ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣದಂತಹ ಜಾಗಗಳಲ್ಲಿ ಅಗತ್ಯ ವಸ್ತುಗಳು ಇರ್ಲೇಬೇಕು. ಈ ಅಗತ್ಯ ವಸ್ತುಗಳಲ್ಲಿ ಮಹಿಳೆಯರು ಮುಟ್ಟಿನ ಸಮಯದಲ್ಲಿ ಬಳಸುವ ಪ್ಯಾಡ್ ಕೂಡ ಸೇರಿದೆ. ವಿಚಿತ್ರವೆಂದ್ರೆ ಕೆಲ ವಿಮಾನ ನಿಲ್ದಾಣಗಳಲ್ಲಿ ಮದ್ಯದ ಬಾಟಲಿ ಸಿಗುತ್ತೆ ಆದ್ರೆ ಸ್ಯಾನಿಟಿ ಪ್ಯಾಡ್ ಸಿಗೋದಿಲ್ಲ.
ಮುಟ್ಟು ನೈಸರ್ಗಿಕ ಕ್ರಿಯೆ. ತಿಂಗಳಿಗೊಮ್ಮೆ ಮುಟ್ಟು ಸಾಮಾನ್ಯ ಸಂಗತಿ. ಅನೇಕ ಬಾರಿ ನಿರೀಕ್ಷೆಯಿಲ್ಲದೆ ನಾಲ್ಕೈದು ದಿನ ಮೊದಲೇ ಪಿರಿಯಡ್ಸ್ ಆಗಿರುತ್ತದೆ. ಈ ತುರ್ತು ಸಂದರ್ಭದಲ್ಲಿ ಪ್ಯಾಡ್, ಮೆನ್ಸ್ಟ್ರುವಲ್ ಕಪ್ ಅಥವಾ ಟ್ಯಾಂಪೋನ್ ಇಲ್ಲವೆಂದ್ರೆ ಮಹಿಳೆಯರಿಗೆ ಸಮಸ್ಯೆಯಾಗುತ್ತದೆ. ಈಗಿನ ದಿನಗಳಲ್ಲಿ ಹಳ್ಳಿಗಳಲ್ಲಿ ಕೂಡ ಮಹಿಳೆಯರ ಅನುಕೂಲಕ್ಕಾಗಿ ಪ್ಯಾಡ್ ಸೇರಿದಂತೆ ಟ್ಯಾಂಪೋನ್ ಕೂಡ ಅಂಗಡಿಗಳಲ್ಲಿ ಲಭ್ಯವಿದೆ. ಆದ್ರೆ ಕೆಲವೊಂದು ಐಷಾರಾಮಿ ಪ್ರದೇಶಗಳಲ್ಲಿಯೇ ಇವುಗಳು ಸಿಗುವುದಿಲ್ಲ. ಮಹಿಳೆಯೊಬ್ಬಳಿಗೆ ಟರ್ಕಿಯ ಐಷಾರಾಮಿ ವಿಮಾನ ನಿಲ್ದಾಣದಲ್ಲಿ ಪ್ಯಾಡ್ ಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿತ್ತಂತೆ. ಕೊನೆಗೂ ಟ್ಯಾಂಪೋನ್ ಸಿಕ್ಕಿದೆ. ಆದ್ರೆ ಈ ಸಮಯದಲ್ಲೂ ಜನರು ತಮ್ಮ ಲಾಭ ನೋಡಿದ್ದಾರೆ ಎನ್ನುತ್ತಾಳೆ ಮಹಿಳೆ.
ಟರ್ಕಿ (Turkey) ಆಧುನಿಕ ದೇಶಗಳಲ್ಲಿ ಒಂದಾಗಿದೆ. ಆದರೆ ಕೀನ್ಯಾ (Kenya) ದಲ್ಲಿ ಎರಿನ್ (Erin) ಎಂಬ ಮಹಿಳೆಗೆ ಇಸ್ತಾನ್ಬುಲ್ (Istanbul) ವಿಮಾನ ನಿಲ್ದಾಣದಲ್ಲಿ ಭಯಾನಕ ಅನುಭವವಾಗಿದೆ. ಇಸ್ತಾನ್ಬುಲ್ ವಿಮಾನ ನಿಲ್ದಾಣ ಐಷಾರಾಮಿ ವಿಮಾನ ನಿಲ್ದಾಣ. ಅಲ್ಲಿ ದುಬಾರಿ ಬೆಲೆಯ ಮದ್ಯಪಾನದಿಂದ ಹಿಡಿದು ಪುಸ್ತಕದವರೆಗೆ ಎಲ್ಲ ವಸ್ತುಗಳು ಸಿಗುತ್ತವೆ. ಆದ್ರೆ ಪ್ಯಾಡ್ ಮಾತ್ರ ಇಲ್ಲ. ಹೌದು, ಇಸ್ತಾನ್ಬುಲ್ ವಿಮಾನ ನಿಲ್ದಾಣದಲ್ಲಿ ಮಹಿಳೆಯರಿಗೆ ಅಗತ್ಯವಿರುವ, ಟರ್ಕಿಯ ಶೇಕಡಾ 50ರಷ್ಟು ಮಹಿಳೆಯರು ಬಳಸುವ ಟ್ಯಾಂಪೋನ್ ಸಿಗೋದಿಲ್ಲ ಅಂದ್ರೆ ಅಚ್ಚರಿಯಾಗದೆ ಇರದು.
ಎರಿನ್ ಅಲ್ಲಿನ ಅನುಭವವನ್ನು ಟ್ವೀಟ್ ಮಾಡಿದ್ದಾಳೆ. ಆಕೆಗೆ ವಿಮಾನ ನಿಲ್ದಾಣದಲ್ಲಿ ಪಿರಿಯಡ್ಸ್ ಆಗಿದೆ. ಆಕೆ ಬಳಿ ಟ್ಯಾಂಪೋನ್ ಇರಲಿಲ್ಲ. ದೀರ್ಘಕಾಲದವರೆಗೆ ವಿಮಾನ ಪ್ರಯಾಣ ಮಾಡಬೇಕಾದ ಕಾರಣ ಮಹಿಳೆ ವಿಮಾನ ನಿಲ್ದಾಣದಲ್ಲಿ ಟ್ಯಾಂಫೋನ್ ಗೆ ಹುಡುಕಾಟ ನಡೆಸಿದ್ದಾಳೆ. ವಿಮಾನ ನಿಲ್ದಾಣದ ಪ್ರತಿ ಅಂಗಡಿ ಸುತ್ತಿದ್ದಾಳೆ. ಆಕೆ ಪತಿ ಕೂಡ ಮಹಿಳೆ ಜೊತೆ ಅಲೆದಾಡಿದ್ದನಂತೆ.
ಒಂದು ಅಂಗಡಿಯಾತ, ಟ್ಯಾಂಫೋನ್ ಈ ವಿಮಾನ ನಿಲ್ದಾಣದಲ್ಲಿ ಸಿಗಲು ಸಾಧ್ಯವಿಲ್ಲ ಎಂದನಂತೆ. ಇದನ್ನು ಕೇಳಿದ ನನಗೆ ವಿಚಿತ್ರವೆನ್ನಿಸಿತ್ತು. ನಗು ಕೂಡ ಬಂತು ಎನ್ನುತ್ತಾಳೆ ಮಹಿಳೆ. ಒಂದು ಕಡೆ ವಿಮಾನ ಹಾರಾಟದ ಸಮಯವಾಗಿದೆ. ಇನ್ನೊಂದು ಕಡೆ ಟ್ಯಾಂಫೋನ್ ಹುಡುಕಾಟ ಮುಂದುವರೆದಿತ್ತು ಎನ್ನುತ್ತಾಳೆ ಎರಿನ್.
HEALTH TIPS: ಹೆರಿಗೆಯ ನಂತರದ ಸಮಸ್ಯೆಗಳ ಬಗ್ಗೆ ಮಹಿಳೆಯರು ತಿಳಿದಿರಲೇಬೇಕು!
ಎರಿನ್ ಪತಿ, ಮಾಹಿತಿ ಕೌಂಟರ್ ನಲ್ಲಿ ನಿಂತಿದ್ದನಂತೆ. ಅಲ್ಲಿಯವರು ಇನ್ನೊಂದು ಕೌಂಟರ್ ಗೆ ಹೋಗುವಂತೆ ಸಲಹೆ ನೀಡಿದ್ದರಂತೆ. ಅಲ್ಲಿ ಕ್ಯೂನಲ್ಲಿ ನಿಂತು ವಿಚಾರಿಸಿದ್ರೆ ಇನ್ನೊಬ್ಬ ವ್ಯಕ್ತಿಗೆ ಕರೆ ಮಾಡುವಂತೆ ಅಲ್ಲಿನ ಸಿಬ್ಬಂದಿ ಹೇಳಿದ್ದರಂತೆ. ಕರೆ ಸ್ವೀಕರಿಸಿದ ವ್ಯಕ್ತಿಗೆ ಇಂಗ್ಲೀಷ್ ಬರ್ತಿರಲಿಲ್ಲ. ನಾನು ಟ್ಯಾಂಪೋನ್ ಅಂತ ಕಿರುಚಿದ್ರೆ ಸುತ್ತ ನಿಂತವರೆಲ್ಲ ಮುಖ ಮುಖ ನೋಡ್ತಿದ್ದರಂತೆ. ನಂತ್ರ ಇನ್ನೊಬ್ಬ ವ್ಯಕ್ತಿ ಕರೆ ಸ್ವೀಕರಿಸಿ ಪ್ಯಾಡ್ ಕಳಿಸಿಕೊಡುವುದಾಗಿ ಹೇಳಿದನಂತೆ. 15 ನಿಮಿಷ ಬಿಟ್ಟು ಬಂದ ವ್ಯಕ್ತಿಯೊಬ್ಬ ಪ್ಯಾಂಟಿ ಲೈನರ್ ಹಿಡಿದು ಬಂದಿದ್ದನಂತೆ. ಪ್ಯಾಂಟಿ ಲೈನರ್ ಧರಿಸುವ ಸ್ಥಿತಿ ಈಗಿಲ್ಲ. ಟ್ಯಾಂಫೋನ್ ಬೇಕೆಂದು ಎರಿನ್ ಕೇಳಿದಾಗ ಒಂದಕ್ಕೆ ಡಬಲ್ ರೇಟು ಹೇಳಿದ್ದನಂತೆ ವ್ಯಕ್ತಿ.
ಎದೆ ಗಾತ್ರ ಹೆಚ್ಚಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸೋ ಬದಲು ಈ ಫುಡ್ ಸೇವಿಸಿ ನೋಡಿ!
ಎಟಿಎಂಗೆ ಹೋಗಿ ಹಣ ಡ್ರಾ ಮಾಡಿ, ಆತನಿಗೆ ನೀಡಿದ್ದಲ್ಲದೆ ಆತ ಬರುವವರೆಗೆ ಕಾದ್ವಿ ಎನ್ನುತ್ತಾಳೆ ಎರಿನ್. ಟ್ಯಾಂಪೋನ್ ಗೆ 3 ಡಾಲರ್ ಇರಬಹುದು. ಆದ್ರೆ ಈ ವ್ಯಕ್ತಿ 21 ಡಾಲರ್ ತೆಗೆದುಕೊಂಡಿದ್ದ ಎನ್ನುತ್ತಾಳೆ ಮಹಿಳೆ. ಲೈಟ್ ಡೆನಿಮ್ ಜೀನ್ಸ್ ಧರಿಸಿದ್ದ ಕಾರಣ ನನಗೆ ಲಿಕೇಜ್ ಬಗ್ಗೆ ಹೆಚ್ಚು ಆತಂಕವಿತ್ತು ಎನ್ನುತ್ತಾಳೆ ಎರಿನ್. ಎಲ್ಲ ಮುಗಿಸಿ ವಿಮಾನ ಏರ್ತಿದ್ದಂತೆ ನನಗೆ ದುಃಖ ನಿಯಂತ್ರಿಸಲು ಸಾಧ್ಯವಾಗ್ಲಿಲ್ಲ. ಆರಂಭದಲ್ಲಿ ನನ್ನನ್ನು ನಾನು ಶಪಿಸಿಕೊಂಡೆ. ಇಂಥ ಐಷಾರಾಮಿ ವಿಮಾನ ನಿಲ್ದಾಣದಲ್ಲಿ ಪ್ಯಾಡ್, ಟ್ಯಾಂಫೋನ್ ಸಿಗ್ತಿಲ್ಲವೆಂದ್ರೆ ವಿಮಾನ ನಿಲ್ದಾಣದ ಅಧಿಕಾರಿಗಳು ನಾಚಿಕೆಪಡಬೇಕೆಂದು ಎರಿನ್ ಕಿಡಿಕಾರಿದ್ದಾಳೆ.
