Asianet Suvarna News Asianet Suvarna News

Full Time Daughter ಆಗಿರಲು ಕೆಲಸಕ್ಕೆ ರಿಸೈನ್ ಮಾಡಿದ ಮಹಿಳೆ, ತಿಂಗಳಿಗೆ 46,000 ಸ್ಯಾಲರಿ!

ಪೋಷಕರು ಕಷ್ಟಪಟ್ಟು ಮಕ್ಕಳನ್ನು ಬೆಳೆಸುತ್ತಾರೆ. ಆದ್ರೆ ಇತ್ತೀಚಿನ ಮಕ್ಕಳಿಗೋ ಪೋಷಕರ ಜೊತೆಯಿರಲು ಸಮಯವೇ ಇಲ್ಲ. ಹೈಪೇಯ್ಡ್‌ ಜಾಬ್‌, ಫಾರಿನ್ ಟ್ರಿಪ್ ಅಂತ ಪೋಷಕರನ್ನು ಒಂಟಿಯಾಗ ಹೋಗಿಬಿಡುತ್ತಾರೆ. ಆದ್ರೆ ಇಲ್ಲೊಂದೆಡೆ ಪೋಷಕರು ತಮ್ಮ ಮಗಳು ಜೊತೆಯೇ ಇರಬೇಕೆಂದು ಎಂಥಾ ಐಡಿಯಾ ಮಾಡಿದ್ದಾರೆ ನೋಡಿ.

Woman Quits Her Job to Become Full Time Daughter Paid by Her Parents Vin
Author
First Published May 25, 2023, 5:17 PM IST | Last Updated May 25, 2023, 5:24 PM IST

ಚಿಕ್ಕಂದಿನಲ್ಲಿ ಮಕ್ಕಳನ್ನು ಪೋಷಕರು ಕಷ್ಟಪಟ್ಟು ಸಾಕಿ, ಸಲಹುತ್ತಾರೆ. ಬೇಕಾದ್ದನ್ನೆಲ್ಲಾ ಕೊಡಿಸಿ, ತಪ್ಪುಗಳನ್ನು ತಿದ್ದಿ ದೊಡ್ಡವರನ್ನಾಗಿ ಮಾಡುತ್ತಾರೆ. ಆದರೆ ಮಕ್ಕಳೋ ಹೈಯರ್‌ ಎಜುಕೇಷನ್,  ಹೈಪೇಯ್ಡ್‌ ಜಾಬ್‌ ಅಂತ ಮನೆಯನ್ನು ಬಿಟ್ಟು ಸಲೀಸಾಗಿ ಹೋಗಿ ಬಿಡುತ್ತಾರೆ. ಪೋಷಕರು ತಮ್ಮ ಇಳಿ ವಯಸ್ಸಿನಲ್ಲಿ ಮಕ್ಕಳ ಜೊತೆ ಸಮಯ ಕಳೆಯಲು ಹಾತೊರೆಯುತ್ತಾರೆ. ಅವರನ್ನು ನೋಡಬೇಕು, ಅವರ ಜೊತೆ ಮಾತನಾಡಬೇಕು ಎಂದು ಹಂಬಲಿಸುತ್ತಾರೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ಸಣ್ಣ ವಯಸ್ಸಿನಲ್ಲೇ ಪ್ರೈವೆಸಿ ಅನ್ನೋ ನೆಪದಲ್ಲಿ ಪೋಷಕರಿಂದ ದೂರವಿಡುತ್ತಾರೆ. ಹೀಗೆ ದೂರವಿರೋ ಮಗಳು ಜೊತೆಯೇ ಇರಬೇಕೆಂದು ಚೀನಾದ ಪೋಷಕರು ಸೂಪರ್ ಐಡಿಯಾ ಮಾಡಿದ್ದಾರೆ. 

40 ವರ್ಷದ ಮಹಿಳೆ (Women)ಯೊಬ್ಬರು ತಮ್ಮ ಕೆಲಸವನ್ನು (Work) ತೊರೆದು ತನ್ನ ಸ್ವಂತ ಪೋಷಕರಿಗೆ (Parents) ಫುಲ್ ಟೈಂ ಮಗಳಾಗಿರಲು ನಿರ್ಧರಿಸಿದ್ದಾರೆ. ಇದಕ್ಕೆ ಪೋಷಕರು ತಿಂಗಳಿಗೆ 46,000 ಸ್ಯಾಲರಿ  ಸಹ ನೀಡುತ್ತಿದ್ದಾರೆ. ಚೀನಾದಲ್ಲಿ ಈ ವಿಚಾರ ಸಾಕಷ್ಟು ವಿವಾದವನ್ನು ಹುಟ್ಟುಹಾಕಿದೆ.

ಛೀ! ಈ ವಾಸನೆ ತಗೊಂಡ್ರೆ ತಿಂಗಳಿಗೆ 1.5 ಲಕ್ಷ ರೂ. ಸಂಬಳ ಕೊಡ್ತಾರಂತೆ...

ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ, ಕೆಲಸಕ್ಕೆ ರಿಸೈನ್
15 ವರ್ಷಗಳ ಕಾಲ ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡಿದ ನಂತರ, ಪೋಷಕರ ಒತ್ತಾಯದ ಮೇರೆ  40 ವರ್ಷದ ನಿಯಾನಾನ್ ತನ್ನ ಕೆಲಸವನ್ನು ತೊರೆದರು. ತಮ್ಮ ಕೆಲಸದಲ್ಲಿ ಅವರು ದಿನಪೂರ್ತಿ ಒತ್ತಡ (Pressure)ದಲ್ಲಿರುತ್ತಿದ್ದರು. ಹೆಚ್ಚು ಉದ್ವೇಗವನ್ನು ಅನುಭವಿಸುತ್ತಿದ್ದರು. ಹೀಗಾಗಿ ಪೋಷಕರು ತಮ್ಮ ಹೊಸ ಉದ್ಯೋಗದ (Job) ಪ್ರಸ್ತಾಪವನ್ನು ಮುಂದಿಟ್ಟರು. 'ನೀನು ನಿನ್ನ ಕೆಲಸವನ್ನು ಏಕೆ ಬಿಡಬಾರದು. ನಾವು ನಿಮಗೆ ತಿಂಗಳಿಗೆ ಸ್ಯಾಲರಿಯನ್ನು ನೀಡುತ್ತೇವೆ. ನೀನು ಫುಲ್‌ಟೈಂ ನಮ್ಮ ಮಗಳಾಗಿದ್ದರೆ ಸಾಕು' ಎಂದು ಪೋಷಕರು ಹೇಳಿದರು. ಆದರೆ ಮಹಿಳೆ ತನ್ನ ಸುದ್ದಿಸಂಸ್ಥೆಯ ಕೆಲಸಕ್ಕೆ ರಿಸೈನ್ ಮಾಡಿ ಪೋಷಕರೊಂದಿಗೆ ವಾಸಿಸುತ್ತಿದ್ದಾರೆ.

ನಿಸ್ಸಂಶಯವಾಗಿ ಈಗ ಹೆಚ್ಚು ಖರ್ಚಾಗುತ್ತಿಲ್ಲ. ವಸತಿ ಮತ್ತು ಆಹಾರ ಮತ್ತು ವಿವಿಧ ಗೃಹೋಪಯೋಗಿ ವಸ್ತುಗಳ ಹಣ ಉಳಿತಾಯವಾಗುತ್ತಿದೆ. ಉಳಿದ ವೆಚ್ಚಗಳನ್ನು ಪೋಷಕರು ನೋಡಿಕೊಳ್ಳುತ್ತಾರೆ. ತಿಂಗಳಿಗೆ 46,000 ಸ್ಯಾಲರಿ  ಸಹ ನೀಡುತ್ತಿದ್ದಾರೆ. ಹಾಗಾಗಿ ನಿಯಾನಾನ್ ತನ್ನ ಕೆಲಸವನ್ನು ತೊರೆದು ಫುಲ್ ಟೈಂ ಮಗಳಾಗಲು ನಿರ್ಧರಿಸಿದ್ದಾಳೆ. ತನ್ನ ಹೆತ್ತವರ ಉದ್ಯೋಗದಲ್ಲಿ ಒಂದು ವರ್ಷ ಕಳೆದ ನಂತರ, ನಿಯಾನಾನ್ ತನ್ನ ವೃತ್ತಿ 'ಪ್ರೀತಿಯಿಂದ ತುಂಬಿದೆ' ಎಂದು ವಿವರಿಸುತ್ತಾಳೆ. ಅವಳು ತನ್ನ ತಾಯಿ ಮತ್ತು ತಂದೆ ದಿನಸಿ ಶಾಪಿಂಗ್‌ಗೆ ಹೋಗುವಾಗ ಅವರ ಜೊತೆಯಲ್ಲಿ ತನ್ನ ದಿನಗಳನ್ನು ಕಳೆಯುತ್ತಾಳೆ, ಪ್ರತಿದಿನ ರಾತ್ರಿ ಅವರೊಂದಿಗೆ ರಾತ್ರಿಯ ಊಟವನ್ನು ಮಾಡುತ್ತಾಳೆ, ಅವರಿಗೆ ಅಗತ್ಯವಿರುವಾಗ ಕೆಲಸಗಳನ್ನು ಮಾಡುತ್ತಾಳೆ. ಉಳಿದ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಮಾತನಾಡುತ್ತಾ ಕೂರುತ್ತಾರೆ.

ದಿನಿವಿಡೀ ಸುಮ್ನೆ ಕ್ಯಾಂಡಿ ತಿನ್ತಿದ್ರೆ ಸಾಕು, ವರ್ಷಕ್ಕೆ 61 ಲಕ್ಷ ರೂ. ಸ್ಯಾಲರಿ !

ಮಾಸಿಕ ಪಿಂಚಣಿಯಿಂದ ಮಗಳಿಗೆ ಸ್ಯಾಲರಿ ನೀಡುವ ಪೋಷಕರು
ಮನೆಯ ಸುತ್ತಲಿನ ಎಲೆಕ್ಟ್ರಾನಿಕ್ಸ್ ನಿರ್ವಹಣೆ ಮತ್ತು ಪ್ರತಿ ತಿಂಗಳು ಒಂದು ಅಥವಾ ಎರಡು ಕುಟುಂಬ ಪ್ರವಾಸಗಳನ್ನು ಯೋಜಿಸುವ ಜವಾಬ್ದಾರಿಯೂ (Responsibility) ಅವರ ಮೇಲಿದೆ ಎಂದು ನಿಯಾನಾನ್ ಹೇಳುತ್ತಾರೆ. ಈ ದಿನಚರಿಯು ಆನಂದದಾಯಕವಾಗಿದೆ. ಆದರೆ ಇನ್ನೂ ಕೆಲವೊಮ್ಮೆ ದುಡಿಯುವ ವಯಸ್ಸಿದು. ಹೀಗಾಗಿ ಇನ್ನೂ ಹೆಚ್ಚು ಹಣವನ್ನು (Money) ಗಳಿಸುವ ಬಯಕೆಯನ್ನು ಅನುಭವಿಸುತ್ತಿದ್ದೇನೆ ಎಂದಿದ್ದಾರೆ. 'ನೀನು ಹೆಚ್ಚು ಸೂಕ್ತವಾದ ಕೆಲಸವನ್ನು ಕಂಡುಕೊಂಡರೆ, ಅದಕ್ಕೆ ಹೋಗಬಹುದು' ಎಂದು ನಿಯಾನಾನ್ ಪೋಷಕರು ಅವರಿಗೆ ಹೇಳಿದ್ದಾರೆ. 'ನೀನು ಕೆಲಸ ಮಾಡಲು ಬಯಸದಿದ್ದರೆ, ಮನೆಯಲ್ಲಿಯೇ ಇರು ಮತ್ತು ನಮ್ಮೊಂದಿಗೆ ಸಮಯ ಕಳೆಯಬೇಕು' ಎಂದು ಸೂಚಿಸಿದ್ದಾಗಿ ನಿಯಾನಾನ್ ತಿಳಿಸುತ್ತಾರೆ.

ಮಹಿಳೆಗೆ ಸ್ಯಾಲರಿಯನ್ನು ಪೋಷಕರು ತಮ್ಮ ಮಾಸಿಕ ಪಿಂಚಣಿಯಿಂದ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಅಸಾಮಾನ್ಯ ವ್ಯವಸ್ಥೆಯು ಚೀನಾದಲ್ಲಿ ಬಿಸಿಯಾದ ಭಾರೀ ವಿವಾದಕ್ಕೆ ಕಾರಣವಾಗಿದೆ. ಕೆಲವರು 40 ವರ್ಷದ ಮಹಿಳೆ ತನ್ನ ಹೆತ್ತವರಿಂದ ಬದುಕುತ್ತಿದ್ದಾರೆ ಎಂದು ಟೀಕಿಸಿದರು, ಮತ್ತು ಇತರರು ಇದು ಕೇವಲ ಕುಟುಂಬವಾಗಿ ಅವರ ವ್ಯವಹಾರ ಎಂದು ಪ್ರತಿಪಾದಿಸಿದರು. ಇನ್ನು ಕೆಲವರು, 'ಪೋಷಕರು ಮತ್ತು ಅವರ ಮಕ್ಕಳು ಇಬ್ಬರೂ ನಿಜವಾಗಿಯೂ ಸಂತೋಷವಾಗಿದ್ದರೆ, ಈ ವ್ಯವಸ್ಥೆಯನ್ನು ಯಾಕೆ ಸ್ವೀಕರಿಸಬಾರದು' ಎಂದು ಪ್ರಶ್ನಿಸಿದ್ದಾರೆ.

Latest Videos
Follow Us:
Download App:
  • android
  • ios