Asianet Suvarna News Asianet Suvarna News

ತಪ್ಪಾದ ಹೇರ್ ಕಟ್: ದೂರುಕೊಟ್ಟ ಮಹಿಳೆಗೆ ಸಿಕ್ತು 2 ಕೋಟಿ ಪರಿಹಾರ

  • ಬ್ಯೂಟಿ ಪಾರ್ಲರ್, ಸಲೂನ್ ಅಂದ್ರೆ ಸುಮ್ನೆ ಅಲ್ಲ, ಎಚ್ಚರ ತಪ್ಪಿದ್ರೆ ಬೈಸ್ಕೊಳೋದು ಖಚಿತ
  • ತಪ್ಪಾಗಿ ಹೇರ್ ಕಟ್ ಮಾಡಿದ್ದಾರೆಂದು ಕೋರ್ಟ್ ಮೊರೆ ಹೋದಾಕೆಗೆ ಗೆಲುವು
Woman awarded Rs 2 crore compensation for wrong haircut treatment by salon at Hotel ITC Maurya dpl
Author
Bangalore, First Published Sep 24, 2021, 4:11 PM IST
  • Facebook
  • Twitter
  • Whatsapp

ದೆಹಲಿ(ಸೆ.24): ಬ್ಯೂಟಿ ಪಾರ್ಲರ್, ಸಲೂನ್‌ಗಳು ದುಬಾರಿಯಾದರೂ ಜನ ಬರುತ್ತಾರೆ. ಅಲ್ಲಿನ ಸೌಂದರ್ಯ ಸೇವೆಗಳ ಕುರಿತು ವಿಶ್ವಾಸವಿಟ್ಟು ಜನ ಹಣ ಪಾವತಿಸುತ್ತಾರೆ. ಹೀಗಿದ್ದರೂ ಸಲೂನ್ ಕೆಲಸಗಾರರು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅವರೇನಾದರೂ ಎಚ್ಚರ ತಪ್ಪಿದ್ದರೆ ಸಲೂನ್‌ಗೆ ಬಂದ ವ್ಯಕ್ತಿ ವಿರೂಪಿಯಾಗಿ ಮರಳಬೇಕಾದೀತು. ಹಾಗಾಗಿ ಇದರಲ್ಲಿ ಆಸಕ್ತಿ, ತಾಳ್ಮೆ ಎರಡೂ ಮುಖ್ಯ.

ಮಹಿಳೆಯೊಬ್ಬರು ಹೇರ್ ಕಟ್ ಮಾಡಿಸಲು ಹೋಗಿ ಆಗಿರೋ ಎಡವಟ್ಟು ಸುದ್ದಿಯಾಗಿದೆ. 2018ರಲ್ಲಿ ನಡೆದ ಘಟನೆ ಕೊನೆಗೂ ಇತ್ಯರ್ಥವಾಗಿದೆ. ಹೇರ್ ಕಟ್ ಮಾಡಿಸೋಕೆ ಬಂದಿದ್ದ ಮಹಿಳೆ(Women)ಡ ಬರೋಬ್ಬರಿ 2 ಕೋಟಿ ಪರಿಹಾರ( compensation) ಪಡೆದಿದ್ದಾರೆ. ಅಷ್ಟಕ್ಕೂ ಆಗಿದ್ದೇನು ? ಲಕ್ಷುರಿ ಹೋಟೆಲ್ ಇಷ್ಟು ದುಬಾರಿ ಮೊತ್ತ ಕೊಡುವಂತಾಗಲು ಕಾರಣವೇನು ?

ಗರ್ಭಾವಸ್ಥೆಯಿಂದ ಹಿಡಿದು ಕೂದಲಿನ ಪೋಷಣೆವರೆಗೆ ಫೋಲಿಕ್ ಆಮ್ಲ ಅತ್ಯಗತ್ಯ

ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ(NCDRC) ಮಹಿಳಾ ಗ್ರಾಹಕರೊಬ್ಬರಿಗೆ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಲಕ್ಷುರಿ ಹೋಟೆಲ್ ಚೈನ್‌ಗೆ ಆದೇಶಿಸಿದೆ. ಮಹಿಳೆ ಕೂದಲು ಸ್ಟೈಲ್ ಮಾಡಲು ಬಂದು ಸಲೂನ್ ಸಿಬ್ಬಂದಿಯಿಂದಾಗಿ ಅದು ಎಡವಟ್ಟಾಗಿದೆ. ನಯವಾಗಿದ್ದ ನೀಳ ಕೂದಲನ್ನು ಮಹಿಳೆ ಕಳೆದುಕೊಂಡಿದ್ದರು. ಇದರಿಂದಾಗಿ ತನ್ನ ನಿರೀಕ್ಷಿತ ಪ್ರಾಜೆಕ್ಟ್‌ಗಳನ್ನು ಅವರು ಕಳೆದುಕೊಂಡಿದ್ದರು. ದೊಡ್ಡ ನಷ್ಟವನ್ನು ಅನುಭವಿಸಿದರು. ಅದು ಅವರ ಜೀವನಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿತು. ಪ್ರಸಿದ್ಧ ಮಾಡೆಲ್ ಆಗಬೇಕೆಂಬ ಅವಳ ಕನಸು ಅಲ್ಲಿಯೇ ಮುಗಿದಿತ್ತು. ಇದಕ್ಕೆಲ್ಲ ಕಾರಣವಾಗಿದ್ದು ತಪ್ಪಾದ ಹೇರ್‌ಕಟ್.

ಅಧ್ಯಕ್ಷ ಆರ್ ಕೆ ಅಗರವಾಲ್ ಮತ್ತು ಸದಸ್ಯ ಡಾ ಎಸ್ ಎಂ ಕಾಂತಿಕರ್ ಅವರ ಪೀಠವು ಮಹಿಳೆಗೆ ಪರಿಹಾರವನ್ನು ನೀಡಿದೆ. ಮಹಿಳೆಯರು ತಮ್ಮ ಕೂದಲ ಆರೈಕೆಗೆ ಹೆಚ್ಚಿನ ಮೊತ್ತವನ್ನು ಖರ್ಚು ಮಾಡುತ್ತಾರೆ. ಭಾವನಾತ್ಮಕವಾಗಿ ಅದರೊಂದಿಗೆ ಜೋಡಿಸಲ್ಪಟ್ಟಿರುತ್ತಾರೆ. 

ದೂರುದಾರ ಮಹಿಳೆ ಆಶ್ನಾ ರಾಯ್ ತನ್ನ ಉದ್ದ ಕೂದಲಿನಿಂದಾಗಿ ಕೂದಲು ಉತ್ಪನ್ನಗಳಿಗೆ ಮಾಡೆಲ್ ಆಗಿದ್ದರು. ಉದ್ದ ಕೂದಲ ರಕ್ಷಣೆಯ ಬ್ರಾಂಡ್‌ಗಳಿಗೆ ಮಾಡೆಲಿಂಗ್ ಮಾಡಿದ್ದರು. ಆದರೆ ಆಕೆಯ ಸೂಚನೆಗಳಿಗೆ ವಿರುದ್ಧವಾಗಿ ಹೇರ್‌ಕಟ್ ಮಾಡಿದ್ದರಿಂದ, ಅವಳು ಹಲವು ಪ್ರಾಜೆಕ್ಟ್ ಕಳೆದುಕೊಳ್ಳಬೇಕಾಯಿತು. ಇದರಿಂದ ಭಾರೀ ದೊಡ್ಡ ನಷ್ಟವನ್ನು ಅನುಭವಿಸಿದ್ದರು. ಜೀವನಶೈಲಿ ಮತ್ತು ಪ್ರಸಿದ್ಧ ಮಾಡೆಲ್ ಆಗುವ ಆಶ್ನಾ ಕನಸು ಭಗ್ನಗೊಂಡಿತ್ತು.

ಅವರು ಹಿರಿಯ ನಿರ್ವಹಣಾ ವೃತ್ತಿಪರರಾಗಿ ಕೆಲಸ ಮಾಡುತ್ತಿದ್ದರು. ಒಳ್ಳೆಯ ಆದಾಯವನ್ನು ಗಳಿಸುತ್ತಿದ್ದರು. ಆಕೆಯ ಕೂದಲನ್ನು ಕತ್ತರಿಸುವಲ್ಲಿ ಆದ ನಿರ್ಲಕ್ಷ್ಯದಿಂದ ತೀವ್ರ ಮಾನಸಿಕ ಕುಸಿತ ಮತ್ತು ಆಘಾತಕ್ಕೆ ಒಳಗಾದರು. ತನ್ನ ಕೆಲಸವನ್ನು ಮಾಡಲಾಗದೆ ಕೊನೆಗೆ ಆಕೆ ತನ್ನ ಉದ್ಯೋಗವನ್ನು ಕಳೆದುಕೊಂಡರು ಎಂದು ಬೆಂಚ್ ಸೆಪ್ಟೆಂಬರ್ 21 ರ ಆದೇಶದಲ್ಲಿ ಹೇಳಿದೆ.

ಅಬ್ಬಬ್ಬಾ! ನಟಿ ಡೈಸಿ ಬೋಪಣ್ಣ ಗುಂಗುರು ಕೂದಲು ಸೀಕ್ರೆಟ್ ಇದಂತೆ!

ಇದಲ್ಲದೇ ಹೋಟೆಲ್, ಐಟಿಸಿ ಮೌರ್ಯ ಕೂಡ ಕೂದಲು ಚಿಕಿತ್ಸೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯ ತೋರಿಸಿದ್ದಾರೆ. ಇದರಿಂದ ಮಹಿಳೆಯ ನೆತ್ತಿ ಸುಟ್ಟುಹೋಗಿತ್ತು. ಸಿಬ್ಬಂದಿಯ ತಪ್ಪಿನಿಂದಾಗಿ ಅಲರ್ಜಿ ಮತ್ತು ತುರಿಕೆ ಇನ್ನೂ ಇದೆ ಎಂದು ಹೇಳಿದ್ದಾರೆ. ದೂರುದಾರರು ವಾಟ್ಸಾಪ್ ಚಾಟ್ ಅನ್ನು ಪರಿಶೀಲಿಸಿದಾಗ, ಹೋಟೆಲ್ ತಮ್ಮ ತಪ್ಪನ್ನು ಒಪ್ಪಿಕೊಂಡಿದೆ. ಉಚಿತ ಕೂದಲಿನ ಚಿಕಿತ್ಸೆಯನ್ನು ನೀಡುವ ಮೂಲಕ ಅದನ್ನು ಮುಚ್ಚಲು ಪ್ರಯತ್ನಿಸಿದೆ ಎನ್ನಲಾಗಿದೆ.

ದೂರುದಾರರಿಗೆ 2,00,00,000 ರೂಪಾಯಿ ಪರಿಹಾರವನ್ನು ನೀಡಬೇಕು. ಆದ್ದರಿಂದ, ಎಂಟು ವಾರಗಳಲ್ಲಿ ದೂರುದಾರರಿಗೆ ಪರಿಹಾರವನ್ನು ಪಾವತಿಸುವಂತೆ ನಿರ್ದೇಶನ ನೀಡುತ್ತೇವೆ ಎಂದು ಕೋರ್ಟ್ ಆದೇಶಿಸಿದೆ. ಏಪ್ರಿಲ್ 2018 ರಲ್ಲಿ ದೂರುದಾರ ಆಶ್ನಾ ರಾಯ್ ಸಂದರ್ಶನಕ್ಕೆ ಒಂದು ವಾರದ ಮೊದಲು ದೆಹಲಿ ಮೂಲದ ಹೋಟೆಲ್‌ನಲ್ಲಿ ಒಂದು ಸಲೂನ್‌ಗೆ ಭೇಟಿ ನೀಡಿದ್ದರು. ನಿರ್ದಿಷ್ಟವಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ ಮುಖವನ್ನು ಮುಚ್ಚುವ ಉದ್ದನೆಯ ಫ್ಲಿಕ್ಸ್ ಮತ್ತು ಕೆಳಗಿನಿಂದ ನಾಲ್ಕು ಇಂಚಿನ ನೇರ ಕೂದಲು ಟ್ರಿಮ್ ಮಾಡಲು ಹೇಳಲಾಗಿತ್ತು.

ಆದರೆ ಅಲ್ಲಿ ಹೇರ್ ಕಟ್ ಮಾಡಿದಾಕೆ ಮಹಿಳೆಯ ಸೂಚನೆಯನ್ನು ಪಾಲಿಸಿಲ್ಲ. ಆಕೆಯ ಸಂಪೂರ್ಣ ಕೂದಲನ್ನು ಕತ್ತರಿಸಿ ಕೇವಲ ನಾಲ್ಕು ಇಂಚು ಮೇಲಕ್ಕೆ ಬಿಟ್ಟಿದ್ದರು. ಇದರಿಂದ ಕೂದಲು ಕೇವಲ ಭುಜಗಳ ತನಕ ತಲುಪಿತ್ತು. ಸಲೂನ್‌ನ ನಿರ್ವಹಣೆಗೆ ಮಹಿಳೆ ಈ ಬಗ್ಗೆ ದೂರು ನೀಡಿದ್ದರು. ಮಹಿಳೆಗೆ ಪರಿಹಾರವಾಗಿ ಉಚಿತ ಕೂದಲಿನ ಚಿಕಿತ್ಸೆಯನ್ನು ನೀಡಲಾಯಿತು. ಇದು ಅಮೋನಿಯಾದಿಂದಾಗಿ ಶಾಶ್ವತ ಹಾನಿಯನ್ನುಂಟುಮಾಡಿದೆ ಎಂದು ಮಹಿಳೆ ಹೇಳಿದ್ದಾರೆ. ಇದರಿಂದಾಗಿ ಆಕೆಯ ನೆತ್ತಿಯಲ್ಲಿ ವಿಪರೀತ ಕಿರಿಕಿರಿಯುಂಟಾಗಿತ್ತು. ಅಂತೂ ಕೊನೆಗೆ ಮಹಿಳೆಗೆ ನ್ಯಾಯ ಸಿಕ್ಕಿದೆ. ದುಬಾರಿ ಸಲೂನ್‌ಗೆ 2 ಕೋಟಿ ದಂಡ ಬಿದ್ದಿದೆ.

 

Follow Us:
Download App:
  • android
  • ios