ಮಹಿಳೆಯರ ಕೆಲಸ ಸುಲಭಗೊಳಿಸುತ್ತೆ ಈ Applications
ಒಂದಾದ್ಮೇಲೆ ಒಂದು ಕೆಲಸದಲ್ಲಿ, ಎಲ್ಲಿ ಹಣ ಖರ್ಚು ಮಾಡಿದ್ದೇವೆ ಎಂಬ ಲೆಕ್ಕ ಬರೆದಿಡೋದು ಮರೆತೋಯ್ತು ಎನ್ನುವವರಿದ್ದಾರೆ. ಅನೇಕ ಬಾರಿ ಮಹಿಳೆಯರ ಸೇಫ್ಟಿ ಬಗ್ಗೆ ಪ್ರಶ್ನೆ ಏಳುತ್ತದೆ. ಮಹಿಳೆಯರ ಸುರಕ್ಷತೆಯಿಂದ ಹಿಡಿದು ಕೆಲಸದವರೆಗೆ ಎಲ್ಲಕ್ಕೂ ನೆರವಾಗುವ ಕೆಲ ಅಪ್ಲಿಕೇಷನ್ ನಮ್ಮಲ್ಲಿದೆ. ಅದರ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕಿದೆ.
ಬೆಳಿಗ್ಗೆ ಏನು ತಿಂಡಿ ಮಾಡ್ಬೇಕು ಎನ್ನುವುದ್ರಿಂದ ಶುರುವಾಗುವ ಮಹಿಳೆಯರ ದಿನ ನಾಳೆ ಬೆಳಿಗ್ಗೆ ತಿಂಡಿ ಏನ್ ಮಾಡ್ಬೇಕು ಎನ್ನುವೊಂದಿಗೆ ಮುಗಿದಿರುತ್ತದೆ. ಅಡುಗೆ, ಮಕ್ಕಳ ಟಿಫನ್, ಮನೆ ಜವಾಬ್ದಾರಿ, ಮಕ್ಕಳ ಓದು, ಬ್ಯಾಂಕ್ ವ್ಯವಹಾರ, ಮನೆಯವರ ಆರೋಗ್ಯ, ಮನೆ ಕೆಲಸದವರ ಅಕೌಂಟ್, ಮನೆಗೆ ತರಬೇಕಾದ ಸಾಮಾನುಗಳ ಪಟ್ಟಿ ಸೇರಿದಂತೆ ಸಾಕಷ್ಟು ವಿಷ್ಯಗಳನ್ನು ಮಹಿಳೆಯರು ನೆನಪಿಟ್ಟುಕೊಳ್ಳಬೇಕು. ಕಚೇರಿಗೆ ಹೋಗುವ ಮಹಿಳೆಯಾಗಿದ್ದರೆ ಆ ಕೆಲಸವನ್ನು ಕೂಡ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ದಿನದ ರೂಟೀನ್ ನಲ್ಲಿ ಒಂದು ಮರೆತ್ರೂ ಕೆಲಸ ಕೆಟ್ಟಂತೆ. ಎಲ್ಲವನ್ನು ನೆನಪಿಸಿಕೊಂಡು ಕೆಲಸ ಮಾಡೋದು ಸುಲಭವಲ್ಲ.
ಕೆಲಸ (Work) ಜಾಸ್ತಿಯಾದಂತೆ ಯಾವುದೂ ನೆನಪಾಗೋದಿಲ್ಲ ಎನ್ನುವ ಮಹಿಳೆಯರು ಡಿಜಿಟಲ್ (Digital) ಯುಗದ ಲಾಭ ಪಡೆಯಬಹುದು. ಮಹಿಳೆಯರ ಕೆಲಸವನ್ನು ಸುಲಭ ಮಾಡಲು ಅನೇಕ ಅಪ್ಲಿಕೇಷನ್ ಗಳು ಲಭ್ಯವಿದೆ. ನೀವು ಈ ಅಪ್ಲಿಕೇಷನ್ ಸಹಾಯ ಪಡೆದು ಅದ್ರಲ್ಲಿ ಕೆಲಸದ ಪಟ್ಟಿ ಮಾಡಿಡಬಹುದು. ಕಾಲ ಕಾಲಕ್ಕೆ ಅವು ನಿಮ್ಮನ್ನು ಎಚ್ಚರಿಸುತ್ತಿರುತ್ತವೆ. ಇಂದು ನಾವು ಮಹಿಳೆಯರಿಗೆ ಸಹಕಾರಿಯಾಗುವ ಕೆಲ ಅಪ್ಲಿಕೇಷನ್ (Application) ಗಳ ಬಗ್ಗೆ ಮಾಹಿತಿ ನೀಡ್ತೇವೆ. ಅಗತ್ಯವೆನ್ನಿಸಿದ್ರೆ ನೀವೂ ಡೌನ್ಲೋಡ್ ಮಾಡಿ.
Two Finger Test ಅಂದ್ರೇನು ? ಅತ್ಯಾಚಾರ ಪೀಡಿತೆಗೆ ಮಾಡೋ ಈ ಟೆಸ್ಟಿನ ಬಗ್ಗೆ ಇಲ್ಲಿದೆ ಮಾಹಿತಿ
ಮಹಿಳೆಯರಿಗೆ ನೆರವಾಗುತ್ತೆ ಈ ಅಪ್ಲಿಕೇಷನ್ :
ಕೋಜಿ (Cozi) : ಅಮ್ಮಂದಿರಿಗೆ ಇದಕ್ಕಿಂತ ಉತ್ತಮವಾದ ಅಪ್ಲಿಕೇಷನ್ ಬೇರೊಂದಿಲ್ಲ ಎನ್ನಬಹುದು. ಇದು ಉಚಿತ ಅಪ್ಲಿಕೇಶನ್ ಎಂಬುದು ವಿಶೇಷ. ಎಲ್ಲಾ ಕುಟುಂಬ ಸದಸ್ಯರನ್ನು ಒಂದೇ ಸಮಯದಲ್ಲಿ ಇದ್ರಲ್ಲಿ ನಿರ್ವಹಿಸಬಹುದು. ಕುಟುಂಬದ ಪ್ರತಿಯೊಬ್ಬ ಸದಸ್ಯರ ಹೆಸರನ್ನು ಬೇರೆ ಬೇರೆ ಬಣ್ಣಗಳಲ್ಲಿ ತೋರಿಸಬಹುದು. ಮುಂಬರುವ ಈವೆಂಟ್‌ಗಳ ಪಟ್ಟಿಯನ್ನು ಇಲ್ಲಿ ಮಾಡಬಹುದು. ಮನೆಗೆ ಅಗತ್ಯವಿರುವ ವಸ್ತುಗಳ ಪಟ್ಟಿಯನ್ನು ನೀವು ಇಲ್ಲಿ ಮಾಡಬಹುದು. ಇದು ಮೊಬೈಲ್ ನಲ್ಲಿ ಮಾತ್ರವಲ್ಲದೆ ಕಂಪ್ಯೂಟರ್ ನಲ್ಲಿ ಕೂಡ ಓಪನ್ ಆಗುತ್ತದೆ.
ಸೇಫ್ಟಿಪಿನ್ (Safetipin) : ಹೆಸರಿನಲ್ಲಿಯೇ ಇದ್ರ ಮಹತ್ವವನ್ನು ಹೇಳಲಾಗಿದೆ. ಮಹಿಳೆಯರಿಗೆ ಸುರಕ್ಷತೆ ಬಹಳ ಅಗತ್ಯ. ಮಹಿಳೆಯರು ಈ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಂಡರೆ ಅವರ ಲೊಕೇಷನ್ ಟ್ರ್ಯಾಕ್ ಮಾಡಬಹುದು. ಇದ್ರಲ್ಲಿ ತುರ್ತು ನಂಬರ್ ಕೂಡ ಸೇವ್ ಮಾಡಬಹುದು. ಅಗತ್ಯವಿದ್ದಾಗ ಆ ನಂಬರ್ ಗೆ ತುರ್ತು ಎಚ್ಚರಿಕೆಯನ್ನು ಕಳುಹಿಸಬಹುದು. ಪ್ರತಿಯೊಬ್ಬ ಮಹಿಳೆ ಡೌನ್ಲೋಡ್ ಮಾಡಲೇಬೇಕಾದ ಅಪ್ಲಿಕೇಷನ್ ಇದು.
ಎಂ ಟ್ರ್ಯಾಕರ್ (mTrakr) : ನೀವು ವರ್ಕಿಂಗ್ ವುಮೆನ್ ಆಗಿದ್ದರೆ ಈ ಅಪ್ಲಿಕೇಷನ್ ನಿಮಗೆ ಒಳ್ಳೆಯದು. ಇದ್ರಲ್ಲಿ ನಿಮ್ಮ ಗಳಿಕೆಯಿಂದ ವೆಚ್ಚಗಳವರೆಗೆ, ಹೂಡಿಕೆಯಿಂದ ನೀವು ಮಾಡುವ ಯೋಜನೆಗಳವರೆಗೆ ಎಲ್ಲಾ ದಾಖಲೆಗಳನ್ನು ಒಂದೇ ಅಪ್ಲಿಕೇಶನ್‌ನಲ್ಲಿ ಇಡಬಹುದು. ಈ ಅಪ್ಲಿಕೇಶನ್ ಒಂದಿದ್ದರೆ ನೀವು ಕಂಪ್ಯೂಟರ್ ನಲ್ಲಿ ಯಾವುದೇ ದಾಖಲೆ ಇಟ್ಟುಕೊಳ್ಳುವ ಅಗತ್ಯವಿರುವುದಿಲ್ಲ. ನೀವು ಅಗತ್ಯಕ್ಕಿಂತ ಹೆಚ್ಚು ಎಲ್ಲಿ ಖರ್ಚು ಮಾಡಿದ್ದೀರಿ ಎಂಬುದನ್ನು ನೀವು ಈ ಅಪ್ಲಿಕೇಷನ್ ಮೂಲಕ ಸುಲಭವಾಗಿ ಪತ್ತೆ ಮಾಡಬಹುದು. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೂ ನೀವು ಈ ಅಪ್ಲಿಕೇಷನ್ ಮೂಲಕವೆ ಎಲ್ಲವನ್ನು ಟ್ರ್ಯಾಕ್ ಮಾಡಬಹುದು.
ಮಿಂಟ್ (Mint) : ಮೊಬೈಲ್‌ನಲ್ಲಿ ಮಿಂಟ್ ಆ್ಯಪ್ ಡೌನ್‌ಲೋಡ್ ಮಾಡಿದ್ರೆ ನೀವು ಇಡೀ ತಿಂಗಳ ಖರ್ಚು ವೆಚ್ಚವನ್ನು ಡೈರಿಯಲ್ಲಿ ಬರೆಯುವ ಅಗತ್ಯವಿರುವುದಿಲ್ಲ. ನಿಮಗೆ ಈ ಅಪ್ಲಿಕೇಷನ್ ನಲ್ಲಿ ಎಲ್ಲ ಮಾಹಿತಿ ಸಿಗುತ್ತದೆ. ತಿಂಗಳು ಎಷ್ಟು ಖರ್ಚು ಮಾಡಿದ್ದೀರಿ, ಎಷ್ಟು ಉಳಿಸಿದ್ದೀರಿ ಎಂಬುದು ತಿಳಿಯುತ್ತದೆ. ಕುಟುಂಬದ ಯಾವ್ಯಾವ ವ್ಯಕ್ತಿಗಳಿಗೆ ಎಷ್ಟು ಖರ್ಚಾಗಿದೆ ಎಂಬ ವಿವರಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು.
ಆರೋಗ್ಯಕರ ಮಗು ಬೇಕಾ? ಹಾಗಾದ್ರೆ ತಪ್ಪದೇ ಇವುಗಳನ್ನ ಟ್ರೈ ಮಾಡಿ
ಸ್ಟಿಪೇಟರ್ (Stipator) : ಇದು ಕೂಡ ಸುರಕ್ಷತೆಯ ಅಪ್ಲಿಕೇಷನ್ ಆಗಿದೆ. ನೀವು ಎಲ್ಲಿಗೆ ಹೋಗಿದ್ದೀರಿ ಎಂಬುದನ್ನು ಇದು ಟ್ರ್ಯಾಕ್ ಮಾಡ್ತಿರುತ್ತದೆ. ಸಾಮಾಜಿಕ ನೆಟ್ವರ್ಕ್ ನಲ್ಲಿ ನಿಮ್ಮ ಪ್ರದೇಶದ ಬಗ್ಗೆ ಇದು ಮಾಹಿತಿ ನೀಡುವ ಕಾರಣ, ನಿಮ್ಮ ಆಪ್ತರಿಗೆ ನೀವು ಎಲ್ಲಿದ್ದೀರಿ ಎಂಬುದು ಸುಲಭವಾಗಿ ತಿಳಿಯುತ್ತದೆ.