Relationship Tips : ಸಹೋದ್ಯೋಗಿ ಜೊತೆ ಓವರ್ ಫ್ರೆಂಡ್ಲಿ ಆಗಿದ್ದೇ ತಪ್ಪಾಯ್ತು..!

Relationship Tips for office colleagues: ಕಚೇರಿ ಇರಲಿ, ವ್ಯಾಪಾರದ ಸ್ಥಳವಿರಲಿ, ಜೊತೆಯಲ್ಲಿ ಕೆಲಸ ಮಾಡುವಾಗ ಪರಸ್ಪರ ಮಾತುಕತೆ, ಸ್ನೇಹವಿರಬೇಕು. ಆದ್ರೆ ಸಹೋದ್ಯೋಗಿ ಜೊತೆ ಸ್ನೇಹ ಮಿತಿಯಲ್ಲಿರಬೇಕು. ಇಲ್ಲವಾದ್ರೆ ಕುಟುಂಬದಲ್ಲಿ ಸಮಸ್ಯೆಯಾಗುತ್ತದೆ. ದಾಂಪತ್ಯ ಮುರಿದು ಬೀಳುವ ಸಾಧ್ಯತೆಯಿರುತ್ತದೆ.
 

Working Women Colleague Relationship

ಕೆಲಸ (Work) ಮಾಡುವ ಸ್ಥಳದಲ್ಲಿ ಸಹೋದ್ಯೋಗಿ (Colleague) ಗಳ ಜೊತೆ ಉತ್ತಮ ಸಂಬಂಧ ಹೊಂದಿರಬೇಕು. ಇದ್ರಿಂದ ಉದ್ಯೋಗ (Job) ದಲ್ಲಿ ಪ್ರಗತಿ ಸಾಧಿಸುವ ಜೊತೆಗೆ ಯಾವುದೇ ಒತ್ತಡವಿಲ್ಲದೆ ಖುಷಿಯಿಂದ ಕೆಲಸ ಮಾಡಬಹುದು. ಸಹೋದ್ಯೋಗಿಗಳ ಜೊತೆ ಉತ್ತಮ ಸಂಬಂಧ ಬೆಳೆಸಲು ಅನೇಕ ಕಂಪನಿಗಳು ಅನೇಕ ಕಾರ್ಯಕ್ರಮಗಳನ್ನು ನಡೆಸುವುದಿದೆ. ಆದ್ರೆ ಅತಿಯಾದ್ರೆ ಎಲ್ಲವೂ ಆಪತ್ತೆ. ಕಚೇರಿ ಕೆಲಸ, ಸಂಬಂಧ ಕಚೇರಿಯಿಂದ ಹೊರಗೆ ಬಂದಾಗ ಸಮಸ್ಯೆಯಾಗುತ್ತದೆ. ಕುಟುಂಬ ಹಾಗೂ ಕಚೇರಿ ಮಧ್ಯೆ ಅಂತರವಿರಲೇಬೇಕು. ಇಲ್ಲವೆಂದ್ರೆ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಶುರುವಾಗುತ್ತದೆ. ಇದಕ್ಕೆ ಮಹಿಳೆ ಉತ್ತಮ ನಿದರ್ಶನ. ಸಹೋದ್ಯೋಗಿ ಜೊತೆ ಅತಿಯಾದ ಅಟ್ಯಾಚ್ಮೆಂಟ್ ಸಂಕಷ್ಟ ತಂದಿದೆ. ಆಕೆ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ಮದುವೆ ವಿಚ್ಛೇದನಕ್ಕೆ ಬಂದು ನಿಂತಿದೆ. ಇಂದು ನಾವು ಮಹಿಳೆ ಸಮಸ್ಯೆ ಏನು ಎಂಬುದನ್ನು ಹೇಳ್ತೇವೆ. 

ಮಹಿಳೆಗೆ ಮದುವೆಯಾಗಿ 14 ವರ್ಷ ಕಳೆದಿದೆಯಂತೆ. 9 ವರ್ಷದ ಮಗಳಿದ್ದಾಳಂತೆ. ಮಹಿಳೆ ತನ್ನ ಪತಿಯನ್ನು ಪ್ರೀತಿಸ್ತಾಳಂತೆ. ಆದ್ರೆ ಮಹಿಳೆ ಸ್ವಲ್ಪ ಎಡವಿದ್ದಾಳೆ. ಪ್ರೀತಿ ಹಾಗೂ ಸ್ನೇಹದ ಮಧ್ಯೆ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲವಂತೆ. ಕಚೇರಿಯಲ್ಲಿ ಸಹೋದ್ಯೋಗಿಗಳು ನೀಡ್ತಿದ್ದ ಅಟೆನ್ಷನ್ ಆಕೆಗೆ ಇಷ್ಟವಾಗಿತ್ತಂತೆ. ಇದೇ ಗುಂಗಿನಲ್ಲಿ ದಿನ ಕಳೆದ ಮಹಿಳೆ ಈಗ ಪಶ್ಚಾತಾಪಪಡ್ತಿದ್ದಾಳೆ. 

ಸಹೋದರಿ ಮದುವೆಗಾಗಿ ಮಗಳಿಗೆ ಸುನ್ನತಿ ಮಾಡಿಸಿದ ತಾಯಿ!

ಪತಿಗೆ ಮೋಸ ಮಾಡದ ಮಹಿಳೆ : ಸಹೋದ್ಯೋಗಿಯನ್ನು ಇಷ್ಟಪಡಲು ಶುರು ಮಾಡಿದ್ದ ಮಹಿಳೆ ಎಂದಿಗೂ ಪತಿಗೆ ಮೋಸ ಮಾಡಿಲ್ಲ. ಸಹೋದ್ಯೋಗಿ ಜೊತೆ ಗಂಟೆಗಟ್ಟಲೆ ಆಕೆ ಮಾತನಾಡುತ್ತಾಳಂತೆ. ಆದ್ರೆ ಎಂದೂ ಸಹೋದ್ಯೋಗಿ ಜೊತೆ ಲೈಂಗಿಕ ಸಂಬಂಧ ಹೊಂದಿಲ್ಲವಂತೆ. ಈ ವಿಷ್ಯದಲ್ಲಿ ತನ್ನನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದಳಂತೆ ಮಹಿಳೆ. ಆದ್ರೆ ತಾಸ್ಗಟ್ಟಲೆ ಫೋನ್ ನಲ್ಲಿ ಮಾತನಾಡ್ತಿದ್ದ ಮಹಿಳೆ ಫ್ಲರ್ಟ್ ಮಾಡ್ತಿದ್ದಳಂತೆ. 

ಆತನಿಗಿಲ್ಲ ಯಾವುದೇ ಕಡಿವಾಣ : ಸಹೋದ್ಯೋಗಿ ಬಗ್ಗೆ ಮಾಹಿತಿ ನೀಡಿದ ಮಹಿಳೆ, ಆತ ಸಿಂಗಲ್ ಎನ್ನುತ್ತಾಳೆ. ವಿಚ್ಛೇದನ ಪಡೆದಿರುವ ಸಹೋದ್ಯೋಗಿ ಏಕಾಂಗಿಯಾಗಿ ವಾಸವಾಗಿದ್ದಾನಂತೆ. ಆತ ಸಂಪೂರ್ಣ ಸ್ವಾತಂತ್ರವಾಗಿದ್ದು ಯಾವುದನ್ನೂ ಕಳೆದುಕೊಳ್ಳುವ ಭಯ ಆತನಿಗಿಲ್ಲ. ಆದ್ರೆ ಸಹೋದ್ಯೋಗಿ ಜೊತೆ ಹೆಚ್ಚು ಫ್ರೆಂಡ್ಲಿಯಾದ ಮಹಿಳೆಗೆ ಪತಿಯನ್ನು ಕಳೆದುಕೊಳ್ಳುವ ಭಯ ಶುರುವಾಗಿದೆಯಂತೆ. ಇದೇ ಕಾರಣಕ್ಕೆ ಪತಿ ಆಕೆಯ ಮೇಲೆ ಸಂಶಯ ವ್ಯಕ್ತಪಡಿಸಲು ಶುರು ಮಾಡಿದ್ದಾನಂತೆ.

ಪತ್ನಿ ಮೇಲೆ ಪತಿಯ ಕಣ್ಣು : ಸಹೋದ್ಯೋಗಿ ಜೊತೆ ಅತಿಯಾಗಿ ಮಾತನಾಡುವ ಪತ್ನಿಯನ್ನು ನೋಡಿದ ಪತಿಗೆ ಅನುಮಾನ ಶುರುವಾಗಿದೆಯಂತೆ. ಸಹೋದ್ಯೋಗಿ ಬರೀ ಸ್ನೇಹಿತ. ಆತ ಹಾಗೂ ತನ್ನ ಮಧ್ಯೆ ಯಾವುದೇ ಸಂಬಂಧವಿಲ್ಲ ಎಂದರೂ ಆತ ನಂಬುತ್ತಿಲ್ಲವಂತೆ. ಪತಿಗೆ ಮನವರಿಕೆ ಮಾಡಲು ನಾನು ಸಾಕಷ್ಟು ಪ್ರಯತ್ನಪಟ್ಟಿದ್ದೇನೆ. ಆದ್ರೆ ಪತಿಗೆ ನನ್ನ ಮೇಲೆ ನಂಬಿಕೆ ಬಂದಿಲ್ಲ ಎನ್ನುತ್ತಾಳೆ ಆಕೆ. ಪ್ರತಿ ಮಾತಿಗೂ ಸಹೋದ್ಯೋಗಿ ಬಗ್ಗೆ ಪ್ರಶ್ನೆ ಕೇಳುವ ಪತಿ, ಪತ್ನಿ ಎಲ್ಲಿಗೆ ಹೋದ್ರೂ ಪ್ರಶ್ನೆ ಮಾಡ್ತಾನಂತೆ. ಅಷ್ಟೇ ಅಲ್ಲ ಪತ್ನಿಯ ಫೋನ್ ಪದೇ ಪದೇ ಚೆಕ್ ಮಾಡ್ತಾನಂತೆ. ಮೊದಲು ಪತಿ ಹೀಗಿರಲಿಲ್ಲ ಎನ್ನುತ್ತಾಳೆ ಪತ್ನಿ. ಇಷ್ಟೇ ಅಲ್ಲ ಮನೆ ಸಾಮಾನು ತರಲು ಹೊರಗೆ ಹೋದ್ರೂ ಪತಿ ತನ್ನನ್ನು ಹಿಂಬಾಲಿಸುತ್ತಾನೆ. ಒಂದು ದಿನ ನನ್ನ ಬೈಕ್ ಹಿಂದೆ ಆತ ಬಂದಿದ್ದ. ನನಗೆ ಅರ್ಥವಾಗ್ತಿಲ್ಲ. ಆತನ ಮುಂದಿನ ಹೆಜ್ಜೆ ಏನೆಂಬುದು ಎನ್ನುತ್ತಾಳೆ ಮಹಿಳೆ. 

ಮತ್ತೇರಿಸುವ ಮುತ್ತು ಕೊಡುವಾಗ ಈ ತಪ್ಪು ಮಾಡಲೇಬೇಡಿ

ತಜ್ಞರು ಹೇಳೋದೇನು? : ಒಂದು ಬಾರಿ ಭರವಸೆ ಕಳೆದುಕೊಂಡ್ರೆ ಮತ್ತೆ  ಒಂದೇ ದಿನಕ್ಕೆ ಭರವಸೆ ವಾಪಸ್ ಬರಲು ಸಾಧ್ಯವಿಲ್ಲ. ಪತ್ನಿ ಮೋಸ ಮಾಡ್ಬಹುದೆಂದು ಆತ ಎಂದೂ ಯೋಚಿಸಿರಲು ಸಾಧ್ಯವಿಲ್ಲ. ಹಾಗಾಗಿ ಪತಿಗೆ ನಿಮ್ಮ ಮೇಲೆ ಭರವಸೆ ಬರಲು ಸಾಕಷ್ಟು ದಿನ ಬೇಕು. ಎಷ್ಟೇ ಆದ್ರೂ ಸಂಶಯ ಹೋಗಲು ಸಾಧ್ಯವಿಲ್ಲ. ಆದ್ರೆ ಅವರ ಜೊತೆ ಸದಾ ಮಾತನಾಡಿ,ಅವರಲ್ಲಿ ಭರವಸೆ ಮೂಡಿಸುವ ಪ್ರಯತ್ನ ಮಾಡಿ ಎನ್ನುತ್ತಾರೆ ತಜ್ಞರು.
 

Latest Videos
Follow Us:
Download App:
  • android
  • ios