12 ವರ್ಷದ ಬಾಲಕನೋರ್ವ ಗನ್‌ ತೋರಿಸಿ ಗ್ಯಾಸ್ ಸ್ಟೇಷನ್‌ನಲ್ಲಿ ಕ್ಯಾಶಿಯರ್‌ನ್ನು ಬೆದರಿಸಿ ಗಲ್ಲಾಪೆಟ್ಟಿಗೆ ದೋಚಿದ ಘಟನೆಯ ವೀಡಿಯೋ ಘಟನೆ ನಡೆದು 1 ವರ್ಷದ ನಂತರ ವೈರಲ್ ಆಗಿದ್ದು, ಈ ವೀಡಿಯೋವನ್ನು ಈಗ 7 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.  

ಮಿಚಿಗನ್‌: 12 ವರ್ಷದ ಬಾಲಕನೋರ್ವ ಗನ್‌ ತೋರಿಸಿ ಗ್ಯಾಸ್ ಸ್ಟೇಷನ್‌ನಲ್ಲಿ ಕ್ಯಾಶಿಯರ್‌ನ್ನು ಬೆದರಿಸಿ ಗಲ್ಲಾಪೆಟ್ಟಿಗೆ ದೋಚಿದ ಘಟನೆಯ ವೀಡಿಯೋ ಘಟನೆ ನಡೆದು 1 ವರ್ಷದ ನಂತರ ವೈರಲ್ ಆಗಿದ್ದು, ಈ ವೀಡಿಯೋವನ್ನು ಈಗ 7 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ 12 ವರ್ಷದ ಬಾಲಕನೋರ್ವ ಅಮೆರಿಕಾದ ಮಿಚಿಗನ್‌ನ ಹಾರ್ಟ್‌ಪೋರ್ಡ್‌ನಲ್ಲಿ ಗನ್‌ ತೋರಿಸಿ ಕ್ಯಾಶಿಯರ್ ಬಳಿ ಇದ್ದ ಹಣ ದರೋಡೆ ಮಾಡಿದ್ದ. ನಗರದ ಪ್ರಮುಖ ಪ್ರದೇಶದಲ್ಲಿದ್ದ, ಮ್ಯಾರಥಾನ್ ಗ್ಯಾಸ್‌ ಸ್ಟೇಷನ್‌ಗೆ ನುಗ್ಗಿದ ಬಾಲಕ ಗನ್ ತೋರಿಸಿ ಹಣ ನೀಡುವಂತೆ ಬೇಡಿಕೆ ಇಟ್ಟಿದ. ಈ ವೇಳೆ ಆತನನ್ನು ನಿಜವಾಗಿಯೂ ನೀನು ಈ ದರೋಡೆಗೆ ಬಂದಿರುವುದೇ ಎಂದು ಕೇಳಿದಾಗ ತನ್ನ ಕೈನಲ್ಲಿದ್ದ 8 ಎಂಎಂ ಗನ್‌ನಿಂದ ಒಂದು ಸುತ್ತು ಗುಂಡು ಹಾರಿಸಿದ್ದ. ಇದಾದ ನಂತರ ಬೆದರಿದ ಗ್ಯಾಸ್ ಸ್ಟೇಷನ್‌ನ ಕ್ಯಾಷಿಯರ್‌ ತನ್ನ ಬಳಿ ಇದ್ದ 1000 ಡಾಲರ್‌ ಹಣವಿರುವ ಬ್ಯಾಗ್‌ನ್ನು ಆತನ ಕೈಗೆ ಇಟ್ಟಿದ್ದರು. ಹಣ ಸಿಕ್ಕ ಕೂಡಲೇ ಬಾಲಕ ಅಲ್ಲಿಂದ ಓಡಿ ಹೋಗಿದ್ದ, ಆದರೆ ಸ್ವಲ್ಪ ಹೊತ್ತಿನಲ್ಲೇ ಬಾಲಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಬಳಿಕ ಪೊಲೀಸರು ಆತನ ಕೈಲಿದ್ದ ಗನ್ ಹಾಗೂ ಹಣವನ್ನು ವಶಕ್ಕೆ ಪಡೆದಿದ್ದರು. ಈ ವೀಡಿಯೋ ಈಗ ಟ್ವಿಟ್ಟರ್‌ನಲ್ಲಿ ಮತ್ತೆ ವೈರಲ್ ಆಗುತ್ತಿದ್ದು, 7 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋ ವೀಕ್ಷಣೆ ಮಾಡಿದ್ದಾರೆ. 

ಈ ಯುದ್ಧವನ್ನು ನಾವು ಆರಂಭಿಸಿಲ್ಲ, ಆದರೆ ಮುಗಿಸುವುದು ಮಾತ್ರ ನಾವೇ: ಇಸ್ರೇಲ್ ಅಧ್ಯಕ್ಷ ಬೆಂಜಮಿನ್‌

ವೈರಲ್ ಆಗಿರುವ ವೀಡಿಯೋದಲ್ಲೇನಿದೆ?

ವೈರಲ್ ಆಗಿರುವ 22 ಸೆಕೆಂಡ್‌ಗಳ ವೀಡಿಯೋದಲ್ಲಿ ಕ್ಯಾಶ್ ಕೌಂಟರ್‌ನಲ್ಲಿ ಮಹಿಳೆಯೊಬ್ಬರು ಕೆಲಸ ಮಾಡುತ್ತಿದ್ದು, ಈ ಬಾಲಕ ಆಗಮಿಸುವುದಕ್ಕೂ ಮೊದಲು ವ್ಯಕ್ತಿಯೊಬ್ಬರು ಬಂದು ಬಿಲ್ಲಿಂಗ್ ಮಾಡಿಸಿ ಹೋಗುತ್ತಾರೆ. ಇದಾದ ನಂತರ ಬರುವ ಬಾಲಕ ಗನ್ ಹಿಡಿದುಕೊಂಡೆ ಬಂದು ಬ್ಯಾಗೊಂದನ್ನು ನೀಡಿ ಹಣವನ್ನೆಲ್ಲಾ ಈ ಬ್ಯಾಗ್‌ಗೆ ತುಂಬಿಸಿ ಎಂದು ಕೇಳುತ್ತಾನೆ. ಈ ವೇಳೆ ಕ್ಯಾಶಿಯರ್ ಆರ್ ಯೂ ಸಿರೀಯಸ್ ಎಂದು ಕೇಳಿದಾಗ ಬಾಲಕ ಕೈನಲ್ಲಿರುವ ಗನ್‌ನಿಂದ ಒಂದು ಸುತ್ತು ಗುಂಡು ಹಾರಿಸಿದ್ದಾನೆ. ಕೂಡಲೇ ಹೆದರಿದ ಕ್ಯಾಶಿಯರ್ ಅಲ್ಲಿದ್ದ ಹಣದ ಬ್ಯಾಗ್‌ನ್ನು ಬಾಲಕ ನೀಡಿದ ಬ್ಯಾಗ್‌ಗೆ ಹಾಕಿ ಕೊಡುತ್ತಾಳೆ. ನಂತರ ಬಾಲಕ ಅಲ್ಲಿಂದ ಮರೆಯಾಗಿದ್ದಾನೆ. 

ನಿಮಗೂ ಬಂತ್ತಾ ಸಂದೇಶ: ಸರ್ಕಾರ ಕಳಿಸಿದ ಎಮರ್ಜೆನ್ಸಿ ಅಲರ್ಟ್‌ ಮೆಸೇಜ್ ...

ಅನೇಕರು ಇಷ್ಟು ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೇಕೆ ಇಂತಹ ಬುದ್ಧಿ ಎಂದು ವೀಡಿಯೋ ನೋಡಿದ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಗನ್‌ ಸದ್ದು ಕೇಳಿ ಹೆದರೋ ವಯಸ್ಸಲ್ಲೇ ಬಾಲಕ ಗನ್ ತೋರಿಸಿ ಬೆದರಿಸಲು ಆರಂಭಿಸಿದ್ದಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

Scroll to load tweet…

ದೇಶದ ನಿರುದ್ಯೋಗ ಪ್ರಮಾಣ 6 ವರ್ಷಗಳ ಕನಿಷ್ಠಕ್ಕೆ: ಸಮೀಕ್ಷೆ