ಈ ಯುದ್ಧವನ್ನು ನಾವು ಆರಂಭಿಸಿಲ್ಲ, ಆದರೆ ಮುಗಿಸುವುದು ಮಾತ್ರ ನಾವೇ: ಇಸ್ರೇಲ್ ಅಧ್ಯಕ್ಷ ಬೆಂಜಮಿನ್
ಯುದ್ಧದ ಬಗ್ಗೆ ಮಾತನಾಡಿದ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೇತನ್ಯಾಹು (President Benjamin Netanyahu) ಈ ಯುದ್ಧವನ್ನು ನಾವು ಆರಂಭಿಸಿರಲಿಲ್ಲ, ಆದರೆ ಮುಗಿಸುವುದು ಮಾತ್ರ ನಾವೇ ಎಂದು ಹೇಳಿದ್ದಾರೆ.
ಜೆರುಸೆಲಂ: ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಈ ಯುದ್ಧ ಸಾವಿರಾರು ಜನರ ಸಾವು ನೋವಿಗೆ ಕಾರಣವಾಗಿದೆ. ಇಸ್ರೇಲ್‌ನ್ನು ಕೆಣಕಿ ಈಗ ಸೇವ್ ಪ್ಯಾಲೇಸ್ತೀನ್ ಎಂದು ಗೋಳಿಡುತ್ತಿರುವ ಹಮಾಸ್ ಉಗ್ರರ ಹುಟ್ಟಡಿಗಿಸಲು ಯಾವುದೇ ಬೆಲೆ ತೆರಲು ಇಸ್ರೇಲ್ ಶಪಥ ಮಾಡಿದ್ದು, ಇದಕ್ಕಾಗಿ 2.49 ಲಕ್ಷ ಕೋಟಿ ರೂ ಮೊತ್ತದ ವಿದೇಶಿ ಮೀಸಲನ್ನೇ ಇಸ್ರೇಲ್ ಮಾತನಾಡಿತ್ತು. ಇನ್ನು ಈ ಯುದ್ಧದ ಬಗ್ಗೆ ಮಾತನಾಡಿದ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೇತನ್ಯಾಹು (President Benjamin Netanyahu) ಈ ಯುದ್ಧವನ್ನು ನಾವು ಆರಂಭಿಸಿರಲಿಲ್ಲ, ಆದರೆ ಮುಗಿಸುವುದು ಮಾತ್ರ ನಾವೇ ಎಂದು ಹೇಳಿದ್ದಾರೆ. ದೇಶ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಹಲವು ವಿಚಾರಗಳನ್ನು ಜಗತ್ತಿನ ಮುಂದೆ ಹಂಚಿಕೊಂಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.
ಇಸ್ರೇಲ್ ಯುದ್ಧದಲ್ಲಿದೆ. ನಾವು, ಈ ಯುದ್ಧವನ್ನು ನಾವು ಬಯಸಿರಲಿಲ್ಲ, ಇದನ್ನು ಅತ್ಯಂತ ಕ್ರೂರ ಹಾಗೂ ಅಮಾನವೀಯ ವಿನಾಶದ ರೀತಿಯಲ್ಲಿ ನಮ್ಮ ಮೇಲೆ ಹೇರಲಾಯಿತು. ಆದರೆ ಇಸ್ರೇಲ್ ಈ ಯುದ್ಧವನ್ನು ಆರಂಭಿಸದಿದ್ದರೂ ಮುಗಿಸುವುದಂತೂ ನಾವೇ ಎಂದು ಆತ್ಮವಿಶ್ವಾಸದ ನುಡಿ ನುಡಿದಿದ್ದಾರೆ ಇಸ್ರೇಲ್ ಪ್ರಧಾನಿ ಬೆಂಜಮಿನ್. ಹಿಂದೊಮ್ಮೆ ಯಹೂದಿ ಜನರು ನೆಲೆ ಇಲ್ಲದವರಾಗಿದ್ದರು, ಒಮ್ಮೆ ಯಹೂದಿ ಜನರು (Jewish people) ರಕ್ಷಣೆ ಇಲ್ಲದವರಾಗಿದ್ದರು. ಆದರೆ ಈಗ ಹಾಗಿಲ್ಲ.
ನಾಯಿಗೆ ಗುಂಡಿಕ್ಕಿ ಮನೆಗೆ ಬೆಂಕಿ ಹಚ್ಚಿ ಕ್ರೌರ್ಯ ತೋರಿದ ಹಮಾಸ್ ಉಗ್ರರು: ವೀಡಿಯೋ
ನಮ್ಮ ಮೇಲೆ ದಾಳಿ ಮಾಡುವ ಮೂಲಕ ಅವರು ದೊಡ್ಡ ತಪ್ಪು ಮಾಡಿದ್ದಾರೆ ಎಂಬುದು ಹಮಾಸ್‌ಗೆ (Hamas Terrorist) ಈಗಾಗಲೇ ಅರ್ಥವಾಗಿರುತ್ತದೆ. ಮುಂಬರುವ ದಶಕಗಳಲ್ಲಿ ಅವರು (ಹಮಾಸ್) ಮತ್ತು ಇಸ್ರೇಲ್‌ನ ಇತರ ಶತ್ರುಗಳು ಕೂಡ ನಮ್ಮನ್ನು ಕೆಣಕುವ ಮುನ್ನ ಯೋಚಿಸುವಂತೆ ನೆನಪಿನಲ್ಲಿಟ್ಟುಕೊಳ್ಳುವ ರೀತಿಯಲ್ಲಿ ನಾವು ಅವರಿಗೆ ತಿರುಗೇಟು ನೀಡುತ್ತಿದ್ದೇವೆ.
ಅಮಾಯಕ ಇಸ್ರೇಲಿಗಳ ವಿರುದ್ಧ ಹಮಾಸ್ ನಡೆಸಿದ ಘೋರ ದಾಳಿಗಳು ಮನಸ್ಸಿಗೆ ಆಘಾತ ನೀಡಿದೆ. ಕುಟುಂಬವನ್ನು ಅವರ ಮನೆಗೆ ನುಗ್ಗಿ ಹತ್ಯೆ ಮಾಡುವುದು ಅಪಹರಿಸುವುದು, ಹೊರಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನುಗ್ಗಿ ನೂರಾರು ಜನರನ್ನು ಹತ್ಯೆ ಮಾಡಿದ್ದು, ಹಲವರು ಮಹಿಳೆ ಮಕ್ಕಳು ವೃದ್ಧರನ್ನು ಅಪಹರಿಸಿ ಹತ್ಯೆ ಮಾಡಿದ್ದು ಸೇರಿದಂತೆ ಹಮಾಸ್‌ನ ಈ ಘನಘೋರ ಹತ್ಯಾಕಂಡ ಹೃದಯ ಹಿಂಡುತ್ತಿದೆ. ಹಮಾಸ್ ಉಗ್ರರು ಮಕ್ಕಳನ್ನು ಬಂಧಿಸಿ, ಸುಟ್ಟು ಹಾಕಿದ್ದಾರೆ, ತಲೆ ಕಡಿದಿದ್ದಾರೆ. ಅದೆಲ್ಲವೂ ಕ್ರೌರ್ಯದ ಪರಮಾವಧಿಯಾಗಿದೆ
ಇಸ್ರೇಲ್ ಉಗ್ರ ಬೇಟೆ: 500 ಹಮಾಸ್ ನೆಲೆ ಧ್ವಂಸ: ಸಾವಿನ ಸಂಖ್ಯೆ 1400ಕ್ಕೆ ಏರಿಕೆ.
ಹಮಾಸ್ ಗೂ ಐಸಿಸ್‌ಗೂ ಯಾವುದೇ ವ್ಯತ್ಯಾಸವಿಲ್ಲ, ಇವೆರಡೂ ಒಂದೇ, ಹೀಗಾಗಿ ಐಸಿಸ್ ಅನ್ನು ಸೋಲಿಸಲು ಜಾಗತಿಕ ಶಕ್ತಿಗಳು ಒಂದಾದಂತೆಯೇ, ಹಮಾಸ್ ಅನ್ನು ಸೋಲಿಸುವಲ್ಲಿ ಜಗತ್ತು ಇಸ್ರೇಲ್ ಅನ್ನು ಬೆಂಬಲಿಸಬೇಕು ಎಂದ ಪ್ರಧಾನಿ ಬೆಂಜಮಿನ್ ನೇತನ್ಯಾಹು, ಇಸ್ರೇಲ್ ಬೆಂಬಲಿಸಿದ ಜಾಗತಿಕ ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ.
ನಾನು ಈ ಸಂದರ್ಭದಲ್ಲಿ ನಮಗೆ ಅಭೂತಪೂರ್ವ ನೆರವು ನೀಡಿದ ಅಮೆರಿಕಾ ಅಧ್ಯಕ್ಷರಿಗೆ ಧನ್ಯವಾದ ತಿಳಿಸುವೆ. ಇದರ ಜೊತೆಗೆ ಜಗತ್ತಿನಾದ್ಯಂತ ಇರುವ ಇಸ್ರೇಲ್ ಅನ್ನು ಬೆಂಬಲಿಸಿದ ಎಲ್ಲಾ ನಾಯಕರಿಗೂ ನಾನು ಧನ್ಯವಾದ ತಿಳಿಸುವೆ. ಹಾಗೆಯೇ ಅಮೆರಿಕಾದ ಜನರು ಹಾಗೂ ಅಮೆರಿಕಾದ ಸಂಸತ್‌ಗೆ ಧನ್ಯವಾದ ತಿಳಿಸುವೆ.
ಯುದ್ಧಪೀಡಿತ ಆರ್ಥಿಕತೆಗೆ ಬಲ ತುಂಬಲು 2.49 ಲಕ್ಷ ಕೋಟಿ ವಿದೇಶಿ ಮೀಸಲು ಮಾರಿದ ಇಸ್ರೇಲ್!
ಹಮಾಸ್ ವಿರುದ್ಧ ಇಸ್ರೇಲ್ ಕೇವಲ ತನ್ನ ಸ್ವಂತ ಜನರಿಗಾಗಿ ಮಾತ್ರ ಹೋರಾಡುತ್ತಿಲ್ಲ. ಅದು ಭಯೋತ್ಪಾದನೆ ವಿಧ್ವಂಸಕ ಅನಾಗರಿಕ ಕೃತ್ಯಗಳ ವಿರುದ್ಧ ಹೋರಾಡುತ್ತಿರುವ ಪ್ರತಿಯೊಂದು ದೇಶದ ಪರವಾಗಿ ಹೋರಾಡುತ್ತಿದೆ. ಇಸ್ರೇಲ್ ಈ ಯುದ್ಧವನ್ನು ಗೆಲ್ಲುತ್ತದೆ. ಯಾವಾಗ ಇಸ್ರೇಲ್ ಯುದ್ಧ ಗೆಲ್ಲುತ್ತದೆಯೋ ಆಗ ಇಡೀ ಪ್ರಪಂಚ ನಾಗರಿಕತೆಯನ್ನು ಗೆಲ್ಲುತ್ತದೆ ಎಂದು ಭಾವುಕವಾಗಿ ಮಾತನಾಡಿದ್ದಾರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು
ಹೆಂಗಸರು ಮಕ್ಕಳ ಮೇಲೆ ಹಮಾಸ್ ಉಗ್ರರ ರಕ್ಕಸ ಕೃತ್ಯಗಳು: ಬಾಲಕಿಯ ಕೊಂದು ಸ್ವರ್ಗ ಸೇರಿತು ಎಂದರು
ಗಾಜಾಪಟ್ಟಿ ವಶ ಏಕೆ ಮಹತ್ವ?
ವೆಸ್ಟ್‌ಬ್ಯಾಂಕ್ ಮತ್ತು ಗಾಜಾಪಟ್ಟಿ ಎರಡೂ ಸೇರಿ ಪ್ಯಾಲೆಸ್ತೀನ್ ದೇಶ ಎನ್ನಲಾಗುತ್ತದೆ. ಆದರೆ ಇವರೆಡೂ ಪ್ರತ್ಯೇಕ ಭಾಗಗಳು. ಪಾಲೆಸ್ತೀನ್‌ನಲ್ಲಿ ಪ್ರತ್ಯೇಕ ಸರ್ಕಾರವಿದೆ. ಆದರೆ ಅಲ್ಲಿಂದ 100 ಕಿ.ಮೀ ದೂರದ ಗಾಜಾಪಟ್ಟಿ ಪ್ರದೇಶ 365 ಚದರ ಕಿ.ಮೀ ವ್ಯಾಪ್ತಿಯ (41 ಕಿ.ಮೀ ಉದ್ದ- 6ರಿಂದ 12 ಕಿ.ಮೀ ಅಗಲದ ಪ್ರದೇಶ) ಸಣ್ಣ ಪ್ರದೇಶದಲ್ಲಿ 2.30 ಲಕ್ಷ ಜನರು ವಾಸಿಸುತ್ತಾರೆ. ಇದು ವಿಶ್ವದಲ್ಲೇ 3ನೇ ಅತಿದೊಡ್ಡ ಜನದಟ್ಟಣೆ ಪ್ರದೇಶ. 2007ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಮಾಸ್ ಉಗ್ರರು ಅಧಿಕಾರ ಪಡೆದುಕೊಂಡಿದ್ದಾರೆ. ದೇಶದ ಶೇ.70ರಷ್ಟು ಜನರು ಕಡುಬಡವರು. ಈ ಪ್ರದೇಶ ಇಸ್ರೇಲ್‌ನೊಂದಿಗೆ 51 ಕಿ.ಮೀ ಮತ್ತು ಈಜಿಪ್ಟ್‌ನೊಂದಿಗೆ 14 ಕಿ.ಮೀ ಗಡಿ ಹಂಚಿಕೊಂಡಿದೆ. 2007ರಲ್ಲೇ ಗಾಜಾಗೆ ಇಸ್ರೇಲ್ ಮತ್ತು ಈಜಿಪ್ಟ್ ಹಲವು ನಿರ್ಬಂಧ ಹೇರಿವೆ. ಆದರೆ ಮಾನವೀಯ ನೆಲೆಯಲ್ಲಿ ಅಲ್ಲಿಗೆ ಇಂಧನ, ವಿದ್ಯುತ್ ಮತ್ತು ಆಹಾರ ವಸ್ತುಗಳನ್ನು ಇಸ್ರೇಲ್ ಪೂರೈಸುತ್ತಿತ್ತು. ಇದು ಹಮಾಸ್ ಉಗ್ರರ ಪ್ರಮುಖ ನೆಲೆ. ಇಲ್ಲಿಂದ ಹಮಾಸ್ ಉಗ್ರರು ನಾಮಾವಶೇ಼ಷವಾದರೆ ದಶಕಗಳ ಸಂಘರ್ಷ ಅಂತ್ಯವಾದಂತೆ ಎಂಬುದು ಇಸ್ರೇಲ್ ಲೆಕ್ಕಾಚಾರ. ಹೀಗಾಗಿಯೇ ಈ ಬಾರಿ ಅದು ಅಂತಿಮ ಯುದ್ಧಕ್ಕೆ ಸಜ್ಜಾಗಿದೆ.