Asianet Suvarna News Asianet Suvarna News

ಐದನೇ ವಯಸ್ಸಿನಲ್ಲಿ Indira Gandhi ಗೊಂಬೆ ಸುಟ್ಟಿದ್ದೇಕೆ?

ಇಂದಿರಾ ಗಾಂಧಿ ಮಾಜಿ ಪ್ರಧಾನಿ, ಭಾರತದ ಶಕ್ತಿಶಾಲಿ ಮಹಿಳೆ ಎಂಬುದು ಬಹುತೇಕ ಎಲ್ಲರಿಗೂ ತಿಳಿದಿದೆ. ಮಕ್ಕಳ ಪುಸ್ತಕದಲ್ಲಿ ಕೂಡ ಅವರ ಬಗ್ಗೆ ನಾವು ಓದಬಹುದು. ಆದ್ರೆ ಕೆಲವೊಂದು ವಿಷ್ಯಗಳ ಬಗ್ಗೆ ನಮಗೆ ಈಗ್ಲೂ ತಿಳಿದಿಲ್ಲ. ಅದ್ರಲ್ಲಿ ಇಂದಿರಾ ಗಾಂಧಿ ಬಾಲ್ಯವೂ ಒಂದು.
 

When Indira Gandhi Burned Her Childhood Doll
Author
First Published Dec 19, 2022, 5:33 PM IST

ಭಾರತದ ಅತ್ಯಂತ ಶಕ್ತಿಶಾಲಿ ಮಹಿಳೆ ಇಂದಿರಾ ಗಾಂಧಿ. ಇಂದಿರಾ ಗಾಂಧಿ ಬಗ್ಗೆ ಎಲ್ಲರಿಗೂ ತಿಳಿಸಿದೆ. ಉತ್ತಮ ರಾಜಕಾರಣಿಯಷ್ಟೇ ಆಗಿರಲಿಲ್ಲ ಪ್ರಬಲ ಮಹಿಳೆ ಆಗಿದ್ದರು ಇಂದಿರಾ ಗಾಂಧಿ. ಅವರು ಬಾಲ್ಯದಿಂದಲೇ ರಾಜಕೀಯಕ್ಕೆ ಸಂಬಂಧಿಸಿದ ತರಬೇತಿಯನ್ನು ಪಡೆದಿದ್ದರು. ಅವರು ತಮ್ಮ ತಂದೆಯನ್ನು ನೋಡಿ ಸಾಕಷ್ಟು ವಿಷ್ಯಗಳನ್ನು ಕಲಿತಿದ್ದರು. 

ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಇಂದಿರಾ ಗಾಂಧಿ (Indira Gandhi) ಮುಂದಿದ್ದರು. ಪಕ್ಷವನ್ನು ಮುನ್ನಡೆಸುವ, ದೇಶವನ್ನು ಆಳುವ ಶಕ್ತಿ ಹೊಂದಿದ್ದ ಇಂದಿರಾ ಗಾಂಧಿ ಬಾಲ್ಯದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಪುಸ್ತಕವೊಂದರಲ್ಲಿ ಇಂದಿರಾ ಗಾಂಧಿ ಬಗ್ಗೆ ಕೆಲ ಆಶ್ಚರ್ಯಕರ ವಿಷ್ಯವನ್ನು ಹೇಳಲಾಗಿದೆ.

ಇಂದಿರಾ ಗಾಂಧಿ ಬಾಲ್ಯ (Childhood) : ಬಾಲ್ಯದಲ್ಲಿ ಮಕ್ಕಳು (Children) ಆಟವಾಡ್ತಾ ಕಾಲ ಕಳೆಯುತ್ತಾರೆ. ಆದ್ರೆ ಇಂದಿರಾ ಗಾಂಧಿ ಬಾಲ್ಯ ಹಾಗಿರಲಿಲ್ಲ. ಆಟಕ್ಕಿಂತ ಹೆಚ್ಚು ಅವರು ಭಾಷಣಕ್ಕೆ ಪ್ರಾಮುಖ್ಯತೆ ನೀಡ್ತಿದ್ದರು. ಮನೆ ಕೆಲಸದವರ ಮುಂದೆ ನಿಂತು ಭಾಷಣ ಮಾಡ್ತಿದ್ದರು. ಇಂದಿರಾ ಗಾಂಧಿ ತಮ್ಮ 5ನೇ ವಯಸ್ಸಿನಲ್ಲಿ ತಮ್ಮ ನೆಚ್ಚಿನ ಗೊಂಬೆಯೊಂದನ್ನು ಸುಟ್ಟಿದ್ದರು. 

Saree Fall Trend: ಸೀರೆ ಫಾಲ್ ಟ್ರೆಂಡ್ ಶುರುವಾಗಿದ್ದು ಯಾವಾಗ ಗೊತ್ತಾ?

ಐದು ವರ್ಷದ ಮಗುವಿಗೆ ಏನು ತಿಳಿಯಲು ಸಾಧ್ಯ ಹೇಳಿ? ತಾನಾಯ್ತು ತನ್ನ ಆಟವಾಯ್ತು ಎಂದಿರುವ ಸಮಯವದು. ಆದ್ರೆ ಇಂದಿರಾ ಗಾಂಧಿ ಆ ಸಮಯದಲ್ಲಿಯೇ ಬ್ರಿಟಿಷ್ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದರು. ತಮ್ಮ ಐದನೇ ವಯಸ್ಸಿನಲ್ಲಿ ತಮ್ಮಿಷ್ಟದ ಗೊಂಬೆಯನ್ನು ಸುಟ್ಟಿದ್ದರು. ಇದಕ್ಕೆ ಕಾರಣ ಆ ಗೊಂಬೆ ಸಿದ್ಧವಾಗಿದ್ದರು ಬ್ರಿಟಿಷರ ಕೈನಲ್ಲಾಗಿತ್ತು. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಬ್ರಿಟಿಷರ ಸರಕುಗಳನ್ನು ಬಹಿಷ್ಕರಿಸುವ ಬಗ್ಗೆ ಚರ್ಚೆಗಳಾಗುತ್ತಿತ್ತು. ಆ ಸಮಯದಲ್ಲಿ ಜನರು ಈ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ವಿದೇಶಿ ವಸ್ತುಗಳನ್ನು ಸುಡುತ್ತಿದ್ದರು. ಇಂಗ್ಲೆಂಡಿನಿಂದ ಬಂದ ಅತ್ಯಂತ ನೆಚ್ಚಿನ ಗೊಂಬೆಯನ್ನು ಇಂದಿರಾ ಗಾಂಧಿ ಸುಟ್ಟು ಹಾಕಿದ್ದು ಇದೇ ಕಾರಣಕ್ಕೆ.

ಮೂಕ ಗೊಂಬೆಯಿಂದ ಐರನ್ ಲೇಡಿಯಾದ ಇಂದಿರಾ ಗಾಂಧಿ :   ರಾಜಕೀಯ ಪ್ರವೇಶಿಸಿದ ಆರಂಭದ ದಿನಗಳಲ್ಲಿ ಅವರನ್ನು ಮೂಕ ಗೊಂಬೆ ಎಂದು ಕರೆಯುತ್ತಿದ್ದರು. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹಠಾತ್ ಮರಣದ ಎರಡು ವಾರಗಳ ನಂತರ ಜನವರಿ 1966 ರಲ್ಲಿ ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇಂದಿರಾಗಾಂಧಿ ಅವರನ್ನು ಪ್ರಧಾನಿ ಮಾಡುವುದು ಕಾಂಗ್ರೆಸ್‌ನ ಮೊದಲ ಆಯ್ಕೆಯಾಗಿರಲಿಲ್ಲ. ಆದರೆ ಆ ಸಮಯದಲ್ಲಿ ಅವರಿಗೆ ಯಾವುದೇ ಆಯ್ಕೆ ಇರಲಿಲ್ಲ.

ಮೊರಾರ್ಜಿ ದೇಸಾಯಿ ಅವರು ಕಾಂಗ್ರೆಸ್‌ನಲ್ಲಿ ಜವಾಹರಲಾಲ್ ನೆಹರು ನಂತರ ದೊಡ್ಡ ನಾಯಕ ಎಂದು ಪರಿಗಣಿಸಲ್ಪಟ್ಟಿದ್ದರು. ಆದರೆ ಅಂದಿನ ಹಿರಿಯ ನಾಯಕರು ಅವರನ್ನು ಇಷ್ಟಪಡಲಿಲ್ಲ. ಪ್ರಧಾನಿಯಾಗುವ ಮೊದಲು ಇಂದಿರಾ ಗಾಂಧಿ ಅವರು 1960ರ ದಶಕದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದರು.  ಮೊರಾರ್ಜಿ ದೇಸಾಯಿಯವರ ಜೊತೆಗೆ ಲಾಲ್ ಬಹದ್ದೂರ್ ಶಾಸ್ತ್ರಿಯವರು ಕೂಡ ಇಂದಿರಾಗಾಂಧಿಯನ್ನು ಪ್ರಧಾನಿ ಮಾಡುವ ಬಗ್ಗೆ ವಿರೋಧಿಸಿದ್ದರು. ಆದರೆ ಶಾಸ್ತ್ರಿಯವರ ಮರಣದ ನಂತರ ಇಡೀ ಆಟವೇ ತಲೆಕೆಳಗಾಗಿತ್ತು. ಆ ವೇಳೆ ಕಾಂಗ್ರೆಸ್ಸಿನ ಇತರ ದೊಡ್ಡ ನಾಯಕರು ಅಧಿಕಾರಕ್ಕೆ ಬರದಂತೆ ಇಂದಿರಾ ಗಾಂಧಿಯವರನ್ನು ಪ್ರಧಾನಿ ಮಾಡಲಾಯಿತು.

ಇಂದಿರಾಗಾಂಧಿ ಪ್ರಧಾನಿಯಾದ ನಂತರ ಮೊದಲ ಕೆಲವು ವರ್ಷ ದೊಡ್ಡ ಬದಲಾವಣೆ ಆಗಲಿಲ್ಲ. 1969 ರಲ್ಲಿ ಕೇಂದ್ರ ಬಜೆಟ್ ಮಂಡಿಸಲು ಅವರಿಗೆ ಕಷ್ಟವಾಯಿತು. ಇಂದಿರಾ ಗಾಂಧಿ ಭಾಷಣ ಮಾಡುವಾಗ ಸ್ವಲ್ಪ ತಡವರಿಸಿದ್ದರು. ಆ ಸಮಯದಲ್ಲಿ ಸಮಾಜವಾದಿ ಪಕ್ಷದ ರಾಮ್ ಮನೋಹರ್ ಲೋಹಿಯಾ ಅವರು ಇಂದಿರಾ ಗಾಂಧಿಯನ್ನು ಮೂಕ ಗೊಂಬೆ ಎಂದು ಕರೆದರು.

KITCHEN TIPS: ಕುಕ್ಕರ್ ಸೀಟಿ ಹೊಡೆಸುವ ಮುನ್ನ ಇದನ್ನೆನಲ್ಲಾ ಗೊತ್ತು ಮಾಡ್ಕೊಳ್ಳಿ!

ಇದು ಇಂದಿರಾ ಗಾಂಧಿಯವರನ್ನು ಕೆಣಕಿತ್ತು.  ಅವರು ತಮ್ಮದೇ ಆದ ರಾಜಕೀಯ ಶುರು ಮಾಡಿದ್ರು. ಸಾರ್ವಜನಿಕರ ವಿಶ್ವಾಸ ಗೆದ್ದರು. ಅವರು ದೇಶಾದ್ಯಂತ ಹಲವಾರು ಪ್ರವಾಸಗಳನ್ನು ಮಾಡಿದರು. ದೇಶದಾದ್ಯಂತ ರಾಜ ಕುಟುಂಬಗಳು ಮತ್ತು ರಾಜ್ಯ ಆಡಳಿತಗಾರರನ್ನು ರಾಷ್ಟ್ರೀಕರಣಗೊಳಿಸಿದ್ರು.  ಇದು ಒಂದು ದೊಡ್ಡ ಹೆಜ್ಜೆಯಾಯ್ತು. ಅನೇಕ  ವಿರೋಧದ ನಡುವೆಯೇ 14 ದೊಡ್ಡ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿದ್ರು. ಎರಡು ವರ್ಷಗಳಲ್ಲಿ ಇಂದಿರಾ ಗಾಂಧಿ ತಮ್ಮ ಇಮೇಜನ್ನು ಸಂಪೂರ್ಣವಾಗಿ ಬದಲಾಯಿಸಿದರು. 1971 ರಲ್ಲಿ ಇಂಡೋ-ಪಾಕ್ ಯುದ್ಧ ನಡೆಯಿತು ಮತ್ತು ಬಾಂಗ್ಲಾದೇಶವನ್ನು ರಚಿಸಲಾಯಿತು. ಆ ಸಮಯದಲ್ಲಿ ಇಂದಿರಾಗಾಂಧಿ ಅವರು ಯುದ್ಧದ ಪ್ಲಾನ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಯುದ್ಧ ಕೊನೆಗೊಂಡಾಗ  ಇಂದಿರಾ ಗಾಂಧಿ ಮೂಕ ಗೊಂಬೆಯಿಂದ ಐರನ್ ಲೇಡಿ ಆಗಿ ಬದಲಾಗಿದ್ದರು. 

Follow Us:
Download App:
  • android
  • ios