ಮಹಿಳೆಯ ವಯಸ್ಸು ಎಷ್ಟೆಂದು ಕೇಳಿದ್ದಕ್ಕೆ ಡೊಮಿನೋಸ್‌ಗೆ 3 ಲಕ್ಷ ದಂಡ !

ಹುಡುಗೀರ ವಯಸ್ಸು ಕೇಳ್ಬಾರ್ದು, ಹುಡುಗರ ಸ್ಯಾಲರಿ ಕೇಳ್ಬಾರ್ದು ಅನ್ನೋ ಮಾತೇ ಇದೆ. ಯಾಕೆಂದರೆ ಅದೆರಡೂ ತುಂಬಾ ಗೌಪ್ಯವಾಗಿಡುವ ವಿಚಾರ ಅನ್ನೋದು ಸಾಮಾನ್ಯ ನಂಬಿಕೆ. ಆದ್ರೆ ಡೊಮಿನೋಸ್ ಮಾತ್ರ ಸಂದರ್ಶನದಲ್ಲಿ ಮಹಿಳೆಯ ವಯಸ್ಸು ಕೇಳಿ ಯಡವಟ್ಟು ಮಾಡ್ಕೊಂಡಿದೆ. ಆಮೇಲಾಗಿದ್ದೇನು ?

Woman Gets Paid More Than 3 Lakh By Dominos For Being Asked Her Age Vin

ಮಹಿಳೆಯರು ತಮ್ಮ ವಯಸ್ಸಿನ ಬಗ್ಗೆ ಅದೆಷ್ಟು ಗೌಪ್ಯತೆ ಕಾಪಾಡಿಕೊಳ್ತಾರೆ ಅನ್ನೋದು ಹಲವರಿಗೆ ತಿಳಿದಿರುವ ವಿಷಯ. ಸಾರ್ವಜನಿಕವಾಗಿ ತಮ್ಮ ವಯಸ್ಸನ್ನು ಹೇಳಲು ಹಿಂಜರಿಯುತ್ತಾರೆ. ಮಾತ್ರವಲ್ಲ ಚಿಕ್ಕವಯಸ್ಸಿನವರಂತೆ ಕಾಣಿಸಿಕೊಳ್ಳಲು ಹೆವಿ ಮೇಕಪ್ ಮಾಡಿಕೊಳ್ಳುತ್ತಾರೆ. ಆಂಟಿ ಎಂದು ಕರೆದರೆ ಸಿಟ್ಟಿಗೇಳುವ ಮಹಿಳೆಯರೂ ಇದ್ದಾರೆ. ಆದ್ರೆ ಡೊಮಿನೋಸ್ ಮಾತ್ರ ಹುಡುಗಿಯರ ವಯಸ್ಸು ಕೇಳ್ಬಾರ್ದು ಅನ್ನೋ ಅನ್ ರಿಟರ್ನ್‌ ರೂಲ್ಸ್ ಬ್ರೇಕ್ ಮಾಡಿ ಮಹಿಳೆಗೆ ಮೂರು ಲಕ್ಷಕ್ಕೂ ಅಧಿಕ ಮೊತ್ತದ ಹಣ ಪಾವತಿಸುವಂತಾಗಿದೆ. ಒಬ್ಬ ಮಹಿಳೆ ತನ್ನ ವಯಸ್ಸು ಮತ್ತು ಲಿಂಗದ ಆಧಾರದ ಮೇಲೆ ಉದ್ಯೋಗ ಸಂದರ್ಶನದ ಸಮಯದಲ್ಲಿ ತಾರತಮ್ಯಕ್ಕೆ ಒಳಗಾಗಿದ್ದಳು. ಧೈರ್ಯಶಾಲಿ ಮಹಿಳೆ ಅದನ್ನು ಬಿಡಲಿಲ್ಲ, ಬದಲಿಗೆ ಕಂಪನಿಯ ವಿರುದ್ಧ ಹೋರಾಡಿ ಪ್ರಕರಣವನ್ನು ಗೆದ್ದಳು.

ಸಂದರ್ಶನದಲ್ಲಿ ಮಹಿಳೆಯ ವಯಸ್ಸು ಕೇಳಿದ ಡೊಮಿನೋಸ್
ಉತ್ತರ ಐರ್ಲೆಂಡ್‌ನ ಜಾನಿಸ್ ವಾಲ್ಷ್ ಅವರು ಉದ್ಯೋಗ ಸಂದರ್ಶನದ ಭಾಗವಾಗಿ ತಮ್ಮ ವಯಸ್ಸನ್ನು (Age) ಕೇಳಿದ್ದಕ್ಕಾಗಿ ಡೊಮಿನೋಸ್ ಔಟ್‌ಲೆಟ್‌ನಲ್ಲಿ ಮೊಕದ್ದಮೆ ಹೂಡಿದ ನಂತರ ರೂ 3,78,112 ಹಣವನ್ನು ಪಡೆದುಕೊಂಡರು. ಕೌಂಟಿ ಟೈರೋನ್‌ನ ಸ್ಟ್ರಾಬೇನ್‌ನಲ್ಲಿರುವ ಡೊಮಿನೋಸ್ ಔಟ್‌ಲೆಟ್‌ನಲ್ಲಿ ಡೆಲಿವರಿ ಡ್ರೈವರ್ ಹುದ್ದೆಗೆ ವಾಲ್ಷ್ ಅರ್ಜಿ ಸಲ್ಲಿಸಿದರು. ಸಂದರ್ಶನದ ಆರಂಭದಲ್ಲಿ, ಅವಳ ವಯಸ್ಸನ್ನು ಕೇಳಲಾಯಿತು. ಮಹಿಳೆ (Woman) ತನ್ನ ವಯಸ್ಸನ್ನು ಹೇಳಿದ ಬಳಿಕವೂ ಸಂದರ್ಶಕರು ಅದೇ ವಿಚಾರದ ಬಗ್ಗೆ ಮಾತನಾಡುವುದು ಮಹಿಳೆಗೆ ಕಿರಿಕಿರಿಯೆನಿಸಿತು. 

ಅವಳಿ ಮಕ್ಕಳಲ್ಲಿ ಸಾಮ್ಯತೆಯೇ ಇಲ್ಲ, ಕಪ್ಪು, ಬಿಳಿ ಮಗುವಿಗೆ ಜನ್ಮ ನೀಡಿದ ಮಹಿಳೆ !

ವಯಸ್ಸಿನ ಕಾರಣದಿಂದ ಮಹಿಳೆಗೆ ಕೆಲಸ ನೀಡದ ಸಂಸ್ಥೆ
ಅಂತಿಮವಾಗಿ, ವಾಲ್ಷ್ ಅವರು ಕೆಲಸಕ್ಕೆ ಆಯ್ಕೆಯಾಗಲಿಲ್ಲ ಎಂದು ತಿಳಿದುಕೊಂಡರು. ತಮ್ಮ ವಯಸ್ಸಿನ ಕಾರಣದಿಂದ ತಮಗೆ ಕೆಲಸ ಸಿಗಲ್ಲಿಲ್ಲ ಎಂಬುದನ್ನು ಅರ್ಥೈಸಿಕೊಂಡರು.  ನಾನು ತಕ್ಷಣ ಸಂದರ್ಶನದ (Interview) ಬಗ್ಗೆ ಮತ್ತು ನನ್ನ ವಯಸ್ಸಿನ ಪ್ರಶ್ನೆಗೆ ಹಿಂತಿರುಗಿ ಯೋಚಿಸಿದೆ. ನನ್ನ ವಯಸ್ಸು ಒಂದು ಸಮಸ್ಯೆ ಎಂದು ನಾನು ನಂಬುತ್ತೇನೆ ಮತ್ತು ಇದು ಸಂದರ್ಶನ ಸಮಿತಿಯ ನಿರ್ಧಾರದ ಮೇಲೆ ಪರಿಣಾಮ ಬೀರಿದೆ ಎಂದು ಮಹಿಳೆ ಹೇಳಿದರು. ಆಕೆಯ ಸಂದೇಹಗಳನ್ನು ದೃಢೀಕರಿಸಲು, ವಾಲ್ಷ್ ಫೇಸ್‌ಬುಕ್ ಮೂಲಕ ಶಾಖೆಯನ್ನು ಸಂಪರ್ಕಿಸಿದರು ಮತ್ತು ಯಾವ ಕಾರಣಕ್ಕೆ ಕೆಲಸಕ್ಕೆ (Job) ಆಯ್ಕೆಯಾಗಿಲ್ಲ ಎಂಬುದನ್ನು ಕೇಳಿದರು. ಸ್ವಲ್ಪ ಸಮಯದ ನಂತರ, ಸಂದರ್ಶನ ಸಮಿತಿಯ ಸದಸ್ಯರೊಬ್ಬರು ಅವಳನ್ನು ಸಂಪರ್ಕಿಸಿದರು. ಅರ್ಜಿ ಸಲ್ಲಿಸಿದ ಉದ್ಯೋಗವು 18 ಮತ್ತು 30 ರ ನಡುವಿನ ಜನರಿಗೆ ಸರಿಹೊಂದುತ್ತದೆ ಎಂದರು.

ದೂರು ದಾಖಲಿಸಿ ಮೂರು ಲಕ್ಷಕ್ಕೂ ಅಧಿಕ ಪರಿಹಾರ ಪಡೆದ ಮಹಿಳೆ
ನಾನು ಡ್ರೈವರ್‌ಗಳಾಗಿ ಕೆಲಸ ಮಾಡುತ್ತಿರುವ ಪುರುಷರನ್ನು ಮತ್ತು ಮಹಿಳೆಯರನ್ನು  ನೋಡಿದ್ದೇನೆ. ನಾನು ಮಹಿಳೆ ಎಂಬ ಕಾರಣದಿಂದ ಚಾಲಕ ಹುದ್ದೆಗೆ (Driver vacancy) ನನ್ನನ್ನು ಕಡೆಗಣಿಸಲಾಗಿದೆ ಎಂದು ನಾನು ಭಾವಿಸುತ್ತೇನೆ. ಸಂದರ್ಶನಗಳು ನಡೆದ ನಂತರ ಡೊಮಿನೋಸ್ ಡ್ರೈವರ್‌ಗಳಿಗೆ ಜಾಹೀರಾತು ನೀಡುವುದನ್ನು ಮುಂದುವರೆಸಿದೆ ಎಂದು ವಾಲ್ಷ್ ಹೇಳಿದರು. ಶೀಘ್ರದಲ್ಲೇ, ಅವರು ಕಂಪನಿಯ ಮೇಲೆ ಮೊಕದ್ದಮೆ ಹೂಡಿದರು ಮತ್ತು ಶಾಖೆಯ ಮಾಲೀಕರು ಜಸ್ಟಿನ್ ಕ್ವಿರ್ಕ್ ಅವರಿಗೆ ಕ್ಷಮೆಯಾಚನೆಯಾಗಿ ಪರಿಹಾರವನ್ನು ನೀಡಿದರು.

ಮದುವೆಗೂ ಮೊದಲು ಸೆಕ್ಸ್‌, ಹುಡುಗಿಯರ ಏನಂತಾರೆ ?

ಏತನ್ಮಧ್ಯೆ, ಘಟನೆಗೆ ಪ್ರತಿಕ್ರಿಯಿಸಿದ ಡೊಮಿನೊಸ್, 'ಡೊಮಿನೊಸ್ ಫ್ರ್ಯಾಂಚೈಸಿ ಮಾದರಿಯನ್ನು ನಿರ್ವಹಿಸುತ್ತದೆ. ಆದ್ದರಿಂದ ನೇಮಕಾತಿ ಫ್ರ್ಯಾಂಚೈಸಿಯ ಜವಾಬ್ದಾರಿಯಾಗಿದೆ. ಡೊಮಿನೋಸ್ ಶಾಖೆಯಲ್ಲಿ ಈ ಘಟನೆ ನಡೆದಿರುವುದಕ್ಕೆ ಬೇಸರವಿದೆ ಎಂದು ತಿಳಿಸಿದೆ.

Latest Videos
Follow Us:
Download App:
  • android
  • ios