Asianet Suvarna News Asianet Suvarna News

ಸೌಂದರ್ಯವೇ ಮುಳುವಾಯ್ತುಈ ಹೆಣ್ಣಿಗೆ, ಪ್ರಪೋಸ್ ಮಾಡ್ತಿಲ್ಲ ಒಬ್ಬೇ ಒಬ್ಬ ಹುಡುಗ!

ಚೆಂದ ಕಾಣ್ಬೇಕು ಅಂತ ನಾವೆಲ್ಲ ಏನೆಲ್ಲ ಕಸರತ್ತು ಮಾಡ್ತೇವೆ. ಆದ್ರೆ ಈ ಹುಡುಗಿಗೆ ಸುಂದರವಾಗಿರೋದೆ ಕಷ್ಟ ತಂದಿಟ್ಟಿದೆ. ಪ್ರಪೋಸ್ ಮಾಡೋದಿರಲಿ ಈಕೆ ಹುಡುಗ್ರನ್ನು ನೋಡಿದ್ರೂ ಹುಡುಗ್ರು ಈಕೆಯನ್ನು ನೋಡ್ತಿಲ್ಲ.
 

Woman Complains She Is Single Because Of Beauty And Smartness roo
Author
First Published Jun 5, 2024, 3:04 PM IST

ಸುಂದರವಾಗಿ ಕಾಣ್ಬೇಕು ಎನ್ನುವುದು ಎಲ್ಲರ ಕನಸು. ಅದ್ರಲ್ಲೂ ಮಹಿಳೆಯರು ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿವಹಿಸ್ತಾರೆ. ಪ್ರತಿ ದಿನ ಬ್ಯೂಟಿ ಪಾರ್ಲರ್ ಗೆ ಹೋಗುವ ಹುಡುಗಿಯರಿದ್ದಾರೆ. ಮೇಕಪ್ ಇಲ್ಲದೆ ಮನೆಯಿಂದ ಹೊರಗೆ ಬರಲು ಸಾಧ್ಯವೇ ಇಲ್ಲ ಎನ್ನುವವರಿದ್ದಾರೆ. ಬೆಳ್ಳಗೆ, ಹೊಳೆಯುವ ಮೈಬಣ್ಣ, ಸುಂದರ ಕೂದಲು, ಬಳಕುವ ದೇಹ, ಸೂಕ್ತವೆನ್ನಿಸುವ ಎತ್ತರ, ಅಂದದ ಮೈಕಟ್ಟು ಪ್ರತಿಯೊಬ್ಬರ ಆಸೆ. ಎಲ್ಲರಿಗೂ ಇಂಥ ದೇಹ ಸೌಂದರ್ಯ ಸಿಗಲು ಸಾಧ್ಯವಿಲ್ಲ. ಕೆಲವರು ಇದ್ದಿದ್ದರಲ್ಲೇ ತೃಪ್ತಿ ಪಟ್ಟುಕೊಂಡ್ರೆ ಮತ್ತೆ ಕೆಲವರು ಇರೋದನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡ್ತಾರೆ. ಮತ್ತಷ್ಟು ಆಕರ್ಷಕವಾಗಿ ಕಾಣ್ಬೇಕು ಎನ್ನುವ ಕಾರಣಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡ್ಕೊಂಡು ಯಡವಟ್ಟು ಮಾಡಿಕೊಂಡವರಿದ್ದಾರೆ. 

ಅದೇನೇ ಇರಲಿ, ನಿಮ್ಮ ಪಕ್ಕದಲ್ಲಿ ಸುಂದರವಾದ ಹುಡುಗಿ ಹೋಗ್ತಿದ್ದಾಳೆ ಅಂದ್ರೆ ಅವಳನ್ನು ಎರಡು, ಮೂರು ಬಾರಿ ನೋಡಿರ್ತೀರಿ. ಮೇಲಿಂದ ಕೆಳಗೆ ಇಡೀ ದೇಹವನ್ನು ಅಳೆದಿರುತ್ತೀರಿ. ಸುಂದರವಾಗಿರುವ ಹೆಣ್ಣು ಮಕ್ಕಳ ಹಿಂದೆ ಗಂಡು ಮಕ್ಕಳ ಸಾಲಿರುತ್ತದೆ. ಪ್ರಪೋಸ್ (Proposal) ಮಾಡಲು ಹುಡುಗರು ಕ್ಯೂನಲ್ಲಿ ನಿಲ್ತಾರೆ. ಹುಡುಗರ ಕಾಟಕ್ಕೆ ಬೇಸತ್ತು, ಕದ್ದು ಮುಚ್ಚಿ ಓಡಾಡುವ ಹುಡುಗಿಯರಿದ್ದಾರೆ. ಇದೇ ಕಾರಣಕ್ಕೆ ಕೆಲ ಹುಡುಗಿಯರಿಗೆ ಅವರ ಸೌಂದರ್ಯ (Beauty) ವೇ ಮುಳುವಾಗಿದೆ. ಆದ್ರೆ ಈ ಹುಡುಗಿ ಸ್ಥಿತಿ ಭಿನ್ನವಾಗಿದೆ. ಪ್ರೀತಿ ಮಾಡೋಕೆ ಹುಡುಗರು ಬೇಕೆಂದ್ರೂ ಈಕೆಗೆ ಸಿಗ್ತಿಲ್ಲ. ಅವಳೇನು ಕುರೂಪಿಯಲ್ಲ. ಅತೀ ಸುಂದರವಾಗಿರೋದೇ ಈಕೆಗೆ ಮುಳುವಾಗಿದೆ. ಅವಳ ಬಳಿ ಹೋಗಿ ಮಾತನಾಡುವ ಧೈರ್ಯ (Courage) ವನ್ನು ಯಾವ ಹುಡುಗರೂ ಮಾಡ್ತಿಲ್ಲ. ತನ್ನ ಈ ವಿರಹದ ನೋವನ್ನು ಹುಡುಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.

ಈ ಸಮಸ್ಯೆಯಿಂದ ಜೀವನದಲ್ಲಿ ಸಾಕಷ್ಟು ಕಳೆದುಕೊಂಡಿದ್ದೇನೆ: ಶ್ರುತಿ ಹಾಸನ್

ಎಂಟು ತಿಂಗಳಿಂದ ಒಂಟಿಯಾಗಿರುವ ಹುಡುಗಿ : ಆಶ್ಲೇ ಎಂಬ ಹುಡುಗಿ ಕೈ ತೊಳೆದು ಮುಟ್ಟುವಷ್ಟು ಸುಂದರವಾಗಿದ್ದಾಳೆ. ಆಕೆ ಸೌಂದರ್ಯಕ್ಕೆ ಮರುಳಾಗದವರಿಲ್ಲ. ಆದ್ರೆ ಆಕೆ ಜೊತೆ ಡೇಟ್ ಮಾಡುವ ಧೈರ್ಯ ಮಾತ್ರ ಯಾರಿಗೂ ಇಲ್ಲ. ತುಂಬಾ ಸುಂದರವಾಗಿರುವ ಕಾರಣ ಆಕೆ ಬಳಿ ಬರಲು ಪುರುಷರು ಹೆದರುತ್ತಾರೆ. ಸಾಮಾನ್ಯ ಹುಡುಗಿಯರನ್ನು ಹುಡುಗ್ರು ಒಪ್ಪಿಕೊಳ್ತಾರೆ. ಅತೀ ಸುಂದರ ಹುಡುಗಿ ಹಿಂದೆ ಎಷ್ಟೋ ಜನರಿದ್ದಾರೆ ಎನ್ನುವ ಭ್ರಮ ಒಂದ್ಕಡೆ ಆದ್ರೆ ಆಕೆ ನಮ್ಮಂತವರಿಗಲ್ಲ ಬೀಳಲ್ಲ ಎನ್ನುವ ಬಲವಾದ ನಂಬಿಕೆಯಲ್ಲಿ ಹುಡುಗರು, ಸುಂದರ ಹುಡುಗಿ ಸಹವಾಸಕ್ಕೆ ಹೋಗಲ್ಲ. ಆಶ್ಲೇ ಸ್ಥಿತಿ ಕೂಡ ಈಗ ಅದೇ ಆಗಿದೆ.  

ಆಶ್ಲೇ ಕಳೆದ 8 ತಿಂಗಳಿಂದ ಒಂಟಿಯಾಗಿದ್ದಾಳೆ. ಆಕೆಗೆ ಯಾರೂ ಪ್ರಪೋಸ್ ಮಾಡಿಲ್ಲ. ಬಹಳ ದಿನಗಳಿಂದ ಬಾಯ್ ಫ್ರೆಂಡ್ ಇಲ್ಲದೆ ನಾನಿದ್ದೇನೆ ಎಂದು ಆಶ್ಲೇ ಹೇಳಿದ್ದಾಳೆ. ಟೆಕ್ಸಾಸ್‌ನಲ್ಲಿ ವಾಸಿಸುವ ಆಶ್ಲೇ ಫ್ಯಾಷನ್ ಸ್ಟೈಲಿಸ್ಟ್. ಆಕೆ ಬರೀ ಸುಂದರಿ ಮಾತ್ರವಲ್ಲ, ಬುದ್ಧಿವಂತೆ ಕೂಡ ಹೌದು. ಆತ್ಮವಿಶ್ವಾಸದಿಂದ ಕೆಲಸ ಮಾಡ್ತಾಳೆ. ಉತ್ತಮ ಜೀವನ ನಿರ್ವಹಣೆ ಮಾಡ್ತಿದ್ದಾಳೆ. ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಾಳೆ. 

ಕಡಲೆಕಾಯಿ ಸಿಪ್ಪೆ ತೆಗೆಯೋದು ಕಷ್ಟವಲ್ಲ..ರಣವೀರ್ ಬ್ರಾರ್ ಟಿಪ್ಸ್‌ ಇಲ್ಲಿದೆ ನೋಡಿ!

ಸೌಂದರ್ಯದ ಜೊತೆ ಸ್ವತಂತ್ರ ಜೀವನ : ಆಶ್ಲೇ ಸೌಂದರ್ಯದ ಜೊತೆ ಆಕೆ ವೃತ್ತಿಜೀವನ ಅನೇಕ ಪುರುಷರಿಗೆ ಇಷ್ಟವಾಗ್ತಿಲ್ಲ. ಆಕೆ ಸ್ವತಂತ್ರ ಹುಡುಗಿ ಎನ್ನುವ ಕಾರಣಕ್ಕೆ ನನ್ನ ಹತ್ತಿರ ಪುರುಷರು ಬರೋದಿಲ್ಲ. ನಾನು ಅವರಿಗೆ ವಿಚಿತ್ರವಾಗಿ ಕಾಣ್ತೇನೆ. ನನ್ನ ಸೌಂದರ್ಯ ಹಾಗೂ ನನ್ನ ಕೆಲಸವೇ ಹುಡುಗರಿಂದ ನನ್ನನ್ನು ದೂರವಿಟ್ಟಿದೆ. ಯಾರೊಬ್ಬರೂ ನನ್ನನ್ನು ಪ್ರೀತಿಸೋದಿಲ್ಲ ಎಂದು ಆಶ್ಲೇ ಹೇಳಿದ್ದಾಳೆ. ಕಳೆದ 8 ತಿಂಗಳಿಂದ ಒಂಟಿಯಾಗಿರುವ ಆಶ್ಲೇಗೆ ಇದ್ರಿಂದ ಬೇಸರವೇನಿಲ್ಲ. ಒಂಟಿಯಾಗಿದ್ರೂ ನಾನು ಖುಷಿಯಾಗಿದ್ದೇನೆಂದು ಆಕೆ ಹೇಳಿದ್ದಾಳೆ. 
 

Latest Videos
Follow Us:
Download App:
  • android
  • ios