Asianet Suvarna News Asianet Suvarna News

ಟಾಯ್ಲೆಟ್ ಪೇಪರ್ ಫ್ರಿಜ್‌ನಲ್ಲಿಡ್ತಿದ್ದಾರೆ ಜನ! ಯಾಕೆ ಗೊತ್ತಾ?

ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ವಿಡಿಯೋಗಳು ಹೆಚ್ಚು ಸುದ್ದಿ ಮಾಡ್ತವೆ. ಅಡುಗೆ ಮನೆಗೆ ಸಂಬಂಧಿಸಿದ ಕೆಲ ವಿಡಿಯೋಗಳು ಗಮನ ಸೆಳೆಯುತ್ತವೆ. ಈಗ ಟಾಯ್ಲೆಟ್ ಪೇಪರ್ ವಿಡಿಯೋ ಜನರ ಆಸಕ್ತಿ ಕೆರಳಿಸಿದೆ. ಅದ್ಯಾಕೆ ಫ್ರಿಜ್ ನಲ್ಲಿದೆ ಎಂಬ ಪ್ರಶ್ನೆ ಹುಟ್ಟುಹಾಕಿದೆ.
 

Why People Putting Toilet Paper In Fridge To Remove Odour roo
Author
First Published Nov 10, 2023, 1:01 PM IST

ಶೌಚಾಲಯಕ್ಕೆ ಹೋದಾಗ ನೀರಿಲ್ಲ ಅಂದ್ರೆ? ಒಳಗಿನಿಂದ್ಲೇ ಕೂಗಾಟ ಕೇಳುತ್ತದೆ. ಯಾಕೆಂದ್ರೆ ಭಾರತ ಸೇರಿದಂತೆ ಮಧ್ಯಪ್ರಾಚ್ಯದಿಂದ ಏಷ್ಯಾ ಖಂಡದವರೆಗಿನ ಜನರು ಶೌಚಾಲಯಕ್ಕೆ ಹೋದಾಗ ನೀರಿನ ಬಳಕೆ ಮಾಡ್ತಾರೆ. ಆದ್ರೆ ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಶೌಚಾಲಯದಲ್ಲಿ ನಿಮಗೆ ನೀರು ಸಿಗೋದಿಲ್ಲ. ನೀವು ಸ್ವಚ್ಛತೆಗೆ ನೀರಿನ ಬದಲು ಟಾಯ್ಲೆಟ್ ಪೇಪರ್ ಬಳಸಬೇಕಾಗುತ್ತದೆ. ಖಾಸಗಿ ಅಂಗ ಕ್ಲೀನ್ ಮಾಡೋಕೆ ಟಾಯ್ಲೆಟ್ ಪೇಪರ್ ಬಳಸ್ತಾರಾ ಅಂತಾ ಮೂಗು ಮುರಿಯವ ದಿನಗಳು ಈಗ ಭಾರತದಲ್ಲಿಲ್ಲ. ಯಾಕೆಂದ್ರೆ ಟಾಯ್ಲೆಟ್ ಪೇಪರ್ ಸಂಸ್ಕೃತಿ ಭಾರತಕ್ಕೂ ಬಂದಿದೆ. ಆದ್ರೆ ಭಾರತದಲ್ಲಿ ಜನರು ನೀರಿನ ಬಳಕೆಯನ್ನೇ ಹೆಚ್ಚಾಗಿ ಮಾಡ್ತಿದ್ದಾರೆ.

ಟಾಯ್ಲೆಟ್ (Toilet) ನಲ್ಲಿ ಈ ಪೇಪರ್ (Paper) ಬಳಕೆ ಮಾಡುವ ಕಾರಣ ಅದಕ್ಕೆ ಟಾಯ್ಲೆಟ್ ಪೇಪರ್ ಎಂದೇ ಹೆಸರು ಬಂದಿದೆ. ಅಮೆರಿಕದಲ್ಲಿ 19ನೇ ಶತಮಾನದಿಂದಲೂ ಜನರು ಟಾಯ್ಲೆಟ್ ಪೇಪರ್ ಬಳಸುತ್ತಿದ್ದಾರೆ. ಅಲ್ಲಿನವರಿಗೆ ಇದು ವಿಶೇಷವಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಜನರು ಟಾಯ್ಲೆಟ್ ಪೇಪರ್ ಬಳಸುವ ಹೊಸ ವಿಧಾನವನ್ನು ಕಂಡುಕೊಂಡಿದ್ದಾರೆ. ಜನರು ಟಾಯ್ಲೆಟ್ ಪೇಪರನ್ನು ಟಾಯ್ಲೆಟ್ ನಲ್ಲಿ ಇಡುವ ಬದಲು ಫ್ರಿಜ್‌ (Fridge) ನಲ್ಲಿ ಇಡಲು ಶುರು ಮಾಡಿದ್ದಾರೆ.
ನಿಮಗೆ ಅಚ್ಚರಿ ಎನ್ನಿಸಿದ್ರೂ ಇದು ಸತ್ಯ. ಒಂದೋ ಎರಡೋ ಟಾಯ್ಲೆಟ್ ಪೇಪರನ್ನು ಜನರು ಫ್ರಿಜ್ ನಲ್ಲಿ ಇಡ್ತಿಲ್ಲ. ಭಾರತೀಯ ಮಹಿಳೆಯರು ಬೇಳೆ ಕಾಳು ಹಾಳಾಗ್ಬಾರದು ಎನ್ನುವ ಕಾರಣಕ್ಕೆ ಫ್ರಿಜ್ ನಲ್ಲಿ ಅದನ್ನು ಸಂಗ್ರಹಿಸೋದನ್ನು ನೀವು ನೋಡಿರಬಹುದು. ಆದ್ರೆ ಕೆಲ ಜನರು ಫ್ರಿಜ್ ನಲ್ಲಿ ಬಂಡಲ್ಗಟ್ಟಲೆ ಟಾಯ್ಲೆಟ್ ಪೇಪರ್ ಇಡ್ತಿದ್ದಾರೆ.

90 ನಿಮಿಷದ ಪ್ರಯಾಣ ಇನ್ಮುಂದೆ 7 ನಿಮಿಷದಲ್ಲಿ ಸಾಧ್ಯ: 2026ಕ್ಕೆ ಬೆಂಗ್ಳೂರಲ್ಲಿ ಹಾರಾಡಲಿದೆ ಏರ್‌ ಟ್ಯಾಕ್ಸಿ!

ಟಾಯ್ಲೆಟ್ ಪೇಪರ್ ಫ್ರಿಜ್ ನಲ್ಲಿಡಲು ಇದು ಕಾರಣ : ಸಾಮಾಜಿಕ ಜಾಲತಾಣದಲ್ಲಿ ನೀವು ಜನರು ಟಾಯ್ಲೆಟ್ ಪೇಪರನ್ನು ಫ್ರಿಜ್ ನಲ್ಲಿ ಇಡ್ತಿರುವ ಅನೇಕ ವಿಡಿಯೋಗಳನ್ನು ನೋಡ್ಬಹುದು. ಇದಕ್ಕೆ ಮಹತ್ವದ ಕಾರಣವನ್ನು ಜನರು ಹೇಳ್ತಿದ್ದಾರೆ. ಅವರ ಪ್ರಕಾರ, ಫ್ರಿಜ್ ನಲ್ಲಿ ನೀವು ಟಾಯ್ಲೆಟ್ ಪೇಪರ್ ಇಟ್ಟಲ್ಲಿ ಬಹಳ ಪ್ರಯೋಜನವಿದೆ. ಅನೇಕರ ಮನೆಯ ಫ್ರಿಜ್ ವಾಸನೆಯಿಂದ ಕೂಡಿರುತ್ತದೆ. ಫ್ರಿಜ್ ಬಾಗಿಲು ತೆಗೆಯುತ್ತಿದ್ದಂತೆ ಬರುವ ವಾಸನೆ, ಆಹಾರ ಸೇವನೆ ಮೂಡ್ ಹಾಳು ಮಾಡುತ್ತದೆ. ನೀವು ಟಾಯ್ಲೆಟ್ ಪೇಪರನ್ನು ಫ್ರಿಜ್ ನಲ್ಲಿ ಇಡೋದ್ರಿಂದ ಫ್ರಿಜ್ ನಿಂದ ಬರುವ ವಾಸನೆ ಕಡಿಮೆ ಆಗುತ್ತದೆ. ಅನೇಕ ಬಾರಿ ಫ್ರಿಜ್ ನಲ್ಲಿರುವ ತೇವಾಂಶ ಕೆಟ್ಟ ವಾಸನೆಗೆ ಕಾರಣವಾಗುತ್ತದೆ. ನೀವು ಫ್ರಿಜ್ ನಲ್ಲಿ ಟಾಯ್ಲೆಟ್ ಪೇಪರ್ ಇಟ್ಟರೆ ತೇವಾಂಶವನ್ನು ಅದು ಹೀರಿಕೊಳ್ಳುವ ಜೊತೆಗೆ ವಾಸನೆ ಬರದಂತೆ ತಡೆಯುತ್ತದೆ ಎಂಬುದು ಜನರ ವಾದ. 

ಜಾಗಿಂಗ್‌ ಮಾಡುವಾಗಲೇ ಸಿಇಒಗೆ ಹೃದಯಾಘಾತ, ಸ್ಮಾರ್ಟ್‌ವಾಚ್‌ನಿಂದ ಬದುಕಿತು ಜೀವ!

ಫ್ರಿಜ್ ನಲ್ಲಿಟ್ಟ ಟಾಯ್ಲೆಟ್ ಪೇಪರ್ ಮರು ಬಳಕೆ ಮಾಡ್ಬಹುದಾ? : ಫಿಜ್ ನಲ್ಲಿ ಟಾಯ್ಲೆಟ್ ಪೇಪರ್ ಇಡುವ ಜನರು ಅದನ್ನು ಮರು ಬಳಕೆ ಮಾಡಬಾರದು ಎನ್ನುತ್ತಾರೆ. ಫ್ರಿಜ್ ವಾಸನೆಯನ್ನು ಟಾಯ್ಲೆಟ್ ಪೇಪರ್ ಹೀರಿಕೊಂಡಿದೆ ಎಂದಾದ್ರೆ, ಫಿಜ್ ನಿಂದ ಬರ್ತಿರುವ ವಾಸನೆ ಕಡಿಮೆ ಆಗಿದೆ ಎಂದಾದ್ರೆ ನೀವು ಅದನ್ನು ಶೌಚಾಲಯದಲ್ಲಿ ಬಳಕೆ ಮಾಡಬಾರದು. ಫ್ರಿಜ್ ನಲ್ಲಿರುವ ಕೊಳಕನ್ನು ಅದು ಹೀರಿಕೊಂಡಿರುವ ಕಾರಣ ಅದರ ಬಳಕೆ ಅಪಾಯಕಾರಿ ಎಂದು ತಜ್ಞರು ಹೇಳ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗ್ತಿರುವ ಈ ವಿಡಿಯೋಕ್ಕೆ ಅನೇಕರು ಕಮೆಂಟ್ ಮಾಡಿದ್ದಾರೆ. ಆದ್ರೆ ಫ್ರಿಜ್ ಕ್ಲೀನ್ ಆಗಿಡಲು ಇದಕ್ಕಿಂತ ಅಗ್ಗದ ಪ್ಲಾನ್ ಇಲ್ಲ ಎಂಬುದು ಕೆಲವರ ವಾದವಾಗಿದೆ. ನೀವು ಫ್ರಿಜ್ ನಲ್ಲಿ ಒಂದು ಟಾಯ್ಲೆಟ್ ಪೇಪರ್ ರೋಲ್ ಇಟ್ರೂ ಸಾಕಾಗುತ್ತದೆ. ಫಿಜ್ ಮೂಲೆಯಲ್ಲಿ ಟಾಯ್ಲೆಟ್ ಪೇಪರ್ ರೋಲ್ ಇಡಿ. ಮೂರು ವಾರಕ್ಕೊಮ್ಮೆ ಅದನ್ನು ಬದಲಿಸಿ. 

Follow Us:
Download App:
  • android
  • ios