Asianet Suvarna News Asianet Suvarna News

ಅಂದು ಮೂವರು ಕಾಲೇಜು ಗೆಳೆಯರು ಸೇರಿ ಆರಂಭಿಸಿದ ಆನ್‌ಲೈನ್‌ ಬೇಕರಿಗೆ ಇಂದು 75 ಕೋಟಿಯ ವ್ಯವಹಾರ

10 ವರ್ಷಗಳ ಹಿಂದೆ  ಮೂವರು ಕಾಲೇಜು ಗೆಳೆಯರು ಸೇರಿ ಅಂದು ಆರಂಭಿಸಿದ ಆನ್‌ಲೈನ್ ಬೇಕರಿ ಉದ್ಯಮ ಇಂದು 75 ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತಿದೆ.

10 year back college friends started Bakingo  online bakery business now earning 75 crore bussiness akb
Author
First Published Aug 31, 2022, 4:23 PM IST

10 ವರ್ಷಗಳ ಹಿಂದಿನ ಮಾತು ಆಗ ಅವರೆಲ್ಲರೂ ಕಾಲೇಜು ಗೆಳೆಯರು ಏನಾದರೊಂದು ಉದ್ಯಮ ಸ್ಥಾಪಿಸಬೇಕೆಂಬ ಮಹತ್ವಕಾಂಕ್ಷೆಯೊಂದಿಗೆ ಆ ಮೂವರು ಗೆಳೆಯರು ಸೇರಿ ಅಂದು ಆರಂಭಿಸಿದ ಆನ್‌ಲೈನ್ ಬೇಕರಿ ಉದ್ಯಮ ಇಂದು 75 ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತಿದೆ. ಅಲ್ಲದೇ ಆಹಾರೋದ್ಯಮ ವಲಯದಲ್ಲಿ ತನ್ನದೇ ಚಾಪು ಮೂಡಿಸಿದೆ. ನವದೆಹಲಿಯ ನೇತಾಜಿ ಸುಭಾಷ್ ವಿಶ್ವವಿದ್ಯಾನಿಲಯದ ಮೂವರು ಕಾಲೇಜು ಗೆಳೆಯರಾದ ಹಿಮಾಂಶು ಚಾವ್ಲಾ, ಶ್ರೇಯ್ ಸೆಹಗಲ್ ಮತ್ತು ಸುಮನ್ ಪಾತ್ರಾ ಆರು ವರ್ಷಗಳ ಹಿಂದೆ ಏನಾದರೊಂದು ಉದ್ಯಮ ಸ್ಥಾಪಿಸಬೇಕು ಎಂದು ಮುಂದಾಡಿ ಇಟ್ಟಾಗ ಅವರಿಗೆ ಹೊಳೆದಿದ್ದೆ ಆನ್‌ಲೈನ್ ಬೇಕರಿ ಬಾಕಿಂಗೋ. 2016ರಲ್ಲಿ ಆರಂಭವಾದ ಈ ಉದ್ಯಮ ಬೆಳೆದು ಬಂದು ಇಂದು 75 ಕೋಟಿ ರೂಪಾಯಿಗಳ ವ್ಯವಹಾರ ಮಾಡ್ತಿದೆ

2016 ರಲ್ಲಿ ಪ್ರಾರಂಭವಾದ, Bakingo ಆನ್‌ಲೈನ್ ಬೇಕರಿ, ಕ್ಲೌಡ್ ಕಿಚನ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಇಂದು ದೇಶದ 11 ಕ್ಕೂ ಹೆಚ್ಚು ನಗರಗಳಲ್ಲಿ ಉಪಸ್ಥಿತಿಯೊಂದಿಗೆ ಬಹುಕೋಟಿ ಆದಾಯದ ವ್ಯವಹಾರವಾಗಿ ಬೆಳೆದಿದೆ. 2006 ಮತ್ತು 2007 ರಲ್ಲಿ ಕಾಲೇಜು ಮುಗಿಸಿದ ಈ ಗೆಳೆಯರು ಕೆಲವು ವರ್ಷಗಳ ಕಾಲ ಕಾರ್ಪೊರೇಟ್ ಉದ್ಯೋಗಗಳಲ್ಲಿ ಸಮಯ ವ್ಯಯಿಸಿದ ನಂತರ ಅದು ಬೋರಾಗಿ ಮೂವರು ತಮ್ಮ ಮೊದಲ ಸಾಹಸೋದ್ಯಮ ಫ್ಲವರ್ ಔರಾವನ್ನು (Flower Aura) ಸ್ಥಾಪಿಸಿದರು. ಆನ್‌ಲೈನ್ ಹೂವು (online flower), ಕೇಕ್ ಮತ್ತು  ಉಡುಗೊರೆಯನ್ನು ವೈಯಕ್ತಿಕರಣಗೊಳಿಸುವ ಫ್ಲವರ್ ಔರಾ ಕಂಪನಿಯು 2010 ರಲ್ಲಿ ಪ್ರಾರಂಭವಾಯಿತು.

ಇನ್ಮುಂದೆ ಹೈದರಾಬಾದ್‌ನಿಂದ್ಲೇ ಬಿರಿಯಾನಿ ತರಿಸಿ: ವಿಮಾನದ ಮೂಲಕ ಡೆಲಿವರಿ ಮಾಡುತ್ತೆ ಜೊಮ್ಯಾಟೋ..!

ಈ ಫ್ಲವರ್‌ ಔರಾವೂ ಗುರುಗ್ರಾಮದ ನೆಲಮಾಳಿಗೆಯೋಂದರಲ್ಲಿ ತುಂಬಾ ಸಣ್ಣಮಟ್ಟಿನ ಬಜೆಟ್‌ನಿಂದ ಆರಂಭವಾಯಿತು ಎಂದು ಸುಮನ್ ಆ ದಿನಗಳನ್ನು ನೆನೆದರು. ತಾವು ಈ ಉದ್ಯಮಕ್ಕೆ ಸೇರುವ ಒಂದು ವರ್ಷದ ಮೊದಲು ಫೆಬ್ರವರಿ 2010 ರಲ್ಲಿ ₹ 2 ಲಕ್ಷ ಬಂಡವಾಳದೊಂದಿಗೆ ಈ ಉದ್ಯಮವನ್ನು ಪ್ರಾರಂಭಿಸಲಾಯಿತು. ಆರಂಭದಲ್ಲಿ, ನಾವು ಕೇವಲ ಒಬ್ಬ ಉದ್ಯೋಗಿಯನ್ನು ಹೊಂದಿದ್ದೆವು. ಅವರು ಗ್ರಾಹಕ ಸೇವಾ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರು ಮತ್ತು ಈ ವ್ಯವಹಾರವನ್ನು ನಿರ್ವಹಿಸುವ ಜೊತೆ ವಿತರಣೆ ಮಾಡುತ್ತಿದ್ದರು. 

2010 ರ ಪ್ರೇಮಿಗಳ ದಿನದಂದು ಇವರ ಉದ್ಯಮಕ್ಕೆ ಮಹತ್ವದ ತಿರುವು ಸಿಕ್ಕಿತ್ತು. ಅಂದಿನ ಆರ್ಡರ್ ಹೇಗಿತೆಂದರೆ ಸಹ ಸಂಸ್ಥಾಪಕರಾದ ಹಿಮಾಂಶು ಮತ್ತು ಶ್ರೇಯ್  ಆರ್ಡರ್‌ಗಳನ್ನು ವಿತರಿಸಲು ಹೆಣಗಾಡುವಂತಾಗಿತ್ತು. ಆ ದಿನ ಹಿಮಾಂಶು ಮತ್ತು ನಾನು ದೆಹಲಿ ಎನ್‌ಸಿಆರ್‌ನಾದ್ಯಂತ ಕನಿಷ್ಠ 50 ಪ್ರತಿಶತದಷ್ಟು ಆರ್ಡರ್‌ಗಳನ್ನು ಪೂರೈಸಿದೆವು ಎಂದು ಶ್ರೇಯ್ ಹೇಳಿದರು. ಅಲ್ಲದೇ ತಮ್ಮ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಲು ಇದು ಸರಿಯಾದ ಸಮಯ ಎಂದು ಭಾವಿಸಿದ ಗೆಳೆಯರಾದ ಹಿಮಾಂಶು ಚಾವ್ಲಾ(Himanshu Chawla), ಶ್ರೇಯ್ ಸೆಹಗಲ್ (Shrey Sehgal) ಮತ್ತು ಸುಮನ್ ಪಾತ್ರಾ (Suman Patra) ಹೊಸ ಕಂಪನಿಯ ಅಡಿಯಲ್ಲಿ ಬೇಕಿಂಗ್ಗೋವನ್ನು 2016ರಲ್ಲಿ ಪ್ರತ್ಯೇಕ ಬ್ರಾಂಡ್ ಆಗಿ ಸ್ಥಾಪಿಸಿದರು.

Gautam Adani: ಗೌತಮ್‌ ಅದಾನಿ ಈಗ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ!

ಇಂದು ದೇಶದ ಹಲವು ನಗರಗಳಲ್ಲಿ ಒಂದೇ ಬ್ರಾಂಡ್‌ನ ತಾಜಾ ಕೇಕ್‌ಗಳನ್ನು ಒಂದೇ ರುಚಿಯೊಂದಿಗೆ ಈ ಬೇಕಿಂಗೋ ನೀಡುತ್ತಿದೆ.  ಬೇಕಿಂಗೋ ಕಂಪನಿಯು ಇಂದು ಹೈದರಾಬಾದ್, ಬೆಂಗಳೂರು ಮತ್ತು ದೆಹಲಿ ಎನ್‌ಸಿಆರ್‌ನಂತಹ ದೊಡ್ಡ ನಗರಗಳಲ್ಲಿ ಮಾತ್ರವಲ್ಲದೆ ಮೆರುತ್, ಪಾಣಿಪತ್, ರೋಹ್ಟಕ್, ಮತ್ತು ಕರ್ನಾಲ್ ಸೇರಿದಂತೆ ಎರಡನೇ ಶ್ರೇಣಿಯ ನಗರಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. ಸುಮಾರು 30 ಪ್ರತಿಶತದಷ್ಟು Bakingo ಮಾರಾಟವು ಅದರ ವೆಬ್‌ಸೈಟ್ ಮೂಲಕ ನಡೆಯುತ್ತದೆ. ಆದರೆ ಉಳಿದ 70 ಪ್ರತಿಶತ ಮಾರಾಟವು ಇತರ ಆಹಾರ ಪೋರ್ಟಲ್‌ಗಳಾದ Swiggy ಮತ್ತು Zomato ಮೂಲಕ ನಡೆಯುತ್ತದೆ.

ಕಂಪನಿಯು 2021-22 ರ ಆರ್ಥಿಕ ವರ್ಷದಲ್ಲಿ 75 ಕೋಟಿಗಳ ವಹಿವಾಟು ನಡೆಸಿದೆ ಜೊತೆಗೆ  500 ಕ್ಕೂ ಹೆಚ್ಚು ಜನರಿಗೆ ಉದ್ಯೋಗಗಳನ್ನು ನೀಡಿದೆ. ಈ ವರ್ಷ ದೆಹಲಿಯಲ್ಲಿ ತನ್ನ ಮೊದಲ ಆಫ್‌ಲೈನ್ ಔಟ್‌ಲೆಟ್ ಅನ್ನು ಕೂಡ ಬೇಕಿಂಗೋ ತೆರೆದಿದೆ.

Follow Us:
Download App:
  • android
  • ios