ಕಸ ಗುಡಿಸೋ ಗಂಡ ಬೇಡ, ಸ್ವೀಟ್ ಕಾರ್ನ್ ಅಂತ ಕರೆಯೋ ಪ್ರೇಮಿನೇ ಬೇಕು; ಜ್ಯೋತಿ ಮೌರ್ಯ ಅಸಲಿಯತ್ತೇನು?
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಎಸ್‌ಡಿಎಂ ಜ್ಯೋತಿ ಮೌರ್ಯ ಹಾಗೂ ಅಲೋಕ್ ಮೌರ್ಯ ವಿಚಾರದ ಕುರಿತಾಗಿ ಹಲವು ರೀತಿಯಲ್ಲಿ ಚರ್ಚೆ ನಡೆಯುತ್ತಿದೆ. ದಂಪತಿಗಳ ಕಥೆಯು ಪ್ರೀತಿ, ಮದುವೆ, ದೋಖಾ, ಅನೈತಿಕ ಸಂಬಂಧ, ಟಾರ್ಚರ್, ಬೆದರಿಕೆ, ಅರೆಸ್ಟ್ ಹೀಗೆ ಹಲವಾರು ವಿಚಾರಗಳು ಬಂದು ಹೋಗಿದ್ದು, ಚಿತ್ರಣ ಸಿನಿಮಾ ಕಥೆಯನ್ನೇ ಮೀರಿಸುವಂತಿದೆ. ಇಷ್ಟಕ್ಕೂ ಈ ಜ್ಯೋತಿ ಮೌರ್ಯ ಯಾರು, ಮೋಸ ಮಾಡಿದ್ದು ನಿಜಾನ?
ಉತ್ತರ ಪ್ರದೇಶದ ಬರೇಲಿಯ ಜ್ಯೋತಿ ಮೌರ್ಯ ಮತ್ತು ಅಲೋಕ್ ವರ್ಮಾ ಅವರ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಸುದ್ದಿಯಿಂದ ಪ್ರೀತಿ, ತ್ಯಾಗದ ಕುರಿತಾಗಿ ಹಲವರ ನಂಬಿಕೆ ಬುಡಮೇಲಾಗಿದೆ. ತನ್ನ ಹೆಂಡತಿಯನ್ನು ಉಪವಿಭಾಗದ ಮ್ಯಾಜಿಸ್ಟ್ರೇಟ್ ಆಗಲು ಕಷ್ಟಪಟ್ಟು ಓದಿಸಿದ ಪತಿ, ಆದರೆ ಹೆಂಡತಿ ಬೇರೆಯವರನ್ನು ಪ್ರೀತಿಸಿ ತನ್ನ ಪತಿಗೆ ಮೋಸ ಮಾಡಿರೋ ವಿಚಾರ ಹಲವರನ್ನು ಕೆರಳಿಸಿದೆ.
ಜ್ಯೋತಿ ಮೌರ್ಯ ವಿವಾದ ಎಲ್ಲಿಂದ ಪ್ರಾರಂಭವಾಯಿತು?
ಅಲೋಕ್ ಮೌರ್ಯ, ಯುಪಿಯ ಪ್ರಯಾಗರಾಜ್‌ನಲ್ಲಿ ಪಂಚಾಯತ್ ರಾಜ್ ಇಲಾಖೆಯಲ್ಲಿ ನಾಲ್ಕನೇ ದರ್ಜೆಯ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದರು. ಮಾಹಿತಿಯ ಪ್ರಕಾರ, 2010ರಲ್ಲಿ ಅಲೋಕ್ ಮೌರ್ಯ ಹಾಗೂ ಜ್ಯೋತಿ ಮೌರ್ಯ ಇಬ್ಬರಿಗೆ ವಿವಾಹ (Marriage)ವಾಗಿತ್ತು. 2015ರಲ್ಲಿ ಜ್ಯೋತಿ ಮೌರ್ಯ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಆ ನಂತರ ಅಲೋಕ್ ತನ್ನ ಹೆಂಡತಿಯ ಶಿಕ್ಷಣವನ್ನು ಪೂರ್ಣಗೊಳಿಸಲು ಹಗಲಿರುಳು ಶ್ರಮಿಸಿದರು. ಪ್ರಯಾಗ್‌ರಾಜ್‌ನಲ್ಲಿ, ಉತ್ತಮ ಕೋಚಿಂಗ್ ಸೆಂಟರ್‌ಗೆ ಸೇರಿಸಿದರು. ಜ್ಯೋತಿ, ಮಹಿಳೆಯರಲ್ಲಿ ಮೂರನೇ ರ‍್ಯಾಂಕ್ ಮತ್ತು ಪಬ್ಲಿಕ್ ಸರ್ವಿಸ್ ಕಮಿಷನ್‌ನಲ್ಲಿ 16 ನೇ ಸ್ಥಾನ ಗಳಿಸಿ ಎಸ್‌ಡಿಎಂ ಆಗಿ ನೇಮಕಗೊಂಡಿದ್ದಾರೆ. ನಂತರ ತನ್ನ ಕಚೇರಿಯಲ್ಲೇ ವ್ಯಕ್ತಿಯೊಬ್ಬನೊಂದಿಗೆ ಅಕ್ರಮ ಸಂಬಂಧ (Extra marital affair) ಇಟ್ಟುಕೊಂಡಿದ್ದಾರೆ ಎಂದು ಅಲೋಕ್ ಮೌರ್ಯ ಆರೋಪಿಸಿದ್ದಾರೆ.
ಗಂಡನ ಮೇಲೆ ಸುಳ್ಳು ವರದಕ್ಷಿಣೆ ಆರೋಪ ಮಾಡಿದ್ದ ಸರ್ಕಾರಿ ಅಧಿಕಾರಿ ಜ್ಯೋತಿ ಮೌರ್ಯ ಸಸ್ಪೆಂಡ್
ಜ್ಯೋತಿ ಮೌರ್ಯ, 2020ರಲ್ಲಿ ಗೃಹರಕ್ಷಕ ದಳದ ಕಮಾಂಡೆಂಟ್ ಮನೀಷ್ ದುಬೆ ಅವರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡರು. ನಂತರ ನನ್ನಿಂದ ದೂರ ಹೋಗಿದ್ದಾರೆ ಎಂದು ಅಲೋಕ್ ಆರೋಪಿಸಿದ್ದಾರೆ. ಸರ್ಕಾರಿ ಅಧಿಕಾರಿ ಜ್ಯೋತಿ ಮೌರ್ಯ ಅವರ ಪ್ರಿಯಕರ ಮನೀಶ್ ದುಬೆ ಅವರನ್ನು ಗಾಜಿಯಾಬಾದ್‌ನಲ್ಲಿ ಹೋಮ್ ಗಾರ್ಡ್ ಕಮಾಂಡೆಂಟ್ ಆಗಿ ನಿಯೋಜಿಸಲಾಗಿದೆ
ಡೈರಿಯಲ್ಲಿ ಜ್ಯೋತಿ ಮೌರ್ಯ ಭ್ರಷ್ಟಾಚಾರದ ಮಾಹಿತಿ
ಅಲೋಕ್ ಕುಮಾರ್ ಮೌರ್ಯ ಅವರು ಜ್ಯೋತಿ ಮೌರ್ಯರ ಭ್ರಷ್ಟಾಚಾರದ ನಿಖರವಾದ ವಿವರಗಳನ್ನು ಹೊಂದಿರುವ ಡೈರಿಯನ್ನು ಮಾಧ್ಯಮಗಳಿಗೆ ಒದಗಿಸಿದ್ದಾರೆ. ಇದು ಜ್ಯೋತಿಯ ಅಕ್ರಮ ಮಾಸಿಕ ಸಂಗ್ರಹಣೆಗಳನ್ನು ವಿವರಿಸುತ್ತದೆ, ಇದು ಪ್ರತಿ ತಿಂಗಳು 600,000 ರೂ. ಹಣವನ್ನು ಅಕ್ರಮವಾಗಿ ಪಡೆದಿರುವುದನ್ನು ತೋರಿಸುತ್ತದೆ.
2019ರಿಂದ 2021ರ ವರೆಗೆ, ಜ್ಯೋತಿ ಮೌರ್ಯ ಕೌಶಂಬಿ ಟೀ ಉಪವಿಭಾಗದಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕೆಲಸ ಮಾಡಿದರು. ಭ್ರಷ್ಟವಾಗಿ ಪಡೆದ ಹಣದ ಲೆಕ್ಕಪತ್ರವನ್ನು ಡೈರಿ ದಾಖಲಿಸುತ್ತದೆ. ಜ್ಯೋತಿ ಅವರು ಅಕ್ಟೋಬರ್ 2021 ರಲ್ಲಿ ಕೇವಲ ಒಂದು ತಿಂಗಳಿನಲ್ಲಿ 604,000 ರೂಪಾಯಿಗಳ ಅನಧಿಕೃತ ಸಂಬಳವನ್ನು ಪಡೆದಿದ್ದಾರೆ ಎಂದು ಇದರಲ್ಲಿ ತಿಳಿಸಲಾಗಿದೆ.
ಬಾಡಿಗೆಗಿದ್ದ ಯುವತಿ ಜೊತೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗಂಡ, ಹಿಗ್ಗಾಮುಗ್ಗಾ ಹೊಡೆದ್ಲು ಹೆಂಡ್ತಿ!
ಜ್ಯೋತಿ ಮತ್ತು ಪ್ರೇಮಿಯ ಚಾಟ್ ವೈರಲ್
ಜ್ಯೋತಿ ಹಾಗೂ ಅಲೋಕ್ ಮೌರ್ಯ ನಡುವಿನ ಸ್ಟೋರಿ ಸಾಕಷ್ಟು ದಿನಗಳಿಂದ ವೈರಲ್ ಆಗ್ತಿದೆ. ಎಸ್‌ಡಿಎಂ ಜ್ಯೋತಿ ಮೌರ್ಯ ಅವರ ಚಾಟ್ ಸಹ ಕೆಲವು ದಿನದ ಹಿಂದೆ ವೈರಲ್ ಆಗಿತ್ತು, ಪ್ರೇಮಿ ಅವಳನ್ನು ಸ್ವೀಟ್ ಕಾರ್ನ್ ಎಂದು ಕರೆಯುತ್ತಿದ್ದ. ಇಬ್ಬರೂ ತಮ್ಮ ಪ್ರೀತಿ (Love)ಯನ್ನು ವಿನಿಮಯ ಮಾಡಿಕೊಂಡು ಐ ಲವ್ ಯೂ ಎಂದು ಹೇಳಿರುವುದು ಚಾಟ್‌ನಲ್ಲಿದೆ.
ಇತ್ತ, ಜ್ಯೋತಿ ಮೌರ್ಯ ತನ್ನ ಪತಿ ಮೋಸಗಾರ (Cheater) ಎಂದು ಆರೋಪಿಸಿದ್ದಾರೆ. ಅಲೋಕ್ ಅವರು ತಮ್ಮ ಮದುವೆಗೆ ಮೊದಲು ಗ್ರಾಮ ಪಂಚಾಯತ್ ಅಧಿಕಾರಿ ಎಂದು ಪರಿಚಯಿಸಿಕೊಂಡರು, ಅವರು ನಿಜವಾಗಿಯೂ ಸ್ವೀಪರ್' ಆಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಮಾತ್ರವಲ್ಲ ಜ್ಯೋತಿ ಪತಿಯಿಂದ ವಿಚ್ಛೇದನಕ್ಕೆ (Divorce) ಅರ್ಜಿ ಸಲ್ಲಿಸಿದ್ದಾರೆ. ಆತ ತನ್ನ ಫೋನ್ ಅನ್ನು ಹ್ಯಾಕ್ ಮಾಡಿದ್ದಾನೆ ಮತ್ತು ತನ್ನ ದಾಂಪತ್ಯ ದ್ರೋಹಕ್ಕೆ ಸುಳ್ಳು ಪುರಾವೆಗಳನ್ನು ಒದಗಿಸಿದ್ದಾನೆ ಎಂದು ಆರೋಪದಲ್ಲಿ ತಿಳಿಸಿದ್ದಾರೆ. ಆಕೆ ತನ್ನ ಪತಿ ಮತ್ತು ನಾಲ್ವರು ಅಳಿಯಂದಿರ ವಿರುದ್ಧ ಪ್ರಯಾಗ್‌ರಾಜ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ.