Asianet Suvarna News Asianet Suvarna News

Reading Eyes: ಕಣ್ಣು ನೋಡಿ ಮನಸ್ಸು ಅರಿಯೋದ್ರಲ್ಲಿ ಮಹಿಳೆಯರೇ ಗ್ರೇಟ್

ಕಣ್ಣುಗಳನ್ನು ನೋಡಿ ಮನದ ಭಾವನೆಗಳನ್ನು ಅರಿಯುವುದು ಮಹಿಳೆಯರಲ್ಲಿರುವ ನೈಸರ್ಗಿಕ ಶಕ್ತಿ. ಇದು ಈಗ ಅಧ್ಯಯನದಲ್ಲೂ ಸಾಬೀತಾಗಿದೆ. ಜಗತ್ತಿನ ಎಲ್ಲ ರಾಷ್ಟ್ರಗಳ ಮಹಿಳೆಯರೂ ಈ ವಿಚಾರದಲ್ಲಿ ಮುಂದಿದ್ದಾರೆ. 
 

 Women is best in reading eyes and understanding the feelings
Author
First Published Dec 28, 2022, 11:32 AM IST

ಪರಸ್ಪರ ಇಷ್ಟವಾಗುವವರ ಕಣ್ಣುಗಳು ಕಲೆತಾಗ ಲೋಕವೊಂದು ಸೃಷ್ಟಿಯಾಗುತ್ತದೆ. ಕಣ್ಣುಗಳಲ್ಲೇ ಮಾತುಕತೆಯೂ ಸಾಧ್ಯವಾಗುತ್ತದೆ. ಅಪರಿಚಿತರ ಕಣ್ಣುಗಳನ್ನು ಸಹ ದಿಟ್ಟಿಸಿ ನೋಡಿದರೆ ಪ್ರೀತಿ ಉಂಟಾಗುವುದೂ ಇದೆಯಂತೆ! ಕಣ್ಣುಗಳಲ್ಲಿ ಮನದ ಇಂಗಿತ ವ್ಯಕ್ತವಾಗುತ್ತದೆ. ಕಣ್ಣುಗಳಲ್ಲೇ ಭಾವನೆಗಳನ್ನು ವಿನಿಮಯ ಮಾಡಿಕೊಳ್ಳುವ ಕಲೆ ಪ್ರೇಮಿಗಳಿಗೆ ಕರಗತ. ಅಷ್ಟೇ ಏಕೆ? ಕಣ್ಣು-ಕಣ್ಣು ಕೂಡದ ಮನಸ್ಸುಗಳು ಪರಸ್ಪರ ಒಂದಾಗಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಕಣ್ಣುಗಳದ್ದೇ ಒಂದು ಪ್ರತ್ಯೇಕ ಲೋಕ. ಕಣ್ಣುಗಳ ಮೂಲಕ ಭಾವನೆ ಅರಿತುಕೊಳ್ಳುವುದು ಕೆಲವರಿಗೆ ಸುಲಭ. ಆದರೆ, ಇತರರ ಕಣ್ಣುಗಳನ್ನು ನೋಡಿ ಭಾವನೆ ಅರಿಯುವಲ್ಲಿ ಪುರುಷರು ಸ್ವಲ್ಪ ಹಿಂದೆ. ಈ ವಿಚಾರದಲ್ಲಿ ಮಹಿಳೆಯರು ಜಾಣೆಯರು ಎಂದೇ ಹೇಳಬಹುದು. ಇದು ಇತ್ತೀಚೆಗೆ ನಡೆದ ಅಧ್ಯಯನವೊಂದರಲ್ಲಿ ಸಾಬೀತಾಗಿದೆ. ಇತ್ತೀಚೆಗೆ, ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಇಂಥದ್ದೊಂದು ಕುತೂಹಲಕಾರಿ ಅಧ್ಯಯನವೊಂದು ನಡೆದಿತ್ತು. ವಿಶ್ವದ 56 ದೇಶಗಳಲ್ಲಿ ನಡೆದಿದ್ದ ಈ ಸಮೀಕ್ಷಾ ಅಧ್ಯಯನದಲ್ಲಿ ಎಲ್ಲ ವಯೋಮಾನದ ಮಹಿಳೆಯರನ್ನು ಒಳಗೊಳ್ಳಲಾಗಿತ್ತು. ಮಹಿಳೆಯರು ಪುರುಷರಿಗಿಂತ ಈ ವಿಚಾರದಲ್ಲಿ ಸಾಕಷ್ಟು ಪ್ರಬುದ್ಧತೆ ಹೊಂದಿರುವುದು ಇದರಲ್ಲಿ ಪತ್ತೆಯಾಗಿದೆ. 

ಅರಿವಿನ ಸಹಾನುಭೂತಿ
ಮಹಿಳೆಯರಲ್ಲಿ (Women) ಗ್ರಹಿಕೆಯ (Cognitive) ವಿಶೇಷ ಶಕ್ತಿ ಇದೆ. ಕರುಣೆ, ದಯೆ, ಸಹಾಯ, ಸಹಾನುಭೂತಿ (Empathy) ಸೇರಿದಂತೆ ಹಲವು ಭಾವನೆಗಳು (Feelings) ಮಹಿಳೆಯರಲ್ಲಿ ತೀವ್ರವಾಗಿರುತ್ತವೆ ಎನ್ನುವುದು ತಿಳಿದ ಸಂಗತಿ. ಮಹಿಳೆಯರ ಮಿದುಳು ಈ ವಿಚಾರಗಳ ಬಗ್ಗೆ ಸೂಕ್ಷ್ಮಗ್ರಾಹಿಯಾಗಿ ವರ್ತಿಸುತ್ತದೆ. “ರೀಡಿಂಗ್‌ ದಿ ಮೈಂಡ್‌ ಇನ್‌ ದಿ ಐʼಸ್‌ʼ (Reading the Mind in the Eyes) ಎನ್ನುವ ಹೆಸರಿನಲ್ಲಿ ನಡೆದ ಅಧ್ಯಯನದಲ್ಲಿ (Study) ಇದು ಮತ್ತೊಮ್ಮೆ ಸಾಬೀತಾಗಿದೆ. ಇತರರ ಭಾವನೆ ಹಾಗೂ ಭಾವುಕತೆಗಳನ್ನು (Emotion) ಅರಿತುಕೊಳ್ಳುವ ಸಾಮರ್ಥ್ಯ (Ability) ಮಹಿಳೆಯರಲ್ಲಿ ಸಶಕ್ತವಾಗಿದೆ. 

ಮಾನವ ಮಿದುಳಿನ “ಅರಿವಿನ ಸಾಮರ್ಥ್ಯʼ ಮನೋವಿಜ್ಞಾನಿಗಳ ಬಹಳ ಆಸಕ್ತಿಕರ ವಿಷಯವಾಗಿದ್ದು, ಇದರ ಮೇಲೆ ದಶಕಗಳಿಂದ ಬಹಳಷ್ಟು ಅಧ್ಯಯನಗಳು ನಡೆಯುತ್ತಿವೆ. ನಿಮಗೆ ಗೊತ್ತೇ? ಚಿಕ್ಕ ಮಗು (Child) ಸಹ ಈ ವಿಚಾರದಲ್ಲಿ ಸಾಕಷ್ಟು ಸಾಮರ್ಥ್ಯ ಹೊಂದಿರುತ್ತದೆ. ಎರಡು ವರ್ಷದ ಮಗುವೊಂದು ತಾಯಿ ಹಾಗೂ ತಂದೆಯ ಗುರಿ, ಬಯಕೆ (Desire) ಸೇರಿದಂತೆ ಮಾನಸಿಕ ಸ್ಥಿತಿಗತಿ (Mental Status) ಅರಿಯುವ ಗುಣ ಹೊಂದಿರುತ್ತದೆ. ಆ ವಯಸ್ಸಿನಲ್ಲಿ ಮಗುವಿನ ಮಿದುಳು (Brain) ಸಹ ಚುರುಕಾಗಿ ಬೆಳವಣಿಗೆ ಹೊಂದುತ್ತಿರುತ್ತದೆ. ಹೀಗಾಗಿಯೇ, ವಿವಿಧ ರೀತಿಯ ವರ್ತನೆ ಸಂಬಂಧಿ ದೋಷ ಅಥವಾ ಧೋರಣೆಗಳು ಆಗ ಸೃಷ್ಟಿಯಾಗುತ್ತವೆ ಎಂದು ತಿಳಿಯಬಹುದು.

ಹಿರಿಯರು ಮನೆಯಲ್ಲಿದ್ದರೆ ಹೆರಿಗೆ ನಂತ್ರ ನೀರು ಕುಡಿಯಲು ಬಿಡೋಲ್ಲ, ಇದು ಒಳ್ಳೇದಾ?

ಮಹಿಳೆಯರಲ್ಲಿ ಅರಿವಿನ ಮಟ್ಟ 
ಯೂನಿವರ್ಸಿಟಿ ಆಫ್‌ ಕೇಂಬ್ರಿಡ್ಜ್‌ (University of Cambridge) ಸಂಶೋಧಕ ಡೇವಿಡ್‌ ಗ್ರೀನ್‌ ಬರ್ಗ್‌, “ಈ ಸಾಮರ್ಥ್ಯ, ಇನ್ನೊಬ್ಬರ ಶೂ ಒಳಗೆ ನಿಮ್ಮನ್ನು ಇಡುವ ಮೂಲಕ ಅವರು ಯಾವ ರೀತಿ ಚಿಂತಿಸುತ್ತಿದ್ದಾರೆ, ಯೋಚಿಸುತ್ತಿದ್ದಾರೆ (Thinking) ಎಂದು ಅರಿಯುವ ಶಕ್ತಿʼ ಎಂದು ವಿಶ್ಲೇಷಿಸುತ್ತಾರೆ. ಅರಿವಿನ ಸಾಮರ್ಥ್ಯ ಮಹಿಳೆಯರಲ್ಲಿ ಹೆಚ್ಚು ಸಶಕ್ತವಾಗಿರುವುದನ್ನು ಹಲವು ಅಧ್ಯಯನಗಳು ಸಾಬೀತುಪಡಿಸಿವೆ. ಇವುಗಳಲ್ಲಿ ಒಂದು, ಕಣ್ಣುಗಳನ್ನು (Eyes) ದಿಟ್ಟಿಸಿ (Reading) ಭಾವನೆ ಅರಿಯುವ ತಂತ್ರ. ಇದರಲ್ಲಿ, ವಿವಿಧ ಭಾವನೆ ಬಿಂಬಿಸುವ 36 ಚಿತ್ರಗಳನ್ನು ಇರಿಸಲಾಗಿತ್ತು. ಕಣ್ಣುಗಳು ಪ್ರಧಾನವಾಗಿ ಕಾಣುವಂತಹ ಚಿತ್ರಗಳು ಇವಾಗಿದ್ದು, ವ್ಯಕ್ತಿ ಯಾವ ರೀತಿಯ ಭಾವನೆಯಲ್ಲಿ ಇರಬಹುದೆಂದು ಊಹಿಸುವಂತೆ ತಿಳಿಸಲಾಗಿತ್ತು. ಇದರಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಅಂಕ ಗಳಿಸಿದ್ದರು. 36 ದೇಶಗಳಲ್ಲಿ (Countries) ಪುರುಷರಿಗಿಂತ ಹೆಚ್ಚು, 21 ದೇಶಗಳಲ್ಲಿ ಪುರುಷರಿಗೆ (Men) ಸರಿಸಮನಾಗಿ ಮಹಿಳೆಯರು ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು. 

Freedom: ಸಂಬಂಧ ಚೆನ್ನಾಗಿರಬೇಕು ಅಂದ್ರೆ ಮೌನವಾಗಿರ್ಲೇಬೇಕಾ ಮಹಿಳೆಯರು?

ವಿಧ ವಿಧ ಭಾವಗಳು
ಹಠ (Aggressive), ಕ್ರೋಧ, ಕೃತಜ್ಞತೆ (Gratful), ವ್ಯಂಗ್ಯ, ದೃಢ, ವಿನೋದ (Amuse) ಹಾಗೂ ಬೇಸರದ (Bore) ಮುಖಭಾವಗಳನ್ನು ಇರಿಸಿ ಗುರುತಿಸುವಂತೆ ತಿಳಿಸಲಾಗಿತ್ತು. ಇಷ್ಟು ದೇಶಗಳ ಪೈಕಿ ಯಾವೊಂದೂ ರಾಷ್ಟ್ರದ ಪುರುಷರೂ ಮಹಿಳೆಯರಿಗಿಂತ ಹೆಚ್ಚು ಅಂಕ ಗಳಿಸಿಲ್ಲ ಎನ್ನುವುದು ವಿಶೇಷ.    
 

Follow Us:
Download App:
  • android
  • ios