Asianet Suvarna News Asianet Suvarna News

ನ್ಯಾಯಾಧೀಶೆಯಾದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಕಾರು ಚಾಲಕನ ಪುತ್ರಿ

ಹೈಕೋರ್ಟ್ ನ್ಯಾಯಾಧೀಶರ ಚಾಲಕನ ಮಗಳು ರಾಜಸ್ಥಾನ ನ್ಯಾಯಾಂಗ ಪರೀಕ್ಷೆಯಲ್ಲಿ 66ನೇ ರ್ಯಾಂಕ್ ಗಳಿಸಿದ್ದಾಳೆ. ಬಡ ಕುಟುಂಬದಲ್ಲಿ ಜನಿಸಿದ ಕಾರ್ತಿಕಾ ಈ ಸಾಧನೆ ಮಾಡಿದ್ದು, ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Daughter Of High Court Judges Driver Ranks 66th In Rajasthan Judiciary Exams Vin
Author
First Published Sep 23, 2022, 9:17 AM IST

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಕಾರು ಚಾಲಕರೊಬ್ಬರ ಪುತ್ರಿ ನ್ಯಾಯಾಂಗ ಪರೀಕ್ಷೆಯಲ್ಲಿ 66ನೇ ರ್ಯಾಂಕ್ ಪಡೆಯುವ ಮೂಲಕ ನ್ಯಾಯಾಧೀಶೆಯಾಗುವ ಹಂತಕ್ಕೆ ತಲುಪಿದ್ದು, ಸಾಧನೆ ಮಾಡಿದ್ದಾರೆ. ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಕಾರು ಚಾಲಕನ ಪುತ್ರಿ ಕಾರ್ತಿಕಾ ಗೆಹ್ಲೋಟ್, ಈ ಸಾಧನೆ ಮಾಡಿದವರಾಗಿದ್ದು, ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಡಕುಟುಂಬದಲ್ಲಿ ಜನಿಸಿದ ಕಾರ್ತಿಕಾ ಬಾಲ್ಯದಿಂದಲೇ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು. ಕಾನೂನು ಪದವಿ ಪಡೆದ ಬಳಿಕ ನ್ಯಾಯಾಧೀಶೆಯಾಗುವ ಹಂಬಲ ಹೊಂದಿದ್ದರು. ಇದೀಗ ಅವರ ಕನಸು ಈಡೇರುವ ಸಮಯ ಬಂದಿದೆ.

ನ್ಯಾಯಾಂಗ ಪರೀಕ್ಷೆಯಲ್ಲಿ 66ನೇ ರ್ಯಾಂಕ್ ಪಡೆದ ಕಾರ್ತಿಕಾ
ನ್ಯಾಯಾಂಗ ಪರೀಕ್ಷೆ (Law exam)ಯಲ್ಲಿ 66ನೇ ರ್ಯಾಂಕ್ ಪಡೆದಿರುವ ಖುಷಿಯ ಬಗ್ಗೆ ಮಾತನಾಡಿದ ಕಾರ್ತಿಕಾ, 'ನನ್ನ ತಂದೆ ಕಳೆದ 31 ವರ್ಷಗಳಿಂದ ಮುಖ್ಯ ನ್ಯಾಯಮೂರ್ತಿಗಳ (Judge) ಚಾಲಕರಾಗಿದ್ದಾರೆ. ಚಿಕ್ಕ ವಯಸ್ಸಿನಿಂದಲೇ, ನಾನು ಕಪ್ಪು ಕೋಟ್ ಮತ್ತು ಅದರ ಸುತ್ತಲಿನ ವಾತಾವರಣವನ್ನು ಇಷ್ಟಪಟ್ಟಿದ್ದೇನೆ. ಮಕ್ಕಳು ತಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ತಮ್ಮ ಕನಸಿನ ವೃತ್ತಿಯನ್ನು ಬದಲಾಯಿಸುತ್ತಿದ್ದರೆ, ನನಗೆ ಕೇವಲ ಒಂದು ಕನಸು (Dream) ಮಾತ್ರ ಇತ್ತು. ನಾನು ಅದರ ಕಡೆಗೆ ಮಾತ್ರ ಕೆಲಸ ಮಾಡಿದ್ದೇನೆ' ಎಂದು ತಿಳಿಸಿದ್ದಾರೆ. ಬಡಕುಟುಂಬದಲ್ಲಿ ಜನಿಸಿದ ಕಾರ್ತಿಕಾ, ನಾಲ್ವರು ಮಕ್ಕಳಿರುವ ಕುಟುಂಬದಲ್ಲಿ ಒಬ್ಬರಾಗಿದ್ದಾರೆ.

ಬಾಹ್ಯಾಕಾಶ ಯಾನಕ್ಕೆ ತೆರಳಲಿರುವ ಮೊದಲ ಸೌದಿ ಮಹಿಳೆ

ಕಾರ್ಟಿಕಾ ತನ್ನ ಶಾಲಾ ಶಿಕ್ಷಣವನ್ನು ಜೋಧಪುರದ ಸೇಂಟ್ ಆಸ್ಟಿನ್ ಶಾಲೆಯಲ್ಲಿ ಮುಗಿಸಿದ್ದು, ಜೋಧಪುರದ ಜೈ ನರೈನ್ ವ್ಯಾಸ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಮಾಡಿದ್ದಾರೆ. 5 ಮತ್ತು 6ನೇ ಸೆಮಿಸ್ಟರ್ ಸಮಯದಲ್ಲಿ, ನಾನು ಜಿಲ್ಲಾ ನ್ಯಾಯಾಲಯದಲ್ಲಿ (District court) ಇಂಟರ್ನಿಂಗ್ ಮಾಡಲು ಪ್ರಾರಂಭಿಸಿದೆ, ಇದು ಕಾನೂನಿನ (Law) ಬಗ್ಗೆ ನನ್ನ ಆಸಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡಿತು. 'ಕೋವಿಡ್ ಆರಂಭವಾದಾಗ ನಾನು ಉಲ್ಕಾರ್ಷ್ ಅಪ್ಲಿಕೇಶನ್‌ನ ಆನ್‌ಲೈನ್ ಕೋರ್ಸ್‌ಗಳಿಗೆ ಸೇರಿಕೊಂಡೆ. ಇದು ನನ್ನ ಪರೀಕ್ಷಾ ತಯಾರಿಗೆ ಉತ್ತಮವಾಗಿ ಕೆಲಸ ಮಾಡಿತು' ಎಂದು ಕಾರ್ತಿಕಾ ತಿಳಿಸಿದ್ದಾರೆ.

ಶಿಸ್ತುಬದ್ಧ ವೇಳಾಪಟ್ಟಿ ಅನುಸರಿಸಿ ಅಧ್ಯಯನ
ತನ್ನ ಪರೀಕ್ಷೆಯ ಸಿದ್ಧತೆಯ ಬಗ್ಗೆ ಮಾತನಾಡುತ್ತಾ, 'ನನ್ನ ದೈನಂದಿನ ಅಧ್ಯಯನದ (Study) ವೇಳಾಪಟ್ಟಿ ಶಿಸ್ತುಬದ್ಧವಾಗಿದೆ, ಅಧ್ಯಯನದಲ್ಲಿ ನನಗೆ ಸ್ಥಿರತೆ ಇದೆ ಎಂದು ನಾನು ಖಚಿತಪಡಿಸಿಕೊಂಡಿದ್ದೇನೆ. ದಿನಕ್ಕೆ ಕನಿಷ್ಠ 3-4 ಗಂಟೆಗಳ ಕಾಲ ಪರೀಕ್ಷೆಗೆ ತಯಾರಿ ನಡೆಸುತ್ತೇನೆ. ಪರೀಕ್ಷೆಯ ದಿನಾಂಕಗಳು ಹೊರಬಂದಾಗ, ನಾನು ಪ್ರತಿದಿನ 10-12 ಗಂಟೆಗಳ ಕಾಲ ಅಧ್ಯಯನಕ್ಕಾಗಿ ನೀಡಿದ್ದೇನೆ' ಎಂದು ಕಾರ್ತಿಕಾ ಹೇಳಿದ್ದಾರೆ. ಸಂಗೀತವು ನನಗ ಸ್ಟಡೀಸ್ ಮೇಲೆ ಉತ್ತಮವಾಗಿ ಕೇಂದ್ರೀಕರಿಸಲು ಸಹಾಯ ಮಾಡಿತು ಎಂದರು.

ಬ್ಯಾಂಕರ್ ಆಗಿದ್ದ ಫಲ್ಗುಣಿ ನಾಯರ್ ಈಗ ಭಾರತದ ಶ್ರೀಮಂತ ಮಹಿಳೆ

ಕಾನೂನು ಅಧ್ಯಯನ ಮಾಡುವ ಮಹಿಳೆಯರ (woman) ಬಗ್ಗೆ ಮಾತನಾಡುತ್ತಾ ಕಾರ್ತಿಕಾ, 'ಕೆಲವು ಪೋಷಕರು (Parents) ತಮ್ಮ ಹೆಣ್ಣುಮಕ್ಕಳು ಕಾನೂನು ಅಧ್ಯಯನ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ, ಏಕೆಂದರೆ ಮಹಿಳೆ ಕಾನೂನನ್ನು ಅಧ್ಯಯನ ಮಾಡಿದರೆ ಅವಳು ಮದುವೆಯಾಗುವುದಿಲ್ಲ ಎಂದು ಅಂದುಕೊಳ್ಳುತ್ತಾರೆ. ಆದರೆ,  ಹೆಚ್ಚಿನ ಮಹಿಳೆಯರು ಕಾನೂನನ್ನು ಅಧ್ಯಯನ ಮಾಡಬೇಕು ಮತ್ತು ಹೆಚ್ಚು ಸ್ವತಂತ್ರರಾಗಿರಬೇಕು ಮತ್ತು ಅಧಿಕಾರ ಹೊಂದಿರಬೇಕು ಎಂದು ನಾನು ನಂಬುತ್ತೇನೆ' ಎಂದಿದ್ದಾರ. ಮಹಿಳೆಯರು ಮಾತ್ರವಲ್ಲ, ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ಉತ್ತಮ ಮೂಲಭೂತ ತಿಳುವಳಿಕೆಯನ್ನು ಹೊಂದಿರಬೇಕು. ಇದು ಅನೇಕ ಜನರು ತಮ್ಮ ದಿನನಿತ್ಯದ ಜೀವನದಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡಲು ಸಹಾಯ ಮಾಡುತ್ತದೆ. ಈ ಶಾಲೆಗಳು ವಿದ್ಯಾರ್ಥಿಗಳಿಗೆ (Students) ತಮ್ಮ ಪಠ್ಯಕ್ರಮದಲ್ಲಿ ಕಾನೂನಿನ ಬಗ್ಗೆ ಹೆಚ್ಚಿನದನ್ನು ಕಲಿಸಬೇಕು' ಎಂದರು. 

ಎಲ್ಲಾ ಹಂತದಲ್ಲೂ ಕುಟುಂಬ ಬೆಂಬಲಕ್ಕೆ ನಿಂತಿದೆ-ಕಾರ್ತಿಕಾ
ಅಲಹಾಬಾದ್ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಅವರಿಂದ ನಾನು ಸಾಕಷ್ಟು ಮಾರ್ಗದರ್ಶನಗಳನ್ನು ಪಡೆದಿದ್ದೇನೆ, ಅವರು ನನಗೆ ಅನೇಕ ಹಂತಗಳಲ್ಲಿ ಸಹಾಯ ಮಾಡಿದ್ದಾರೆ. ಕುಟುಂಬ ಎಲ್ಲಾ ಸಮಯಗಳಲ್ಲೂ ಬೆಂಬಲಕ್ಕೆ ನಿಂತಿದೆ ಎಂದು ಕಾರ್ತಿಕಾ ಸಂತಸ ವ್ಯಕ್ತಪಡಿಸಿದ್ದಾರೆ. ಕುತೂಹಲಕಾರಿಯಾಗಿ, ಹೆಚ್ಚಿನ ಜನರು ಸಾಮಾಜಿಕ ಮಾಧ್ಯಮದಲ್ಲಿ (Social media) ಹೆಚ್ಚಿನ ಸಮಯವನ್ನು ಕಳೆಯುವ ಸಮಯದಲ್ಲಿ, ಕಾರ್ತಿಕಾ ತಾನು ಸಾಮಾಜಿಕ ಮಾಧ್ಯಮದಿಂದ ದೂರವಿರುವುದಾಗಿ ಹೇಳಿದರು, 'ನನ್ನ ಬಳಿ ಯಾವುದೇ ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್ ಖಾತೆ ಇಲ್ಲ. ನಾನು ಹೆಚ್ಚಾಗಿ ಜನರೊಂದಿಗೆ ಸಂವಹನ (Conversation) ನಡೆಸಲು ವಾಟ್ಸಾಪ್ ಅನ್ನು ಮಾತ್ರ ಬಳಸುತ್ತೇನೆ' ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios