ಯಾವ ಕಾಂಡೋಮ್ ಬಳಸ್ತೇನೆ ಅಂತಾನೂ ಕೇಳ್ತೀರಾ, ಅಭಿಮಾನಿ ಮೇಲೆ ನಟಿ ಫಾತಿಮಾ ಬಾಬು ಗರಂ

ಮಾಜಿ ಸುದ್ದಿ ನಿರೂಪಕಿ ಮತ್ತು ನಟಿ ಫಾತಿಮಾ ಬಾಬು ತಮ್ಮ ಬೋಲ್ಡ್‌ ಸ್ಟೇಟ್‌ಮೆಂಟ್‌ಗಳಿಂದ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಸದ್ಯ ಅವರು ಫೇಸ್‌ಬುಕ್‌ನಲ್ಲಿ ವೈಯುಕ್ತಿಕ ಪ್ರಶ್ನೆ ಕೇಳಿದ ಅಭಿಮಾನಿಗೆ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ. ನಾನು ಯಾವ ಕಾಂಡೋಮ್ ಬಳಸುತ್ತೇನೆ ಅನ್ನೋದನ್ನೂ ಕೇಳುತ್ತೀರಾ‌ ? ಎಂದು ಪ್ರಶ್ನಿಸಿದ್ದಾರೆ.

Will You Ask What Condom I Use,Fathima Babu Lashes Out At Fans Vin

ನಟ-ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿ ಸಕ್ರಿಯರಾಗಿರುತ್ತಾರೆ. ತಮ್ಮ ಅಭಿಮಾನಿಗಳಿಂದ ಹಲವು ಕಾಂಪ್ಲಿಮೆಂಟ್‌ಗಳನ್ನು ಪಡೆಯುತ್ತಾರೆ. ಕೆಲವೊಮ್ಮೆ ಫ್ಯಾನ್ಸ್‌ ಈ ಸೋಷಿಯಲ್ ಮೀಡಿಯಾ ಮೂಲಕವೇ ಕೆಟ್ಟದಾಗಿ ಕಾಮೆಂಟ್ ಮಾಡುವುದು, ಅಸಂಬದ್ಧ ಪ್ರಶ್ನೆಗಳನ್ನೂ ಕೇಳುವುದೂ ಮಾಡುತ್ತಾರೆ. ಹೀಗೆ ಪರ್ಸನಲ್ ಲೈಫ್ ಬಗ್ಗೆ ಪ್ರಶ್ನೆ ಕೇಳಿದ ಅಭಿಮಾನಿಗೆ ಮಾಜಿ ಸುದ್ದಿ ನಿರೂಪಕಿ ಮತ್ತು ನಟಿ ಫಾತಿಮಾ ಬಾಬು ಮುಟ್ಟಿ ನೋಡುವಂತೆ ಉತ್ತರ ಕೊಟ್ಟಿದ್ದಾರೆ. ನಟಿ ಫಾತಿಮಾ ಬಾಬು ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ಕೆಣಕುವವರನ್ನು ಸುಮ್ಮನೇ ಬಿಡುವುದಿಲ್ಲ. ನೇರವಾಗಿ ತಿರುಗೇಟಿನ ಉತ್ತರವನ್ನು ಕೊಡುತ್ತಾರೆ. ಇತ್ತೀಚೆಗೆ ಅವರ ಫೇಸ್ ಪುಕ್ ಪೇಜ್ ನಲ್ಲಿ ಅನುಚಿತವಾಗಿ ಪ್ರಶ್ನಿಸಿದವರೊಬ್ಬರಿಗೆ ಸರಿಯಾಗೇ ತಿರುಗೇಟು ಕೊಟ್ಟಿದ್ದಾರೆ.

ನಟಿ ಫಾತಿಮಾ ಬಾಬು ತನ್ನನ್ನು ಕೆಣಕಲು ಪ್ರಯತ್ನಿಸುವ ಜನರನ್ನು ಬಿಡುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಸೋಷಿಯಲ್ ಮೀಡಿಯಾದಲ್ಲಾಗಲಿ ಅಥವಾ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲಿ, ತನ್ನನ್ನು ದೂಷಿಸಲು ಪ್ರಯತ್ನಿಸುವವರ ವಿರುದ್ಧ ಅವರು ಯಾವಾಗಲೂ ಧ್ವನಿಯೆತ್ತುತ್ತಾರೆ. ಈಗ, ತನ್ನ ಫೇಸ್‌ಬುಕ್ ಫೋಟೋದ ಕಾಮೆಂಟ್‌ಗಳ ವಿಭಾಗದಲ್ಲಿ ಅನುಚಿತವಾದ ಪ್ರಶ್ನೆಯನ್ನು (Wrong question) ಕೇಳಿದ ವ್ಯಕ್ತಿಯ ಮೇಲೆ ಅವರು ವಾಗ್ದಾಳಿ ನಡೆಸಿದ್ದಾರೆ. 

ಸೇಫ್ ಸೆಕ್ಸ್‌ಗೆ ಕಾಂಡೋಮ್‌ ಬೇಕು ನಿಜ, ಆದ್ರೆ ಇದ್ರ ಬಳಕೆಯಿಂದ ತೊಂದ್ರೆನೂ ಆಗುತ್ತೆ!

ಅನುಚಿತ ಪ್ರಶ್ನೆ ಕೇಳಿದ ವ್ಯಕ್ತಿಗೆ ಫಾತಿಮಾ ಬಾಬು ಖಡಕ್ ಉತ್ತರ
ಅಭಿಮಾನಿಯೊಬ್ಬ ಫಾತಿಮಾ ಬಾಬು ಅವರ ಫೇಸ್‌ಬುಕ್ ಫೋಟೋದ ಕಾಮೆಂಟ್‌ನಲ್ಲಿ 'ನಿಮ್ಮ ಮಕ್ಕಳಿಗೆ ಹಿಂದೂ ಹೆಸರುಗಳನ್ನು ಏಕೆ ಇಡಲಿಲ್ಲ' ಎಂದು ಪ್ರಶ್ನಿಸಿದರು. ಅದಕ್ಕೆ ಫಾತಿಮಾ, 'ಇದರಿಂದ ನನ್ನ ಮಕ್ಕಳಿಗೇನು (Children) ತೊಂದರೆ ಇಲ್ಲ, ನಿಮಗೇಕೆ ತೊಂದರೆ ಆಗುತ್ತಿದೆ' ಎಂದು ಪ್ರಶ್ನಿಸಿದ್ದಾರೆ. ಕಾಮೆಂಟ್ ಮುಂದುವರೆಸಿದ ಅಭಿಮಾನಿ (Fan) 'ನನಗೆ ಕೇಳಬೇಕೆಂದು ಅನಿಸಿದ್ದರಿಂದ ನಾನು ಪ್ರಶ್ನೆಯನ್ನು ಕೇಳಿದೆ' ಎಂದಿದ್ದಾರೆ.

ಅದಕ್ಕೆ ಉತ್ತರಿಸಿದ ಫಾತಿಮಾ ಬಾಬು, ನನ್ನ ಮದುವೆ (Marriage)ಯನ್ನು ಹಿಂದೂ ವ್ಯಕ್ತಿಯೊಂದಿಗೆ ಮಸೀದಿಯಲ್ಲಿ ಮಾಡಿಕೊಂಡಿದ್ದೇನೆ. ಮತ್ತು ನನ್ನ ಮಕ್ಕಳಿಗೆ ಮುಸ್ಲಿಂ ಹೆಸರುಗಳನ್ನು ಇಡಲಾಗಿದೆ. ಇದು ನಿಮಗೆ ಏಕೆ ದೊಡ್ಡ ವಿಷಯವಾಗಿದೆ' ಎಂದಿದ್ದಾರೆ. ಇದಕ್ಕೆ ಅಭಿಮಾನಿ 'ಇದು ಸಾರ್ವಜನಿಕ ವೇದಿಕೆ, ನಾನು ಅನುಚಿತವಾಗಿ ಏನನ್ನೂ ಕೇಳಿಲ್ಲ' ಎಂದು ಹೇಳಿದರು. ಅದಕ್ಕೆ ಫಾತಿಮಾ 'ಯಾವ ಸಾರ್ವಜನಿಕ ವೇದಿಕೆ? ಇದು ಸಾರ್ವಜನಿಕ ವೇದಿಕೆ ಎಂಬ ಕಾರಣಕ್ಕೆ ನಾನು ಯಾವ ಕಾಂಡೋಮ್ ಬಳಸುತ್ತೇನೆ ಎಂದು ಕೇಳುತ್ತೀರಾ?' ಎಂದು ಪ್ರಶ್ನಿಸಿದ್ದಾರೆ. ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ.

ಇತ್ತೀಚೆಗೆ ಬಿಡುಗಡೆಯಾದ ಕೇರಳ ಸ್ಟೋರಿ ಚಲನಚಿತ್ರವು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶವನ್ನು ಉಂಟುಮಾಡುತ್ತಿರುವ ಸಮಯದಲ್ಲಿ ಈ ಪ್ರಶ್ನೆ ಬಂದಿರುವ ಕಾರಣ ಈ ವಿಷಯ ಹೆಚ್ಚು ವೈರಲ್ ಆಗುತ್ತಿದೆ. ಮಾಜಿ ಸುದ್ದಿ ನಿರೂಪಕಿಯಾಗಿರುವ ಫಾತಿಮಾ ಬಾಬು ತಮಿಳು ರಿಯಾಲಿಟಿ ಶೋ, ಬಿಗ್ ಬಾಸ್‌ನ ಎರಡನೇ ಸೀಸನ್‌ನಲ್ಲಿ ಭಾಗವಹಿಸಿದ್ದರು. ಬಿಗ್‌ ಬಾಸ್ ಮನೆಯಲ್ಲಿ ಅವರಿದ್ದಿದ್ದು ಕಡಿಮೆ ಸಮಯವಾದರೂ, ತಮ್ಮ ಕಾಳಜಿಯ ಸ್ವಭಾವದಿಂದ ಹಲವರ ಮನಸ್ಸನ್ನು ಗೆದ್ದಿದ್ದರು.

ಅಬ್ಬಾ..ಹೀಗೂ ಮಾಡ್ತಾರಾ..ಕೋಪದಲ್ಲಿ ಕಾಂಡೋಮ್‌ನಲ್ಲಿ ಸುತ್ತಿದ್ದ ಬಾಳೆಹಣ್ಣು ತಿಂದ!

ಫಾತಿಮಾ ಬಾಬು ದಕ್ಷಿಣ ಭಾರತದ ನಟಿಯಾಗಿದ್ದು, ಅವರು ಪ್ರಧಾನವಾಗಿ ತಮಿಳು, ಮಲಯಾಳಂ ಮತ್ತು ತೆಲುಗು ಸಿನಿಮಾಗಳಲ್ಲಿ ಕೆಲಸ ಮಾಡುತ್ತಾರೆ.  ಫಾತಿಮಾ ಬಾಬು ಅವರು ಮಲಯಾಳಂ ಮುಸ್ಲಿಂ ಕುಟುಂಬದಲ್ಲಿ ಪುದುಚೇರಿಯಲ್ಲಿ ಜನಿಸಿದರು. ನಟಿಯಾಗುವ ಮೊದಲು, ಫಾತಿಮಾ ಬಾಬು ದೂರದರ್ಶನದ ತಮಿಳು ಆವೃತ್ತಿಯಾದ ಡಿಡಿ ಪೊಧಿಗೈಗೆ ಸುದ್ದಿ ವಾಚಕರಾಗಿದ್ದರು. ಅವರು ತಮಿಳು ಚಲನಚಿತ್ರ, ಕಲ್ಕಿ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಆ ನಂತರ ಹಲವು ಸಿನಿಮಾ ಹಾಗೂ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಆ ನಂತರ ಫಾತಿಮಾ, ಬಾಬು ಅವರನ್ನು ಮದುವೆಯಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡರು.

Latest Videos
Follow Us:
Download App:
  • android
  • ios