ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ ಸ್ಯಾನಿಟರಿ ಪ್ಯಾಡ್‌ ಆರ್ಡರ್ ಮಾಡಿದ ಮಹಿಳೆ, ಬ್ಯಾಗ್‌ನಲ್ಲಿ ಇದ್ದಿದ್ದೇ ಬೇರೆ!

ಮಹಿಳೆಯರು ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್, ಕಪ್‌ ಅಥವಾ ಟ್ಯಾಂಪೂನ್‌ಗಳನ್ನು ಬಳಸಿಕೊಳ್ಳುತ್ತಾರೆ. ಕೆಲವೊಬ್ಬರು ಮೆಡಿಕಲ್‌ ಶಾಪ್‌ಗಳಲ್ಲಿ ಖರೀದಿಸಿದರೆ ಇನ್ನು ಕೆಲವರು ಆನ್‌ಲೈನ್‌ನಲ್ಲಿ ಪ್ಯಾಡ್‌ಗಳನ್ನು ಆರ್ಡರ್ ಮಾಡುತ್ತಾರೆ. ಹೀಗೆ ಸ್ವಿಗ್ಗಿಯ ಇನ್‌ಸ್ಟಾಮಾರ್ಟ್‌ನಿಂದ ಸ್ಯಾನಿಟರಿ ಪ್ಯಾಡ್ ಆರ್ಡರ್ ಮಾಡಿದ ಮಹಿಳೆಗೆ ಅಚ್ಚರಿಗೆ ಕಾದಿತ್ತು.

Woman orders sanitary pads from Swiggy, gets chocolate cookies along with them Vin

ಹೆಣ್ಣುಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಬಳಸೋಕೆ ಸ್ಯಾನಿಟರಿ ಪ್ಯಾಡ್‌ಗಳು ಬೇಕೇ ಬೇಕು. ಆದರೆ ಬಹುತೇಕ ಮಹಿಳೆಯರು ಅದನ್ನು ಸ್ಟಾಕ್ ತಂದಿಡಲು ಮರೆತುಬಿಡುತ್ತಾರೆ. ಬದಲಿಗೆ ಪಿರಿಯಡ್ಸ್ ಸಮಯದಲ್ಲಿ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿಕೊಳ್ಳುತ್ತಾರೆ. ಹೀಗೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಪ್ಯಾಡ್ ಆರ್ಡರ್ ಮಾಡಿದ ಮಹಿಳೆಗೆ ಬ್ಯಾಗ್‌ ನೋಡಿ ಅಚ್ಚರಿ ಕಾದಿತ್ತು. ಡೆಲಿವರಿ ಬ್ಯಾಗ್‌ನಲ್ಲಿ ಸ್ಯಾನಿಟರಿ ಪ್ಯಾಡ್ ಅಲ್ಲದೆ ಇನ್ನೂ ಕೆಲವು ವಸ್ತುಗಳಿದ್ದವು.

ಮುಟ್ಟಿನ ಅವಧಿಗಳು ಸಾಕಷ್ಟು ಅಹಿತಕರವಾಗಿದೆ. ಅನೇಕ ಮಹಿಳೆಯರು (Woman) ತಮ್ಮ ಋತುಚಕ್ರದ ಸಮಯದಲ್ಲಿ ವಿಪರೀತ ನೋವನ್ನು ಅನುಭವಿಸುತ್ತಾರೆ. ಮೂಡ್‌ ಸ್ವಿಂಗ್ಸ್‌, ಹೆಚ್ಚೆಚ್ಚು ತಿನ್ನುವ ಕ್ರೇವಿಂಗ್ಸ್‌ ಕೂಡಾ ಸಾಮಾನ್ಯವಾಗಿರುತ್ತದೆ. ಇದನ್ನು ಮನಗಂಡ ಇನ್‌ಸ್ಟಾಮಾರ್ಟ್‌ ಗ್ರಾಹಕರಿಗೆ (Customer) ಸ್ಯಾನಿಟರಿ ಪ್ಯಾಡ್ ಜೊತೆಗೆ ಚಾಕೋಲೇಟ್‌ಗಳನ್ನು ಕಳುಹಿಸಿಕೊಟ್ಟಿದೆ. ಹೌದು, ಅಚ್ಚರಿ ಅನಿಸಿದರೂ ಇದು ನಿಜ. ಆನ್‌ಲೈನ್‌ನಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಆರ್ಡರ್ ಮಾಡಿದಾಗ ಆಶ್ಚರ್ಯವಾಯಿತು ಎಂದು ಮಹಿಳೆಯೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಕೇರಳ ವಿವಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ, ವಿಶ್ವವಿದ್ಯಾಲಯದಿಂದ ಐತಿಹಾಸಿಕ ನಿರ್ಧಾರ

ಸ್ಯಾನಿಟರಿ ಪ್ಯಾಡ್ ಜೊತೆಗೆ ಚಾಕೊಲೇಟ್ ಕುಕೀಸ್
ಟ್ವಿಟರ್ ಬಳಕೆದಾರ ಸಮೀರಾ ಇನ್‌ಸ್ಟಾಮಾರ್ಟ್‌ನಲ್ಲಿ ತಾನು ಸ್ಯಾನಿಟರಿ ಪ್ಯಾಡ್ ಆರ್ಡರ್ ಮಾಡಿದ್ದೆ, ಆದ್ರೆ ಆರ್ಡರ್‌ ಜೊತೆಗೆ ಚಾಕೊಲೇಟ್‌ ಕುಕೀಗಳನ್ನು ಒಳಗೊಂಡಿತ್ತು ಎಂದು ತಿಳಿಸಿದ್ದಾರೆ. 'ನಾನು @SwiggyInstamart ನಿಂದ ಸ್ಯಾನಿಟರಿ ಪ್ಯಾಡ್‌ಗಳನ್ನು ಆರ್ಡರ್ ಮಾಡಿದೆ ಮತ್ತು ಬ್ಯಾಗ್‌ನ ಕೆಳಭಾಗದಲ್ಲಿ ಚಾಕೊಲೇಟ್ ಕುಕೀಗಳನ್ನು ನೋಡಿದೆ. ಇದು ತುಂಬಾ ಅರ್ಥಪೂರ್ಣವಾಗಿದೆ. ಆದರೆ ಇದನ್ನು ಯಾರು ಮಾಡಿದರು, ಸ್ವಿಗ್ಗಿ ಅಥವಾ ಅಂಗಡಿಯವರೇ ಎಂದು ನನಗೆ ತಿಳಿದಿಲ್ಲ' ಎಂದು ಸಮೀರಾ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಸಮೀರಾ ಅವರ ಟ್ವೀಟ್‌ಗೆ ಸ್ವಿಗ್ಗಿ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.'ಇದು ನಿಮಗೆ ಸಂತೋಷದ ದಿನವಾಗಿರಲಿ ಎಂದು ನಾವು ಬಯಸುತ್ತೇವೆ ಸಮೀರಾ' ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ಇದು ಉತ್ಪನ್ನದ (Product) ಪ್ರಚಾರ ಅಭಿಯಾನವಾಗಿರಬಹುದು ಎಂದು ಹೇಳಿದ್ದಾರೆ. ಇತರರು ತಮ್ಮ ಆರ್ಡರ್‌ಗಳೊಂದಿಗೆ ಆಡ್-ಆನ್‌ಗಳನ್ನು ಸ್ವೀಕರಿಸುವ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, 1,700 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಅನೇಕ ನೆಟಿಜನ್‌ಗಳು ಇದು ಉತ್ಪನ್ನದ ಪ್ರಚಾರ ಅಭಿಯಾನವಾಗಿರಬಹುದು ಎಂದು ಹೇಳಿದ್ದಾರೆ. 

ಸ್ಪರ್ಮ್, ಪಿರಿಯಡ್ಸ್ ರಕ್ತದಿಂದಲೂ ಫೇಶಿಯಲ್… ಸುಂದರವಾಗಿ ಕಾಣಲು ಇವೆಲ್ಲಾ ಮಾಡ್ತಾರಾ ಜನ?

ಮಹಿಳೆಯ ಪೋಸ್ಟ್‌ಗೆ ನಟ್ಟಿಗರಿಂದ ನಾನಾ ರೀತಿಯ ಪ್ರತಿಕ್ರಿಯೆ
ಒಬ್ಬ ಬಳಕೆದಾರ, ''ಗ್ರಾಹಕರನ್ನು ಸಂತೋಷಪಡಿಸಲು ಮತ್ತು ಉತ್ಪನ್ನಗಳನ್ನು ಉತ್ತೇಜಿಸಲು ಅವರು ಅದನ್ನು ಉದ್ದೇಶಪೂರ್ವಕವಾಗಿ ಇರಿಸುತ್ತಾರೆ. ನಮ್ಮ ಆರ್ಡರ್‌ನೊಂದಿಗೆ ಹಲವಾರು ಬಾರಿ ಬಿಸ್ಕತ್ತುಗಳು, ಚಾಕೊಲೇಟ್‌ಗಳು, ವೇಫರ್‌ಗಳು ಸಿಕ್ಕಿವೆ' ಎಂದು ಮಾಹಿತಿ ನೀಡಿದ್ದಾರೆ. ಮತ್ತೊಬ್ಬರು ಬರೆದಿದ್ದಾರೆ, 'Instamart ತನ್ನದೇ ಆದ ಡಾರ್ಕ್ ಸ್ಟೋರ್‌ಗಳಿಂದ ಸರಬರಾಜು ಮಾಡುತ್ತದೆ. ಆದ್ದರಿಂದ ಖಂಡಿತವಾಗಿಯೂ ಇದು SOP ನ ಭಾಗವಾಗಿದೆ. ಅದಕ್ಕಾಗಿ ನೀವು swiggy ಗೆ ಧನ್ಯವಾದ ಹೇಳಬಹುದು' ಎಂದಿದ್ದಾರೆ.

ಮತ್ತೊಬ್ಬ ಬಳಕೆದಾರರು ಸೇರಿಸಿದ್ದಾರೆ, 'ಆನ್‌ಲೈನ್ ಡೆಲಿವರಿ ಅಪ್ಲಿಕೇಶನ್‌ಗಳು ನಿರ್ದಿಷ್ಟ ಬ್ರ್ಯಾಂಡ್‌ಗಳನ್ನು ಉಚಿತವಾಗಿ ನೀಡುವ ಮೂಲಕ ಪ್ರಚಾರ ಮಾಡುತ್ತವೆ. ಆಡ್-ಆನ್‌ನಂತೆ. ನಾನು ಕೆಲವು ಕುಕೀಗಳು ಮತ್ತು ಪ್ರೋಟೀನ್ ಕುಕೀಗಳು ಅಥವಾ ಬಾರ್ ಪ್ರಕಾರಗಳನ್ನು ಪಡೆದುಕೊಂಡಿದ್ದೇನೆ' ಎಂದು ಹೇಳಿದರು. 'ಇದು ಹೆಚ್ಚಾಗಿ ಅವರು ಕಾರ್ಯಗತಗೊಳಿಸಿದ ಮಾದರಿ ಅಭಿಯಾನವಾಗಿದೆ. ಅವರು ನಿಮಗೆ ಈ ಉತ್ಪನ್ನವನ್ನು ನೀಡಿದಾಗ ಅವರು ಹಣವನ್ನು ಗಳಿಸುತ್ತಾರೆ' ಎಂದು ಪೋಸ್ಟ್ ಮಾಡಿದ್ದಾರೆ. 'ಯಾರೇ ಆಗಲಿ, ಸ್ಯಾನಿಟರಿ ಪ್ಯಾಡ್ ಜೊತೆ ಕುಕೀಸ್ ಇಟ್ಟಿರುವುದು ಅರ್ಥಪೂರ್ಣ' ಎಂದು ಕೆಲವೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios