Gardening Tips: ಗಿಡಕ್ಕೆ ಯಾವ ಸಮಯದಲ್ಲಿ ನೀರು ಹಾಕ್ಬೇಕು ಗೊತ್ತಾ?
ಮಾರುಕಟ್ಟೆಯಿಂದ ತಂದ ಗಿಡ ಆರಂಭದಲ್ಲಿ ತುಂಬಾ ಚೆನ್ನಾಗಿ ಬೆಳೆಯುತ್ತೆ. ದಿನ ಕಳೆದಂತೆ ಬಾಡಲು ಶುರುವಾಗುತ್ತೆ. ಕೆಲವೊಮ್ಮೆ ಗಿಡ ಕೊಳೆತು ಹಾಳಾಗುತ್ತೆ. ಇದಕ್ಕೆ ನಾನಾ ಕಾರಣವಿದೆ. ಅದ್ರಲ್ಲಿ ನಾವು ನೀರು ಹಾಕುವ ಸಮಯ ಕೂಡ ಸೇರಿದೆ.

ಮನೆ ಮುಂದೆ ಗಿಡವಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ಶುದ್ಧ ಗಾಳಿ ನಿಮಗೆ ಸಿಗುವ ಜೊತೆಗೆ ಅರಳಿ ನಿಂತ ಹೂಗಳನ್ನು, ಹಚ್ಚ ಹಸಿರಿನ ಗಿಡವನ್ನು ಕಣ್ತುಂಬಿಕೊಂಡ್ರೆ ಮನಸ್ಸು ಖುಷಿಯಾಗುತ್ತದೆ. ಒತ್ತಡ ಕಡಿಮೆಯಾಗುತ್ತದೆ. ಮನೆ ಮುಂದೆ ಗಿಡ ಬೆಳೆಸಲು ಅನೇಕರು ಬಯಸ್ತಾರೆ. ಚಂದದ ಗಿಡಗಳನ್ನು ತಂದು ಮನೆ ಮುಂದೆ ಹಾಕ್ತಾರೆ. ಇತ್ತೀಚಿನ ದಿನಗಳಲ್ಲಿ ಟೆರೆಸ್ ಗಾರ್ಡನಿಂಗ್ ಪ್ರಸಿದ್ಧಿ ಪಡೆಯುತ್ತಿದೆ. ಇಷ್ಟವೆನ್ನುವ ಕಾರಣಕ್ಕೆ ಗಿಡ ಬೆಳೆಸಿದ್ರೆ ಸಾಲದು, ಅದಕ್ಕೆ ಸರಿಯಾದ ಆರೈಕೆ ಮಾಡಬೇಕು. ತಪ್ಪು ಆರೈಕೆಯಿಂದ ಗಿಡ ಹಾಳಾಗುತ್ತದೆ. ನೀವು ನೀರು ಹಾಕುವ ವಿಧಾನ ಕೂಡ ಸಸ್ಯದ ಬೆಳವಣಿಕೆಯ ಮೇಲೆ ಪರಿಣಾಮ ಬೀರುತ್ತದೆ.
ಸಸ್ಯ (Plant) ಗಳಿಗೆ ಸಾಕಷ್ಟು ನೀರು (Water) ಮತ್ತು ಸೂರ್ಯ (Sun) ನ ಬೆಳಕು ಅವಶ್ಯಕ. ಗಿಡಗಳಿಗೆ ಕಡಿಮೆ ನೀರು ಹಾಕಿದ್ರೂ ಅದ್ರ ಬೆಳವಣಿಗೆ ಕುಂಟಿತಗೊಳ್ಳುತ್ತದೆ. ಅತಿಯಾದ ನೀರು ಹಾಕಿದ್ರೂ ಅದು ಕೊಳೆಯುತ್ತದೆ. ಹಾಗಾಗಿ ಸರಿಯಾದ ಪ್ರಮಾಣದಲ್ಲಿ ನೀರು ಹಾಕಲು ಪ್ರಯತ್ನಿಸಬೇಕು. ಇದಕ್ಕಿಂತ ಹೆಚ್ಚಾಗಿ ಸರಿಯಾದ ಸಮಯದಲ್ಲಿ ಗಿಡಕ್ಕೆ ನೀರು ಹಾಕುವುದು ಮುಖ್ಯ. ಸಾಮಾನ್ಯವಾಗಿ ಜನರು ಈ ಬಗ್ಗೆ ಗಮನ ಹರಿಸುವುದಿಲ್ಲ. ತಮಗೆ ಅನುಕೂಲವಾದ ಸಮಯದಲ್ಲಿ ಗಿಡಕ್ಕೆ ನೀರುಣಿಸುತ್ತಾರೆ. ಸರಿಯಾದ ಸಮಯದಲ್ಲಿ ನೀರು ಹಾಕದೆ ಹೋದ್ರೆ ಸಸ್ಯ ಹಾಳಾಗುತ್ತದೆ. ಯಾವ ಸಮಯದಲ್ಲಿ ಗಿಡಕ್ಕೆ ನೀರು ಹಾಕ್ಬೇಕು ಎಂಬುದನ್ನು ನಾವಿಂದು ಹೇಳ್ತೆವೆ.
Gardening Tips: ಕೀಟಗಳಿಂದ ಗಿಡ ರಕ್ಷಿಸಲು ಇಲ್ಲಿವೆ ನೈಸರ್ಗಿಕ ಮದ್ದು!
ಸಸ್ಯಗಳಿಗೆ ಈ ಸಮಯದಲ್ಲಿ ನೀರು ಹಾಕ್ಬೇಡಿ :
ಮಧ್ಯಾಹ್ನ ಗಿಡಕ್ಕೆ ನೀರು ಹಾಕ್ಬೇಡಿ : ಮನೆ (House) ಯಲ್ಲಿರುವ ಸಸ್ಯಗಳಿಗೆ ಮಧ್ಯಾಹ್ನ ನೀರು ಹಾಕಬೇಡಿ. ಮಧ್ಯಾಹ್ನ ವಾತಾವರಣ ಬಿಸಿ ಇರುತ್ತದೆ. ಸೂರ್ಯನ ಶಾಖ ಹೆಚ್ಚಿರುತ್ತದೆ. ಈ ಸಮಯದಲ್ಲಿ ನೀರು ಹಾಕಿದ್ರೆ ಗಿಡ ಹಾಳಾಗುತ್ತದೆ. ಸಸ್ಯಗಳಿಗೆ ನೀರು ಹೀರಿಕೊಳ್ಳಲು ಕಷ್ಟವಾಗುತ್ತದೆ. ಬಿಸಿಲಿಗೆ ನೀರು ಆವಿಯಾಗಲು ಶುರುವಾಗುತ್ತದೆ. ಮಣ್ಣಿಗೆ ನೀರನ್ನು ಹೀರಿಕೊಳ್ಳಲು ಸಾಧ್ಯವಾಗದ ಕಾರಣ ನೀವು ಹಾಕಿದ ನೀರು ವ್ಯರ್ಥವಾಗುತ್ತದೆ.
ರಾತ್ರಿ ವೇಳೆ ಗಿಡಗಳಿಗೆ ನೀರು ಹಾಕ್ಬೇಡಿ : ಬಹುತೇಕರಿಗೆ ಬೆಳಿಗ್ಗೆ ಗಿಡಕ್ಕೆ ನೀರು ಹಾಕಲು ಸಮಯ ಸಿಗುವುದಿಲ್ಲ. ಎಲ್ಲ ಕೆಲಸ ಮುಗಿಸಿ ಮನೆಗೆ ಬಂದ ನಂತ್ರ ಮನೆ ಕೆಲಸದಲ್ಲಿ ನಿರತರಾಗ್ತಾರೆ. ಹಾಗಾಗಿ ರಾತ್ರಿ ಅವರು ಗಿಡಕ್ಕೆ ನೀರು ಹಾಕ್ತಾರೆ. ರಾತ್ರಿ ಗಿಡಕ್ಕೆ ನೀರು ಹಾಕುವುದ್ರಿಂದ ಸಸ್ಯಕ್ಕೆ ನೀರನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ. ಇದು ಸಸ್ಯಗಳಲ್ಲಿ ಅತಿಯಾದ ನೀರಿನ ಸಮಸ್ಯೆಯನ್ನು ಉಂಟುಮಾಡಬಹುದು. ಪ್ರತಿ ದಿನ ಹೀಗೆ ಮಾಡಿದ್ರೆ ಗಿಡ ಕೊಳೆಯಲು ಶುರುವಾಗುತ್ತದೆ. ಆದಷ್ಟು ರಾತ್ರಿ ಗಿಡಕ್ಕೆ ನೀರು ಹಾಕಬೇಡಿ. ಒಂದ್ವೇಳೆ ಅತ್ಯಗತ್ಯ ಎನ್ನುವುದಾದ್ರೆ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಸ್ಪ್ರೇ (Spray) ಮಾಡಿ. ಇದನ್ನು ಕೂಡ ನೀವು ಪ್ರತಿನಿತ್ಯ ಮಾಡಬಾರದು.
Home Garden : ಕೈತೋಟದಲ್ಲಿರುವ ಬೀನ್ಸ್ ಎಲೆಗಳು ಹಳದಿಯಾಗ್ತಿದ್ದರೆ ಈ ಟಿಪ್ಸ್ ಬಳಸಿ
ಸಸ್ಯಗಳಿಗೆ ನೀರು ಹಾಕಲು ಯಾವುದು ಸರಿಯಾದ ಸಮಯ : ರಾತ್ರಿ ಬೇಡ, ಮಧ್ಯಾಹ್ನ ಬೇಡ. ಹಾಗಿದ್ರೆ ಯಾವ ಸಮಯದಲ್ಲಿ ಸಸ್ಯಗಳಿಗೆ ನೀರುಣಿಸಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಗಿಡಕ್ಕೆ ನೀರು ಹಾಕಲು ಸರಿಯಾದ ಸಮಯ ಮುಂಜಾನೆ. ಆದಷ್ಟು ಬೆಳಿಗ್ಗೆ ನಿಮ್ಮ ಸಸ್ಯಗಳಿಗೆ ನೀರುಣಿಸಲು ಪ್ರಯತ್ನಿಸಿ. ಇದರಿಂದ ನಿಮ್ಮ ಸಸ್ಯಗಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಸೂರ್ಯ ನೆತ್ತಿಯ ಮೇಲೆ ಬರ್ತಿದ್ದಂತೆ ಸಸ್ಯಗಳು ಆ ನೀರನ್ನು ಸರಿಯಾಗಿ ಬಳಸಿಕೊಳ್ಳುತ್ತವೆ. ನೀವು ಬೆಳಿಗ್ಗೆ ನಿಮ್ಮ ಗಿಡಗಳಿಗೆ ನೀರುಣಿಸಲು ಮರೆತರೆ ಸೂರ್ಯಾಸ್ತದ ನಂತರ ಅಂದ್ರೆ ರಾತ್ರಿಯಾಗುವ ಮೊದಲು ನೀವು ಗಿಡಕ್ಕೆ ನೀರು ಹಾಕಬಹುದು. ಇದ್ರಿಂದ ಗಿಡದ ಬೆಳವಣಿಗೆ ಚೆನ್ನಾಗಿ ಆಗುತ್ತದೆ.