Asianet Suvarna News Asianet Suvarna News

ಕೃಷಿ ಹಿನ್ನೆಲೆ ಇಲ್ಲ, ಸ್ವಂತ ಜಮೀನಿಲ್ಲ.. ಛಲ ಬಿಡದೆ ತರಕಾರಿ ಬೆಳೆದು ಲಾಭ ಗಳಿಸಿದ ಮಹಿಳೆ

ಕೆಲಸದಲ್ಲಿ ಆಸಕ್ತಿ ಇದ್ರೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಕೃಷಿ ನಮ್ಮ ದೇಶದ ಬೆನ್ನೆಲುಬು. ಪದವಿ ನಂತ್ರ ಅದನ್ನೇ ಆಯ್ದುಕೊಂಡು ಯಶಸ್ವಿಯಾದ ಅನುಷ್ಕಾ ಜೈಸ್ವಾಲ್ ಕಥೆ ಇಲ್ಲಿದೆ. 

Young Farmer Anushka From Uttar Pradesh Chose Farming Instead Of Job roo
Author
First Published Feb 28, 2024, 11:46 AM IST

ಪುರುಷ ಪ್ರಧಾನ ದೇಶವಾಗಿದ್ದ ಭಾರತದಲ್ಲಿ ಮಹಿಳೆಯರು ನಿಧಾನವಾಗಿ ತಮ್ಮ ಪ್ರಾಬಲ್ಯ ಮರೆಯುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ನೀವು ಈಗ ಮಹಿಳೆಯರನ್ನು ನೋಡ್ಬಹುದು. ವಿಮಾನ ಹಾರಾಟ, ವಿಜ್ಞಾನ, ತಂತ್ರಜ್ಞಾನದಿಂದ ಹಿಡಿದು ಕೃಷಿಯವರೆಗೆ ಮಹಿಳೆಯರನ್ನು ಕಾಣಬಹುದು. ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆಯರ ಸಂಖ್ಯೆ ಸಾಕಷ್ಟಿದೆ. ಆದ್ರೆ ಬೇರೆಯವರ ಕೈ ಕೆಳಗೆ ಕೆಲಸ ಮಾಡುವ ಮಹಿಳೆಯರೇ ಈ ಕ್ಷೇತ್ರದಲ್ಲಿ ಹೆಚ್ಚಿದ್ದಾರೆಯೇ ವಿನಃ ಸ್ವಂತ ಕೃಷಿ ಭೂಮಿಯ ಜವಾಬ್ದಾರಿ ಹೊತ್ತು, ತಮ್ಮ ನಿರ್ಧಾರದಂತೆ ಕೃಷಿ ಮಾಡಿ ಲಾಭ ಮಾಡುವ ಮಹಿಳೆಯರ ಸಂಖ್ಯೆ ಕಡಿಮೆ.

ಕೃಷಿ (Agriculture) ಎಂದಾಗ ಸವಾಲುಗಳು ಜಾಸ್ತಿ. ಸೂರ್ಯನ ಬೆಳಕಿನಲ್ಲಿ ಕೆಲಸ ಮಾಡಬೇಕು. ಒಂದಿಷ್ಟು ಕೆಲಸಗಾರ (Laborer) ರನ್ನು ಸಂಭಾಳಿಸಬೇಕು. ಅಗತ್ಯಬಿದ್ದಾಗ ತೋಟ, ಗದ್ದೆಗೆ ಇಳಿಯಬೇಕು. ಕೃಷಿ ಬಗ್ಗೆ ಮಾಹಿತಿಯ ಅರಿವಿರಬೇಕು. ಭಾರದ ವಸ್ತುಗಳನ್ನು ಸಂಭಾಳಿಸುವ ಶಕ್ತಿ ಬೇಕು. ಈ ಎಲ್ಲ ಕಾರಣದಿಂದಾಗಿ ಕೃಷಿ ಎಂದಾಗ ಮಹಿಳೆಯರು ಹಿಂದೆ ಸರಿಯೋದೇ ಹೆಚ್ಚು. ಅಶಿಕ್ಷಿತ ಅಥವಾ ಕಡಿಮೆ ಶಿಕ್ಷಣ ಪಡೆದ ಮಹಿಳೆಯರನ್ನು ಬಿಟ್ಟರೆ ಪದವಿ ಪಡೆದ ಮಹಿಳೆಯರು ಈ ಕ್ಷೇತ್ರಕ್ಕೆ ಕಾಲಿಡೋದಿಲ್ಲ. ಈ ಮೇಲಿನ ಎಲ್ಲ ಸವಾಲನ್ನು ಎದುರಿಸಿ, ನನ್ನಿಂದಲೂ ಕೃಷಿ ಸಾಧ್ಯ ಎಂಬುದನ್ನು ತೋರಿಸಿಕೊಟ್ಟವರು ಅನುಷ್ಕಾ ಜೈಸ್ವಾಲ್ (Anushka Jaiswal).

2ನೇ ಬಾರಿ ಕ್ಯಾನ್ಸ‌ರ್ ತಡೆಗೆ ಟಾಟಾ ಇನ್‌ಸ್ಟಿಟ್ಯೂಟ್‌ನಿಂದ 100 ರೂಪಾಯಿಯ ಮಾತ್ರೆ

ಉತ್ತರ ಪ್ರದೇಶದ ಯುವ ರೈತ ಮಹಿಳೆ ಅನುಷ್ಕಾ ಜೈಸ್ವಾಲ್. ತಮ್ಮ 23 ನೇ ವಯಸ್ಸಿನಲ್ಲಿ ಕೃಷಿ ಪ್ರಾರಂಭಿಸಿದ ಅನುಷ್ಕಾ ಈಗ ಯಶಸ್ವಿ ರೈತ ಮಹಿಳೆ ಎನ್ನಿಸಿಕೊಂಡಿದ್ದಾರೆ.  27 ವರ್ಷದ ಅನುಷ್ಕಾ, ಕೃಷಿ ಆರಂಭಿಸಿದ 4 ವರ್ಷಗಳಲ್ಲಿ 22 ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿದ್ದಾರೆ. ಕೃಷಿ ಹಿನ್ನಲೆ ಇಲ್ಲದ ಮಹಿಳೆಯಿಂದ ಸಾಧನೆ : ದೆಹಲಿಯ ಹಿಂದೂ ಕಾಲೇಜಿನಲ್ಲಿ ಅರ್ಥಶಾಸ್ತ್ರವನ್ನು ಅನುಷ್ಕಾ ಅಧ್ಯಯನ ಮಾಡಿದ್ದಾರೆ. ಅವರಿಗೆ ಪೂರ್ವಜರ ಕೃಷಿ ಆಸ್ತಿ ಇಲ್ಲ. ಕೃಷಿ ಹಿನ್ನೆಲೆಯಿಂದ ಬಂದವರು ಅವರಲ್ಲ. ತಂದೆ ವ್ಯಾಪಾರಸ್ಥ. ತಾಯಿ ಗೃಹಿಣಿ. ಅಕ್ಕ ವಕೀಲೆಯಾದ್ರೆ ಅಣ್ಣ ಪೈಲೆಟ್ (Pilot). ಅತ್ತಿಗೆ ಸಾಫ್ಟವೇರ್ ಇಂಜಿನಿಯರ್ (Software Engineer). ಎಲ್ಲರೂ ತಮ್ಮ ಕ್ಷೇತ್ರದಲ್ಲಿ ಬ್ಯುಸಿ ಇರುವಾಗ ಹೊಸದನ್ನು ಮಾಡುವ ಬಯಕೆ ಅನುಷ್ಕಾರಿಗಿತ್ತು. ಓದಿದ ಕ್ಷೇತ್ರದಲ್ಲಿ ಕೆಲಸ ಮಾಡುವ ಮನಸ್ಸು ಅವರಿಗಿರಲಿಲ್ಲ. ಕುಟುಂಬದ (Family) ಜೊತೆ ಚರ್ಚೆ ನಡೆಸಿದ ಅನುಷ್ಕಾ ದೊಡ್ಡ ಕೆಲಸಕ್ಕೆ ಕೈ ಹಾಕಿದ್ದರು. ಕೃಷಿ ಕ್ಷೇತ್ರದಲ್ಲಿ (Agriculture Sector) ತಮ್ಮ ಛಾಪು ಮೂಡಿಸುವ ನಿರ್ಧಾರಕ್ಕೆ ಬಂದಿದ್ದರು.

ಹಾಗಾಗಿಯೇ ನಾಲ್ಕು ವರ್ಷಗಳ ಹಿಂದೆ ಒಂದು ಎಕರೆ ಭೂಮಿಯನ್ನು ಅನಿಷ್ಕಾ ಎರವಲು ಪಡೆದರು. ಅದ್ರಲ್ಲಿ ಆರಂಭಿಕ ಪ್ರಯೋಗ ನಡೆಯಿತು. ಕೃಷಿಯ ಬಗ್ಗೆ ಜ್ಞಾನವಿಲ್ಲದ ಅನುಷ್ಕಾ, ಸೂಕ್ತ ತರಬೇತಿ ಪಡೆದರು. ಯಾವ ಕೃಷಿಯಿಂದ ಲಾಭವಿದೆ, ಇದಕ್ಕೆ ಮಣ್ಣು ಸೂಕ್ತವೆ ಎಂಬೆಲ್ಲದರ ಬಗ್ಗೆ ಅಧ್ಯಯನ ನಡೆಸಿದರು. ನಂತ್ರ ಮತ್ತೆ ಮೂರು ಎಕರೆ ಜಮೀನಿನಲ್ಲಿ ಕೃಷಿ ಶುರು ಮಾಡಿದ್ರು. ಒಂದು ಎಕರೆ ಜಾಗದಲ್ಲಿ ಅನುಷ್ಕಾ ಪಾಲಿ ಹೌಸ್ ಶುರು ಮಾಡಿದ್ದಾರೆ. ಇನ್ನು 3 ಎಕರೆ ಜಮೀನಿನಲ್ಲಿ ಕ್ಯಾಪ್ಸಿಕಂ, ಎಲೆಕೋಸು, ಹೂಕೋಸು ಸೇರಿದಂತೆ ಅನೇಕ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಈ ಕೆಲಸಕ್ಕೆ ಅನುಷ್ಕಾ ಸರ್ಕಾರದಿಂದ 50 ಪರ್ಸೆಂಟ್ ಸಬ್ಸಿಡಿಯನ್ನೂ (Subsidy) ಪಡೆದಿದ್ದಾರೆ.

ಸಿಎನ್‌ಜಿ ಗ್ಯಾಸ್‌ಗೆ ಟಕ್ಕರ್‌, CBG ಇಂಧನ ಉತ್ಪಾದನೆಗೆ 5000 ಕೋಟಿ ಹೂಡಿಕೆಗೆ ಮುಂದಾದ ಅಂಬಾನಿ, ಏನಿದು ಸಿಬಿಜಿ?

ಗರಿಷ್ಠ ತಂತ್ರಜ್ಞಾನದಲ್ಲಿ ಕಡಿಮೆ ಭೂಮಿಯಲ್ಲಿ ಹೆಚ್ಚು ಬೆಳೆ ಬೆಳೆಯೋದು ಹೇಗೆ ಎಂಬದನ್ನು ತಿಳಿದ ಅನುಷ್ಕಾ, 50 ಟನ್ ಸೌತೆಕಾಯಿ ಉತ್ಪಾದಿಸಿದ್ದಾರೆ. ಅವರು ಬೆಳೆದ ತರಕಾರಿಗೆ ಲಕ್ನೋ ಸೇರಿದಂತೆ ಸ್ಥಳೀಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗ್ತಿದೆ. ಶಾಪಿಂಗ್ ಮಾಲ್ ಗಳಲ್ಲೂ (Shopping Mall) ತರಕಾರಿ ಮಾರಾಟ ಮಾಡ್ತಿರುವ ಅನುಷ್ಕಾ 22 ಲಕ್ಷಕ್ಕೂ ಹೆಚ್ಚು ಲಾಭಗಳಿಸಿದ್ದಾರೆ. 

Follow Us:
Download App:
  • android
  • ios