ಪೆನ್ಸಿಲ್ವೇನಿಯಾ ಕುಟುಂಬವೊಂದಕ್ಕೆ ಸತ್ಯ ನಂಬಲು ಸಾಧ್ಯವಾಗ್ತಿಲ್ಲ. ಸತ್ತಿದ್ದಾಳೆ ಎಂದುಕೊಂಡಿದ್ದ ಮಹಿಳೆ ಇವರ ಕಣ್ಮುಂದೆ ಬಂದಿದ್ದಾಳೆ. ಅದೆಷ್ಟೋ ಕಿಲೋಮೀಟರ್ ದೂರಕ್ಕೆ ಹೋಗಿದ್ದ ಮಹಿಳೆ ಅಲ್ಲಯೇ 30 ವರ್ಷ ಕಳೆದಿದ್ದಳು.   

ಕುಟುಂಬದ ಸದಸ್ಯರೊಬ್ಬರು ಇದ್ದಕ್ಕಿದ್ದಂತೆ ಕಾಣೆಯಾದ್ರೆ ಆಗುವ ನೋವು, ತಳಮಳ ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ. ಕುಟುಂಬಸ್ಥರು ಅಥವಾ ಆಪ್ತರು ಸಾವನ್ನಪ್ಪಿದಾಗ ಅವರ ಶವ ಕಣ್ಮುಂದೆ ಇರುತ್ತದೆ. ಅವರು ನಮ್ಮ ಜೊತೆ ಇನ್ಮುಂದೆ ಇರೋದಿಲ್ಲ ಎನ್ನುವ ನೋವಿದ್ದರೂ ಜನರು ವಾಸ್ತವವನ್ನು ಒಪ್ಪಿಕೊಳ್ತಾರೆ. ಆದ್ರೆ ಕಾಣೆಯಾದವರ ವಿಷ್ಯದಲ್ಲಿ ಹಾಗಲ್ಲ. ಅವರು ಎಲ್ಲಿದ್ದಾರೆ? ಸತ್ತಿದ್ದಾರಾ, ಜೀವಂತವಿದ್ದಾರಾ? ಇದ್ದರೆ ಯಾವ ಸ್ಥಿತಿಯಲ್ಲಿ ಇರಬಹುದು ಹೀಗೆ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗದೆ ಒದ್ದಾಡಬೇಕಾಗುತ್ತದೆ. ವರ್ಷಗಳ ಉರುಳುತ್ತಿದ್ದಂತೆ, ವ್ಯಕ್ತಿಯ ಸುಳಿವು ಸಿಗದೆ ಹೋದ ಸಂದರ್ಭದಲ್ಲಿ ಕುಟುಂಬಸ್ಥರು, ಅವರು ಸತ್ತಿದ್ದಾರೆಂದು ಭಾವಿಸಿ ಮನಸ್ಸು ಗಟ್ಟಿಮಾಡಿಕೊಂಡು ಜೀವನ ನಡೆಸಲು ಶುರು ಮಾಡ್ತಾರೆ. ಆದ್ರೆ ಅಚಾನಕ್ ಸತ್ತಿದ್ದಾರೆ ಎಂದು ಭಾವಿಸಿದ್ದ ವ್ಯಕ್ತಿ ಬದುಕಿದ್ದಾರೆಂಬ ಸುದ್ದಿ ತಿಳಿದ್ರೆ ಆಗುವ ಸಂತೋಷ ಅಷ್ಟಿಷ್ಟಲ್ಲ. ಈಗ ಪೆನ್ಸಿಲ್ವೇನಿಯಾದ ಇಂಥಹದ್ದೇ ಘಟನೆ ನಡೆದಿದೆ. ಸತ್ತಿದ್ದಾಳೆ ಎಂದುಕೊಂಡಿದ್ದ ಮಹಿಳೆ ಹಲವು ವರ್ಷಗಳ ನಂತ್ರ ಸಾವಿರಾರು ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದ್ದಾಳೆ. ಆಕೆ ಕಥೆ ಏನು ಅನ್ನೋದನ್ನು ನಾವಿಂದು ಹೇಳ್ತೇವೆ.

30 ವರ್ಷಗಳ ನಂತ್ರ ಸಿಕ್ಕ ಮಹಿಳೆ : 30 ವರ್ಷಗಳ ಹಿಂದೆ ಪೆನ್ಸಿಲ್ವೇನಿಯಾ (Pennsylvania ) ದ ಮಹಿಳೆ ನಾಪತ್ತೆಯಾಗಿದ್ದಳು. ಆಕೆ ಈಗ ಸಿಕ್ಕಿದ್ದಾಳೆ. ಪೋರ್ಟೊ ರಿಕೊ (Puerto Rico ) ದಲ್ಲಿನ ನರ್ಸಿಂಗ್ ಹೋಂನಲ್ಲಿ ವಾಸಿಸುತ್ತಿದ್ದಾಳೆ ಎಂಬುದು ಕುಟುಂಬಸ್ಥರಿಗೆ ತಿಳಿದಿದೆ. ಕಾಣೆಯಾಗಿದ್ದ ಮಹಿಳೆ ಹೆಸರು 83 ವರ್ಷದ ಪೆಟ್ರೀಷಿಯಾ ಕೊಪ್ಟಾ. ಆಕೆ ತನ್ನ 52ನೇ ವಯಸ್ಸಿನಲ್ಲಿ 1992 ರ ಬೇಸಿಗೆ (Summer) ಯಲ್ಲಿ ಪಿಟ್ಸ್ ಬರ್ಗ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದಳು. 

POSTPARTUM MOOD SWINGS : ಹೆರಿಗೆ ನಂತರ ಮಹಿಳೆ ಅನುಭವಿಸುವ ಮಾನಸಿಕ ಸಮಸ್ಯೆ

ದೂರು ನೀಡಿದ್ದ ಪತಿ : ಎಂದಿನಂತೆ ಕೆಲಸ ಮುಗಿಸಿ ಮನೆಗೆ ಬಂದಿದ್ದ ಮಹಿಳೆಯ ಪತಿ ಬಾಬ್ ಕೊಪ್ಟಾ ಕಣ್ಣಿಗೆ ಪೆಟ್ರೀಚಿಯಾ ಕೊಪ್ಟಾ ಕಾಣಿಸಿರಲಿಲ್ಲ. ಹಾಗಾಗಿ ಅವರು ಆಕೆ ಕಾಣೆಯಾಗಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ್ದರು. ಅನೇಕ ಕಡೆ ಹುಡುಕಿದ್ದ ಬಾಬ್ ಕೊಪ್ಟಾ ನಂತ್ರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕೂಡ, ಪೆಟ್ರೀಷಿಯಾ ಕೊಪ್ಟಾ ಹುಡುಕಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದ್ರೆ ಪೆಟ್ರೀಷಿಯಾ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಹಾಗಾಗಿ ಪೆಟ್ರೀಷಿಯಾ ಸಾವನ್ನಪ್ಪಿದ್ದಾಳೆಂದು ಪೊಲೀಸರು ಘೋಷಣೆ ಮಾಡಿದ್ದರು. 

ಮಾನಸಿಕ ಸಮಸ್ಯೆ: ಪೆಟ್ರೀಷಿಯಾ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರಂತೆ. ಅವರು ಪೋರ್ಟೊ ರಿಕೋಗೆ ಹೋಗೋದಾಗಿ ಪತಿ ಮುಂದೆ ಆಗಾಗ ಹೇಳ್ತಿದ್ದರಂತೆ. ಬಾಬ್ ಕೊಪ್ಟಾ, ಪತ್ನಿಯ ಹುಡುಕಾಟಕ್ಕಾಗಿ ಪೇಪರ್ ನಲ್ಲಿ ಜಾಹೀರಾತು ಕೂಡ ನೀಡಿದ್ದರಂತೆ. ಆದ್ರೆ ಪತ್ನಿಯ ಸುಳಿವು ಮಾತ್ರ ಸಿಕ್ಕಿರಲಿಲ್ಲವಂತೆ. ಪತ್ನಿ ಹುಡುಕಾಟಕ್ಕೆ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದೆ ಎನ್ನುತ್ತಾರೆ ಬಾಬ್ ಕೊಪ್ಟಾ. 

ನರ್ಸಿಂಗ್ ಹೋಮ್ ಸೇರಿದ ಮಹಿಳೆ : ಪೆನ್ಸಿಲ್ವೇನಿಯಾದಿಂದ ಪೋರ್ಟ್ ರಿಕೋಕ್ಕೆ ಬಂದ ಮಹಿಳೆ ಬೀದಿಗಳಲ್ಲಿ ಅಲೆಯುತ್ತಿದ್ದಳಂತೆ. ಸುಮಾರು ದಿನಗಳ ನಂತ್ರ ಆಕೆಯನ್ನು ನರ್ಸಿಂಗ್ ಹೋಮ್ ಗೆ ಸೇರಿಸಲಾಗಿದೆ. ಆದ್ರೆ ಆಕೆ ಆರಂಭದಲ್ಲಿ ತನ್ನ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲವಂತೆ. ನಂತ್ರ ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ಸ್ವಲ್ಪ ಮಾಹಿತಿ ನೀಡಿದ್ದಳಂತೆ. ಆಕೆ ಮಾಹಿತಿ ಆಧಾರದ ಮೇಲೆ ಕುಟುಂಬಸ್ಥರನ್ನು ಸಂಪರ್ಕಿಸಲಾಗಿದೆ. 

ದಿನವಿಡೀ ಒಂದೇ ಸ್ಯಾನಿಟರಿ ಪ್ಯಾಡ್ ಧರಿಸೋ ಅಭ್ಯಾಸವಿದ್ಯಾ? ಹೆಲ್ತ್ ಹಾಳಾಗೋದು ಗ್ಯಾರಂಟಿ

ಡಿಎನ್ಎ (DNA) ಪರೀಕ್ಷೆಯಿಂದ ಹೊರಬಿತ್ತು ಸತ್ಯ : ಪೆಟ್ರೀಷಿಯಾ ಸಹೋದರಿ ಗ್ಲೋರಿಯಾ ಸ್ಮಿತ್ ಮತ್ತು ಆಕೆಯ ಸೋದರಳಿಯನ ಡಿಎನ್‌ಎ ಮಾದರಿಗಳನ್ನು ಪರೀಕ್ಷೆ ಮಾಡಿದ ನಂತ್ರ ಪೆಟ್ರೀಷಿಯಾಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಈ ಎಲ್ಲ ಪ್ರಕ್ರಿಯೆ ನಡೆಯಲು ಸುಮಾರು ಒಂಬತ್ತು ತಿಂಗಳು ಬೇಕಾಯ್ತು ಎಂದು ಮೂಲಗಳು ಹೇಳಿವೆ. ಸಹೋದರಿ ಸಾವನ್ನಪ್ಪಿದ್ದಾಳೆಂದು ನಾವು ಭಾವಿಸಿದ್ದೆವು. ಆದ್ರೆ ಆಕೆ ಜೀವಂತವಾಗಿದ್ದಾಳೆ ಎಂಬುದನ್ನು ತಿಳಿದು ಖುಷಿಯಾಗಿದೆ. ನಾನು ಅನೇಕ ಬಾರಿ, ಪೋರ್ಟೊ ರಿಕೊದ ವಯಸ್ಕರ ಆರೈಕೆ ಮನೆಗಳಿಗೆ ಕರೆ ಮಾಡಿದ್ದೆ. ಆದ್ರೆ ಅಕ್ಕ ಬುದ್ಧಿಮಾಂದ್ಯಳಾಗಿದ್ದ ಕಾರಣ ಆಕೆಯ ಜೊತೆ ಮಾತನಾಡಲು ಸಾಧ್ಯವಾಗಿಲ್ಲವೆಂದು ಸ್ಮಿತ್ ಹೇಳಿದ್ದಾರೆ.