ಮಗುವನ್ನು ಕಂಕುಳಲ್ಲಿ ಇರಿಸಿಕೊಂಡು ಮಹಿಳೆಯೊಬ್ಬಳು ಸಿಗರೇಟ್ ಸೇದುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಸಾರ್ವಜನಿಕವಾಗಿ ಯಾರಾದರೂ ನಮ್ಮ ಸಮೀಪದಲ್ಲೇ ಸಿಗರೇಟ್ ಸೇದುತ್ತಿದ್ದರೆ ಅದರ ಘಾಟನ್ನೇ ಕೆಲವೊಮ್ಮೆ ಸಹಿಸಲಾಗುವುದಿಲ್ಲ, ಸಿಗರೇಟ್ ಸೇದಿ ಚ್ಯೂಯಿಂಗ್ ಗಮ್ ಜಗ್ಗಿಯುತ್ತಾ ಬಂದರು ಸಮೀಪದಲ್ಲಿ ಇರುವವರಿಗೆ ಅದರ ಘಾಟು ಮೂಗಿಗೆ ಹೊಡೆಯುತ್ತಲೇ ಇರುತ್ತದೆ. ಸಿಗರೇಟ್‌ ಸೇದಿದರೆ ಮಾತ್ರವಲ್ಲ, ಅದರ ಹೊಗೆಯ ಸಂಪರ್ಕ ಕೂಡ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಹಲವು ಸಂಶೋಧನೆಗಳಲ್ಲಿ ಸಾಬೀತಾಗಿದೆ. ಅದರಲ್ಲೂ ಪುಟ್ಟ ಮಕ್ಕಳಿಗೆ ಅದು ತುಂಬಾ ಕೆಟ್ಟ ಪರಿಣಾಮ ಬಿರುತ್ತದೆ. ಆದರೆ ಇಲ್ಲೊಬ್ಬಳು, ರೀಲ್ಸ್ ಹುಚ್ಚಿ ಪುಟ್ಟ ಮಗುವನ್ನು ಎತ್ತಿಕ್ಕೊಂಡು ಸಿಗರೇಟ್ ಎಳೆಯುತ್ತಾ ರೀಲ್ಸ್ ಮಾಡುತ್ತಿದ್ದಾಳೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅನೇಕರು ಮಹಿಳೆಯ ಈ ವಿಪರೀತದ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಇತ್ತೀಚಿನ ದಿನಗಳಲ್ಲಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುವುದಕ್ಕೆ ಯಾರ ಜೀವವನ್ನು ಕೂಡ ಅಪಾಯಕ್ಕೆ ತಳ್ಳಲು ಹೇಸುವುದಿಲ್ಲ, ಒಳ್ಳೆಯದೋ ಕೆಟ್ಟದೋ ಟೋಟಲಿ ಫೇಮಸ್ ಆಗಬೇಕು, ಲೈಕ್ಸ್ ವೀವ್ಸ್ ಗಳಿಸಬೇಕು ಎಂಬ ಹುಚ್ಚಿನಿಂದ ಹುಚ್ಚು ಸಾಹಸಕ್ಕಿಳಿದ್ದು ಜೀವವನ್ನೇ ಕಳೆದುಕೊಳ್ಳುತ್ತಾರೆ. ಇಂದು ಮುಂಜಾನೆ ಮಹಾರಾಷ್ಟ್ರದ ಸಂಭಾಜಿನಗರದಲ್ಲಿ ನಡೆದ ಘಟನೆಯೇ ಇದಕ್ಕೆ ಸಾಕ್ಷಿ, ರೀಲ್ಸ್ ಮಾಡುವ ಹುಚ್ಚಿನಲ್ಲಿ ಬೆಟ್ಟದ ಮೇಲೆ ಕಾರು ರಿವರ್ಸ್ ಮಾಡಲು ಹೋಗಿ ಪ್ರಪಾತದಿಂದ ಜಾರಿ ಯುವತಿಯೊಬ್ಬಳು ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಈ ಘಟನೆ ಮಾಸುವ ಮೊದಲೇ ಈಗ ಮಗುವನ್ನು ಕಂಕುಳಲ್ಲಿ ಇರಿಸಿಕೊಂಡು ಮಹಿಳೆಯೊಬ್ಬಳು ಸಿಗರೇಟ್ ಸೇದುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫೋಟೊಶೂಟ್, ರೀಲ್ಸ್‌ ಹುಚ್ಚಿಗೆ ಹೊಂಡದಲ್ಲಿ ಬಿದ್ದು ಪ್ರಾಣ ಕಳೆದುಕೊಂಡ ಬಾಲಕರು!

@DeepikaBhardwaj ಎಂಬ ಟ್ವಿಟ್ಟರ್ ಪೇಜ್‌ನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿರುವ ಖಾತೆದಾರರು ಈ ರೀಲ್ಸ್ ರಾಕ್ಷಸರು ಸುತ್ತಲಿನ ಮಕ್ಕಳ ಪಾಲಿಗೆ ಭಯ ಹುಟ್ಟಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ . ಅಲ್ಲದೇ ಇದು ಆಕೆಯ ಮಗುವಂತು ಅಲ್ಲ, ಆಕೆ ಮಗುವಿಗೆ ಬೇರೆ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾಳೋ ಎಂದು ಆಕೆಯ ಪ್ರೊಫೈಲ್‌ಗೆ ಭೇಟಿ ನೀಡಿದಾಗ ಆಕೆಯ ಪ್ರೊಫೈಲ್ ತುಂಬಾ ಧೂಮಪಾನದ ದೃಶ್ಯಗಳಿವೆ. ಈಕೆ ಈ ದೃಶ್ಯಕ್ಕಾಗಿ ಯಾರದೋ ಮಗವನ್ನು ತೆಗೆದುಕೊಂಡಿದ್ದಾಳೆ ಎಂದಿರುವ ದೀಪಿಕಾ ಭಾರದ್ವಾಜ್ ಅವರು, ಈಕೆಯನ್ನು ಇತ್ತೀಚೆಗಷ್ಟೇ ಉತ್ತರಪ್ರದೇಶದಲ್ಲಿ ಬಂಧಿತಳಾದ ಕುವರಿ ಬೇಗಂಗೆ ಹೋಲಿಕೆ ಮಾಡಿದ್ದಾರೆ. ಈ ಕುವರಿ ಬೇಗಂ ಎಂಬಾಕೆ ತನ್ನ ಯೂಟ್ಯೂಬ್‌ ವೀಡಿಯೋಗಳಲ್ಲಿ ಪುಟ್ಟ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುವುದು ಹೇಗೆ ಎಂದು ಹೇಳಿ ವೀಡಿಯೋ ಮಾಡಿದ್ದಳು. 

ಇದರ ಜೊತೆಗೆ @noworriesbehpy ಎಂಬ ಖಾತೆದಾರರು ಕೂಡ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಮೂರ್ಖತನಕ್ಕೆ ಯಾವುದೇ ಮಿತಿ ಇಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. 

ಬೆಟ್ಟದ ತುದಿಯಲ್ಲಿ ಕಾರ್‌ ರಿವರ್ಸ್‌ ಮಾಡುವ ರೀಲ್‌, 300 ಫೀಟ್‌ ಆಳಕ್ಕೆ ಬಿದ್ದು ಯುವತಿ ಸಾವು ಕಂಡ ವಿಡಿಯೋ ವೈರಲ್‌!

ವೈರಲ್ ಆಗಿರುವ 30 ನಿಮಿಷಗಳ ವೀಡಿಯೋದಲ್ಲಿ ಕಾಣಿಸುವಂತೆ ಈ ಮಾನಸಿಕ ವಿಕೃತಿಯ ಮಹಿಳೆ ಮಗುವನ್ನು ಎತ್ತಿಕೊಂಡು ಒಂದು ಕೈನಲ್ಲಿ ಸಿಗರೇಟು ಎಳೆಯುತ್ತಾ ಯಾವುದೋ ಹಾಡಿಗೆ ರೀಲ್ಸ್ ಮಾಡುತ್ತಿದ್ದಾಳೆ. ಈ ವೇಳೆ ಸಿಗರೇಟಿನ ಘಾಟು ತಡೆಯಲಾಗದೇ ಮಗು ಮುಖ ಒಂತರ ಕಿವುಚುತ್ತಾ ಕೆಮ್ಮುವುದನ್ನು ಕಾಣಬಹುದಾಗಿದೆ. ಒಟ್ಟಿನಲ್ಲಿ ಈ ರೀಲ್ಸ್ ರಾಣಿಯರು ಪುಟ್ಟ ಮಕ್ಕಳನ್ನು ಕೂಡ ಬಿಡದೇ ಹಿಂಸೆ ಮಾಡುತ್ತಿದ್ದು, ಇಂತಹ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. 

Scroll to load tweet…