Asianet Suvarna News Asianet Suvarna News

ಈ ಸಮಸ್ಯೆಯಿಂದ ಜೀವನದಲ್ಲಿ ಸಾಕಷ್ಟು ಕಳೆದುಕೊಂಡಿದ್ದೇನೆ: ಶ್ರುತಿ ಹಾಸನ್

ಶ್ರುತಿ ಹಾಸನ್‌ (Shruti Haasan) ಸದ್ಯ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸದಾ ಸುದ್ದಿಯಲ್ಲಿರುವ ಹೆಸರು. ಇತ್ತೀಚೆಗಷ್ಟೇ ಬ್ರೇಕ್‌ಅಪ್ ಮಾಡಿಕೊಂಡ ಆಕೆ ತನ್ನ ಬದುಕಿನ ನೋವಿನ ಬಗ್ಗೆ ಮಾತನಾಡಿದ್ದಾರೆ.

 

Shruti Haasan talks about her Polycystic Ovary Syndrome bni
Author
First Published Jun 4, 2024, 5:25 PM IST

ಶ್ರುತಿ ಹಾಸನ್ (Shruti Haasan) ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ನಟಿ. ಈಕೆ ನಟನೆಯ ವಿಚಾರಕ್ಕೆ ಸುದ್ದಿಯಾದದ್ದಕ್ಕಿಂತಲೂ ಬೇರೆ ಕಾರಣಕ್ಕೆ ಸುದ್ದಿಯಾದದ್ದು ಹೆಚ್ಚು. ತನ್ನ ಬಿಂದಾಸ್ ಜೀವನಶೈಲಿಯಿಂದ ಈಕೆ ಸಾಕಷ್ಟು ಸಲ ಪೇಜ್‌ ೩ ಮ್ಯಾಗಜಿನ್‌ಗಳಲ್ಲಿ ಸುದ್ದಿಯಾದಳು. ಈಕೆಗೆ ಐದಾರು ಜನ ಬಾಯ್ ಫ್ರೆಂಡ್‌ಗಳಾದರು. ಆದರೆ ಅದೃಷ್ಟವೋ ದುರಾದೃಷ್ಟವೋ ಒಬ್ಬರೂ ಜಾಸ್ತಿ ದಿನ ಜೊತೆಗಿರಲಿಲ್ಲ. ಇದರಿಂದ ಈಕೆಗೇನೂ ಹೆಚ್ಚು ಬೇಜಾರಾಂದಗಿಲ್ಲ. ಹಾಗಂತ ಈಕೆಗೆ ಬೇಜಾರೇ ಇಲ್ಲ ಅಂತಲ್ಲ. ತನ್ನ ಬದುಕಿನ ಬೇಜಾರುಗಳ ಬಗ್ಗೆಯೇ ಈ ನಟಿ ಇತ್ತೀಚೆಗೆ ಮಾತನಾಡಿದ್ದಾರೆ. 

ಹೌದು, ಶ್ರುತಿ ಹಾಸನ್ ನಮಗೆಲ್ಲ ಹೊರನೋಟಕ್ಕೆ ಕಾಣೋದು ಬಿಂದಾಸ್ ಹುಡುಗಿಯಾಗಿ. ಆದರೆ ಆಕೆಯೊಳಗೆ ಒಂದು ನೋವಿದೆ. ಎಷ್ಟೋ ದಿನ ಈ ಬಗ್ಗೆ ಹೆಚ್ಚೇನೂ ಬಾಯಿಬಿಡದ ಈಕೆ ಇದೀಗ ತನ್ನ ಆ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಸೂಪರ್‌ಸ್ಟಾರ್ ಕಮಲ್ ಹಾಸನ್ ಹಿರಿ ಮಗಳು ಶ್ರುತಿ ಹಾಸನ್‌, ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸಾಕಷ್ಟು ಬೇಡಿಕೆಯನ್ನೂ ಸೃಷ್ಟಿಸಿಕೊಂಡಿದ್ದಾರೆ. ದೊಡ್ಡ ದೊಡ್ಡ ಸ್ಟಾರ್‌ಗಳ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತ ಕೋಟಿ ಕೋಟಿ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಇದೇ ಶ್ರುತಿ ಹಾಸನ್‌ ನಟನೆಯ ಸಲಾರ್‌ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಪ್ರಶಾಂತ್‌ ನೀಲ್‌ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಪ್ರಭಾಸ್‌ ನಾಯಕನಾಗಿ ನಟಿಸಿದ್ದರು.

ಸಿನಿಮಾ ಮಾತ್ರವಲ್ಲದೆ ವೈಯಕ್ತಿಕ ವಿಚಾರಗಳ ವಿಚಾರಕ್ಕೆ ಬಂದರೆ ನಟಿ ಶ್ರುತಿ ಹಾಸನ್‌ ಇತ್ತೀಚೆಗೆ ಸುದ್ದಿ ಮಾಡಿದ್ದು ಅದರಲ್ಲೂ ಬಾಯ್‌ಫ್ರೆಂಡ್‌ ಬ್ರೇಕಪ್‌ ಬಗ್ಗೆ. ಗೆಳೆಯ ಶಾಂತನು ಹಜಾರಿಕಾ ಜತೆಗೆ ಲಿವ್‌ ಇನ್ ರಿಲೇಷನ್‌ಶಿಪ್‌ನಲ್ಲಿದ್ದ‌ ಶ್ರುತಿ, ಆತನಿಂದ  ಇತ್ತೀಚೆಗೆ ದೂರವಾದರು. ಇಬ್ಬರ ನಡುವಿನ ಪ್ರೀತಿಯೂ ಮುರಿದು ಬಿದ್ದಿತ್ತು. ಆತನ ಜತೆಗಿನ ಫೋಟೋಗಳನ್ನೂ ಅಳಿಸಿ ಹಾಕಿದ್ದರು.  

ಚಿಕ್ಕವನಾಗಿದ್ದಾಗ ಕರೀನಾ ಕಪೂರ್‌ ಜೊತೆ ಗಂಡ ಹೆಂಡ್ತಿ ಆಟ ಆಡ್ತಿದ್ದೆ ಎಂದ ಸ್ಟಾರ್‌ ನಟ!

ಈ ಪ್ರೀತಿ, ಬ್ರೇಕಪ್‌ ವದಂತಿಗಳ ನಡುವೆಯೇ ತಮಗಿರುವ ಆರೋಗ್ಯ ಸಮಸ್ಯೆ ಬಗ್ಗೆಯೂ ಶ್ರುತಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ತನಗೆ ಪಿಸಿಒಎಸ್‌ (Polycystic Ovary Syndrome) ಸಮಸ್ಯೆ ಇದೆ. ಅದರಿಂದ ಬಳಲುತ್ತಿದ್ದೇನೆ ಎಂದು ನೋವಿನ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. 'ನನಗೆ ಬ್ಯಾಡ್ ಪಿರಿಯಡ್ಸ್ ಸಮಸ್ಯೆ ಇದೆ. ಮೊದಲಿನಿಂದಲೂ ಈ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಈಗಲೂ ಆ ನೋವಿನಿಂದ ನರಳುತ್ತಿದ್ದೇನೆ. ಆ ಅವಧಿಯಲ್ಲಿ ಯಾವ ಕೆಲಸವನ್ನೂ ಸರಿಯಾಗಿ ಮಾಡಲಾಗುವುದಿಲ್ಲ. ಆ ಸಮಸ್ಯೆಯಿಂದ ನನ್ನ ಜೀವನದಲ್ಲಿ ಸಾಕಷ್ಟು ಕಳೆದುಕೊಂಡಿದ್ದೇನೆ' ಎಂದು ಪೀರಿಯೆಡ್ಸ್‌ ನೋವನ್ನು ಹೇಳಿಕೊಂಡಿದ್ದಾರೆ.‌

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿನಿಮಾ ಮಾಡುತ್ತಿರುವಾಗ, ಪಿರಿಯಡ್ ಪ್ರಾಬ್ಲಂ ಆದರೆ, ಅದರಂಥ ನರಕ ಇನ್ನೊಂದಿಲ್ಲ. ಅಂಥ ಎಷ್ಟೋ ಸಂದರ್ಭಗಳನ್ನು ನಾನು ಎದುರಿಸಿದ್ದೇನೆ. ಪಿರಿಯಡ್‌ ಸಮಯದಲ್ಲಿಯೇ ಅತಿಯಾದ ನೋವಿನಲ್ಲಿಯೂ ಡಾನ್ಸ್‌ ಮಾಡಿದ್ದೇನೆ ಎಂದಿದ್ದಾರೆ ಬಹುಭಾಷಾ ನಟಿ ಶ್ರುತಿ ಹಾಸನ್‌.

'ಆ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ದೈಹಿಕ ಮಾತ್ರವಲ್ಲದೆ, ಮಾನಸಿಕವಾಗಿಯೂ ಆಕೆ ಬಳಲುತ್ತಾಳೆ. ಮಾಸಾಂತ್ಯದ ದಿನಗಳಲ್ಲಿ ಒಂದು ರೀತಿ ಆಕೆ ತನ್ನ ದೇಹದ ಜತೆಗೆ ಯುದ್ದಕ್ಕೆ ನಿಂತಿರುತ್ತಾಳೆ. ಅದೊಂದು ರೀತಿ ಎರಡು ಅಂಚಿನ ಕತ್ತಿ' ಎಂದೂ ಶ್ರುತಿ ಮುಟ್ಟಿನ ದಿನಗಳ ಬಗ್ಗೆ ಮಾತನಾಡಿದ್ದಾರೆ.

ಸದ್ಯ ಲೋಕೇಶ್‌ ಕನಗರಾಜ್‌ ನಿರ್ದೇಶನದ ಕೂಲಿ ಸಿನಿಮಾದಲ್ಲಿ ರಜನಿಕಾಂತ್‌ ಮಗಳ ಪಾತ್ರದಲ್ಲಿ ಶ್ರುತಿ ಹಾಸನ್‌ ಅಭಿನಯಿಸಲಿದ್ದಾರೆ. 

ಜಯಾ- ಅಮಿತಾಭ್ ಬಚ್ಚನ್‌ಗೆ ಲಾಂಗ್ ಡ್ರೈವ್‌ಗಳಲ್ಲಿ ಜೊತೆಯಾಗುತ್ತಿದ್ರು ರೇಖಾ!
 

Latest Videos
Follow Us:
Download App:
  • android
  • ios