ಪ್ರಶ್ನೆ : ನನಗೀಗ ನಲವತ್ತೆರಡು ವರ್ಷ ವಯಸ್ಸು. ನನ್ನ ಪೀರಿಯೆಡ್ಸ್ ಸೈಕಲ್ ಮೊದಲಿನಿಂದಲೂ ಸರಿಯಾಗಿಯೇ ಇದೆ. ಆದರೆ ಕಳೆದ ಮೂರು ತಿಂಗಳಿಂದ ನನಗೆ ಪೀರಿಯೆಡ್ಸ್ ಆಗಿಲ್ಲ. ನನ್ನ ಪತಿ ವಿದೇಶದಲ್ಲಿರುತ್ತಾರೆ. ಆರು ತಿಂಗಳಿಗೊಮ್ಮೆ ಬರುತ್ತಾರೆ. ಈ ಮೂರೂವರೆ ತಿಂಗಳಲ್ಲಿ ದೈಹಿಕ ಸಂಪರ್ಕಕ್ಕೆ ಒಳಪಟ್ಟಿಲ್ಲ. ಹಾಗಾಗಿ ನಾನು ಗರ್ಭಿಣಿ ಅಲ್ಲ ಅನ್ನೋದು ಗೊತ್ತಿದೆ. ಈ ಬಗ್ಗೆ ನನ್ನ ಫ್ರೆಂಡ್ಸ್ ಹತ್ರ ಮಾತಾಡಿದೆ. ಅವರು ಹೇಳೋ ಪ್ರಕಾರ ಇದು ಅವಧಿಗೂ ಮುನ್ನ ಆಗೋ ಮೆನೊಪಾಸ್ ನ ಲಕ್ಷಣ. ಇದನ್ನು ಕೇಳಿದಾಗಿಂದ ನನಗೆ ಸಿಕ್ಕಾಪಟ್ಟೆ ಟೆನ್ಶನ್ ಆಗ್ತಿದೆ. ರಾತ್ರಿ ನಿದ್ದೆಯೂ ಇಲ್ಲದ ಹಾಗಾಗಿದೆ. ನಾನು ಈವರೆಗೆ ಈ ಬಗ್ಗೆ ಕಲ್ಪನೆಯೂ ಮಾಡಿರಲಿಲ್ಲ. ಹೀಗೆ ಮೆನೊಪಾಸ್ ಆದಮೇಲೆ ಸೆಕ್ಸ್ ನಲ್ಲಿ ಆಸಕ್ತಿಹೊರಟು ಹೋಗುತ್ತೆ ಅಂತಾರೆ. ನಾವು ದಪ್ಪಗಾಗ್ತಾ ಹೋಗ್ತೀವಿ, ಏನೇನೋ ಸಮಸ್ಯೆಗಳು ಬರುತ್ತವೆ ಅಂತಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ನನಗೆ ಬೇಜಾರು ತರಿಸೋದು ನನ್ನ ಯೌವನ ಇಲ್ಲಿಗೆ ಮುಗಿಯಿತಾ ಅಂತ. ದಯವಿಟ್ಟು ಈ ಗೊಂದಲ ಕ್ಲಿಯರ್ ಮಾಡಿ.

ಮಗಂಗೂ ಗೊತ್ತಿರಲಿ ಮುಟ್ಟಿನ ಗುಟ್ಟು
 

ಉತ್ತರ ; ನನಗನಿಸುವ ಪ್ರಕಾರ ನೀವು ಮೊದಲು ಗೈನಕಾಲಜಿಸ್ಟ್ ಹತ್ರ ಹೋಗಿ ಚೆಕ್ ಮಾಡಿಸುವುದು ಬೆಸ್ಟ್. ಆಗ ನಿಮ್ಮ ಗೊಂದಲಗಳು ಪರಿಹಾರ ಆಗುತ್ತವೆ. ಭಯದಲ್ಲಿ ಬದುಕೋದಕ್ಕಿಂತ ಸರಿಯಾಗಿ ಪರೀಕ್ಷೆ ಮಾಡಿಸಿಕೊಂಡು ಏನಾಗಿದೆ ಅಂತ ನೋಡೋದು ಬೆಸ್ಟ್. ಏಕೆಂದರೆ ಎಷ್ಟೋ ಸಲ ಅನಾರೋಗ್ಯ ಬಂದಾಗ ತೆಗೆದುಕೊಂಡ ಮೆಡಿಸಿನ್ ಪ್ರಭಾವದಿಂದಲೂ ಪೀರಿಯೆಡ್ಸ್ ನಲ್ಲಿ ವ್ಯತ್ಯಾಸ ಆಗೋದಿದೆ. ಈಗಿನ ಲೈಫ್‌ಸ್ಟೈಲ್ ನಲ್ಲಿ ಮೆನೊಪಾಸ್ ಅವಧಿಗೂ ಮುನ್ನ ಬರುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ಹೆಲ್ತ್ ಜರ್ನಲ್ ಒಂದರಲ್ಲಿ ಬಂದಿರುವ ವರದಿಯ ಪ್ರಕಾರ ಗಂಡು ಹೆಣ್ಣಿನ ಫಲವಂತಿಕೆಯ ಅವಧಿ ಕಡಿಮೆಯಾಗುತ್ತಿದೆ. ಯಾವುದೋ ದೇಶದಲ್ಲಿ ಇನ್ನೂ ಇಪ್ಪತ್ತೈದರ ಹುಡುಗಿಗೆ ಮೆನೊಪಾಸ್ ಆದ ಸುದ್ದಿಯಿದೆ. ಹಾಗಾಗಿ ಇದು ಪ್ರಿಮೆಚ್ಯೂರ್ ಮೆನೊಪಾಸ್ ಆಗಿರುವ ಸಾಧ್ಯತೆಯೂ ಇದೆ. ಮೆನೊಪಾಸ್ ನಲ್ಲಿ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಿದ್ರಾಹೀನತೆ, ಮಾನಸಿಕ ಸಏಕೆಂದರೆ ಎಷ್ಟೋ ಸಲ ಅನಾರೋಗ್ಯ ಬಂದಾಗ ತೆಗೆದುಕೊಂಡ ಮೆಡಿಸಿನ್ ಪ್ರಭಾವದಿಂದಲೂ ಪೀರಿಯೆಡ್ಸ್ ನಲ್ಲಿ ವ್ಯತ್ಯಾಸ ಆಗೋದಿದೆ. ಈಗಿನ ಲೈಫ್‌ಸ್ಟೈಲ್ ನಲ್ಲಿ ಮೆನೊಪಾಸ್ ಅವಧಿಗೂ ಮುನ್ನ ಬರುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ಹೆಲ್ತ್ ಜರ್ನಲ್ ಒಂದರಲ್ಲಿ ಬಂದಿರುವ ವರದಿಯ ಪ್ರಕಾರ ಗಂಡು ಹೆಣ್ಣಿನ ಫಲವಂತಿಕೆಯ ಅವಧಿ ಕಡಿಮೆಯಾಗುತ್ತಿದೆ.ಮಸ್ಯೆ, ಋತುಚಕ್ರದಲ್ಲಿ ಏರುಪೇರು, ಅತಿಯಾದ ಸ್ರಾವ ಹೀಗೆ ಒಬ್ಬೊಬ್ಬರಿಗೆ ಒಂದೊಂದು ಲಕ್ಷಣಗಳಿರುತ್ತವೆ. ಇವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ.
 

ಒಂದು ವೇಳೆ ನಿಮಗೆ ಪ್ರಿಮೆಚ್ಯೂರು ಮೆನೊಪಾಸ್ ಆಗಿದ್ದರೂ ಭಯ ಪಡಬೇಡಿ. ಈ ಎಲ್ಲ ಸಮಸ್ಯೆಗಳು ಕೆಲವು ಕಾಲದವರೆಗೆ ಮಾತ್ರ ಇರುತ್ತವೆ. ಆಮೇಲೆ ಸರಿ ಹೋಗುತ್ತವೆ. ಚೆನ್ನಾಗಿ ವ್ಯಾಯಾಮ ಮಾಡುತ್ತಿದ್ದ, ಆರೋಗ್ಯಕರ ಆಹಾರ ಸೇವನೆ ಮಾಡುತ್ತಿದ್ದರೆ ದಪ್ಪಗಾಗಲ್ಲ. ಇದರ ಹೆಚ್ಚಿನ ಸಮಸ್ಯೆಗಳು ನಿವಾರಣೆಯಾಗುತ್ತವೆ.

 

ಗರ್ಭಪಾತಕ್ಕೆ ಕಾರಣವಾಗುವ ಗರ್ಭಕಂಠದ ಅಸಮರ್ಥತೆ!

 

ಮೆನೊಪಾಸ್ ನಂತರ ಸೆಕ್ಸ್ ಲೈಫ್ ಮುಗಿಯಿತು ಅಂತ ಅಂದುಕೊಳ್ಳಲೇ ಬೇಡಿ. ಇದನ್ನು ಕರೆಕ್ಟಾಗಿ ಮ್ಯಾನೇಜ್ ಮಾಡಿದರೆ ಎಲ್ಲ ಸರಿಹೋಗುತ್ತು. ಈ ಸಂದರ್ಭದಲ್ಲಿ ಆ ಭಾಗದಲ್ಲಿ ಲ್ಯುಬ್ರಿಕೆಂಟ್ ಆಗಲ್ಲ. ಏಕೆಂದರೆ ಈಸ್ಟ್ರೋಜಿನ್ ಪ್ರಮಾಣ ಗಣನೀಯವಾಗಿ ಇಳಿದಿರುತ್ತೆ. ಈ ಸಮಯದಲ್ಲಿ ಬಳಸುವ ಅನೇಕ ಲ್ಯೂಬ್ರಿಕೆಂಟ್ ಗಳು ಜೆಲ್ ಗಳು ಸಿಗುತ್ತವೆ. ಇದರಿಂದ ಆ ಭಾಗದಲ್ಲಿ ಸ್ಮೂಥ್ ಫೀಲಿಂಗ್‌ ಬಂದು ಮೊದಲಿನಷ್ಟು ಅಲ್ಲದೇ ಹೋದರೂ ಲೈಂಗಿಕ ಸುಖ ಸಿಕ್ಕೇ ಸಿಗುತ್ತೆ. ಚೆನ್ನಾಗಿ ಎಕ್ಸರ್ ಸೈಸ್ ಮಾಡೋದರಿಂದಲೂ ನಿಮ್ಮ ಸೆಕ್ಸ್ ಲೈಪ್ ಚೆನ್ನಾಗಿರುತ್ತದೆ.

 

ಮುಖದ ತುಂಬ ಮೊಡವೆಗಳಿದ್ದ ಹುಡುಗಿ ಮನೋವೈದ್ಯರ ಬಳಿ ಬಂದದ್ಯಾಕೆ?

 

ಪ್ರಶ್ನೆ : ಮುಂದಿನ ತಿಂಗಳು ನಮ್ಮ ಮದುವೆ. ಆಗ ನನ್ನ ಪೀರಿಯೆಡ್ಸ್ ಆಗಿ ಒಂದು ವಾರ ಆಗುತ್ತೆ. ಈ ಟೈಮ್ ನಲ್ಲಿ ಸೆಕ್ಸ್ ಮಾಡೋದು ಸೇಫಾ, ನಾನು ಏನಾದರೂ ಮೆಡಿಸಿನ್ ತಗೊಳ್ಳಬೇಕಾ?

 

ಉತ್ತರ : ಒಂದು ಜನರಲ್ ಲೆಕ್ಕಾಚಾರ ಏನೆಂದರೆ ಪ್ರೀರಿಯೆಡ್ಸ್ ಆದ ಆರಂಭದ ಹತ್ತು ದಿನಗಳು ಹಾಗೂ ಕೊನೆಯ ಹತ್ತು ದಿನಗಳಲ್ಲಿ ಸೆಕ್ಸ್ ಸೇಫ್. ಮಕ್ಕಳ ಆಲೋಚನೆ ಇಲ್ಲದಿದ್ದರೆ ಮಧ್ಯದ ವಾರ ಮಾತ್ರ ಗರ್ಭ ನಿರೋಧಕ ಅಥವಾ ಕಾಂಡೋಮ್ ಬಳಸಬೇಕು ಅಂತಾರೆ. ಆದರೆ ಇದನ್ನು ಹಂಡ್ರೆಡ್‌ ಪರ್ಸೆಂಟ್ ನಂಬಲಾಗದು. ಒಬ್ಬೊಬ್ಬರ ಫಲವತ್ತತೆಯ ಅವಧಿ ಒಂದೊಂದು ಥರ ಇರುತ್ತೆ. ನಮ್ಮ ಓವುಲೇಶನ್ ಅವಧಿ ಯಾವಾಗಾಗುತ್ತೆ ಅನ್ನೋದನ್ನು ನೋಡಿಕೊಂಡು ಯಾವುದು ಸೇಫ್ ಟೈಮ್ ಅಂತ ನೋಡಬಹುದು. ಯಾವುದಕ್ಕೂ ನೀವೊಮ್ಮೆ ಗೈನಕಾಲಜಿಸ್ಟ್ ಬಳಿ ಹೋಗಿ ನಿಮ್ಮ ಗೊಂದಲ ಪರಿಹರಿಸಿಕೊಳ್ಳುವುದು ಉತ್ತಮ.