Asianet Suvarna News Asianet Suvarna News

ಫೋಟೊಶೂಟ್, ರೀಲ್ಸ್‌ ಹುಚ್ಚಿಗೆ ಹೊಂಡದಲ್ಲಿ ಬಿದ್ದು ಪ್ರಾಣ ಕಳೆದುಕೊಂಡ ಬಾಲಕರು!

ಫೋಟೊಶೂಟ್, ರೀಲ್ಸ್ ಮಾಡುವ ಹುಚ್ಚಿಗೆಬಿದ್ದ ಅಪ್ರಾಪ್ತ ಬಾಲಕರಿಬ್ಬರು ಕಲ್ಲು ಕ್ವಾರಿಯ ಹೊಂಡಕ್ಕೆ ಬಿದ್ದು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಮಾಳಮಡ್ಡಿ 2 ನೇ ಕ್ರಾಸ್ ನಿವಾಸಿ ಶ್ರೇಯಸ್ ಸತೀಶ ನವಲೆ ಹಾಗೂ ಸಪ್ತಾಪುರದ ಧ್ರುವ್ ಉಮೇಶ ದಾಸರ್ ಮೃತ ಬಾಲಕರು.

Minor boys died after falling into a deep pit at dharwad district rav
Author
First Published Jun 17, 2024, 8:52 PM IST

ಧಾರವಾಡ (ಜೂ.17): ಫೋಟೊಶೂಟ್, ರೀಲ್ಸ್ ಮಾಡುವ ಹುಚ್ಚಿಗೆಬಿದ್ದ ಅಪ್ರಾಪ್ತ ಬಾಲಕರಿಬ್ಬರು ಕಲ್ಲು ಕ್ವಾರಿಯ ಹೊಂಡಕ್ಕೆ ಬಿದ್ದು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

ಮಾಳಮಡ್ಡಿ 2 ನೇ ಕ್ರಾಸ್ ನಿವಾಸಿ ಶ್ರೇಯಸ್ ಸತೀಶ ನವಲೆ ಹಾಗೂ ಸಪ್ತಾಪುರದ ಧ್ರುವ್ ಉಮೇಶ ದಾಸರ್ ಮೃತ ಬಾಲಕರು.

ಬೆಲೆ ಏರಿಕೆ ಬೆನ್ನಲ್ಲೇ ಚಿಕ್ಕಬಳ್ಳಾಪುರದಲ್ಲಿ ಟೊಮೆಟೊ ಕಳ್ಳರ ಕಾಟ!

ಧಾರವಾಡ ಹೊರವಲಯದ ಮನ್ಸೂರ ಗ್ರಾಮದ‌ ಹೊರವಲಯದಲ್ಲಿನ ಕಲ್ಲು ಕ್ವಾರಿಯ ಹೊಂಡದಲ್ಲಿ ಈ ಘಟನೆ ನಡೆದಿದೆ. ಧಾರವಾಡದ ಕೆಇ ಬೋರ್ಡ್ ಶಾಲೆಯ ವಿದ್ಯಾರ್ಥಿಗಳಾದ 16 ವರ್ಷದ ಆರು ಜನ ಬಾಲಕರೇ ಸೇರಿ ಮನೆಯಲ್ಲಿ ಸ್ನೇಹಿತನ ಮನೆಗೆ ಊಟಕ್ಕೆ ಹೋಗುವಾಗಿ ಹೇಳಿ ಬೆಳಗ್ಗೆ ಉಪಹಾರ ‌ಮಾಡಿ ಮನೆಗಳನ್ನು ಬಿಟ್ಟಿದ್ದರು ಎಲ್ಲರೂ ಸೇರಿ ಔಟಿಂಗ್ ಹೋಗೋ ಪ್ಲ್ಯಾನ್ ಮಾಡಿದ್ದ ಇವರಿಗೆ, ಇತ್ತೀಚೆಗೆ ಸ್ನೇಹಿತರ ಪೈಕಿ ಕೆಲವರು ಈ ಕಲ್ಲು ಕ್ವಾರಿಯಲ್ಲಿ ಹೋಗಿ ಈಜಾಡಿ, ರೀಲ್ಸ್ ಮಾಡಿದ್ದು ತಿಳಿದಿತ್ತು ಅದನ್ನು ನೋಡಿ,ತಾವು ಇದೇ ಸ್ಪಾಟ್ ಆಯ್ದುಕೊಂಡಿದ್ದರು.

 

ಮೈಸೂರು: ಈಜಾಡಲು ಕೆರೆಗೆ ಇಳಿದಿದ್ದ ಬಾಲಕರಿಬ್ಬರು ದಾರುಣ ಸಾವು

ಕಲ್ಲು ಕ್ವಾರಿಯ ಹೊಂಡಕ್ಕೆ ಇಳಿಯಲು ಸ್ಥಳೀಯ ದನಗಾಯಿಯೊಬ್ಬನ ಸಹಾಯ ಪಡೆದಿದ್ದರು.ಈ ಕಲ್ಲು ಕ್ವಾರಿ ತುಂಬಾ ಆಳವಾಗಿದ್ದು ಇತ್ತೀಚೆಗೆ ಸುರಿದ ಮಳೆಗೆ ಹೊಂಡದಲ್ಲಿ ನೀರು ತುಂಬಿತ್ತು. ದೊಡ್ಡ ಪ್ರಪಾತದಂತೆ ಕಾಣುತ್ತಿತ್ತು. ಹೀಗಾಗಿ ಕೆಳಗಿಳಿದ ಆರು ಜನ ಬಾಲಕರ ಪೈಕಿ ನಾಲ್ವರು, ನೀರಿಗಿಳಿದ್ರೆ ಇಬ್ಬರು ಮೊಬೈಲ್ ದಲ್ಲಿ ಫೋಟೊ ಹೊಡೆಯೋ ಪ್ಲ್ಯಾನ್ ಮಾಡಿದ್ದಾರೆ. ಆದರೆ ಈ ವೇಳೆ ತೀರಾ ಆಳಕ್ಕೆ ಹೋದಾಗ ಈಜು ಬಾರದ ಶ್ರೇಯಸ್ ಮತ್ತು ಧ್ರುವ್ ಮುಳುಗಿದ್ದಾರೆ. ಉಳಿದವರು ಹೆದರಿ ಮೇಲ್ಗಡೇ ಓಡಿ ಬಂದು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios