Tribal Tradition : ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡೊದಂತೆ ಈ ಮಹಿಳೆಯರು!
ಪ್ರಪಂಚದಾದ್ಯಂತ ಅನೇಕ ಬುಡಕಟ್ಟು ಜನಾಂಗ ವಾಸಿಸುತ್ತಿದೆ. ಪ್ರತಿಯೊಂದು ಜನಾಂಗವೂ ತನ್ನದೇ ಆದ ಪದ್ಧತಿಯನ್ನು ಈಗ್ಲೂ ಅನುಸರಿಸುತ್ತಿದೆ. ಕೆಲ ಜನಾಂಗದಲ್ಲಿ ಚಿತ್ರವಿಚಿತ್ರ ಪದ್ಧತಿ ಜಾರಿಯಲ್ಲಿದೆ. ಸ್ನಾನ ಮಾಡದ ಜನರು ಕೂಡ ಇಲ್ಲಿದ್ದಾರೆ.
ಇಂದಿನ ಕಾಲದಲ್ಲಿ ಜನರು ತಮ್ಮ ಸಂಪ್ರದಾಯ, ಆಚಾರ-ವಿಚಾರಗಳನ್ನು ಮರೆತು ಆಧುನಿಕ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಆದರೆ ಇಂದಿಗೂ ಕೆಲ ಬುಡಕಟ್ಟು ಜನಾಂಗದವರು ತಮ್ಮ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಅನೇಕ ಬುಡಕಟ್ಟು ಜನಾಂಗವಿದೆ. ಆ ಜನಾಂಗದವರು ತಮ್ಮದೇ ಸಂಪ್ರದಾಯ, ಪದ್ಧತಿಯನ್ನು ಅಳವಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಕಾಲ ಎಷ್ಟೇ ಬದಲಾದ್ರೂ ಅವರ ಜೀವನಶೈಲಿ ಬದಲಾಗಿಲ್ಲ.
ಸಾಮಾನ್ಯವಾಗಿ ನಾವೆಲ್ಲ ಪ್ರತಿ ದಿನ ಸ್ನಾನ (Bath) ಮಾಡ್ತೇವೆ. ಜನರು ಎಷ್ಟೇ ಸೋಮಾರಿ (Lazy) ಯಾಗಿದ್ರೂ ಸ್ನಾನ ಮಾಡೋದನ್ನು ಬಿಡೋದಿಲ್ಲ. ಒಂದೆರಡು ದಿನ ಸ್ನಾನ ಮಾಡದೆ ಹೇಗೋ ಇರಬಹುದು. ಆದ್ರೆ ವಾರಗಳ ಕಾಲ ಸ್ನಾನ ಮಾಡದೆ ಇರೋದು ಅಸಾಧ್ಯವಾದ ಮಾತು. ಆದ್ರೆ ಬುಡಕಟ್ಟು (Tribe) ಜನಾಂಗವೊಂದರ ಮಹಿಳೆಯರು ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡ್ತಾರೆ ಅಂದ್ರೆ ನೀವು ನಂಬಲೇಬೇಕು. ತಮ್ಮ ಜೀವನ (Life) ದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುವ ಬುಡಕಟ್ಟು ಮಹಿಳೆಯರ ಬಗ್ಗೆ ನಾವಿಂದು ನಿಮಗೆ ಹೇಳ್ತೆವೆ.
ನಿಮಗೆ ಅಚ್ಚರಿ ಎನ್ನಿಸಿದ್ರೂ ಇದು ಸತ್ಯ. ಹಿಂಬಾ (Himba) ಹೆಸರಿನ ಬುಡಕಟ್ಟು ಜನಾಂಗದ ಮಹಿಳೆಯರು ಸ್ನಾನ ಮಾಡೋದೇ ಜೀವನದಲ್ಲಿ ಒಮ್ಮೆ. ಹಿಂಬಾ ಬುಡಕಟ್ಟು ಜನರು ಆಫ್ರಿಕಾದ ಮರುಭೂಮಿಗಳಲ್ಲಿ ವಾಸಿಸುತ್ತಿದ್ದಾರೆ. ಹಿಂಬಾ ಜನಾಂಗದವರು ಪ್ರಪಂಚದಿಂದ ಸಂಪೂರ್ಣವಾಗಿ ದೂರವಿದ್ದಾರೆ. ಹಿಂಬಾ ಬುಡಕಟ್ಟು ಜನರು ತಮ್ಮ ಜೀವನೋಪಾಯಕ್ಕಾಗಿ ಹಸು, ಕುರಿ ಮತ್ತು ಮೇಕೆಗಳನ್ನು ಸಾಕುತ್ತಾರೆ. ಈ ಜನರು ಮದುವೆ ಮತ್ತು ವಿಶೇಷ ಸಮಾರಂಭಗಳಲ್ಲಿ ಮಾಂಸದ ಆಹಾರವನ್ನು ಸೇವನೆ ಮಾಡಲು ಆದ್ಯತೆ ನೀಡ್ತಾರೆ.
ಮೊದಲ ಬಾರಿಗೆ ತಾಯಿಯಾಗುವ ಮಹಿಳೆ ಈ ತಪ್ಪು ಮಾಡಬಾರದು !
ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ : ಬೇಸಿಗೆ ಬಂತೆಂದ್ರೆ ನಾವು ದಿನಕ್ಕೆ ಎರಡು ಬಾರಿ ಸ್ನಾನ ಮಾಡ್ತೆವೆ. ಇಡೀ ಬೇಸಿಗೆಯಲ್ಲಿ ಸ್ನಾನ ಮಾಡದೆ ಹೋದ್ರೆ ದೇಹದಿಂದ ಗಬ್ಬು ವಾಸನೆ ಬರಲು ಶುರುವಾಗುತ್ತದೆ. ಆದ್ರೆ ಈ ಹಿಂಬಾ ಜನಾಂಗದ ಮಹಿಳೆಯರು ಬೇಸಿಗೆಯಿರಲಿ ಚಳಿಗಾಲವಿರಲಿ ಸ್ನಾನ ಮಾಡೋದಿಲ್ಲ. ಅವರು ಮದುವೆ ದಿನದಂದು ಮಾತ್ರ ಸ್ನಾನ ಮಾಡ್ತಾರೆ. ಸ್ನಾನ ಮಾಡೋದು ಮಾತ್ರವಲ್ಲ ಈ ಮಹಿಳೆಯರು ಬಟ್ಟೆ ಕೂಡ ಒಗೆಯೋದಿಲ್ಲ ಅಂದ್ರೆ ನಿಮಗೆ ಅಚ್ಚರಿ ಆಗಬಹುದು.
ಸ್ವಚ್ಛತೆಗೆ ಮಹಿಳೆಯರು ಏನು ಮಾಡ್ತಾರೆ? : ನೀರಿನಲ್ಲಿ ಮಹಿಳೆಯರು ಸ್ನಾನ ಮಾಡೋದಿಲ್ಲ ನಿಜ. ಆದ್ರೆ ಸ್ವಚ್ಛತೆ ಬಗ್ಗೆ ಅವರು ಗಮನ ಹರಿಸುತ್ತಾರೆ. ಗಿಡಮೂಲಿಕೆಯನ್ನು ಅವರು ಸ್ವಚ್ಛತೆಗೆ ಬಳಸ್ತಾರೆ. ಗಿಡಮೂಲಿಕೆಯನ್ನು ನೀರಿನಲ್ಲಿ ಕುದಿಸುವ ಮಹಿಳೆಯರು ಅದ್ರ ಹಬೆಯಿಂದ ತಮ್ಮ ದೇಹವನ್ನು ಕ್ಲೀನ್ ಮಾಡಿಕೊಳ್ತಾರೆ. ಈ ಗಿಡಮೂಲಿಕೆ ಹಬೆ ದೇಹವನ್ನು ಸ್ವಚ್ಛಗೊಳಿಸುವ ಜೊತೆಗೆ ದೇಹದಿಂದ ವಾಸನೆ ಬರದಂತೆ ತಡೆಯುತ್ತದೆ. ಹಿಂಬಾ ಬುಡಕಟ್ಟು ಮಹಿಳೆಯರು ಬಿಸಿಲಿನಿಂದ ದೇಹವನ್ನು ರಕ್ಷಿಸಲು ವಿಶೇಷ ಲೋಷನ್ ಹಚ್ಚಿಕೊಳ್ತಾರೆ. ಕಬ್ಬಿಣ ಮತ್ತು ಪ್ರಾಣಿಗಳ ಕೊಬ್ಬಿನಂತಹ ಖನಿಜಗಳಿಂದ ಈ ಲೋಷನ್ ತಯಾರಿಸಲಾಗುತ್ತದೆ. ಈ ಲೋಷನ್ ಗೆ ಹೆಮಟೈಟ್ ಬಳಸಲಾಗುತ್ತದೆ. ಹೆಮಟೈಟ್ ಧೂಳಿನ ಕಾರಣ ಅವರ ಚರ್ಮದ ಬಣ್ಣ ಕೆಂಪಾಗುತ್ತದೆ. ಈ ಲೋಷನ್ ಬಿಸಿಲಿನಿಂದ ಮಾತ್ರವಲ್ಲದೆ ಕೀಟಗಳಿಂದ ದೇಹವನ್ನು ರಕ್ಷಿಸುತ್ತದೆ.
ಭಾರತದ ಈ ಸುಂದರ ನಗರಗಳನ್ನು ನೋಡಲು ಭಾರತೀಯರಿಗೇ ಬೇಕು ಪರವಾನಗಿ!
ಹಿಂಬಾ ಮಹಿಳೆಯರ ಸ್ಟೈಲ್ ಹಾಗೂ ಕೆಲಸ : ಹಿಂಬಾ ಮಹಿಳೆಯರ ಕೇಶ ವಿನ್ಯಾಸ ಎಲ್ಲರ ಗಮನ ಸೆಳೆಯುತ್ತದೆ. ಅವರು ವಿಭಿನ್ನ ಹೇರ್ ಸ್ಟೈಲ್ ಮಾಡಿಕೊಳ್ತಾರೆ. ಹಾಗೆಯೇ ಪುರುಷರಿಗಿಂತ ಹೆಚ್ಚು ಕೆಲಸವನ್ನು ಹಿಂಬಾ ಬುಡಕಟ್ಟು ಜನಾಂಗದ ಮಹಿಳೆಯರು ಮಾಡ್ತಾರೆ. ನೀರು ತರುವುದು, ದನ ಕಾಯುವುದು, ದನಗಳಿಗೆ ಮೇವು ತರುವುದು ಸೇರಿದಂತೆ ಅನೇಕ ಕೆಲಸವನ್ನು ಹಿಂಬಾ ಬುಡಕಟ್ಟು ಜನಾಂಗದ ಮಹಿಳೆಯರೇ ಮಾಡ್ತಾರೆ.