ಮುಟ್ಟಿನ ರಕ್ತ ಸಂಗ್ರಹಿಸಿ ವಾಮಾಚಾರಕ್ಕೆ ಮಾರಾಟ ಮಾಡಿದ ಪತಿ, ಕರುಳು ಹಿಂಡುವ ಕತೆ ಬಿಚ್ಚಿಟ್ಟ ಮಹಿಳೆ!
ಮಹಿಳೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪರಿ ಊಹಿಸಲು ಅಸಾಧ್ಯವಾದ ರೀತಿಯಲ್ಲಿ ನಡೆಯುತ್ತದೆ. ಇದಕ್ಕೆ ಮತ್ತೊಂದು ಸಾಕ್ಷ್ಯ ಲಭ್ಯವಾಗಿದೆ. ಪತಿ ಹಾಗೂ ಆತನ ಕುಟುಂಬಸ್ಥರು, ಪತ್ನಿಯನ್ನು ಹಸಿವಿನಿಂದ ಬಳಲುವಂತೆ ಮಾಡಿ ಮುಟ್ಟಿನ ರಕ್ತ ಸಂಗ್ರಹಿಸಿ 50,000 ರೂಗೆ ಮಾರಾಟ ಮಾಡುವ ಭಯಾನಕ ದೌರ್ಜನ್ಯ ಪತ್ತೆಯಾಗಿದೆ. ತನ್ನ ಪತಿ ಹಾಗೂ ಕುಟುಂಬಸ್ಥರ ದೌರ್ಜನ್ಯದ ನೋವಿನ ಕತೆಯನ್ನು ಬಿಚ್ಚಿಟ್ಟಿದ್ದಾಳೆ.
ಪುಣೆ (ಮಾ.12): ಮಹಿಳೆ ಮೇಲೆ ಯಾವೆಲ್ಲಾ ರೀತಿಯಲ್ಲಿ ದೌರ್ಜನ್ಯಗಳು ನಡೆಯುತ್ತಿದೆ ಅನ್ನೋದು ಊಹಿಸಲು ಅಸಾಧ್ಯವಾಗಿದೆ. ಶಿಕ್ಷಣ, ಜಾಗೃತಿ, ಕಾನೂನು, ಪೊಲೀಸ್ , ಮೂಲಭೂತ ಹಕ್ಕು ಸೇರಿದಂತೆ ಎಲ್ಲವೂ ಇದ್ದರೂ ದೌರ್ಜನ್ಯಗಳಿಗೆ ಕಡಿವಾಣ ಬೀಳುತ್ತಿಲ್ಲ. ಇದೀಗ ಅತ್ಯಂತ ಕ್ರೂರ ಹಾಗೂ ಭಯಾನಕ ದೌರ್ಜನ್ಯ ವರದಿಯಾಗಿದೆ. 27ರ ಹರೆಯದ ವಿವಾಹಿತ ಮಹಿಳೆ ಮೇಲೆ ಮುಟ್ಟಿನ ಸಂದರ್ಭದಲ್ಲಿ ಅತ್ಯಾಚಾರ ಎಸಗಿ ಆಕೆಯನ್ನು ಹಸಿವಿನಿಂದ ಬಳಲುವಂತೆ ಮಾಡಿದ್ದಾರೆ.ಬಳಿಕ ಮುಟ್ಟಿನ ರಕ್ತ ಸಂಗ್ರಹಿಸುವ ಪತಿ ಹಾಗೂ ಆಕೆಯ ಕುಟುಂಬಸ್ಥರು 50, 000 ರೂಪಾಯಿಗೆ ಮಾರಾಟ ಮಾಡಿದ ಭೀಕರ ಘಟನೆ ಮಹಾರಾಷ್ಟ್ರ ಸೌಂಧನಾ ಗ್ರಾಮದಲ್ಲಿ ನಡೆದಿದೆ.
2019ರಲ್ಲಿ ಸಂತ್ರಸ್ತೆಯ ಮದುವೆಯಾಗಿದೆ. ಪ್ರೀತಿಸಿ ಮದುವೆಯಾದ ಬಳಿಕ ಗಂಡ ಹಾಗೂ ಆತನ ಮನೆಯವರ ಕಿರುಕುಳ ಅನುಭವಿಸಿದ್ದಾಳೆ. ಪ್ರತಿ ದಿನ ಒಂದಲ್ಲಾ ಒಂದು ದೌರ್ಜನ್ಯ ಎದುರಿಸಿದ್ದಾಳೆ. ಇತ್ತೀಚೆಗೆ ಗಂಡ ಹಾಗೂ ಆತನ ಕುಟುಂಬಸ್ಥರು ಈಕೆಯನ್ನು ಮುಂದಿಟ್ಟು ಹಣ ಮಾಡುವ ಗೀಳಿಗೂ ಇಳಿದಿದ್ದಾರೆ. ಮುಟ್ಟಿನ ಸಂದರ್ಭದಲ್ಲಿ ಮೂರು ದಿನಗಳ ಕಾಲ ಯಾವುದೇ ಆಹಾರ ನೀಡದೆ ಹಸಿವಿನಿಂದ ಬಳಲುವಂತೆ ಮಾಡಿದ್ದಾರೆ. ಇಷ್ಟೇ ಅಲ್ಲ ಈಕೆಯ ಮೇಲೆ ಅತ್ಯಾಚಾರವನ್ನು ಎಸಗಲಾಗಿದೆ.
ಪಿವಿಆರ್‌ನಲ್ಲಿ ಸ್ಯಾನಿಟರಿ ಪ್ಯಾಡ್ ಸಿಗದೆ ಮಹಿಳೆಯ ಪರದಾಟ, ಟ್ವೀಟ್ ವೈರಲ್
ಬಳಿಕ ಮುಟ್ಟಿನ ರಕ್ತ ಸಂಗ್ರಹಿಸಿ ವಾಮಾಚಾರಕ್ಕೆ ನೀಡಲಾಗಿದೆ. ಅವರಿಂದ 50,000 ರೂಪಾಯಿ ಪಡೆದುಕೊಂಡಿದ್ದಾರೆ. ಕಳೆದೆರಡು ವರ್ಷದಿಂದ ಇದು ನಡೆಯತ್ತಲೇ ಇದೆ. 2021-22ರಲ್ಲಿ ಅತ್ತೆ, ಅವರ ಊರಿಗೆ ಕರೆದುಕೊಂಡು ಹೋಗಿ ಮುಟ್ಟಿನ ರಕ್ತ ನೀಡುವಂತೆ ಆದೇಶಿಸಿದ್ದಾರೆ. ಇದನ್ನು ವಿರೋಧಿಸಿದ ಕಾರಣಕ್ಕೆ ಪತಿ ಬಂದು ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ.
ಹಸಿವಿನಿಂದ ಬಳಲುವಂತೆ ಮಾಡಿ ಮುಟ್ಟಿನ ರಕ್ತ ಸಂಗ್ರಹಿಸುತ್ತಿದ್ದಾರೆ. ಇದನ್ನು ಮಾರಾಟ ಮಾಡುತ್ತಿದ್ದಾರೆ. ಪತಿ ಹಾಗೂ ಅತ್ತೆ ತೀವ್ರ ಕಿರುಕುಳದಿಂದ ಬೇಸತ್ತಿದ್ದೇನೆ ಎಂದು ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಕಳೆದೆರಡು ವರ್ಷದಿಂದ ಎಲ್ಲವನ್ನೂ ಸಹಿಸಿಕೊಂಡು ಸಂಸಾರ ನಡೆಸಿದ್ದೇನೆ. ನೋವು, ದೌರ್ಜನ್ಯ ಅತೀಯಾಗಿದೆ. ಹೀಗಾಗಿ ಪೋಷಕರಲ್ಲಿ ಹೇಳಿದ್ದೇನೆ. ಪೋಷಕರ ಸಲಹೆಯಂತೆ ದೂರು ನೀಡಿದ್ದೇನೆ ಎಂದು ಪೊಲೀಸರ ಬಳಿ ಹೇಳಿದ್ದಾರೆ.
Menstrual Hygiene: ಪರಿಮಳಯುಕ್ತ ಪ್ಯಾಡ್ ಖರೀದಿಸೋ ಮುನ್ನ ಈ ವಿಚಾರ ತಿಳ್ಕೊಳ್ಳಿ
ದೂರು ದಾಖಲಿಸಿಕೊಂಡಿರುವ ಪೊಲೀಸರು ಕಠಿಣ ಶಿಕ್ಷೆಯ ಭರವಸೆ ನೀಡಿದ್ದಾರೆ. ಇದೀಗ ಈ ಪ್ರಕರಣ ಮಹಾರಾಷ್ಟ್ರದಲ್ಲಿ ಭಾರಿ ಸದ್ದು ಮಾಡಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಅಂತ್ಯ ಹಾಡಲು ಇಂತಹ ಪ್ರಕರಣಗಳಲ್ಲಿ ನೀಡುವ ಶಿಕ್ಷೆ ಪ್ರಮುಖವಾಗಲಿದೆ. ಅತ್ಯಂತ ಕಠಿಣ ಶಿಕ್ಷೆ ನೀಡಿದರೆ ಮಹಿಳೆ ಹಾಗೂ ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಇಳಿಕಯಾಗಬಹುದು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.