Asianet Suvarna News Asianet Suvarna News

ತಾನೇ ಪ್ರೀತಿಯಿಂದ ಸಾಕಿದ್ದ ಹಲ್ಲಿ ಕಚ್ಚಿ ವ್ಯಕ್ತಿ ಸಾವು

ಕೆಲ ದಿನಗಳ ಹಿಂದಷ್ಟೇ ನೈಜೀರಿಯಾದ ಮೃಗಾಲಯವೊಂದರಲ್ಲಿ ಹುಟ್ಟಿದಾಗಿನಿಂದ ತನ್ನ ಆರೈಕೆ ಮಾಡಿದ ಝೂ ಕೀಪರ್‌ನನ್ನುಸಿಂಹವೊಂದು  ಸಾಯಿಸಿದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಈಗ ಅಮೆರಿಕಾ ಕೊಲೆರಾಡೋದಲ್ಲಿ ವ್ಯಕ್ತಿಯೋರ್ವ ಸಾಕಿದ್ದ ಹಲ್ಲಿಯೊಂದು ಮಾಲೀಕನ್ನು ಕಚ್ಚಿ ಸಾಯಿಸಿದ ವಿಚಿತ್ರ ಘಟನೆ ನಡೆದಿದೆ. 

A man died after being bitten by a Pet lizard which he had kept with care and love akb
Author
First Published Feb 22, 2024, 2:30 PM IST

ಕೊಲೆರಾಡೋ: ಕೆಲ ದಿನಗಳ ಹಿಂದಷ್ಟೇ ನೈಜೀರಿಯಾದ ಮೃಗಾಲಯವೊಂದರಲ್ಲಿ ಹುಟ್ಟಿದಾಗಿನಿಂದ ತನ್ನ ಆರೈಕೆ ಮಾಡಿದ ಝೂ ಕೀಪರ್‌ನನ್ನುಸಿಂಹವೊಂದು  ಸಾಯಿಸಿದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಈಗ ಅಮೆರಿಕಾ ಕೊಲೆರಾಡೋದಲ್ಲಿ ವ್ಯಕ್ತಿಯೋರ್ವ ಸಾಕಿದ್ದ ಹಲ್ಲಿಯೊಂದು ಮಾಲೀಕನ್ನು ಕಚ್ಚಿ ಸಾಯಿಸಿದ ವಿಚಿತ್ರ ಘಟನೆ ನಡೆದಿದೆ. 

ಗಿಲಾ ಮೊನ್‌ಸ್ಟಾರ್ ಎಂದು ಕರೆಯಲ್ಪಡುವ ಈ ದೊಡ್ಡ ಜಾತಿಯ ಎರಡು ಹಲ್ಲಿಗಳನ್ನು ಕೊಲೆರಾಡೋದ 34 ವರ್ಷದ ವ್ಯಕ್ತಿಯೊಬ್ಬರು ಸಾಕುತ್ತಿದ್ದರು. ಮಾಂಸಾಹಾರಿ ಸರೀಸೃಪಗಳಾದ ಗಿಲಾ ಮೊನ್‌ಸ್ಟಾರ್  ಹಲ್ಲಿಗಳು ನೈಋತ್ಯ ಅಮೆರಿಕಾದ ಮೂಲ ನಿವಾಸಿ ಜೀವಿಗಳಾಗಿವೆ.  ಆದರೆ ಈ ಹಲ್ಲಿಗಳ ಕಡಿತದಿಂದ ಮನುಷ್ಯರು ಸಾವಿಗೀಡಾಗುವುದು ಕಡಿಮೆ ಆದರೆ ಈ ಪ್ರಕರಣದಲ್ಲಿ ಹಲ್ಲಿಯ 12 ಇಂಚು ಉದ್ದದ ಹಲ್ಲಿ ಕಡಿದ ಪರಿಣಾಮ ಮಾಲೀಕ ಸಾವಿಗೀಡಾಗಿದ್ದಾರೆ. 

ಮರವೆಂದು ತಪ್ಪಾಗಿ ಭಾವಿಸಿ ಮನುಷ್ಯನ ಮೈಯ್ಯನ್ನೇ ಸರಸರ ಏರಿದ ಹಲ್ಲಿ; ಮೈ ನವಿರೇಳಿಸೋ ದೃಶ್ಯ

ಹಲ್ಲಿ ಕಡಿದ ನಂತರ ಮಾಲೀಕ ಜೆಫ್ರೆಸನ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ. ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಸಾವಿನ ನಿಖರ ಕಾರಣ ತಿಳಿಯಲು ಹೆಚ್ಚುವರಿ ವಿಷಶಾಸ್ತ್ರದ ಪರೀಕ್ಷೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಗಿಲಾ ಮೊನ್‌ಸ್ಟಾರ್ ಹಲ್ಲಿಗಳು ವಿಷಕಾರಿ ಹಲ್ಲಿಗಳಾಗಿದ್ದು, ಅವು 54 ಸೆಂಟಿಮೀಟರ್ ಉದ್ದದವರೆಗೆ ಬೆಳೆಯುತ್ತವೆ. ಅವು ಭಾರವಾಗಿದ್ದು,, ನಿಧಾನವಾಗಿ ಚಲಿಸುವ ಸರೀಸೃಪಗಳಾಗಿವೆ. ಅಮೆರಿಕಾದಲ್ಲಿರುವ ಗಿಲಾ ನದಿಯ ಕಾರಣದಿಂದ ಈ ಹಲ್ಲಿಗಳಿಗೆ ಗಿಲಾ ಮೊನ್‌ಸ್ಟಾರ್ ಎಂಬ ಹೆಸರು ಬಂದಿದೆ. ಬಿಬಿಸಿ ಹೇಳುವ ಪ್ರಕಾರ ಕೊಲೆರಾಡೋದಲ್ಲಿ ಪರವಾನಗಿ ಇಲ್ಲದೇ ಈ ಗಿಲಾ ಮೊನ್‌ಸ್ಟಾರ್‌ ಅನ್ನು ಸಾಕುಪ್ರಾಣಿಯಂತೆ ಮನೆಯಲ್ಲಿ ಇಟ್ಟುಕೊಳ್ಳುವುದು ಕಾನೂನು ಬಾಹಿರವಾಗಿದೆ.

ಹಲ್ಲಿ ತಲೆ ಮತ್ತು ಹೃದಯದ ಮೇಲೆ ಬಿದ್ದರೆ ಸಂಪತ್ತು ಹೆಚ್ಚಾಗುತ್ತೆ..ದೇಹದ ಯಾವ ಭಾಗಕ್ಕೆ ಬಿದ್ದರೆ ಏನು ಫಲಿತಾಂಶ ಗೊತ್ತಾ..?

ಈ ಹಿನ್ನೆಲೆಯಲ್ಲಿ ಕೊಲೆರಾಡೋ ಪಾರ್ಕ್ ಹಾಗೂ ವನ್ಯಜೀವಿ ಅಪರಾಧ ತನಿಖಾ ವಿಭಾಗದ ಅಧಿಕಾರಿಗಳು ಮೃತ ವ್ಯಕ್ತಿಯ ಮನೆಯಲ್ಲಿ ಇದ್ದ ಗಿಲಾ ಮೊನ್‌ಸ್ಟಾರ್‌ಗಳನ್ನು ಮನೆಯಿಂದ ಹೊರಗೆ ತಂದು  ಅರಣ್ಯ ಇಲಾಖೆ ವಶಕ್ಕೆ ನೀಡುವಂತೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಇವುಗಳನ್ನು ವನ್ಯಜೀವಿ ಆರೈಕೆ ಕೇಂದ್ರಗಳಿಗೆ ಸಾಗಿಸಲಾಗುತ್ತದೆ. ಆದರೆ ವ್ಯಕ್ತಿಯ ಸಾವಿಗೆ ಕಾರಣವಾದ ಹಲ್ಲಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವಿಷವನ್ನು ಹೊರತೆಗೆದು ಪರೀಕ್ಷೆ ಮಾಡಿದ ನಂತರವಷ್ಟೇ ಮಾಲೀಕನ ಸಾವಿಗೆ ಇದು ಹೇಗೆ ಕಾರಣವಾಯಿತು ಎಂಬುದನ್ನು ತಿಳಿಯಬಹುದಾಗಿದೆ. 

ಇದಕ್ಕೂ ಮೊದಲು ಕೊನೆಯದಾಗಿ 1930ರಲ್ಲಿ ಈ ಗಿಲಾ ಮೊನ್‌ಸ್ಟಾರ್ ಕಚ್ಚಿ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದರು.  ಆದರೆ ಆ ಘಟನೆ ವೈದ್ಯಕೀಯ ಜರ್ನಲ್‌ನಲ್ಲಿ ದಾಖಲಾಗಿಲ್ಲ ಎಂದು ವೈದ್ಯಕೀಯ ವಿಷ ಶಾಸ್ತ್ರಜ್ಞ ಡಾ. ನಿಕ್ ಬ್ರಾಂಡಎಹಾಫ್ ಹೇಳಿದ್ದಾರೆ. ಸಾಮಾನ್ಯವಾಗಿ ಇವುಗಳು ಕಚ್ಚುವುದರಿಂದ ಊತ ಉಂಟಾಗುತ್ತದೆ ಅಥವಾ ರಕ್ತಸ್ರಾವವಾಗುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ ಈ ಪ್ರಕರಣದಲ್ಲಿ ವ್ಯಕ್ತಿಯ ಉಸಿರೇ ನಿಂತಿದೆ. 

Follow Us:
Download App:
  • android
  • ios