ದೇಶದ ನಿರುದ್ಯೋಗ ಪ್ರಮಾಣ 6 ವರ್ಷಗಳ ಕನಿಷ್ಠಕ್ಕೆ: ಸಮೀಕ್ಷೆ
2022ರ ಜುಲೈನಿಂದ 2023ರ ಜೂನ್‌ವರೆಗಿನ ಅವಧಿಯಲ್ಲಿ ಭಾರತದಲ್ಲಿನ ನಿರುದ್ಯೋಗ ಪ್ರಮಾಣ 6 ವರ್ಷಗಳ ಕನಿಷ್ಠಕ್ಕೆ ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷೆಯ ಸಂಸ್ಥೆಯ ವರದಿಯಿಂದ ತಿಳಿದು ಬಂದಿದೆ.
ನವದೆಹಲಿ: 2022ರ ಜುಲೈನಿಂದ 2023ರ ಜೂನ್‌ವರೆಗಿನ ಅವಧಿಯಲ್ಲಿ ಭಾರತದಲ್ಲಿನ ನಿರುದ್ಯೋಗ ಪ್ರಮಾಣ 6 ವರ್ಷಗಳ ಕನಿಷ್ಠಕ್ಕೆ ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷೆಯ ಸಂಸ್ಥೆಯ ವರದಿಯಿಂದ ತಿಳಿದು ಬಂದಿದೆ.
ಸೋಮವಾರ ಬಿಡುಗಡೆಯಾಗಿರುವ ‘ಪೀರಿಯಾಡಿಕ್ ಲೇಬರ್ ಫೋರ್ಸ್ ಸಮೀಕ್ಷೆಯ ವಾರ್ಷಿಕ ವರದಿ 2022-23’(Periodic Labor Force Survey Annual Report 2022-23') ಯ ಪ್ರಕಾರ, ಭಾರತದಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿನ ಸಾಮಾನ್ಯ ಸ್ಥಿತಿಯ ನಿರುದ್ಯೋಗದ ಪ್ರಮಾಣ 2022-23ರಲ್ಲಿ ಶೇ.4.1ರಿಂದ ಶೇ.3.2ಕ್ಕೆ ಇಳಿಕೆಯಾಗಿದೆ. ಈ ನಿರುದ್ಯೋಗ ಪ್ರಮಾಣವು (unemployment rate) 2020-21ರಲ್ಲಿ ಶೇ.4.2, 2019-20ರಲ್ಲಿ ಶೇ.4.8, 2018-19ರಲ್ಲಿ ಶೇ.5.8ರಷ್ಟಿತ್ತು ಎಂದು ವರದಿ ತಿಳಿಸಿದೆ.
ನಾಯಿಗೆ ಗುಂಡಿಕ್ಕಿ ಮನೆಗೆ ಬೆಂಕಿ ಹಚ್ಚಿ ಕ್ರೌರ್ಯ ತೋರಿದ ಹಮಾಸ್ ಉಗ್ರರು: ವೀಡಿಯೋ
2017-18ರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇ.5.3ರಷ್ಟಿದ್ದ ಸಾಮಾನ್ಯ ಸ್ಥಿತಿಯ ನಿರುದ್ಯೋಗವು (unemployment rate in rural areas) 200-23ರಲ್ಲಿ ಶೇ.2.4ಕ್ಕೆ ಇಳಿಕೆಯಾಗಿದೆ. ನಗರ ಪ್ರದೇಶದಲ್ಲಿನ ನಿರುದ್ಯೋಗವು ಸಹ ಶೇ.7.7ರಿಂದ ಶೇ.5.4ಕ್ಕೆ ಇಳಿಕೆಯಾಗಿದೆ. ಪುರುಷರಲ್ಲಿನ ಈ ನಿರುದ್ಯೋಗ ಪ್ರಮಾಣ ಶೇ.6.1ರಿಂದ ಶೇ.3.3ಕ್ಕೆ ಹಾಗೂ ಮಹಿಳೆಯರಲ್ಲಿನ ನಿರುದ್ಯೋಗ ಪ್ರಮಾಣ ಶೇ.5.6ರಿಂದ ಶೇ.2.9ಕ್ಕೆ ಇಳಿಕೆಯಾಗಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ.
ಈ ಯುದ್ಧವನ್ನು ನಾವು ಆರಂಭಿಸಿಲ್ಲ, ಆದರೆ ಮುಗಿಸುವುದು ಮಾತ್ರ ನಾವೇ: ಇಸ್ರೇಲ್ ಅಧ್ಯಕ್ಷ ಬೆಂಜಮಿನ್
ಸಮೀಕ್ಷೆ ನಡೆಸುವ ಮುಂಚಿನ 365 ದಿನಗಳ ಕಾಲದಲ್ಲಿ ವ್ಯಕ್ತಿಯೊಬ್ಬರು ಹೊಂದಿರುವ ನಿರುದ್ಯೋಗದ ದಿನಗಳನ್ನು ಆಧರಿಸಿ ಈ ಸಮೀಕ್ಷೆಯನ್ನು ನಡೆಸಲಾಗಿದೆ.