ನಿಮಗೂ ಬಂತ್ತಾ ಸಂದೇಶ: ಸರ್ಕಾರ ಕಳಿಸಿದ ಎಮರ್ಜೆನ್ಸಿ ಅಲರ್ಟ್ ಮೆಸೇಜ್...!
ಭಾರತದ ಲಕ್ಷಾಂತರ ಜನರ ಮೊಬೈಲ್ ಫೋನ್‌ಗಳಿಗೆ ತುರ್ತು ಎಚ್ಚರಿಕೆ ಸಂದೇಶ ಬಂದಿದ್ದು, ಇದರಿಂದ ಜನ ಕೆಲ ಕಾಲ ಆತಂಕಕ್ಕೀಡಾದ ಘಟನೆ ನಡೆದಿದೆ. ಈ ವಿಚಾರದ ಬಗ್ಗೆ ಈಗ ಟ್ವಿಟ್ಟರ್‌ನಲ್ಲಿ ಭಾರಿ ಚರ್ಚೆಯಾಗುತ್ತಿದೆ.
ನವದೆಹಲಿ: ಭಾರತದ ಲಕ್ಷಾಂತರ ಜನರ ಮೊಬೈಲ್ ಫೋನ್‌ಗಳಿಗೆ ತುರ್ತು ಎಚ್ಚರಿಕೆ ಸಂದೇಶ ಬಂದಿದ್ದು, ಇದರಿಂದ ಜನ ಕೆಲ ಕಾಲ ಆತಂಕಕ್ಕೀಡಾದ ಘಟನೆ ನಡೆದಿದೆ. ಈ ವಿಚಾರದ ಬಗ್ಗೆ ಈಗ ಟ್ವಿಟ್ಟರ್‌ನಲ್ಲಿ ಭಾರಿ ಚರ್ಚೆಯಾಗುತ್ತಿದೆ. ಆದರೆ ಈ ಸಂದೇಶವನ್ನು ಕೇಂದ್ರ ಸರ್ಕಾರ ಪರೀಕ್ಷಾರ್ಥವಾಗಿ ಕಳುಹಿಸಿದ್ದು ಎಂಬುದು ಈಗ ಖಚಿತವಾಗಿದೆ. ಇಂದು ಮಧ್ಯಾಹ್ನ 11:35ರ ಸುಮಾರಿಗೆ ಎಮರ್ಜೆನ್ಸಿ ಟೋನ್‌ನೊಂದಿಗೆ ಅನೇಕರಿಗೆ ಈ ತುರ್ತು ಸಂದೇಶ ಬಂದಿದೆ, ಆಂಡ್ರಾಯ್ಡ್ ಹಾಗೂ ಐಫೋನ್ ಹೊಂದಿದ್ದ ಬಹುತೇಕರಿಗೆ ಈ ಸಂದೇಶ ಬಂದಿತ್ತು. ಆದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ಸಂದೇಶವನ್ನು ಪರೀಕ್ಷಾರ್ಥವಾಗಿ ಕಳುಹಿಸಿದೆ ಎಂದು ತಿಳಿದು ಬಂದಿದೆ.
11.35ರ ಹೊತ್ತಿಗೆ ಭಾರತದ ಅನೇಕ ಮೊಬೈಲ್ ಬಳಕೆದಾರರು ಸರ್ಕಾರದಿಂದ ತುರ್ತು ಎಚ್ಚರಿಕೆಯನ್ನು (emergency alert) ಸ್ವೀಕರಿಸಿದ್ದಾರೆ. ತುರ್ತು ಎಚ್ಚರಿಕೆಯ ರೆಕಾರ್ಡೆಡ್ ಧ್ವನಿಯೊಂದಿಗೆ ಇದನ್ನು ಕಳುಹಿಸಲಾಗಿದೆ. ಆದರೆ ಇದಕ್ಕೆ ಯಾರೂ ಗಾಬರಿಯಾಗುವ ಅಗತ್ಯವಿಲ್ಲ. ಈ ಎಚ್ಚರಿಕೆಯು ದೇಶದ ಹೊಸ ತುರ್ತು ಎಚ್ಚರಿಕೆ ವ್ಯವಸ್ಥೆಯ ಪರೀಕ್ಷೆಯ ಭಾಗವಾಗಿದೆ, ಇದನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನಡೆಸಿದೆ ಎಂದು ತಿಳಿದು ಬಂದಿದೆ. ಬೀಪ್ ಸದ್ದಿನೊಂದಿಗೆ ಬಂದ ಈ ಎಚ್ಚರಿಕೆ ಸಂದೇಶವನ್ನು ಕೆಲವು ನಿಮಿಷಗಳ ಅಂತರದಲ್ಲಿ ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಕಳುಹಿಸಲಾಗಿದೆ. ತೀವ್ರ ತುರ್ತು ಎಚ್ಚರಿಕೆ ಎಂದು ಸಂದೇಶ ನೀಡಲಾಗಿದೆ.
ಪಂಚರಾಜ್ಯ ಚುನಾವಣೆ: ಮಧ್ಯ ಪ್ರದೇಶ, ಛತ್ತೀಸ್‌ಗಢ ಕೈ ಪಾಲು, ರಾಜಸ್ಥಾನ ಬಿಜೆಪಿಗೆ: ಸಮೀಕ್ಷೆ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ಪ್ರಕಾರ ಈ ಎಚ್ಚರಿಕೆಯು ತುರ್ತು ಸಮಯದಲ್ಲಿ ಎಚ್ಚರಿಕೆ ವ್ಯವಸ್ಥೆ ಪರಿಣಾಮಕಾಯಾಗಿರುತ್ತದೆಯೇ ಎಂಬುದನ್ನು ನಿರ್ಣಯಿಸಲು ಮತ್ತು ಇದರಲ್ಲಿರುವ ಯಾವುದೇ ಸಂಭಾವ್ಯ ಸಮಸ್ಯೆಗಳನ್ನು ಗುರುತಿಸಲು ನಡೆಸಿದ ಪರೀಕ್ಷೆಯ ಭಾಗವಾಗಿದೆ. ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ (CBS) ಮೂಲಕ 11:30 ರಿಂದ ಮತ್ತು 11:44 ರ ನಡುವೆ ಈ ಸಂದೇಶವನ್ನು ಕಳುಹಿಸಲಾಗಿದೆ. ಈ ಸಂದೇಶವು ಸ್ವೀಕರಿಸುವವರಿಗೆ ಇದೊಂದು ಪರೀಕ್ಷೆಯಾಗಿದ್ದು ಯಾವುದೇ ಎಚ್ಚರಿಕೆ ಕ್ರಮದ ಅಗತ್ಯವಿಲ್ಲ ಎಂದು ತಿಳಿಸಿದೆ.
ನಾಯಿಗೆ ಗುಂಡಿಕ್ಕಿ ಮನೆಗೆ ಬೆಂಕಿ ಹಚ್ಚಿ ಕ್ರೌರ್ಯ ತೋರಿದ ಹಮಾಸ್ ಉಗ್ರರು: ವೀಡಿಯೋ
ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ (Cell Broadcasting System) ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ ಏಕೆಂದರೆ ನಿಮ್ಮ ಕಡೆಯಿಂದ ಈ ಬಗ್ಗೆ ಯಾವುದೇ ಕ್ರಮದ ಅಗತ್ಯವಿಲ್ಲ. ಪ್ಯಾನ್ ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ. ಇದು ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಈ ಸಂದೇಶದಲ್ಲಿದೆ. ಗಮನಾರ್ಹವಾಗಿ, ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಎನ್ನುವುದು ಮೊಬೈಲ್ ಆಪರೇಟರ್‌ಗಳು ಫೋನ್ ಆನ್ ಆಗಿದೆಯೋ ಇಲ್ಲವೋ , ಮೊಬೈಲ್ ನೆಟ್‌ವರ್ಕ್ ಪ್ರದೇಶದಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ನಿರ್ದಿಷ್ಟ ಪ್ರದೇಶದಲ್ಲಿ ಎಲ್ಲಾ ಫೋನ್‌ಗಳಿಗೆ ಸಂದೇಶಗಳನ್ನು ಕಳುಹಿಸಲು ಬಳಸುವ ತಂತ್ರಜ್ಞಾನವಾಗಿದೆ.
ಇಸ್ರೇಲ್ ಉಗ್ರ ಬೇಟೆ: 500 ಹಮಾಸ್ ನೆಲೆ ಧ್ವಂಸ: ಸಾವಿನ ಸಂಖ್ಯೆ 1400ಕ್ಕೆ ಏರಿಕೆ
ಇನ್ನು ಈ ಸಂದೇಶ ಬಹುತೇಕರಿಗೆ ಬಂದಿದ್ದು, ಇದರಿಂದ ಇದು ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. #EmergencyAlertSystem ಎಂದು ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಶುರುವಾಗಿದ್ದು, ಎಲ್ಲರೂ ತಮಗೆ ಬಂದ ಸಂದೇಶಗಳನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ಈ ಸಂದೇಶ ನನಗೆ ಮಾತ್ರ ಬಂದಿದ್ದ, ನಿಮಗೂ ಬಂತ ಎಂದು ಅನೇಕರು ಸಂದೇಶದ ಸ್ಕ್ರೀನ್ ಶಾಟ್ ಶೇರ್ ಮಾಡ್ತಿದ್ದಾರೆ.
ದೇಶದ ನಿರುದ್ಯೋಗ ಪ್ರಮಾಣ 6 ವರ್ಷಗಳ ಕನಿಷ್ಠಕ್ಕೆ: ಸಮೀಕ್ಷೆ