ಹಾವೇರಿ(ಸೆ. 10)  ಪಬ್ ಜಿ ಆಡಬೇಡ ಎಂದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವು ಕಂಡಿದ್ದಾನೆ. ಹಾವೇರಿ ತಾಲೂಕಿನ ಸಂಗೂರ ಗ್ರಾಮದ ತೇಜಸ್ ಶಿಡ್ಲಾಪುರ (17) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. 

ಪಬ್ ಜಿ ಆಡಬೇಡ ಎಂದು ಪೋಷಕರು ಸಾಕಷ್ಟು ಸಲ ಬುದ್ದಿ ಹೇಳಿದ್ದರೂ ಯುವಕ ಕೇಳಿರಲಿಲ್ಲ. ಆದ್ದರಿಂದ ಪೋಷಕರು ಮೊಬೈಲ್ ಗೆ ಇಂಟರ್ನೆಟ್ ಹಾಕಿಸಿರಲಿಲ್ಲ ಎನ್ನಲಾಗಿದೆ. ಇದರಿಂದ ಬೇಸತ್ತ ಯುವಕ ತೋಟದ ಮನೆಗೆ ಹೋಗಿ ಬೆಳೆಗಳಿಗೆ ಸಿಂಪಡಿಸಲು ಇಟ್ಟಿದ್ದ ರಾಸಾಯನಿಕ ಔಷಧ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದ. 

ಕೊನೆಗೂ ಪಬ್‌ಜಿ ಬ್ಯಾನ್‌ ಆಗಲು ಏನು ಕಾರಣ

ಘಟನೆ ನಡೆದ ವಿಷಯ ತಿಳಿದ  ಪೋಷಕರು ಆತನನ್ನು ಆ. 31 ರಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ  ಚಿಕಿತ್ಸೆ ಫಲಿಸದರೆ ಯುವಕ ಗುರುವಾರ ಮೃತಪಟ್ಟಿದ್ದಾನೆ.

ಕೇಂದ್ರ ಸರ್ಕಾರ ಸೆ.  2 ರಂದು ಪಬ್ ಜಿ ಸೇರಿದಂತೆ 118  ಅಪ್ಲಿಕೇಶನ್ ಗಳನ್ನು ಬ್ಯಾನ್ ಮಾಡಿತ್ತು. ಅಂದರೆ ಪಬ್ ಜಿ ಬ್ಯಾನ್ ಗೂ ಮೂರು ದಿನ ಮುನ್ನ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.