Asianet Suvarna News Asianet Suvarna News

ಮಂಜುಗಡ್ಡೆಯಾಗಿ ಬದಲಾದ ನಯಾಗಾರ ಫಾಲ್ಸ್: ಫೋಟೋಸ್ ವೈರಲ್

ಹಿಮಪಾತದ ಕರಾಳತೆಗೆ ಸಿಲುಕಿ ವಿಶ್ವ ವಿಖ್ಯಾತ ನಯಾಗಾರ ಜಾಲಪಾತವೂ ನಲುಗಿದ್ದು, ಹಿಮಪಾತದಿಂದ ಹಿಮದಂತೆ ಗಟ್ಟಿಯಾದ ನಯಾಗಾರ ಪಾಲ್ಸ್‌ನ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್

Niagara Falls changed as Ice, watch wonderful photos that create sensation in internet akb
Author
First Published Dec 28, 2022, 8:54 PM IST

ನ್ಯೂಯಾರ್ಕ್: ಅಮೆರಿಕಾ ಹಿಂದೆಂದೂ ಕಂಡು ಕೇಳರಿಯದ ಬಾಂಬ್ ಹಿಮಪಾತದಿಂದ ಈ ಬಾರಿ ನಲುಗಿದ್ದು, ಡಿಸೆಂಬರ್ 25 ರ ಕ್ರಿಸ್‌ಮಸ್ ದಿನದಂದು ದೇಶವನ್ನಪ್ಪಳಿಸಿದ ಹಿಮಪಾತಕ್ಕೆ ಸಿಲುಕಿ ಅಮೆರಿಕಾದಲ್ಲಿ ಈಗಾಗಲೇ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿಮಪಾತದ ಕರಾಳತೆಗೆ ಸಿಲುಕಿ ವಿಶ್ವ ವಿಖ್ಯಾತ ನಯಾಗಾರ ಜಾಲಪಾತವೂ ನಲುಗಿದ್ದು, ಹಿಮಪಾತದಿಂದ ಹಿಮದಂತೆ ಗಟ್ಟಿಯಾದ ನಯಾಗಾರ ಪಾಲ್ಸ್‌ನ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹಿಮಪಾತದಿಂದಾಗಿ ಜಲಾಶಯವೂ ಈಗ ಚಳಿಗಾಲದ ವಂಡರ್‌ಲ್ಯಾಂಡ್‌ನಂತೆ ಕಾಣಿಸುತ್ತಿದೆ. ಮೈನಸ್‌ ಶೂನ್ಯ ತಾಪಮಾನದಿಂದಾಗಿ ನಯಾಗರಾ ಜಲಪಾತವು ಭಾಗಶಃ ಹೆಪ್ಪುಗಟ್ಟಿದ್ದು, ಚಳಿಗಾಲದ ಅದ್ಭುತ ಲೋಕದಂತೆ ಕಾಣಿಸುತ್ತಿದೆ. 

ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಪಶ್ಚಿಮ ನ್ಯೂಯಾರ್ಕ್‌ಗೆ (western New York) ಅಪ್ಪಳಿಸಿದ ಹಿಮಪಾತದ ಚಂಡಮಾರುತದಿಂದ ಇಡೀ ನಗರ ಪಾರ್ಶ್ವವಾಯುವಿಗೆ ಒಳಗಾದಂತಾಗಿದೆ. ಅಮೆರಿಕಾದ ಭೌಗೋಳಿಕ ತಜ್ಞರು ಇದನ್ನು ಶತಮಾನದ ಅತ್ಯಂತ ದೊಡ್ಡ ಹಿಮಪಾತ (blizzard) ಎಂದು ಕರೆದಿದ್ದಾರೆ. ಈ ಹಿಮಪಾತದಿಂದಾಗಿ ಅಮೆರಿಕಾದಲ್ಲಿ ವಿದ್ಯುತ್ ಕಡಿತದ ಜೊತೆಗೆ ಜನಜೀವನ ವ್ಯತ್ಯಯಗೊಂಡಿದ್ದಲ್ಲದೇ ಹಲವಾರು ಸಾವು ನೋವುಗಳಿಗೆ ಕಾರಣವಾಯ್ತು. ಸಾಮಾಜಿಕ ಜಾಲತಾಣದಲ್ಲಿ(social media) ವೈರಲ್ ಆಗಿರುವ ಹಲವು ಫೋಟೋಗಳು ಅಲ್ಲಿನ ವಾಸ್ತವ ಚಿತ್ರಣವನ್ನು ತೆರೆದಿಡುತ್ತಿವೆ. ಭೀಕರ ಹಿಮಪಾತದ ಪರಿಣಾಮ ಅಮೆರಿಕಾದ ಬಫಲೋದಲ್ಲಿ(Buffalo) ವಾಹನಗಳ ಒಳಗೆ ಹಾಗೂ ಹಿಮದಡಿಯಲ್ಲಿ ಅನೇಕರು ಶವ ಪತ್ತೆಯಾಗಿದೆ. 

ನಯಾಗರದ ಜಲಧಾರೆಗೆ ಬಣ್ಣಗಳ ಚಿತ್ತಾರ ಮೂಡಿಸಿದ ಕಾಮನಬಿಲ್ಲು: viral video

ಇದೀಗ  ನಯಾಗರಾ ಜಲಪಾತವು ಮಂಜುಗಡ್ಡೆಯಿಂದ ಆವೃತವಾಗಿರುವ ವಿಡಿಯೋವೊಂದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ರುದ್ರ ರಮಣೀಯವಾಗಿ ಭೋರ್ಗರೆಯುತ್ತಿದ್ದ ನಯಾಗಾರ ಫಾಲ್ಸ್, ಹಿಮಪಾತ ಹಾಗೂ ಮೈನಸ್ ಡಿಗ್ರಿ ತಾಪಮಾನದಿಂದಾಗಿ  ಮಂಜುಗಡ್ಡೆಯಾಗಿದೆ. ಅಪರೂಪದ ಈ ದೃಶ್ಯ ನೋಡುಗರ ಕಣ್ಣಿಗೆ ಚಳಿಗಾಲದ ಅದ್ಭುತಲೋಕವನ್ನೇ ಸೃಷ್ಟಿಸಿದೆ. ಈ ಜಲಪಾತವೂ ಸಂಪೂರ್ಣವಾಗಿ ಮಂಜಾಗಿ ಬದಲಾಗಿಲ್ಲ. ಅಲ್ಲಲ್ಲಿ ನೀರು ಹೆಪ್ಪುಗಟ್ಟಿದ್ದು ಒಳಭಾಗದಲ್ಲಿ ನೀರಿನ ಹರಿವಿದೆ. ನಿರ್ದಿಷ್ಟವಾಗಿ ತಂಪಾದ ತಾಪಮಾನದಲ್ಲಿ, ಮಂಜು ಮತ್ತು ಸ್ಪ್ರೇ ಧುಮ್ಮಿಕ್ಕುವ ನೀರಿನ ಮೇಲೆ ಮಂಜುಗಡ್ಡೆಯ ಹೊರಪದರವನ್ನು ರೂಪಿಸಲು ಪ್ರಾರಂಭಿಸುತ್ತದೆ. ಇದು ಜಲಪಾತವು ವಾಸ್ತವವಾಗಿ ಕಲ್ಲಾಗಿ ನಿಂತು ಹೋದಂತೆ ಕಂಡು ಬರುತ್ತದೆ. ಆದರೆ ನೀರು ಮಂಜುಗಡ್ಡೆಯ ಪದರಗಳ ಕೆಳಗೆ ಹರಿಯುತ್ತಿರುತ್ತದೆ ಎಂದು ನಯಾಗರಾ ಪಾರ್ಕ್ಸ್ ವೆಬ್‌ಸೈಟ್‌ ಮಾಹಿತಿ ನೀಡಿದೆ.

ನಯಾಗಾರ ಫಾಲ್ಸ್ (Niagara Falls) ನ್ಯೂಯಾರ್ಕ್ ಸ್ಟೇಟ್ ಪಾರ್ಕ್ ಪ್ರಕಾರ, ಪ್ರತಿ ಸೆಕೆಂಡಿಗೆ ಸುಮಾರು 3,160 ಟನ್ ನೀರು ನಯಾಗಾರ ಜಲಪಾತದ ಮೇಲೆ ಹರಿಯುತ್ತದೆ. ಪ್ರತಿ ಸೆಕೆಂಡಿಗೆ 32 ಅಡಿಯಷ್ಟು  ಎತ್ತರದಿಂದ ಕೆಳಕ್ಕೆ ಬೀಳುತ್ತದೆ. ಮಂಜುಗಡ್ಡೆಯು (ice) ನೀರಿನ ಹರಿವನ್ನು ಮತ್ತಷ್ಟು ವಿರುದ್ಧ ದಿಕ್ಕಿಗೆ ಹರಿಯುವುದಕ್ಕೆ (upstream) ಅಡ್ಡಿಪಡಿಸುತ್ತದೆ. ಇದರಿಂದಾಗಿ ಜಲಪಾತದ ಭಾಗದಲ್ಲಿ ನೀರಿನ ಪ್ರಮಾಣವು ಹೆಪ್ಪುಗಟ್ಟುತ್ತದೆ. 1964ಕ್ಕೂ ಮೊದಲು ದೊಡ್ಡ ಐಸ್ ಶೇಖರಣೆಯನ್ನು ತಡೆಗಟ್ಟಲು ಉಕ್ಕಿನ ಐಸ್ ಬೂಮ್‌ಗಳನ್ನು (ice-booms) ಸ್ಥಾಪಿಸುವ ಮೊದಲು ಈ ರೀತಿ ಐದು ಬಾರಿ ಸಂಭವಿಸಿದೆ ಎಂದು ತಿಳಿದು ಬಂದಿದೆ.

ನಯಾಗರಾ ಫಾಲ್ಸ್‌ನಲ್ಲಿ ತ್ರಿವರ್ಣ..! ಭಾರತದ ಕೊರೋನಾ ಹೋರಾಟಕ್ಕೆ ಬೆಂಬಲ

ವಿಶೇಷವಾಗಿ ಶೀತ ಚಳಿಗಾಲದಲ್ಲಿ ಜಲಪಾತದ ತಳದಲ್ಲಿ ಮತ್ತು ನಯಾಗರಾ ನದಿಯ (Niagara River) ಮೇಲೆ ಐಸ್ ಮತ್ತು ಹಿಮವು ಆಗಾಗ್ಗೆ ರೂಪುಗೊಳ್ಳುತ್ತದೆ, ಇದು ಐಸ್ ಸೇತುವೆಯನ್ನು ರೂಪಿಸುತ್ತದೆ. ಇದರಲ್ಲಿ 1912ಕ್ಕೂ ಮೊದಲು ಜನ ನಡೆದಾಡುತ್ತಿದ್ದರು. ಆದರೆ 1912 ರಂದು ಫೆಬ್ರವರಿಯಲ್ಲಿ ಮಂಜುಗಡ್ಡೆ ಸಡಿಲಗೊಂಡು ಈ ಐಸ್ ಸೇತುವೆ ಮೇಲಿದ್ದವರು ನಯಾಗರಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ನಂತರ ಅಧಿಕಾರಿಗಳು ಜನರು ಐಸ್ ಸೇತುವೆಯ ಮೇಲೆ ನಡೆಯುವುದನ್ನು ನಿಷೇಧಿಸಿದರು ಎಂದು ತಿಳಿದು ಬಂದಿದೆ.

 

Follow Us:
Download App:
  • android
  • ios