ದಾರೆ. ಇವರ ಈ ಮಾತಿಗೆ ಪ್ರವಾಸ ಪ್ರಿಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅಮೆರಿಕಾದ ಫ್ಲೋರಿಡಾ ನಿವಾಸಿಗಳಾದ ಜಾನ್ ಹಾಗೂ ಮೆಲೊಡಿ ಹೆನ್ನೆಸ್ಸೀ (Melody Hennessee) ಎಂಬುವವರೇ ಹೀಗೆ ಪ್ರಪಂಚ ಪರ್ಯಟನೆಗಾಗಿ ತಮ್ಮೆಲ್ಲಾ ಆಸ್ತಿಯನ್ನು ಮಾರಿದ ಜೋಡಿ. ಮೂರು ವರ್ಷಗಳ ಹಿಂದೆ ಇವರು ತಮ್ಮ ಬದುಕಿನ ಕನಸನ್ನು ಸಾಕಾರಗೊಳಿಸುವುದಕ್ಕಾಗಿ ತಮ್ಮೆಲ್ಲಾ ಆಸ್ತಿಯನ್ನು ಮಾರಿದ್ದರು.

ವಿಶ್ವದ ಅತಿ ಉದ್ದದ ಐಷಾರಾಮಿ ನದಿಯಾನ ಗಂಗಾ ವಿಲಾಸ..! ಕ್ರೂಸ್‌ ಹಡಗು ಯಾನದ ವೈಶಿಷ್ಟ್ಯ ಹೀಗಿದೆ..

ಈ ದಂಪತಿ ಮೊದಲಿಗೆ ಪ್ರವಾಸಕ್ಕಾಗಿ ಮೋಟರ್‌ಹೋಮ್ ಅನ್ನು ಖರೀದಿಸಿದ್ದರು. ಆದರೆ ಮೆಲೊಡಿ ಹೆನ್ನೆಸ್ಸೀ ಅವರಿಗೆ ಇದನ್ನು ಡ್ರೈವ್ ಮಾಡಿ ಮಾಡಿ ಸುಸ್ತಾದ ಹಿನ್ನೆಲೆಯಲ್ಲಿ ಅವರು ಹಡಗಿನಲ್ಲಿ ಪ್ರಪಂಚ ಪರ್ಯಟನೆಗೆ ಮುಂದಾದರು. ಇದಕ್ಕೂ ಮೊದಲು ಈ ಜೋಡಿ  ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ರಾಯಲ್ ಕೆರಿಬಿಯನ್ ಕ್ರೂಸ್‌ನ ಜಾಹೀರಾತೊಂದನ್ನು ನೋಡಿದರು. ಇದರಲ್ಲಿ 274 ದಿನ ಅಂದರೆ 9 ತಿಂಗಳು ಕಳೆಯುವ ಅವಕಾಶವಿತ್ತು. ಕೂಡಲೇ ಈ ಕ್ರೂಸನ್ನು ಸಂಪರ್ಕಿಸಿದ ಅವರು, ಕೂಡಲೇ ತಮ್ಮ ಹೆಸರು ನೋಂದಾಯಿಸಿದರು. ನಂತರ ಪ್ರಪಂಚ ಪರ್ಯಟನೆ ಆರಂಭಿಸಲು ಶುರು ಮಾಡಿದರು. ಇಲ್ಲಿವರೆಗೆ ಈ ಜೋಡಿ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಸೌತ್ ಪೆಸಿಫಿಕ್‌ನ ಹಲವು ಸ್ಥಳಗಳು ಸೇರಿದಂತೆ ಬಹುತೇಕ ಪ್ರಪಂಚದ ಹಲವು ದೇಶಗಳನ್ನು ಪೂರ್ತಿಗೊಳಿಸಿದ್ದು,  ಪ್ರಸ್ತುತ ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಸುತ್ತಾಡುತ್ತಿದ್ದಾರೆ. 

ಈ ಪ್ರಯಾಣವೂ ತಾವು ಈ ಹಿಂದೆ ಭೂಮಿ ಮೇಲೆ ಬಂಧಿಯಾಗಿ ವಾಸ ಮಾಡುವುದಕ್ಕೆ ತಗಲುವ ವೆಚ್ಚಕ್ಕಿಂತ ಕಡಿಮೆ ಎಂದಿದ್ದಾರೆ.  ಈಗ ನಮಗೆ ಟೆಲಿಫೋನ್ ಬಿಲ್, ಶಿಪ್ಪಿಂಗ್ ಬಿಲ್, ಕ್ರೆಡಿಟ್ ಕಾರ್ಡ್ ಬಿಲ್,  ಬಿಟ್ಟರೇ ಬೇರೇನೂ ಪಾವತಿ ಮಾಡಬೇಕಾಗಿಲ್ಲ, ಯಾವುದೇ ಮನೆಯ ವೆಚ್ಚವನ್ನು ಹೊಂದಿಲ್ಲ, ಇದರ ಜೊತೆಗೆ ಯಾವುದೇ ವಾಹನ ವಿಮೆ, ಮನೆ ವಿಮೆ ಪಾವತಿ ಮಾಡಬೇಕಿಲ್ಲ, ಈ ಕ್ರೂಸಿ ಶಿಪ್ ಯಾನ ಅಗ್ಗವಾಗಿದೆ ಎಂಬುದಂತೂ ನಮಗೆ ಖಚಿತವಾಗಿದೆ ಎಂದು ಈ ದಂಪತಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ. 

ಕ್ರೂಸ್ ಶಿಪ್‌ನಲ್ಲಿ 12ವರ್ಷಕ್ಕೆ ಅಪಾರ್ಟ್‌ಮೆಂಟ್ ಲೀಸ್‌ಗೆ ಪಡೆದ ಮೆಟಾ ಉದ್ಯೋಗಿ

 

Latest Videos
Follow Us:
Download App:
  • android
  • ios