Asianet Suvarna News Asianet Suvarna News

PUBG Influence ತಾಯಿ, ತಂಗಿ ಸೇರಿ ಕುಟುಂಬವನ್ನೇ ಹತ್ಯೆಗೈದ 14ರ ಬಾಲಕ, ಎದ್ದು ಬರಲು ದಿನವಿಡಿ ಕಾಯುತ್ತಾ ಕುಳಿತ!

  • ಪಬ್‌ಜಿ ಗೇಮ್‌ನಿಂದ ಕುಟುಂಬವನ್ನೇ ಮುಗಿಸಿದ ಬಾಲಕ
  • ಪಿಸ್ತೂಲ್‌ನಿಂದ ತಾಯಿ, ಇಬ್ಬರು ತಂಗಿಯರು ಸೇರಿ ನಾಲ್ವರಿಗೆ ಗುಂಡು
  • ಮತ್ತೆ ಎದ್ದುಬರುತ್ತಾರೆ ಎಂದು ದಿನವಿಡಿ ಕಾದ ಬಾಲಕ
14 year old boy shot dead his entire family by PUBG Influence in Pakistan punjab ckm
Author
Bengaluru, First Published Jan 28, 2022, 9:35 PM IST

ಪಾಕಿಸ್ತಾನ(ಜ.28): ಪಬ್‌ಜಿ ಗೇಮ್(PUBG Game) ವಿಶ್ವದಲ್ಲಿ ಮಾಡಿದ ಅವಾಂತರ ಒಂದೆರಡಲ್ಲ. ಹಲವು ಮಕ್ಕಳು, ಕುಟುಂಬದ ಬದುಕು ಅನಾಥವಾಗಿದೆ. ಮಕ್ಕಳನ್ನು(Childrens0 ಕಳೆದುಕೊಂಡು ಪೋಷರ ಬದುಕು ದುಸ್ತರವಾದ ಹಲವು ಊದಾಹರಣೆಗಳು ಕಣ್ಣಮುಂದಿದೆ. ಇದೀಗ ಈ ಸಾಲಿಗೆ ಮತ್ತೊಂದು ಘಟನೆ ಸೇರಿಕೊಂಡಿದೆ. ಪಾಕಿಸ್ತಾನದ(Pakistan) ಪಂಜಾಬ್ ಪ್ರಾವಿನ್ಸ್‌ನಲ್ಲಿ 14ರ ಬಾಲಕ ಪಬ್‌ಜಿ ಪ್ರಭಾವದಿಂದ ಇಡೀ ಕುಟುಂಬವನ್ನೇ ಹತ್ಯೆ ಮಾಡಿದ ಘಟನೆ ವರದಿಯಾಗಿದೆ.

ಈ ಘನಘೋರ ಘಟನೆ ಅತ್ಯಂತ ದುಃಖಕರವಾಗಿದೆ. 45 ವರ್ಷದ ನಾಹಿದ್ ಮುಬಾರಕ್ ಆರೋಗ್ಯ ಕಾರ್ಯಕರ್ತೆ.  ನಾಹಿದ್‌ಗೆ ನಾಲ್ವರು ಮಕ್ಕಳು. ಇದರಲ್ಲಿ 14 ವಯಸ್ಸಿನ ಬಾಲಕ ಕಳೆದ 6 ತಿಂಗಳಿನಿಂದ ಪಬ್‌ಜಿ ಗೇಮ್‌ನಲ್ಲಿ ಮುಳುಗಿದ್ದ. ಈ ಕುರಿತು ತಾಯಿ ನಾಹಿದ್ ಕೆಲ ಬಾರಿ ವಾರ್ನಿಂಗ್ ಮಾಡಿದ್ದರೂ ಬಾಲಕ ಮಾತ್ರ ಪಬ್‌ಜಿ ಗೇಮ್‌ನಿಂದ ಹಿಂದೆ ಸರಿದಿರಲಿಲ್ಲ. ಇಷ್ಟೇ ಆಗಿದ್ದರೆ ಸಮಸ್ಯೆ ಇರಲಿಲ್ಲ.

Gaming Addiction: ಪಬ್‌ಜಿ, ಫ್ರೀ ಫೈರ್ ಗೇಮಿಂಗ್‌ ಐಡಿ ಖರೀದಿಸಲು ಮನೆಯಿಂದಲೇ ₹17ಲಕ್ಷ ಕದ್ದ ಯುವಕ!

ಪಬ್‌ಜಿಯಲ್ಲಿ ಮುಳುಗಿದ್ದ ಬಾಲಕ ಮಾನಸಿಕವಾಗಿ ಜರ್ಝರಿತನಾಗಿದ್ದ. ನಾಹಿದ್ ಕೆಲಸ ಮುಗಿಸಿ ಮನೆಗೆ ಬಂದ ವೇಳೆ ಬಾಲಕ ಪಬ್‌ಜಿ ಆಟ ಗಮನಿಸಿದ ತಾಯಿ ಸರಿಯಾಗಿ ಬುದ್ದಿವಾದ ಹೇಳಿದ್ದಾರೆ. ಮೊದಲೆ ಮಾನಸಿಕವಾಗಿ ಕುಗ್ಗಿಹೋಗಿದ್ದ ಬಾಲಕ, ತಾಯಿ ಡ್ರವರ್‌ನಲ್ಲಿಟ್ಟಿದ್ದ ಪಿಸ್ತೂಲ್ ತೆಗೆದು ಪಬ್‌‌ಜಿಯಲ್ಲಿ ಶೂಟ್ ಮಾಡುವಂತೆ ಏಕಾಏಕಿ ಗುಂಡಿನ ಸುರಿಮಳೆಗೈದಿದ್ದಾನೆ(Shot Dead).

ತಾಹಿ ನಾಹಿದ್ ಮುಬಾರಕ್, 22 ವಯಸ್ಸಿನ ಹಿರಿಯ ಪುತ್ರ, 17 ಹಾಗೂ 11 ವಯಸ್ಸಿನ ಇಬ್ಬರು ಪುತ್ರಿಯರ ಮೇಲೆ ಗಂಡು ಹಾರಿಸಿದ್ದಾನೆ. 3 ನಿಮಿಷದಲ್ಲಿ ಮನೆ ಸ್ಮಶಾನವಾಗಿದೆ. ಗುಂಡು ಹಾರಿಸಿದ ಬಳಿಕ ನೇರವಾಗಿ ಪಬ್‌ಜಿ ಆಟದಲ್ಲಿ ತಲ್ಲೀನನಾಗಿದ್ದಾನೆ.

ಪಬ್‌ಜಿ ಬ್ಯಾನ್‌ಗೆ 3 ದಿನ ಮುನ್ನ ಆತ್ಮಹತ್ಯೆ ಮಾಡಿಕೊಂಡ ಹಾವೇರಿ ಹುಡುಗ!

ಕೆಲ ಹೊತ್ತು ಪಬ್‌ಡಿ ಆಡಿದ ಬಾಲಕ ಮರಳಿ ಬಂದು ನೋಡಿದ್ದಾನೆ. ಇಡೀ ಕುಟುಂಬವೇ ಸತ್ತು ಬಿದ್ದಿದೆ. ಪಬ್‌ಜಿಯಲ್ಲಿರುವಂತೆ ಹೊಸ ಗೇಮ್ ಶುರುವಾದಾಗ ಇವರೆಲ್ಲಾ ಮತ್ತೆ ಬದುಕಿ ಬರುತ್ತಾರೆ ಎಂದು ರಾತ್ರೀಯಿಡಿ ಪಬ್‌ಜಿ ಆಡಿ ಮಲಗಿದ್ದಾನೆ. ಮರುದಿನ ಬೆಳಗ್ಗೆ ಸನಿಹದಲ್ಲಿರುವ ಮನೆಯರ ಬಳಿ ಹೋಗಿ ಅಳಲು ಆರಂಭಿಸಿದ್ದಾನೆ. ಈ ವೇಳೆ ರಕ್ತದ ಕಲೆಗಳನ್ನು ಗಮನಿಸಿದ ನೆರ ಮನೆಯವರು ಬಂದು ನೋಡಿದಾ ಅತೀ ದೊಡ್ಡ ದುರಂತವೇ ನಡೆದು ಹೋಗಿದೆ. ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.

ನಾಹೀದ್ ಮುಬಾರಕ್ ಪತಿ ದೂರವಾಗಿ ವರ್ಷಗಳೇ ಉರುಳಿದೆ. ನಾಹಿದ್ ಕುಟುಂಬದಲ್ಲಿದ್ದ ಐವರ ಬೈಕಿ ಬದುಕುಳಿದಿದ್ದು ಕೊಲೆ ಆರೋಪಿ 14 ವರ್ಷದ ಬಾಲಕ ಮಾತ್ರ. ಬಾಲಕನ ವಶಕ್ಕೆ ಪಡೆದ ಪೊಲೀಸರು ಬಾಲಕನನ್ನು ಆಸ್ಪತ್ರೆ ದಾಖಲಿಸಿ ಮಾನಸಿಕಿ ಚಿಕಿತ್ಸೆ ನೀಡುತ್ತಿದ್ದಾರೆ. ಇತ್ತ ಪ್ರಕರಣದ ವಿಚಾರಣೆಯೂ ನಡೆಯುತ್ತಿದೆ. ಆದರೆ ಪಬ್‌ಜಿಯಿಂದ ಒಂದು ಕುಟುಂಬವೇ ಕೊಲೆಯಲ್ಲಿ ಅಂತ್ಯವಾಗಿದೆ.

ನಾಹಿದ್ ಮುಬಾರಕ್ ಲೈಸೆನ್ಸ್ ಪಿಸ್ತೂಲ್ ಪಡೆದಿದ್ದಾರೆ. ಕುಟುಂಬದ ರಕ್ಷಣೆ, ದೂರವಾದ ಪತಿಯ ಬೆದರಿಕೆ ಸೇರಿದಂತೆ ಹಲವು ಕಾರಣಗಳಿಗೆ ನಾಹಿದ್ ಪಿಸ್ತೂಲ್ ಪಡೆದಿದ್ದಾರೆ. ಲೈಸೆನ್ಸ್ ಪಿಸ್ತೂಲ್ ಬಳಸಿ ಕೊಲೆ ನಡೆದಿದೆ ಅನ್ನೋದು ಸಾಬೀತಾಗಿದೆ. ದೇಹಕ್ಕೆ ಹೊಕ್ಕಿರುವ ಗುಂಡುಗಳು ವಿವರಗಳು ಲಭ್ಯವಾಗಿದೆ. ಆದರೆ ಬಾಲಕ ಗುಂಡು ಹಾರಿಸಿದ ಬಳಿಕ ಪಿಸ್ತೂಲ್ ಎಲ್ಲಿಟ್ಟಿದ್ದಾನೆ ಅನ್ನೋದು ಪತ್ತೆಯಾಗಿಲ್ಲ. ಬಾಲಕನಿಗೆ ಈ ಕುರಿತು ಯಾವುದೇ ನಿಖರ ಉತ್ತರ ನೀಡಲು ಸಾಧ್ಯವಾಗಿಲ್ಲ. ಮಾನಸಿಕ ಅಸ್ವಸ್ಥನಾಗಿರುವ ಬಾಲಕ ಇದೀಗ ವೈದ್ಯರ ಆರೈಕೆಯಲ್ಲಿದ್ದರೆ, ಇತ್ತ ತಾಯಿ, ಅಣ್ಣ, ಇಬ್ಬರು ಸಹೋದರಿಯರು ಸಾವಿನಲ್ಲಿ ಅಂತ್ಯವಾಗಿದ್ದಾರೆ. ಇದೇ ರೀತಿ ಹಲವು ಘಟನೆಗಳು ಭಾರತದಲ್ಲೂ ನಡೆದಿದೆ. ಪಬ್‌ಜಿಯಿಂದ ಹಲವು ಮಕ್ಕಳು ಬದುಕು ಕಳೆದುಕೊಂಡಿದ್ದಾರೆ.
 

Follow Us:
Download App:
  • android
  • ios