Asianet Suvarna News Asianet Suvarna News

70 ಲಕ್ಷ ರೂ ಎಣಿಸಿ ಸುಸ್ತಾದ ಬೆನ್ನಲ್ಲೇ ಟ್ವಿಸ್ಟ್, ಶಾಪ್ ಸಿಬ್ಬಂದಿ ಮೇಲೆ ಸೇಡು ತೀರಿಸಿದ ಮಹಿಳೆ ನಡೆಗೆ ಮೆಚ್ಚುಗೆ!

ಬ್ರಾಂಡೆಡ್ ಶೋ ರೂಂನಲ್ಲಿ ಖರೀದಿಗೆ ತೆರಳಿದಾಗ ಮಹಿಳೆಯನ್ನು ಕಡೆಗಣಿಸಲಾಗಿದೆ. ದುಬಾರಿ ವಸ್ತುಗಳ ಖರೀದಿಸಲ್ಲ ಎಂದು ಮಹಿಳೆ ಕೇಳಿದ್ದನ್ನು ಕೊಡಲು ತಯಾರಿರಿದ ಶೋ ರೂಂ ವಿರುದ್ದ ಮಹಿಳೆ ಸೇಡು ತೀರಿಸಿದ್ದಾಳೆ. 70 ಲಕ್ಷ ರೂಪಾಯಿ ನಗದು ಹಿಡಿದು ಶಾಪಿಂಗ್ ಮಾಡಿದ್ದಾಳೆ. 2 ಗಂಟೆ ನಗದು ಎಣಿಸಿದ ಶೋ ರೂಂ ಸಿಬ್ಬಂದಿಗಳು ನಿಟ್ಟುಸಿರು ಬಿಡುವಾಗಲೇ ಮತ್ತೊಂದು ಶಾಕ್ ನೀಡಿದ್ದಾಳೆ. 
 

Woman revenge Louis Vuitton outlet Staff takes 2 hours to count cash but she leaves without purchase ckm
Author
First Published Aug 23, 2024, 1:20 PM IST | Last Updated Aug 23, 2024, 1:20 PM IST

ಬೀಜಿಂಗ್(ಆ.23) ಸೇಡಿಗೆ ಸವ್ವಾ ಸೇರು.  ಬ್ರಾಂಡೆಂಡ್ ಶೋ ರೂಂನಲ್ಲಿ ವಿಂಡೋ ಶಾಪಿಂಗ್ ಎಂದು ತನ್ನ ಕಡೆಗಣಿಸಿದವರಿಗೆ ತಿರುಗೇಟು ಕೊಟ್ಟ ಮಹಿಳೆಯ ನಡೆಗೆ ಇದೀಗ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿಶ್ವದ ಅತ್ಯಂತ ದುಬಾರಿ ಬ್ರಾಂಡ್ ಲೂಯಿಸ್ ವಿಟನ್ ಶೋ ರೂಂಗೆ ತೆರಳಿದ ಮಹಿಳೆಯನ್ನು ಸಿಬ್ಬಂದಿಗಳು ನಿರ್ಲಕ್ಷಿಸಿದ್ದಾರೆ. ಹೊಸದಾಗಿ ಬಂದಿರುವ ಡ್ರೆಸ್‌ಗಳನ್ನು ತೋರಿಸಲು ಹೇಳಿದರೂ ತೋರಿಸಿಲ್ಲ. ವಿಂಡೋ ಶಾಂಪಿಂಗ್ ಮಾಡ್ತಾರೆ ಎಂದು ಸಿಬ್ಬಂದಿಗಳು ಕಡೆಗಣಿಸಿದ್ದಾರೆ. ಶೋ ರೂಂ ಪ್ರಧಾನ ಕಚೇರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಸೇಡು ತೀರಿಸಲು ನಿರ್ಧರಿಸಿದ ಮಹಿಳೆ 2 ತಿಂಗಳ ಬಳಿಕ ಬರೋಬ್ಬರಿ 70 ಲಕ್ಷ ರೂಪಾಯಿ ನಗದು ಹಿಡಿದುಕೊಂಡು ಇದೇ ಶೋ ರೂಂಗೆ ತೆರಳಿದ್ದಾರೆ. ಒಂದೆರಡು ಬಟ್ಟೆ, ಬ್ಯಾಗ್ ಖರೀದಿಸಿ ನಗದು ಹಣ ನೀಡಿದ್ದಾಳೆ. ಸಿಬ್ಬಂದಿಗಳು ದುಡ್ಡು ಎಣಿಸಲು 2 ಗಂಟೆ ತೆಗೆದುಕೊಂಡು ನಿಟ್ಟುಸಿರು ಬಿಟ್ಟಿದ್ದಾರೆ. ಎಲ್ಲವೂ ಸುಖಾಂತ್ಯ ಎಂದುಕೊಳ್ಳುವಾಗಲೇ ಮಹಿಳೆ ಮತ್ತೊಂದು ಟ್ವಿಸ್ಟ್ ನೀಡಿದ್ದಾಳೆ. ಈ ಸೇಡಿಗೆ ಸಿಬ್ಬಂದಿಗಳು ಈ ಜನ್ಮದಲ್ಲಿ ಯಾರನ್ನು ನಿರ್ಲಕ್ಷಿಸುವುದಿಲ್ಲ ಎಂದು ಶಪಥ ಮಾಡುವ ಪರಿಸ್ಥಿತಿಗೆ ತಲುಪಿದ್ದಾರೆ.

ಚೀನಾದ ಚಾಂಗ್‌ಕ್ವಿಂಗ್ ಶಾಪಿಂಗ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದೆ. ಚೀನಾದ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಕ್ಸಿಯೊಹೊಂಗ್ಶು‌ನಲ್ಲಿ ಈ ಕುರಿತು ಮಹಿಳೆ ಹೇಳಿಕೊಂಡಿದ್ದಾರೆ. ಚಾಂಗ್‌ಕ್ವಿಂಗ್ ಶಾಪಿಂಗ್ ಸೆಂಟರ್‌ನಲ್ಲಿರುವ ಲೂಯಿಸ್ ವಿಟನ್ ಬ್ರಾಂಡೆಡ್ ಶೋ ರೂಂಗೆ ಮಹಿಳೆ ತೆರಳಿದ್ದಾರೆ. ಒಂದೆರೆಡು ವಸ್ತುಗಳನ್ನು ನೋಡಿ ಬೆನ್ನಲ್ಲೇ ಮಹಿಳೆ ಕುಡಿಯಲು ನೀರು ಕೇಳಿದ್ದಾರೆ. ಆದರೆ ಸಿಬ್ಬಂದಿಗಳು ಕಡೆಗಣಿಸಿದ್ದಾರೆ. ಬಳಿಕ ಹೊಸದಾಗಿ ಬಂದಿರುವ ಬಟ್ಟೆಗಳನ್ನು ತೋರಿಸಲು ನಿರಾಕರಿಸಿದ್ದಾರೆ.

ಬೀದಿ ನಾಯಿ ಕೊಂದ ಕುಟುಂಬದ ವಿರುದ್ಧ ಸೇಡು, ಚೆನ್ನೈನಿಂದ ಕೋಲ್ಕತಾಗೆ ತೆರಳಿ ಚಾಕು ಇರಿದ ವಿದ್ಯಾರ್ಥಿ!

ಬಟ್ಟೆ, ಬ್ಯಾಗ್‌ಗಳ ಬೆಲೆ ಕೇಳಿದರೂ ಉತ್ತರ ನೀಡದ ಸಿಬ್ಬಂದಿಗಳ ವಿರುದ್ಧ ಮಹಿಳೆ ಆಕ್ರೋಶಗೊಂಡಿದ್ದಾರೆ. ಗ್ರಾಹಕರು ಕೇಳಿದ ಬಟ್ಟೆಗಳನ್ನು ತೋರಿಸಲು ಸಮಸ್ಯೆ ಏನು? ಎಂದು ಕೇಳಿದ್ದಾರೆ. ಇದಕ್ಕೂ ಉತ್ತರವಿಲ್ಲ. ಸಂಪೂರ್ಣವಾಗಿ ಕಡೆಗಣಿಸಿದ ಸಿಬ್ಬಂದಿಗಳ ವಿರುದ್ದ ಆಕ್ರೋಶಗೊಂಡ ಮಹಿಳೆ ಶೋ ರೂಂನಿಂದ ಮರಳಿದ್ದಾರೆ. ಬಳಿಕ ಲೂಯಿಸ್ ವಿಟನ್ ಪ್ರಧಾನ ಕಚೇರಿಗೆ ಕರೆ ಮಾಡಿ ದೂರು ನೀಡುವ ಪ್ರಯತ್ನ ಮಾಡಿದ್ದಾರೆ. ಆದರೂ ಇಲ್ಲೂ ಸರಿಯಾದ ಸ್ಪಂದನೆ ಸಿಗಲಿಲ್ಲ.

2 ತಿಂಗಳ ಅದೇ ಶೂ ರೂಂಗೆ ಮಹಿಳೆ ತೆರಳಿದ್ದಾರೆ. ಈ ಬಾರಿ ನಗದು ತುಂಬಿದ ಬ್ಯಾಗ್ ಹಿಡಿದು ಹೊರಟಿದ್ದಾಳೆ. ಗೆಳೆಯ ಹಾಗೂ ಮತ್ತೊಬ್ಬ ಸಹಾಯಕನೊಂದಿಗೆ ತೆರಳಿದ ಮಹಿಳೆ ಲೂಯಿಸ್ ವಿಟನ್ ಶೋ ರೂಂಗೆ ತೆರಳಿ ಕೆಲ ಡ್ರೆಸ್‌ಗಳನ್ನು ತೋರಿಸಲು ಸೂಚಿಸಿದ್ದಾಳೆ. ಗತ್ತಿನಲ್ಲೇ ಹಲವು ಡ್ರೆಸ್ ಎಳೆದು ಹಾಕಿ ಒದೆರೆಡು ಡ್ರೆಸ್, ಬ್ಯಾಗ್ ಸೇರಿದಂತೆ ಕೆಲ ವಸ್ತುಗಳನ್ನು ಅಂತಿಮಗೊಳಿಸಿದ್ದಾಳೆ.

ಬಟ್ಟೆ, ಬ್ಯಾಗ್ ಹಾಗೂ ಈ ವಸ್ತುಗಳಿಗೆ ಎಷ್ಟಾಗುತ್ತದೆ ಎಂದು ಕೇಳಿದ್ದಾಳೆ? ಬೆಲೆ ಹೇಳಿದ ಬಳಿಕ ಬ್ಯಾಗ್‌ನಲ್ಲಿ ತಂದಿದ್ದ ಕಂತೆ ಕಂತೆ ನೋಟುಗಳನ್ನು ಸಿಬ್ಬಂದಿಗಳಿಗೆ ನೀಡಿದ್ದಾರೆ. ಇದರಲ್ಲಿ ಎಷ್ಟಿದೆ ನೋಡಿ, ಕಡಿಮೆಯಾದರೆ ಹೇಳಿ ಎಂದಿದ್ದಾಳೆ. ಲೂಯಸ್ ವಿಟನ್ ಸಿಬ್ಬಂದಿಗಳು ಎಣಿಸಲು ಆರಂಭಿಸಿದ್ದಾರೆ. ಬರೋಬ್ಬರಿ 2 ಗಂಟೆ ಎಣಿಸಿದ್ದಾರೆ. ಒಟ್ಟು 70,44,941 ರೂಪಾಯಿ ಎಣಿಸಿ ಸಿಬ್ಬಂದಿಗಳು ಸುಸ್ತಾಗಿದ್ದಾರೆ. ದುಡ್ಡು ಎಣಿಸಿ ಬಿಲ್ಲಿಂಗ್ ಮಾಡಬೇಕು ಅನ್ನುವಷ್ಟರಲ್ಲೇ ಮಹಿಳೆ, ಈ ತಿಂಗಳು ಬೇಡ, ಮುಂದಿನ ತಿಂಗಳು ಖರೀದಿಸುತ್ತೇನೆ ಎಂದು ಹಣ ವಾಪಸ್ ಪಡೆದು ಮರಳಿದ್ದಾಳೆ.

ವಂಚಿಸಿದ ಬಾಯ್ ಫ್ರೆಂಡ್ ಮೇಲೆ ಸಿಟ್ಟು, ಮೆಸ್ಸಿ ಆಟೋಗ್ರಾಫ್ ಇರೋ ಜರ್ಸೀನಾ ಮಾರಿದ ಮಹಿಳೆ!

ಮಹಿಳೆ ಸೇಡು ತೀರಿಸಿದ ರೀತಿ ಇದೀಗ ಬಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಹಲವರು ತಮ್ಮ ಶಾಪಿಂಗ್ ಅನುಭವ ಬಿಚ್ಚಿಟ್ಟಿದ್ದಾರೆ. ಹಲವು ಬ್ರಾಂಡೆಡ್ ಶೋ ರೂಂಗಳಲ್ಲಿ ಈ ರೀತಿ ನಿರ್ಲಕ್ಷಿಸುತ್ತಾರೆ ಎಂದಿದ್ದಾರೆ. 
 

Latest Videos
Follow Us:
Download App:
  • android
  • ios