Asianet Suvarna News Asianet Suvarna News

ಮಾತಿನ ಮಲ್ಲಿಯರಾ ಹುಡುಗೀರು! ಏರ್‌ಹೋಸ್ಟೆಸ್ ಆಗಿ ಮಹಿಳೆಯರೇ ಯಾಕೆ ?

ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭ ನೀವು ನೋಡಿರಬಹುದು. ವಿಮಾನಯಾನದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ನೇಮಕಗೊಂಡಿರತ್ತಾರೆ. ನಿಮ್ಮ ಸಣ್ಣಪುಟ್ಟ ಸಮಸ್ಯೆಗೂ ಸ್ಪಂದಿಸುತ್ತಾರೆ. ಆದರೆ ಹೀಗೆ ಏರ್‌ಲೈನ್ಸ್‌ಗಳಲ್ಲಿ ಮಹಿಳಾ ಸಿಬ್ಬಂದಿಯನ್ನೇ ನೇಮಿಸುವುದು ಯಾಕೆಂದು ನಿಮಗೆ ತಿಳಿದಿದೆಯೇ ? 

Why Do Airlines Hire Female Staff More Than Men As Air Hostess Vin
Author
First Published Oct 4, 2022, 2:52 PM IST

ಹೆಣ್ಣು ಅಬಲೆಯೆಂಬ ಕಾಲ ಬದಲಾಗಿದೆ. ಈಗ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಸಹ ಮಿಂಚುತ್ತಿದ್ದಾರೆ. ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ವಿಜ್ಞಾನ, ಶಿಕ್ಷಣ, ಕ್ರೀಡೆ, ದೇಶ ರಕ್ಷಣೆ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಹಾಗೆಯೇ ಕೆಲವೊಂದು ವಿಭಾಗಗಳಲ್ಲಿ ಹೆಣ್ಣು ಮಕ್ಕಳಿಗೇ ಹೆಚ್ಚಿನ ಪ್ರಾಶಸ್ತ್ಯವಿದೆ. ವಿಮಾನಯಾನದಲ್ಲಿ ಏರ್‌ಹೋಸ್ಟೆಸ್ ಆಗಿ ಮಹಿಳೆಯರನ್ನೇ ನೇಮಿಸಲಾಗುತ್ತದೆ. ಮಹಿಳೆಯರ ಸೌಂದರ್ಯದ ಹೊರತಾಗಿ, ಈ ಉದ್ಯಮದಲ್ಲಿ ಮಹಿಳೆಯರಿಗೆ ಉದ್ಯೋಗಗಳಿಗಾಗಿ ಅವರನ್ನು ಹೆಚ್ಚು ಪರಿಪೂರ್ಣ ಆಯ್ಕೆಯನ್ನಾಗಿ ಮಾಡುವ ಹಲವು ಕಾರಣಗಳಿವೆ. ಅದೇನೆಂದು ತಿಳಿದುಕೊಳ್ಳೋಣ.

ವಿಮಾನದಲ್ಲಿ ಪುರುಷರು (Men) ಮತ್ತು ಮಹಿಳೆಯರು (ಏರ್ ಹೋಸ್ಟೆಸ್) ಇಬ್ಬರನ್ನೂ ನೇಮಿಸಿಕೊಳ್ಳಲಾಗುತ್ತದೆ. ಆದರೆ ಮಹಿಳಾ ಸಿಬ್ಬಂದಿಗಳ ಸಂಖ್ಯೆ ಹೆಚ್ಚು.  ವಾಯುಯಾನ ವಲಯವು ಪುರುಷರನ್ನು ಹೆಚ್ಚಾಗಿ ಏರ್‌ಹೋಸ್ಟೆಸ್ ಆಗಿ ನೇಮಿಸಿಕೊಳ್ಳುವುದಿಲ್ಲ. ಫ್ಲೈಟ್ ಅಟೆಂಡೆಂಟ್‌ಗಳಾಗಿ ಪುರುಷರನ್ನು ನೇಮಿಸಿಕೊಳ್ಳುವ ಕಂಪನಿಗಳು ಹೆಚ್ಚಿನ ಪ್ರಯತ್ನದ ಅಗತ್ಯವಿರುವ ಸಂದರ್ಭಗಳಲ್ಲಿ ಮಾತ್ರ ಅವರನ್ನು ಆಯ್ಕೆ ಮಾಡುತ್ತಾರೆ. ಉಳಿದಂತೆ  ಹೆಚ್ಚಿನ ವಿಮಾನಗಳಲ್ಲಿ ಮಹಿಳೆಯರೇ (Woman) ಕ್ಯಾಬಿನ್ ಸಿಬ್ಬಂದಿ. ಒಂದು ಅಂದಾಜಿನ ಪ್ರಕಾರ, ಪುರುಷ ಮತ್ತು ಮಹಿಳಾ ಕ್ಯಾಬಿನ್ ಸಿಬ್ಬಂದಿಗಳ ಅನುಪಾತವು 2/20 ಆಗಿದೆ. ಕೆಲವು ವಿದೇಶಿ ವಿಮಾನಯಾನ ಸಂಸ್ಥೆಗಳಲ್ಲಿ ಈ ಅನುಪಾತವು 4/10 ರಷ್ಟಿದೆ. ಆತಿಥ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇದರ ಹಿಂದೆ ಹಲವು ಕಾರಣಗಳಿವೆ.

ಶಂಕರಪುರದ ಅಜ್ಜಿ ಮಾಡೋ ಸಾಂಪ್ರದಾಯಿಕ 'ಬಾಣಂತಿ‌ಮದ್ದು' ವಿದೇಶಗಳಲ್ಲೂ ಫೇಮಸ್

ಉತ್ತಮವಾಗಿ ಮಾತನಾಡುತ್ತಾರೆ: ಮಹಿಳೆಯರು ಉತ್ತಮ ಮಾತುಗಾರರು (Talk) ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಮಹಿಳೆಯರುಗೆ ಸುಲಭವಾಗಿ, ಸರಳವಾಗಿ ಮನಮುಟ್ಟುವಂತೆ ಮಾತನಾಡುವ ಕಲೆ ರೂಢಿಯಾಗಿರುತ್ತದೆ. ಹೀಗಾಗಿಯೇ ಅವರ ಮಾತುಗಳನ್ನು ಎಲ್ಲರೂ ಕಿವಿಗೊಟ್ಟು ಆಲಿಸುತ್ತಾರೆ. ಜನರು ಪುರುಷರಿಗಿಂತ ಮಹಿಳೆಯರನ್ನು ಹೆಚ್ಚು ಎಚ್ಚರಿಕೆಯಿಂದ ಕೇಳುತ್ತಾರೆ ಎಂದು ನಂಬಲಾಗಿದೆ. ಪ್ರಯಾಣಿಕರು (Passengers) ಮಹಿಳೆಯರು ವಿಮಾನದಲ್ಲಿ ಅಗತ್ಯ ಸೂಚನೆಗಳನ್ನು ಅನುಸರಿಸಿದಾಗ ಎಚ್ಚರಿಕೆಯಿಂದ ಆಲಿಸುತ್ತಾರೆ ಮತ್ತು ಸುರಕ್ಷತಾ ಮಾರ್ಗಸೂಚಿಗಳ ಬಗ್ಗೆ ಅವರಿಗೆ ತಿಳಿಸುತ್ತಾರೆ.

ಯಾವುದೇ ಸಂದರ್ಭವನ್ನು ನಿರ್ವಹಿಸಬಲ್ಲರು: ವಿಮಾನದಲ್ಲಿ ಸೇವೆ ಮತ್ತು ಇತರ ನಿರ್ವಹಣೆಗೆ ಹೆಚ್ಚಿನ ಗಮನ ನೀಡಲಾಗುತ್ತದೆ. ಪುರುಷರಿಗಿಂತ ಮಹಿಳೆಯರು ಉತ್ತಮ ನಿರ್ವಹಣಾ ಕೌಶಲ್ಯವನ್ನು ಹೊಂದಿದ್ದಾರೆಂದು ನಂಬಲಾಗಿದೆ. ಹೆಂಗಸರೂ ಏನನ್ನೋ ಸಾವಧಾನವಾಗಿ ಕೇಳುತ್ತಾರೆ. ಅದಕ್ಕಾಗಿಯೇ ಅವರಿಗೆ ಈ ಎಲ್ಲದರ ಬಗ್ಗೆ ಉತ್ತಮ ತರಬೇತಿ (Training) ನೀಡಬಹುದು. ಮಾತ್ರವಲ್ಲ ಮಹಿಳೆಯರು ಎಂಥಹಾ ಕಠಿಣ ಸಂದರ್ಭವನ್ನೂ ಸರಳವಾಗಿ ನಿಭಾಯಿಸಬಲ್ಲರು ಎಂದು ನಂಬಲಾಗುತ್ತದೆ.

ನ್ಯಾಯಾಧೀಶೆಯಾದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಕಾರು ಚಾಲಕನ ಪುತ್ರಿ

ಮಹಿಳೆಯರಷ್ಟು ಚೆನ್ನಾಗಿ ಆತಿಥ್ಯ ಮಾಡಲು ಪುರುಷರಿಂದ ಸಾಧ್ಯವಿಲ್ಲ: ಏರ್‌ ಹೋಸ್ಟೆಸ್ ಎಂದಾಗ ಅವರು ಮಾಡಬೇಕಾಗಿರುವ ಮುಖ್ಯವಾದ ಕೆಲಸ, ಪ್ರಯಾಣಿಕರ ಆತಿಥ್ಯ ವಹಿಸುವುದು, ಅವರ ಬೇಕು ಬೇಡಗಳನ್ನು ಗಮನಿಸಿಕೊಳ್ಳುವುದು. ಆದರೆ ಪುರುಷರಿಗೆ ಉಪಚಾರ ಮಾಡಿಸಿಕೊಂಡೇ ಗೊತ್ತೇ ವಿನಃ. ಈ ರೀತಿ ಉಪಚಾರ ಮಾಡಲು ಖಂಡಿತಾ ಬರುವುದಿಲ್ಲ. ಆದರೆ ಮಹಿಳೆ ಎಲ್ಲರ ಬೇಕು, ಬೇಡಗಳನ್ನು ನೋಡಿಕೊಂಡು ಅದಕ್ಕೆ ಸ್ಪಂದಿಸಲು ತಿಳಿದಿರುತ್ತಾಳೆ.

ಗ್ಲಾಮರ್ ಇಂಡಸ್ಟ್ರಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ: ಬ್ಯೂಟಿ ಎಂಬುದು ಎಲ್ಲಾ ವಿಷಯವನ್ನು ಸುಂದರವಾಗಿಸುತ್ತದೆ. ಹೀಗಾಗಿ ಗ್ಲಾಮರ್‌ನ್ನು ಎಲ್ಲಾ ಕ್ಷೇತ್ರದಲ್ಲೂ ಉದಾರವಾಗಿ ಬಳಸಿಕೊಳ್ಳಲಾಗುತ್ತದೆ. ಇದೇ ಕಾರಣದಿಂದ ವಿಮಾನದಲ್ಲಿ ಏರ್‌ ಹೋಸ್ಟೆಸ್ ಆಗಿ ಮಹಿಳೆಯರನ್ನು ಆಯ್ಕೆ ಮಾಡಲಾಗುತ್ತದೆ. ವಿಮಾನದ ಕ್ಯಾಬಿನ್ ಸಿಬ್ಬಂಇಗೆ ಇದು ಅತ್ಯಗತ್ಯ ಗುಣಮಟ್ಟವೆಂದು ಪರಿಗಣಿಸಲಾಗಿದೆ. ಆತಿಥ್ಯ ಉದ್ಯಮದಲ್ಲಿ, ಗ್ಲಾಮರ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.

Follow Us:
Download App:
  • android
  • ios