ಸಿಕ್ಕ ಸಿಕ್ಕವರ ಮೇಲೆ ಇರಾನ್ ದಾಳಿ, 15 ಭಾರತೀಯರಿದ್ದ ತೈಲ ಹಡಗಿನ ಮೇಲೆ ಮಿಸೈಲ್ ಆ್ಯಟಾಕ್, ಅಲ್ ಖಮೇನಿ ಹತ್ಯೆಯಿಂದ ಇರಾನ್ ಕೆರಳಿ ಕೆಂಡವಾಗಿದೆ. ಆದರೆ ಅಮೆರಿಕ ಹಾಗೂ ಇಸ್ರೇಲ್ ಮೇಲೆ ತಿರುಗೇಟು ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಿಕ್ಕ ಸಿಕ್ಕರವರ ಮೇಲೆ ದಾಳಿ ಮಾಡುತ್ತಿದೆ.

ಹೊರ್ಮುಜ್ (ಮಾ.01) ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಮುಗಿ ಬಿದ್ದಿದೆ. ಮಿಸೈಲ್, ಬಾಂಬ್ ಮೂಲಕ ಇರಾನ್ ಧ್ವಂಸ ಮಾಡುತ್ತಿದೆ. ಈ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಲ್ ಖಮನೇನಿ ಹತ್ಯೆಯಾಗಿದ್ದಾರೆ. ಅಲ್ ಖಮೆನೇನಿ ಟಾರ್ಗೆಟ್ ಮಾಡಿ ಅಮೆರಿಕ ಹಾಗೂ ಇಸ್ರೇಲ್ ದಾಳಿ ಮಾಡಿತ್ತು. ಇದೀಗ ಇರಾನ್, ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಶಿಯಾ ಮುಸ್ಲಿಮರು ಖಮನೇನಿ ಹತ್ಯೆಗೆ ಕಣ್ಣೀರಿಟ್ಟಿದೆ. ಖಮನೇನಿ ಹತ್ಯೆಯಿಂದ ಕೆರಳಿರುವ ಇರಾನ್‌ಗೆ ಪ್ರತಿಯಾಗಿ ಅಮೆರಿಕ ಹಾಗೂ ಇಸ್ರೇಲ್ ಮೇಲೆ ದಾಳಿ ಮಾಡಲು ಸಾಧ್ಯವಾಗುತ್ತಿಲ್ಲ. ದಾಳಿ ಮಾಡಿದರೆ ಇರಾನ್ ಭಸ್ಮವಾಗುವ ಆತಂಕವೂ ಇದೆ. ಹೀಗಾಗಿ ಇರಾನ್ ಎದುರಿಗೆ ಸಿಕ್ಕವರ ಮೇಲೆ ದಾಳಿ ಮಾಡುತ್ತಿದೆ. ಹತ್ತಿರಲ್ಲದೇ ಇದೆ ಎಂದು ದುಬೈ, ಅಬುಧಾಬಿ ಸೇರಿದಂತೆ ಅರಬ್ ರಾಷ್ಟ್ರಗಳ ಮೇಲೆ ದಾಳಿ ಮಾಡಿದೆ. ಇಷ್ಟು ಸಾಲದು ಎಂಬಂತೆ ಇದೀಗ ಹರ್ಮುಜ್ ಜಲಮಾರ್ಗದ ಮೂಲಕ ಬರುತ್ತಿದ್ದ ತೈಲ ಟ್ಯಾಂಕರ್ ಹಡಗಿನ ಮೇಲೆ ಇರಾನ್ ಮಿಸೈಲ್ ದಾಳಿ ಮಾಡಿದೆ. ಸಮುದ್ರ ಮಧ್ಯದಲ್ಲೇ ತೈಲ ಟ್ಯಾಂಕರ್ ಹೊತ್ತಿ ಉರಿದಿದೆ.

Add Asianetnews Kannada as a Preferred SourcegooglePreferred

ಒಟ್ಟು 20 ಸಿಬ್ಬಂದಿಗಳಿದ್ದ ಹಡಗು

ಈ ತೈಲ ಟ್ಯಾಂಕರ್‌ನಲ್ಲಿ 15 ಭಾರತೀಯ ಸಿಬ್ಬಂದಿಗಳಿದ್ದರು. ಇರಾನ್ ಈ ಹಡಗು ಟಾರ್ಗೆಟ್ ಮಾಡಿ ದಾಳಿ ಮಾಡಿದೆ. ಈ ತೈಲ ಟ್ಯಾಂಕರ್ ಹಡಗಿನಲ್ಲಿ ಒಟ್ಟು 20 ಸಿಬ್ಬಂದಿಗಳಿದ್ದರು. ಒಮಾನ್ ಸಮೀಪದ ಹರ್ಮುಜು ಸಮದ್ರ ಕಾಲುವೆ ಮೂಲಕ ಸಾಗುತ್ತಿದ್ದ ವೇಳೆ ಇರಾನ್ ಮಿಸೈಲ್ ದಾಳಿ ನಡೆಸಿದೆ. ಈ ಮಿಸೈಲ್ ದಾಳಿಯಲ್ಲಿ ಹಡಗಿನಲ್ಲಿದ್ದ ನಾಲ್ವರು ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಜಾತಿಕವಾಗಿ ಹೊರ್ಮುಜ್ ಅತ್ಯಂತ ಪ್ರಮುಖ ಸಮುದ್ರ ಮಾರ್ಗವಾಗಿದೆ. ಹರ್ಮುಜ್ ಚೆಕ್‌ಪಾಯಿಂಟ್ ಹಲವು ರಾಷ್ಟ್ರಗಳ ನಡುವಿನ ಸಂಪರ್ಕ ಕೊಂಡಿಯಾಗಿದೆ. ಇದೀಗ ಇರಾನ್ ಆಕ್ರೋಶ ಇತರ ದೇಶಗಳಿಗೂ ತಟ್ಟುವಂತೆ ಮಾಡಿದೆ.

ದಾಳಿ ಬೆನ್ನಲ್ಲೇ ಹಡುಗಿನ ಮೂಲಕ ಸಹಾಯಕ್ಕೆ ನೆರವು ಕೇಳಲಾಗಿದೆ. ಇತ್ತ ಒಮನ್ ಮರಿನ್‌ಟೈಮ್ ಸೆಕ್ಯೂರಿಟಿ ಪಡೆ ಸ್ಥಳಕ್ಕೆ ಧಾವಿಸಿ ಸಿಬ್ಬಂದಿಗಳ ರಕ್ಷಣೆ ಮಾಡಿದೆ. ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿರಾ ಕೋಟಿ ರೂಪಾಯಿ ತೈಲ ಸಮುದ್ರ ಮಧ್ಯದಲ್ಲಿ ಹೊತ್ತಿ ಉರಿದಿದೆ. ಹರ್ಮುಜ್ ಸಮುದ್ರ ಮಾರ್ಗದಲ್ಲಿ ನಡೆದ ಈ ಘಟನೆಯಿಂದ ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಆಮದು ಆಗುವ ತೈಲ ಪೂರೈಕೆಯಲ್ಲಿ ವ್ಯತ್ಯಸವಾಗಲಿದೆ. ಸರಕು ಸಾಗಾಣೆಗೆ ಅಡಚಣೆಯಾಗಲಿದೆ. ಇದರಿಂದ ಭಾರತ ಸೇರಿದಂತೆ ಇತರ ದೇಶಗಳು ಸಂಕಷ್ಟಕ್ಕೆ ಸಿಲುಕಲಿದೆ. ತೈಲ ಬೆಲೆ ಏರಿಕೆಯಾಗಲಿದೆ. ಇದರ ಉದ್ದೇಶದಿಂದಲೇ ಇರಾನ್ ಈ ದಾಳಿ ನಡೆಸಿದೆ.

ಇರಾನ್ ಕೊತ ಕೊತ ಕುದಿಯುತ್ತಿದೆ. ತಿರುಗೇಟು ನೀಡಲು ಸಾಧ್ಯವಾಗದೆ ದುಬೈ, ಅಬುಧಾಬಿ, ಕುವೈಟ್ ಸೇರಿದಂತೆ ಅರಬ್ ರಾಷ್ಟ್ರಗಳ ಮೇಲೆ ದಾಳಿ ಮಾಡಿದೆ. ದುಬೈ ವಿಮಾನ ನಿಲ್ದಾಣದ ಮೇಲೂ ದಾಳಿ ಮಾಡಿದೆ. ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. ಈ ದಾಳಿಯಲ್ಲಿ ನಾಗರೀಕರ ಸಾವು ನೋವು ಸಂಭವಿಸಿದೆ.