Women Population : ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗೆ ಹೋಲಿಕೆ ಮಾಡಿದ್ರೆ ಕಮ್ಮಿ. ಆದ್ರೂ ಕೆಲ ರಾಜ್ಯಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಎಲ್ಲಿ ಎಂಬ ಮಾಹಿತಿ ಇಲ್ಲಿದೆ.
ಹೆಣ್ಣು ಅಂತ ಹೀಗಳೆಯುತ್ತಿದ್ದ ಕಾಲ ಈಗಿಲ್ಲ. ಅಲ್ಲಿ ಇಲ್ಲಿ ಒಂದೆರಡು ಇಂಥ ಪ್ರಕರಣ ಕಂಡು ಬಂದ್ರೂ ಬಹುತೇಕರು ಹೆಣ್ಣು – ಗಂಡು ಇಬ್ಬರನ್ನು ಸಮಾನವಾಗಿ ಸ್ವೀಕರಿಸಲು ಶುರು ಮಾಡಿದ್ದಾರೆ. ಹೆಣ್ಣು ಮಗು ಜನಿಸಿದ ನಂತ್ರ ಸಂಭ್ರಮಿಸುವವರ ಸಂಖ್ಯೆ ಹೆಚ್ಚಾಗಿದೆ. ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ (Population) ಹೊಂದಿರುವ ದೇಶ ಭಾರತದಲ್ಲಿ ಮಹಿಳೆಯರು ಇತ್ತೀಚಿಗೆ ಎಲ್ಲ ಕ್ಷೇತ್ರದಲ್ಲೂ ಕಾಣಿಸಿಕೊಳ್ತಿದ್ದಾರೆ. ಅವರ ಸಾಮಾಜಿಕ ಭಾಗವಹಿಸುವಿಕೆ ಹೆಚ್ಚಾಗ್ತಿದೆ. ವಿಮಾನ ಹಾರಾಟದಿಂದ ಮನೆಯ ಹೋರಾಟದವರೆಗೆ ಎಲ್ಲವನ್ನೂ ಮಹಿಳೆ ನಿಭಾಯಿಸಬಲ್ಲಳು ಎಂಬುದನ್ನು ಸಾಭೀತುಪಡಿಸಿದ್ದಾಳೆ. ಮಹಿಳೆ (female)ಯರಿಗೆ ಪ್ರೋತ್ಸಾಹ ನೀಡಲು ದೇಶದಲ್ಲಿ ಅನೇಕ ಯೋಜನೆಗಳು ಜಾರಿಗೆ ಬರ್ತಿವೆ. ಇಷ್ಟಾದ್ರೂ ಪುರುಷರಿಗೆ ಸಮಾನವಾಗಿ ಮಹಿಳೆಯರ ಸಂಖ್ಯೆ ಇಲ್ಲ. ಪ್ರತಿ ರಾಜ್ಯದಲ್ಲೂ ಲಿಂಗ ಅನುಪಾತ (ender ratio) ವಿಭಿನ್ನವಾಗಿದೆ. ಪ್ರತಿ ಸಾವಿರ ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರ ಸಂಖ್ಯೆ ಕಡಿಮೆ ಇದೆ.
ಲಿಂಗ ಅನುಪಾತದಲ್ಲಿ ಸುಧಾರಣೆ :
Google ಮಾಹಿತಿ ಪ್ರಕಾರ ಭಾರತದ ಜನಸಂಖ್ಯೆ 1,464,831,167 ಇದೆ. ಭಾರತದಲ್ಲಿ ಮಹಿಳೆಯರ ಸಂಖ್ಯೆ ಯಾವಾಗಲೂ ಪುರುಷರಿಗಿಂತ ಕಡಿಮೆ. 20 ನೇ ಶತಮಾನದ ಆರಂಭದಲ್ಲಿ, ಭಾರತದ ಲಿಂಗ ಅನುಪಾತ 972 ಆಗಿತ್ತು. ಇದು 1941 ರವರೆಗೆ ಕುಸಿತಾ ಇತ್ತು. 2011 ರ ಜನಗಣತಿಗೆ ಹೋಲಿಸಿದರೆ ಭಾರತದಲ್ಲಿ ಲಿಂಗ ಅನುಪಾತ 10 ಅಂಕಗಳಷ್ಟು ಸುಧಾರಿಸಿತ್ತು. 2024ರ ವರದಿ ಪ್ರಕಾರ ಭಾರತದ ಒಟ್ಟೂ ಜನಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆ ಶೇಕಡಾ 48.2ರಷ್ಟು. ಜನನ ಪ್ರಮಾಣ, ಆರೋಗ್ಯ ರಕ್ಷಣೆ ಮತ್ತು ವಲಸೆಯಂತಹ ಕಾರಣಗಳಿಂದಾಗಿ, ಕೆಲವು ರಾಜ್ಯಗಳಲ್ಲಿ ಮಹಿಳೆಯರ ಜನಸಂಖ್ಯೆಯು ಇತರ ರಾಜ್ಯಗಳಿಗಿಂತ ಹೆಚ್ಚಾಗಿದೆ. ಮತ್ತೆ ಕೆಲವು ಕಡೆ ಪುರುಷರಿಗಿಂತ ಕಡಿಮೆ ಇದೆ.
ಅತಿ ಹೆಚ್ಚು ಮಹಿಳಾ ಜನಸಂಖ್ಯೆ ಹೊಂದಿರುವ ರಾಜ್ಯಗಳು :
ಕೇರಳ (Kerala) : ಕೇರಳ ಭಾರತದಲ್ಲಿ ಅತಿ ಹೆಚ್ಚು ಮಹಿಳಾ ಜನಸಂಖ್ಯೆಯನ್ನು ಹೊಂದಿದೆ. 2011 ರಲ್ಲಿ, ಕೇರಳದಲ್ಲಿ 1,000 ಪುರುಷರಿಗೆ 1,084 ಮಹಿಳೆಯರು ಇದ್ದರು. ಇದರರ್ಥ ರಾಜ್ಯದಲ್ಲಿ ಪುರುಷರಿಗಿಂತ ಹೆಚ್ಚಿನ ಮಹಿಳೆಯರಿದ್ದಾರೆ. ಉತ್ತಮ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಅಭಿವೃದ್ಧಿಯಿಂದಾಗಿ ಕೇರಳ ಹಲವು ವರ್ಷಗಳಿಂದ ಹೆಚ್ಚಿನ ಲಿಂಗ ಅನುಪಾತವನ್ನು ಕಾಯ್ದುಕೊಂಡಿದೆ.
ಪುದುಚೇರಿ : ದೇಶದ ಅತಿ ಹೆಚ್ಚು ಮಹಿಳಾ ಜನಸಂಖ್ಯೆ ಹೊಂದಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಪುದುಚೇರಿ ಎರಡನೇ ಸ್ಥಾನದಲ್ಲಿದೆ. 2011 ರ ಜನಗಣತಿಯಲ್ಲಿ, ಇಲ್ಲಿ 1000 ಪುರುಷರಿಗೆ 1,037 ಮಹಿಳೆಯರಿದ್ದರು.
ತಮಿಳುನಾಡು : ಕೇರಳದ ನೆರೆಯ ರಾಜ್ಯ ತಮಿಳುನಾಡು ದೇಶದಲ್ಲಿ ಅತಿ ಹೆಚ್ಚು ಮಹಿಳಾ ಜನಸಂಖ್ಯೆಯನ್ನು ಹೊಂದಿರುವ ರಾಜ್ಯಗಳಲ್ಲಿ ಮೂರನೇ ಸ್ಥಾನ ಪಡೆದಿದೆ. ಇಲ್ಲಿ 1000 ಪುರುಷರಿಗೆ ಮಹಿಳೆಯರ ಸಂಖ್ಯೆ 996.
ಆಂಧ್ರಪ್ರದೇಶ : ತಮಿಳುನಾಡಿನ ನಂತ್ರದ ಸ್ಥಾನ ಆಂಧ್ರಪ್ರದೇಶಕ್ಕೆ ಸಿಗುತ್ತದೆ. ಇಲ್ಲಿಯೂ ಮಹಿಳಾ ಜನಸಂಖ್ಯೆ ಹೆಚ್ಚಿದೆ. ಆಂಧ್ರಪ್ರದೇಶದಲ್ಲಿ ಪ್ರತಿ 1000 ಪುರುಷರಿಗೆ ಮಹಿಳೆಯರ ಸಂಖ್ಯೆ 993.
ಛತ್ತೀಸ್ಗಢ : ಇನ್ನು ಪಟ್ಟಿಯಲ್ಲಿ ಛತ್ತೀಸ್ಗಢ ಐದನೇ ಸ್ಥಾನದಲ್ಲಿದೆ. ದೇಶದ ಅತಿ ಹೆಚ್ಚು ಮಹಿಳಾ ಜನಸಂಖ್ಯೆಯನ್ನು ಹೊಂದಿರುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸ್ಥಾನ ಪಡೆದಿರುವ ಛತ್ತೀಸ್ಗಢದಲ್ಲಿ 1000 ಪುರುಷರಿಗೆ ಮಹಿಳೆಯರ ಸಂಖ್ಯೆ 991 ಆಗಿತ್ತು.
ಪ್ರಮುಖ ಮಾಹಿತಿ : ದೇಶದಲ್ಲಿ ಹೆಚ್ಚು ಮಹಿಳೆಯರನ್ನು ಹೊಂದಿರುವ ರಾಜ್ಯಗಳ ಈ ಪಟ್ಟಿ 2011ರ ಜನಗಣತಿಯನ್ನು ಆಧಾರಿಸಿದೆ. ಇದ್ರ ನಂತ್ರ ಸಾಕಷ್ಟು ಬದಲಾವಣೆಯಾಗಿರುವ ಸಾಧ್ಯತೆ ಇದೆ.
