ಪ್ರಶ್ನೆ : ನನ್ನ ಕಿವಿಗೆ ಆಗಾಗ ಬೀಳೋ ಮಾತು ಹೆಂಗಸರು ಯಾವಾಗ ನಿಯಮಿತವಾಗಿ ಸೆಕ್ಸ್ ಮಾಡೋದಕ್ಕೆ ಶುರು ಮಾಡ್ತಾರೋ ಆಗ ಅವರ ತೂಕ ಹೆಚ್ಚಾಗುತ್ತದೆ. ಮುಖ್ಯವಾಗಿ ಎದೆ ಮತ್ತು ಹಿಂಭಾಗದಲ್ಲಿ ಕೊಬ್ಬು ಹೆಚ್ಚುತ್ತೆ. ಅಲ್ಲಿಯವರೆಗೆ ಬಿಗಿಯಾಗಿದ್ದ ಮೈಕಟ್ಟು ಬಿಗು ಕಳೆದುಕೊಂಡು ಸಡಿಲವಾಗುತ್ತೆ.. ಹೀಗೆಲ್ಲ. ಇಂಥದ್ದನ್ನೆಲ್ಲ ಕೇಳಿದ್ದು ಮಾತ್ರವಲ್ಲ. ನಿತ್ಯ ಬದುಕಿನಲ್ಲಿ ನೋಡುತ್ತಲೂ ಇರುತ್ತೇನೆ. ಮದುವೆಗೂ ಮುಂಚೆ ಒಣಕಲು ಕಡ್ಡಿಯ ಹಾಗಿದ್ದ ಹುಡುಗಿ ಮದುವೆಯಾಗಿ ತಿಂಗಳಾಗುತ್ತಲೇ ಅಸಹ್ಯವಾಗಿ ದಪ್ಪಗಾಗುತ್ತಾಳೆ. ಅವಳ ತೂಕ ಏರುತ್ತ ಹೋಗುತ್ತದೆ. ಅವಳು ಸೌಂದರ್ಯ, ಆಕರ್ಷಣೆಗಳೆರಡನ್ನೂ ಕಳೆದುಕೊಂಡು ಜೀವನದಲ್ಲಿ ಜಿಗುಪ್ಸೆ ಬಂದವರ ಥರ ಆಡುತ್ತಿರುತ್ತಾಳೆ. ಮುಂದಿನ ತಿಂಗಳು ನನ್ನ ಮದುವೆ ಯಾಕೋ ಇತ್ತೀಚೆಗೆ ಈ ಯೋಚನೆ ತಲೆಯೊಳಗೆ ಕೂತು ಬಿಟ್ಟಿದೆ, ಈ ಥರದ ಅನಾಕರ್ಷಕ ಮಹಿಳೆಯಾಗಲು ನನಗಿಷ್ಟವಿಲ್ಲ. ಮದುವೆ ಆದ ಮೇಲೆ ತೂಕ ಹೆಚ್ಚಾಗದ ಹಾಗೆ ತಡೆಯೋಕೆ ಸಾಧ್ಯ ಇಲ್ಲವಾ? ಇದೇನು ಹಾರ್ಮೋನ್ ಸಮಸ್ಯೆಯಾ?

ಉತ್ತರ : ಇದು ಬಹಳ ಜನಪ್ರಿಯವಾದ ನಂಬಿಕೆ. ಯಾವಾಗ ಹೆಣ್ಣೊಬ್ಬಳ ಸೆಕ್ಸ್ ಲೈಫ್ ಶುರುವಾಗುತ್ತೋ ಆಗ ಅವಳ ತೂಕ ಹೆಚ್ಚಾಗುತ್ತೆ. ಎದೆ ಮತ್ತು ಹಿಪ್ ದೊಡ್ಡದಾಗುತ್ತೆ ಅಂತೆಲ್ಲ ಹೇಳ್ತಾರೆ. ಆದರೆ ಇದಕ್ಕೆ ಯಾವ ಪುರಾವೆಯೂ ಇಲ್ಲ. ಮದುವೆ ಆದ ಮೇಲೆ ಅಥವಾ ಅವಳ ಸೆಕ್ಸ್ ಲೈಫ್ ಶುರುವಾದ ಮೇಲೆ ಎದೆ ಮತ್ತು ಹಿಂಭಾಗ ದಪ್ಪಗಾಗುತ್ತೆ ಅಥವಾ ಶೇಪ್ ಕಳ್ಕೊಳುತ್ತೆ ಅನ್ನುವುದಕ್ಕೆ ವೈಜ್ಞಾನಿಕವಾಗಿ ಯಾವ ಪುರಾವೆಯೂ ಇಲ್ಲ. ವೀರ್ಯ ಹೆಣ್ಣಿನ ದೇಹ ಸೇರಿಸಿದರೂ ಅದು ಅವಳ ರಕ್ತನಾಳಗಳಲ್ಲೇನು ಸೇರಿಕೊಳ್ಳಲ್ಲ. ಅಥವಾ ನೇರವಾಗಿ ಜೀರ್ಣಕ್ರಿಯೆಗೆ ಒಳಪಡಲ್ಲ. ಹೀಗಾಗಿ ಕ್ಯಾಲೊರಿ ಹೆಚ್ಚಾಗೋದು ಹೇಗೆ? ವೋರಲ್ ಸೆಕ್ಸ್ ಮೂಲಕ ಅವಳ ದೇಹ ಸೇರಿತು ಅಂತಾದರೂ ದೇಹ ಸೇರುವುದು ಕೇವಲ ಮೂರು ಎಂಎಲ್ ನಷ್ಟು ವೀರ್ಯಮಾತ್ರ. ಅದರಲ್ಲಿರುವುದು ಕೇವಲ 15 ಕ್ಯಾಲೊರಿ ಅಷ್ಟೇ. ಅದರಿಂದ ದೇಹದ ತೂಕ ಖಂಡಿತವಾಗಿ ಹೆಚ್ಚಾಗಲ್ಲ.

 

#FeelFree: ಹುಡುಗೀರು ಸೆಕ್ಸ್ ಟಾಯ್ಸ್ ಬಳಸೋದು ಸೇಫಾ?...

ಹೀಗೆ ವೈದ್ಯಕೀಯ ಅಥವಾ ವೈಜ್ಞಾನಿಕ ಕಾರಣಗಳಿಲ್ಲದಿದ್ದರೂ ಕೆಲವೊಂದು ಅಧ್ಯಯನಗಳ ಪ್ರಕಾರ ಮದುವೆಯಾದ ಮೇಲೆ ತೂಕ ಹೆಚ್ಚಾಗೋದು ಹೌದು, ಆದರೆ ಅದು ಕೇವಲ ಹೆಣ್ಣಿನ ತೂಕ ಮಾತ್ರವಲ್ಲ, ಗಂಡಿನ ತೂಕವೂ ಹೆಚ್ಚಾಗುತ್ತದೆ. ಗಂಡು ಹೆಣ್ಣುಗಳಿಬ್ಬರ ದೇಹದ ಬಿಗುವೂ ಕಡಿಮೆಯಾಗಿ ದೇಹದ ತುಸು ಶೇಪ್ ಕಳೆದುಕೊಳ್ಳೋದು ಹೌದು ಅನ್ನುತ್ತವೆ ಈ ಸ್ಟಡಿಗಳು. ಮೊದಲೆಲ್ಲ ಅಸುರಕ್ಷಿತ ಭಾವ ಇದ್ದರೆ ಮದುವೆಯಾದ ಮೇಲೆ ಒಂದು ಸುರಕ್ಷಿತ ಭಾವ ಹುಟ್ಟಿ ಹೀಗಾಗಬಹುದು ಎನ್ನಲಾಗುತ್ತದೆ. ಜೊತೆಗೆ ಸಿಂಗಲ್ ಆಗಿದ್ದಾಗ ಕಡಿಮೆ ಆಹಾರ ತಿನ್ನುತ್ತಿದ್ದವರು ಆ ಬಳಿಕ ಹೆಚ್ಚೆಚ್ಚು ತಿನ್ನಬಹುದು. ಮದುವೆಗೆ ಮೊದಲು ಆಹಾರದ ಬಗ್ಗೆ ತುಸು ಅಲಕ್ಷ್ಯವಿದ್ದರೆ ಮದುವೆಯ ನಂತರ ಆಸಕ್ತಿ ಹುಟ್ಟಬಹುದು. ಮಕ್ಕಳಾಗದಂತೆ ತೆಗೆದುಕೊಳ್ಳುವ ಗರ್ಭ ನಿರೋಧಕಗಳು ನಿಮ್ಮ ತೂಕ ಹೆಚ್ಚಿಸಬಹುದು.
 

ಆದರೆ ಇದಕ್ಕೆ ಸರೀ ಉಲ್ಟಾ ಹೊಡಿಯುವ ಇನ್ನೊಂದು ಸ್ಟಡಿಯೂ ಇದೆ. ಆ ಪ್ರಕಾರ ನಿತ್ಯ ಸೆಕ್ಸ್ ಮಾಡೋದರಿಂದ ಸುಲಭವಾಗಿ ಕ್ಯಾಲೋರಿ ಇಳಿಸಬಹುದು. ನೀವು ಬಹಳಷ್ಟು ಹೊತ್ತು ವ್ಯಾಯಾಮ ಮಾಡಿದ್ದಕ್ಕಿಂತ ಹೆಚ್ಚಿನ ಕ್ಯಾಲೋರಿ ಒಂದು ಸಲದ ಸೆಕ್ಸ್ ನಲ್ಲಿ ಇಳಿಯುತ್ತದೆ ಅಂತಾರೆ. ವ್ಯಾಯಾಮ ಮಾಡೋದರಿಂದ ನಿಮ್ಮ ದೇಹ ತುಸು ಹಗುರಾಗಬಹುದು. ಆದರೆ ಸೆಕ್ಸ್ ನಿಂದ ದೇಹ ಹಗುರಾಗುವ ಜೊತೆಗೆ ಟೆನ್ಶನ್, ಸ್ಟ್ರೆಸ್ ಕಡಿಮೆಯಾಗಿ ಮನಸ್ಸೂ ಹಗುರಾಗುತ್ತದೆಯಂತೆ.

 

ನಿಮ್ಮ ಸಂಗಾತಿ ಬೆವರುತ್ತಿದ್ದರೆ ನಿಮ್ಮಿಂದ 'ಅದನ್ನು' ಬಯಸುತ್ತಿರಬಹುದು!...
 

ನಿಮಗೊಂದು ಕಿವಿಮಾತು. ಮದುವೆ ಆದ ಮೇಲೂ ಆರೋಗ್ಯಪೂರ್ಣ ಸಮತೋಲನದ ಆಹಾರ ಸೇವನೆ ಮಾಡುತ್ತಿದ್ದರೆ, ನಿತ್ಯ ವ್ಯಾಯಾಮ ಮಾಡುತ್ತಿದ್ದರೆ, ಯೋಗ ಪ್ರಾಣಾಯಾಮ ಇತ್ಯಾದಿಗಳನ್ನು ನಿಯಮಿತವಾಗಿ ಮಾಡುತ್ತಿದ್ದರೆ ಖಂಡಿತಾ ಶರೀರ ದಪ್ಪಗಾಗಲ್ಲ. ಫಿಟ್ ನೆಸ್‌ ಕಡಿಮೆಯಾಗಲ್ಲ. ಹೆಚ್ಚಿನ ಸಲ, ಮದುವೆ ಆಯ್ತಲ್ಲ ಇನ್ನೇನು ಅಂತ ವ್ಯಾಯಾಮ, ಆಹಾರದತ್ತ ನಿರ್ಲಕ್ಷ್ಯ ಮಾಡುತ್ತಾರೆ. ಇದರಿಂದ ಫಿಟ್ ನೆಸ್ ಕಳೆದುಕೊಳ್ಳುತ್ತಾರೆ. ನಿಮ್ಮ ಡಯೆಟ್, ವರ್ಕೌಟ್ ಕರೆಕ್ಟಾಗಿರುವ ಹಾಗೆ ನೋಡಿಕೊಳ್ಳಿ. ಮದುವೆ ಆದ ಮೇಲೂ ಆಕರ್ಷಕವಾಗಿ, ಅದೇ ಸ್ಟಿಫ್ ನೆಸ್ ಮುಂದುವರಿಯೋದು ನಿಮ್ಮ ಗಮನಕ್ಕೆ ಬರುತ್ತೆ.