ಮರವೆಂದು ತಪ್ಪಾಗಿ ಭಾವಿಸಿ ಮನುಷ್ಯನ ಮೈಯ್ಯನ್ನೇ ಸರಸರ ಏರಿದ ಹಲ್ಲಿ; ಮೈ ನವಿರೇಳಿಸೋ ದೃಶ್ಯ
ಭಯಗೊಂಡಾಗ ಅಥವಾ ಏನೋ ಸಮಸ್ಯೆಗೆ ತುತ್ತಾದಾಗ ಕೆಲವು ಜಾತಿಯ ಹಲ್ಲಿಗಳು ಕತ್ತಿನ ಸುತ್ತ ಇರುವ ತಮ್ಮ ಫ್ರಿಲ್ ಅನ್ನು ಹರಡಿ, ವಿಶಾಲವಾಗಿಸಿಕೊಳ್ಳುತ್ತವೆ. ಅಂಥದ್ದೇ ಒಂದು ಫ್ರಿಲ್ಡ್ ಹಲ್ಲಿ ಗಾಬರಿಯಲ್ಲಿ ಓಡಿ ಬಂದು ಮನುಷ್ಯನನ್ನೇ ಏರಿದರೆ ಹೇಗೆ?
ಹಲ್ಲಿಯನ್ನು ನಮ್ಮ ದೇಶದಲ್ಲಿ ಒಂದು ರೀತಿಯಲ್ಲಿ ಕಡೆಗಣಿಸುವಂತಹ ಪ್ರಾಣಿಯನ್ನಾಗಿ ಪರಿಗಣಿಸಲಾಗಿದೆ. ಮನೆಮನೆಗಳಲ್ಲೂ ಕಾಣಸಿಗುವ ಹಲ್ಲಿಗೆ ಹಲವು ವಿಧದ ಅಪಶಕುನಗಳನ್ನೂ ಅಂಟಿಸಲಾಗಿದೆ. ಹಲ್ಲಿ ಲೊಚಗುಟ್ಟಿದರೆ ಹಾಗೆ, ಮೈಮೇಲೆ ಬಿದ್ದರೆ ಒಳ್ಳೆಯದಲ್ಲ, ಮೈ ಏನು? ದೇಹದ ಯಾವುದೇ ಭಾಗದ ಮೇಲೆ ಬಿದ್ದರೂ ಅದಕ್ಕೆ ತಕ್ಕಂತೆ ವಿಭಿನ್ನ ಪರಿಣಾಮ ಹಾಗೂ ಪರಿಹಾರಗಳನ್ನು ಸಹ ಹೇಳಲಾಗುತ್ತದೆ. ಒಟ್ಟಿನಲ್ಲಿ ಹಲ್ಲಿಯೆಂದರೆ, ಭಾರತೀಯರಿಗೆ ಅಲರ್ಜಿ. ಇಂತಹ ಹಲ್ಲಿಯಲ್ಲಿ ಸಿಕ್ಕಾಪಟ್ಟೆ ವಿಧಗಳಿವೆ. ಮರುಭೂಮಿಯ ಹಲ್ಲಿಯೇ ಬೇರೊಂದು ರೀತಿಯಲ್ಲಿರುತ್ತದೆ. ಮಳೆಕಾಡಿನ ಹಲ್ಲಿ ಮತ್ತೊಂದು ರೀತಿ. ಅಷ್ಟೇ ಅಲ್ಲ, ಬೇರೆ ಬೇರೆ ದೇಶಗಳಲ್ಲಿ ವಿಭಿನ್ನ ತಳಿಗಳ ಹಲ್ಲಿಗಳು ಕಂಡುಬರುತ್ತವೆ. ಆಸ್ಟ್ರೇಲಿಯಾ ಸವನ್ನಾ ಹುಲ್ಲುಗಾವಲು ಸೇರಿದಂತೆ ಉಷ್ಣವಲಯದ ಮಳೆಕಾಡುಗಳಲ್ಲಿ ಒಂದು ಜಾತಿಯ ಹಲ್ಲಿ ಕಂಡುಬರುತ್ತದೆ. ಅದಕ್ಕೆ ಕುತ್ತಿಗೆಯ ಬಳಿ ಫ್ರಿಲ್ ಇರುತ್ತದೆ. ಪದರಿನಂತೆ ಇರುವ ಪೊರೆ ಇದಕ್ಕಿರುತ್ತದೆ, ಭಯಗೊಂಡಾಗ ಇದನ್ನು ಬಿಚ್ಚಿ ಹಿಸ್ ಗುಟ್ಟುತ್ತಾ ಮರ ಸಿಗುವವರೆಗೂ ಹಿಂದಿರುಗಿ ನೋಡದೇ ಓಡುತ್ತದೆ. ಇಂತಹ ದೃಶ್ಯವೊಂದು ಈಗ ವೀಡಿಯೋದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲ, ಮರವೆಂದು ಭಾವಿಸಿ ಮನುಷ್ಯನನ್ನೇ ಏರಲು ಅದು ಮುಂದಾಗುವ ಮೈ ನವಿರೇಳಿಸುವ ದೃಶ್ಯವನ್ನು ಇನ್ ಸ್ಟಾಗ್ರಾಮ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.
ಎಂಝೊ ಸೆಮಾಸ್ಕೊವಿಶ್ ಎನ್ನುವವರು ವೀಡಿಯೋ (Video) ಶೇರ್ (Share) ಮಾಡಿದ್ದು, ಅದರಲ್ಲಿ ಫ್ರಿಲ್ಡ್ ಹಲ್ಲಿ (Frilled Lizard) ಅವರ ಮೈಮೇಲೆ ಏರಿಬಿಡುತ್ತದೆ. ಆಸ್ಟ್ರೇಲಿಯಾದ (Australia) ಹೊರವಲಯದಲ್ಲಿ ಅವರು ಅಡ್ಡಾಡುತ್ತಿದ್ದ ಸಮಯದಲ್ಲಿ ಎಲ್ಲಿಂದಲೋ ಓಡಿಬರುವ ಫ್ರಿಲ್ಡ್ ಹಲ್ಲಿ ಸರಸರನೆ ಅವರ ಭುಜದವರೆಗೆ (Shoulder) ಹತ್ತುತ್ತದೆ. ಅವರು ಓಡುತ್ತಿದ್ದರೂ ಅವರಿಗಿಂತ ವೇಗವಾಗಿ (Fast) ಓಡಿ ಬಂದು ಮರವೇರಿದಂತೆ ಹತ್ತಿಬಿಡುತ್ತದೆ. “ಅದು ಮರವೆಂದು (Tree) ತಪ್ಪಾಗಿ ಭಾವಿಸಿಕೊಂಡಿತು’ ಎಂದು ಅವರು ಹೇಳಿದ್ದಾರೆ.
ಕೊನೆಗೂ ನೋವು ಹೊರಹಾಕಿದ ಚಹಲ್ ಪತ್ನಿ ಧನಶ್ರೀ ವರ್ಮಾ..! ಡಿಸೆಂಬರ್‌ನಿಂದ ಸರಿಯಾಗಿ ನಿದ್ರೆ ಮಾಡಿಲ್ವಂತೆ..!
ಮೈ ಏರುವ ಹಲ್ಲಿ: ಈ ವೀಡಿಯೋ ಫ್ರಿಲ್ಡ್ ಹಲ್ಲಿ ಗದ್ದೆಯಂತಹ ಮಣ್ಣಿನ ರಸ್ತೆಯಲ್ಲಿ ಓಡಿಬರುತ್ತಿರುವ ದೃಶ್ಯದಿಂದ (Scene) ಆರಂಭವಾಗುತ್ತದೆ. ಹಲ್ಲಿ ತಮ್ಮ ಕಡೆಗೆ ಓಡಿ (Run) ಬರುತ್ತಿರುವುದನ್ನು ಕಂಡಾಗ ಎಂಝೊ ಕೂಡ ಓಡುತ್ತಾರೆ. ಆದರೆ, ಆ ಸರೀಸೃಪ ಅವರನ್ನು ಹಿಂದಿಕ್ಕಿ ವೇಗವಾಗಿ ಅವರನ್ನೇ ಏರುವ ದೃಶ್ಯ ಮೈ ನವಿರೇಳಿಸುತ್ತದೆ. ಭುಜದವರೆಗೆ ಸಾಗಿ ನಿಂತು, ಬಳಿಕ ಅಷ್ಟೇ ಚುರುಕಾಗಿ ಅವರ ಭುಜದಿಂದ ಕೆಳಕ್ಕೆ ಹಾರಿ ಮತ್ತೆ ತಿರುಗಿಯೂ ನೋಡದೆ ಸರಸರ ಓಡುತ್ತ ಸಮೀಪದ ಮರದ ಹಿಂದೆ ಮರೆಯಾಗಿ (Escape) ಬಿಡುತ್ತದೆ.
ಈ ವೀಡಿಯೋವನ್ನು ಈ ತಿಂಗಳ ಆರಂಭದಲ್ಲಿ ಶೇರ್ ಮಾಡಲಾಗಿದೆ. ಕೆಲವು ದಿನಗಳ ಬಳಿಕ ನೆಟ್ಟಿಗರನ್ನು ಹೆಚ್ಚಾಗಿ ಸೆಳೆದಿದ್ದು, ಇದುವರೆಗೆ 60 ಲಕ್ಷಕ್ಕೂ ಅಧಿಕ ಜನ ವೀಕ್ಷಣೆ ಮಾಡಿದ್ದಾರೆ.
ಹಲವು ಕಾಮೆಂಟ್ ಗಳು
ಈ ವೀಡಿಯೋಕ್ಕೆ ಹಲವು ರೀತಿಯ ಕಾಮೆಂಟ್ ಗಳು (Comments) ಬಂದಿವೆ. ಒಬ್ಬರು, “ಈ ಹಲ್ಲಿ ಅಪಾಯವನ್ನು ಉಂಟುಮಾಡುವುದಿಲ್ಲ ಎಂದು ತಿಳಿದಿದ್ದರೂ, ಹೀಗೆ ಅದು ನನ್ನನ್ನು ಚೇಸ್ (Chase) ಮಾಡಿಕೊಂಡು ಬಂದು ಏರಿದ್ದರೆ ನಾನಾದರೆ ಕಿರಿಚಿಬಿಡುತ್ತಿದ್ದೆ, ಅಳುತ್ತಿದ್ದೆ’ ಎಂದು ಹೇಳಿಕೊಂಡಿದ್ದಾರೆ. ಮತ್ತೊಬ್ಬರು “ನಿಮ್ಮ ಕಡೆಗೆ ನಡೆದುಕೊಂಡು ಬಂತು. ಓಡುತ್ತ ಬಂತು, ನಿಮ್ಮನ್ನು ಏರಿತು, ಹಾಗೆಯೇ ಪೊದೆಯಲ್ಲಿ (Bush) ಮರೆಯಾಯಿತು. ಇನ್ನೂ ವಿಸ್ತರಿಸಲು ನಿರಾಕರಿಸಿತು’ ಎಂದು ಜೋಕ್ ಮಾಡಿದ್ದಾರೆ.
ಏರ್‌ಪೋರ್ಟ್ ಟಾರ್‌ಮ್ಯಾಕ್‌ನಲ್ಲಿ ಆಹಾರ ತಿಂದ ಪ್ರಯಾಣಿಕರು: ಇಂಡಿಗೋಗೆ ಬರೋಬ್ಬರಿ 1.2 ಕೋಟಿ ರೂ. ದಂಡ!
“ಆ ಪ್ರಾಣಿ (Animal) ನಿಮ್ಮ ಬಗ್ಗೆ ಅಚ್ಟೊಂದು ಹುಚ್ಚುತನ ಯಾಕೆ ತೋರಿಸುತ್ತಿದೆ?’ ಎಂದೊಬ್ಬರು ಪ್ರಶ್ನಿಸಿದ್ದಾರೆ. ಯಾರೋ ಒಬ್ಬರು, “ನಾನು ಪ್ರಾಣಿಗಳನ್ನು ಪ್ರೀತಿಸುವೆ. ಆದರೆ, ಅದು ಹೇಗೆ ಮೈ ಏರಿತು ಎಂದರೆ ನಾನಾದರೆ ಅತ್ತುಬಿಡುತ್ತಿದ್ದೆ’ ಎಂದು ಹೇಳಿದ್ದಾರೆ.