ಮದುವೆಯೆಂಬುದು ಒಂದು ಪವಿತ್ರವಾದ ಸಂಬಂಧ. ಪ್ರೀತಿ, ನಂಬಿಕೆಯಿಂದ ಇದನ್ನು ನಿಭಾಯಿಸುವುದು ಅಗತ್ಯ. ಆದರೆ ಕೆಲವೊಮ್ಮೆ ಭಿನ್ನಾಭಿಪ್ರಾಯದಿಂದ ಸಂಬಂಧಗಳು ದೂರವಾಗುತ್ತವೆ. ಹೀಗೆ ತನ್ನನ್ನು ಬಿಟ್ಟು ಇನ್ನೊಬ್ಬನ ಹಿಂದೆ ಹೋದ ಗಂಡನಿಗೆ ಮಹಿಳೆ ನ್ಯೂಸ್‌ಪೇಪರ್‌ನಲ್ಲಿ ಜಾಹೀರಾತು ನೀಡಿ ಮರ್ಯಾದೆ ತೆಗೆದಿದ್ದಾಳೆ. 

ದಾಂಪತ್ಯ ಎಂಬುದು ಸುಂದರವಾದ ಅನುಬಂಧ. ಅಪರಿಚಿತರು ಒಂದೇ ಸೂರಿನಡಿ ಪ್ರೀತಿ, ವಿಶ್ವಾಸದಿಂದ ಜೀವನದುದ್ದಕ್ಕೂ ಜೊತೆಯಾಗಿ ನಡೆಯುವ ಸಂಕಲ್ಪ. ಆದ್ರೆ ಎಲ್ಲಾ ಮದುವೆಗಳು ಸುಖಾಂತ್ಯವಾಗುವುದಿಲ್ಲ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಮದುವೆಯ ನಂತರದ ಅನೈತಿಕ ಸಂಬಂಧಗಳು ಸಾಮಾನ್ಯವಾಗುತ್ತಿವೆ. ಗಂಡ ಇನ್ನೊಬ್ಬ ಮಹಿಳೆಯ ಜೊತೆ ಸಂಬಂಧ ಇಟ್ಟುಕೊಳ್ಳೋದು, ಹೆಂಡತಿ ಪರಪುರುಷನ ಜೊತೆ ಸುತ್ತುವುದು ಕಾಮನ್ ಆಗಿಬಿಟ್ಟಿದೆ. ಹೀಗೆ ತನ್ನನ್ನು ಬಿಟ್ಟು ಹೋದ ಗಂಡನಿಗೆ ಮಾಜಿ ಪತ್ನಿ ಚೆನ್ನಾಗಿ ಬುದ್ಧಿ ಕಲಿಸಿದ್ದಾಳೆ. ಇಷ್ಟಕ್ಕೂ ಆಕೆ ಮಾಡಿರೋದೇನು ಅಂತ ಗೊತ್ತಾದ್ರೆ ನೀವು ಸಹ ಬೆಚ್ಚಿಬೀಳ್ತೀರಾ ? ಆ ಬಗ್ಗೆ ಮಾಹಿತಿ ಇಲ್ಲಿದೆ. 

ಗಂಡನ ಮರ್ಯಾದೆ ತೆಗೆಯಲು ದಿನಪತ್ರಿಕೆಯಲ್ಲಿ ಜಾಹೀರಾತು ಕೊಟ್ಟ ಹೆಂಡ್ತಿ
ಹೌದು, ಈಕೆ ಮಾಡಿರೋದು ಅಂತಿಂಥಾ ಕೆಲಸ ಅಲ್ಲ. ತನ್ನನ್ನು ಬಿಟ್ಟು ಹೋದ ಗಂಡನ (Husband) ಬಗ್ಗೆ ನ್ಯೂಸ್ ಪೇಪರ್‌ನ ಫುಲ್‌ ಪೇಜ್‌ನಲ್ಲಿ ಜಾಹೀರಾತು ಹಾಕಿ ಮರ್ಯಾದೆ ತೆಗೆದಿದ್ದಾಳೆ. ಸ್ಥಳೀಯ ಪತ್ರಿಕೆಯಲ್ಲಿ (Local newspaper) ಪೂರ್ಣ ಪುಟದ ಆಡ್‌ ಪಬ್ಲಿಷ್ ಆಗಿದೆ. ತನ್ನ ಗಂಡನನ್ನು ಕೊಳಕು ಮೋಸಗಾರ (Cheater) ಎಂದು ಆಕೆ ಸಾರ್ವಜನಿಕವಾಗಿ ಅವಮಾನಿಸಿದ್ದಾಳೆ. ಜೆನ್ನಿ ಎಂದು ಗುರುತಿಸಲಾದ ಮಹಿಳೆ, ಆಸ್ಟ್ರೇಲಿಯನ್ ಪೇಪರ್ ಮ್ಯಾಕೆ ಮತ್ತು ವಿಟ್ಸಂಡೆ ಲೈಫ್‌ನ ಆಗಸ್ಟ್ 12ರ ಆವೃತ್ತಿಯಲ್ಲಿ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾಳೆ.

Homosexual Wedding: ಬಾಂಗ್ಲಾದೇಶದ ಯುವತಿ-ತಮಿಳುನಾಡಿನ ಹುಡುಗಿಯ ಅದ್ಧೂರಿ ಮದುವೆ

'ಆತ್ಮೀಯ ಸ್ಟೀವ್, ನೀವು ಅವಳೊಂದಿಗೆ ಸಂತೋಷವಾಗಿದ್ದೀರಿ ಎಂದು ನಾನು ಭಾವಿಸುತ್ತೇನೆ. ನೀನು ಎಂತಹ ಹೊಲಸು ಮೋಸಗಾರ ಎಂದು ಈಗ ಇಡೀ ಊರಿಗೆ ಗೊತ್ತಾಗುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ ನಾನು ಈ ಜಾಹೀರಾತನ್ನು ನೀಡಿದೆ' ಎಂದು ಜಾಹೀರಾತಿನಲ್ಲಿ (Advertisement) ದೊಡ್ಡ ಅಕ್ಷರಗಳಲ್ಲಿ ಮುದ್ರಿಸಲಾಗಿದೆ. 

ಜಾಹೀರಾತನ್ನು ಉಚಿತವಾಗಿ ಪಬ್ಲಿಷ್ ಮಾಡಿದ ದಿನಪತ್ರಿಕೆ
ಗ್ರೇಟ್ ಬ್ಯಾರಿಯರ್ ರೀಫ್‌ನ ಪಕ್ಕದಲ್ಲಿರುವ ಉಷ್ಣವಲಯದ ಪ್ರವಾಸಿ ಪ್ರದೇಶದಲ್ಲಿ 50,000 ಕ್ಕೂ ಹೆಚ್ಚು ಜನರು ಓದುವ ವೃತ್ತಪತ್ರಿಕೆ - ಸಣ್ಣ-ಪಟ್ಟಣದ ಎಲ್ಲಾ ವಿಷಯಗಳು ಇದರಲ್ಲಿ ಪಬ್ಲಿಷ್ ಆಗುತ್ತವೆ. ಜಾಹೀರಾತನ್ನು ನೀಡಿದ ಮಹಿಳೆ (Woman) ಜೆನ್ನಿ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಪತ್ರಿಕೆಯ ಸಂಪಾದಕರು ಫೇಸ್‌ಬುಕ್‌ನಲ್ಲಿ ತಿಳಿಸಿದರು. ಅವರು ತಮ್ಮ ಆನ್‌ಲೈನ್ ಪೋರ್ಟಲ್ ಮೂಲಕ ಜಾಹೀರಾತನ್ನು ಬುಕ್ ಮಾಡಿದ್ದಾರೆ ಎಂದು ಅವರು ಬಹಿರಂಗಪಡಿಸಿದರು, ಆದರೆ ಅವರು ತಮ್ಮ ಸಂಗಾತಿಯ ಕ್ರೆಡಿಟ್ ಕಾರ್ಡ್‌ನಲ್ಲಿನ ಎಷ್ಟು ಹಣವನ್ನು ಪಾವತಿಸಲು ಪ್ರಯತ್ನಿಸಿದರು ಎಂಬುದನ್ನು ಬಹಿರಂಗಪಡಿಸಲಿಲ್ಲ.

ಇದೆಂಥಾ ಸಂಪ್ರದಾಯ … Virginity testಲ್ಲಿ ಫೇಲ್ ಆದ್ರೆ ವಧುವಿಗೆ ಅಗ್ನಿ ಪರೀಕ್ಷೆ!

ಸ್ಟೀವ್ ಅವರ ಒಪ್ಪಿಗೆಯಿಲ್ಲದೆ ಅವರ ಖಾತೆಗೆ ಬಿಲ್ ಮಾಡುವುದು ಕಾನೂನುಬಾಹಿರ ಎಂದು ಹೇಳುವ ಮೂಲಕ ಸಂಪಾದಕರು ಅಂತಿಮವಾಗಿ ಜಾಹೀರಾತನ್ನು ಉಚಿತವಾಗಿ ಚಲಾಯಿಸಲು ನಿರ್ಧರಿಸಿದರು. 'ಸ್ಟೀವ್ ಯಾರೆಂದು ನಮಗೆ ತಿಳಿದಿಲ್ಲ. ಆದರೆ ಮಹಿಳೆಗೆ ಮೋಸ ಮಾಡಿರುವ ಕಾರಣ ಅವನು ಸ್ಪಷ್ಟವಾಗಿ ತುಂಬಾ ಕೆಟ್ಟವನಾಗಿದ್ದಾನೆ' ಎಂದು ತಿಳಿಸಿದರು. ಫೇಸ್‌ಬುಕ್‌ನಲ್ಲಿ, ಹತ್ತಾರು ಓದುಗರು (Readers) ಜೆನ್ನಿಯನ್ನು ತನ್ನ ಪತಿಯನ್ನು ಅವಮಾನಿಸಿದ್ದಕ್ಕಾಗಿ ಹೊಗಳಿದರು., ಒಬ್ಬ ಮಹಿಳೆ 'ಓಹ್, ನನ್ನ ಪತಿ ನನ್ನನ್ನು ಬಿಟ್ಟು ಬೇರೆ ಮಹಿಳೆ ಜೊತೆ ಹೋದಾಗ ನಾನು ಸಹ ಇದನ್ನೇ ಮಾಡಬೇಕೆಂದು ಬಯಸುತ್ತೇನೆ' ಎಂದಿದ್ದಾರೆ. ಇನ್ನೊಬ್ಬ ವ್ಯಕ್ತಿ 'ನೀನು ತುಂಬಾ ಧೈರ್ಯವಂತೆ ಮೂವ್ ಆನ್' ಎಂದು ಕಮೆಂಟಿಸಿದ್ದಾನೆ

ಕೆಲವೊಬ್ಬರು ಇದು ಪತ್ರಿಕೆಯ ಮಾರ್ಕೆಟಿಂಗ್ ಟೆಕ್ನಿಕ್ ಆಗಿದೆ. ಇದು ಮ್ಯಾಕೆ ಮತ್ತು ವಿಟ್ಸಂಡೆ ಲೈಫ್‌ನಲ್ಲಿನ ಉದ್ಯೋಗಿಗಳಿಂದ ರಚಿಸಲ್ಪಟ್ಟಿರಬಹುದು ಎಂದು ತಿಳಿಸಿದ್ದಾನೆ. ಈ ಮೂಲಕ ದಿನಪತ್ರಿಕೆ ಹೆಚ್ಚು ಓದುಗರನ್ನು ಪಡೆಯಲು ಹೀಗೆ ಮಾಡಲಾಗಿದೆ ಎಂದು ಹೇಳಿದ್ದಾನೆ.