Kitchen Tips: ಕುಕ್ಕರ್ ಸೀಟಿ ಹೊಡೆಸುವ ಮುನ್ನ ಇದನ್ನೆನಲ್ಲಾ ಗೊತ್ತು ಮಾಡ್ಕೊಳ್ಳಿ!

ಅಡುಗೆ ಮನೆಯಲ್ಲಿ ಎಲ್ಲ ಪಾತ್ರೆಗಳ ಜೊತೆ ಪ್ರೆಶರ್ ಕುಕ್ಕರ್ ಗೆ ದೊಡ್ಡ ಸ್ಥಾನವಿದೆ. ಕುಕ್ಕರ್ ಇಲ್ಲದೆ ಅಡುಗೆ ಕಷ್ಟ ಎನ್ನುವವರಿದ್ದಾರೆ. ಬಹುತೇಕ ಎಲ್ಲವನ್ನೂ ಕುಕ್ಕರ್ ಗೆ ಹಾಕಿ ಶಿಳ್ಳೆ ಹೊಡೆಸುವ ಮಹಿಳೆಯರು ಖರೀದಿ ಮಾಡುವಾಗ ಯಾವುದು ಬೆಸ್ಟ್ ಎಂಬುದನ್ನು ತಿಳಿದಿರೋದು ಒಳ್ಳೆಯದು. 
 

Types Of Pressure Cooker

ಅಡುಗೆ ತಯಾರಿಸಲು ನಾವು ವಿವಿಧ ರೀತಿಯ ಪಾತ್ರೆಗಳನ್ನು ಬಳಸುತ್ತೇವೆ. ಹಿಂದಿನ ಕಾಲದಲ್ಲಿ ಮಣ್ಣಿನಿಂದ ಮಾಡಿದ ಮಡಿಕೆಯಲ್ಲಿ ಅಡುಗೆ ಮಾಡ್ತಿದ್ದರು. ದಿನಗಳು ಉರುಳಿದಂತೆ ಮಾರುಕಟ್ಟೆಗೆ ಹೊಸ ಹೊಸ ಲೋಹದ ಪಾತ್ರೆಗಳು ಲಗ್ಗೆಯಿಟ್ಟವು. ಅಲ್ಯೂಮಿನಿಯಂ, ಸ್ಟೀಲ್, ನಾನ್ ಸ್ಟಿಕ್ ಸೇರಿದಂತೆ ಅನೇಕ ರೀತಿಯ ಪಾತ್ರೆಗಳು ಈಗ ಲಭ್ಯವಿದೆ. ಆದ್ರೆ ಈಗ ಮಣ್ಣಿನ ಪಾತ್ರೆ ಬಳಕೆ ಮತ್ತೆ ಫ್ಯಾಷನ್ ಆಗ್ತಿದೆ. ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲಿ ಏನಿರಲಿ ಬಿಡಲಿ ಪ್ರೆಶರ್ ಕುಕ್ಕರ್ ಇದ್ದೇ ಇರುತ್ತದೆ. ಕಡಿಮೆ ಸಮಯದಲ್ಲಿ ಆಹಾರವನ್ನು ಬೇಯಿಸಲು ಪ್ರೆಶರ್ ಕುಕ್ಕರನ್ನು ಬಳಸಲಾಗುತ್ತದೆ. ಆಹಾರ ಬೆಂದಾಗ, ಕುಕ್ಕರ್ ಶಿಳ್ಳೆ ಹೊಡೆಯುವುದ್ರಿಂದ ಆಹಾರ ಸಿದ್ಧವಾಗಿದೆ ಎಂಬುದನ್ನು ಅರಿಯುವುದು ಸುಲಭ. ಸಾಮಾನ್ಯ ಪಾತ್ರೆಗಿಂತ ಕುಕ್ಕರ್ ನಲ್ಲಿ ಅನ್ನ ಬೇಗ ಸಿದ್ಧವಾಗುತ್ತದೆ. ಈ ಕಾರಣಕ್ಕೆ ಬಹುತೇಕರ ಮನೆಯಲ್ಲಿ ಅನ್ನವನ್ನು ಕುಕ್ಕರ್ ನಲ್ಲಿ ಮಾಡಲಾಗುತ್ತದೆ. ಇದಲ್ಲದೆ ಪಲಾವ್, ಸಾಂಬಾರ್ ಸೇರಿದಂತೆ ಬಹುತೇಕ ಅಡುಗೆ ಕುಕ್ಕರ್ ನಲ್ಲಿ ಸಿದ್ಧವಾಗುತ್ತದೆ.  

ಕುಕ್ಕರ್ (Cooker) ನಲ್ಲಿಯೇ ಆಹಾರ (Food) ಬೇಯುವ ಕಾರಣ ನಾವು ಉತ್ತಮ ಗುಣಮಟ್ಟದ ಕುಕ್ಕರ್  ಬಳಸಬೇಕು. ಪ್ರೆಶರ್ ಕುಕ್ಕರ್ ಅಡುಗೆ ಮನೆಯಲ್ಲಿ ಬೇಕು ಎನ್ನುವ ಕಾರಣಕ್ಕೆ ಬಹುತೇಕರು ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕುಕ್ಕರ್ ಖರೀದಿ ಮಾಡ್ತಾರೆ. ಆದ್ರೆ ಅನೇಕ ಜನರಿಗೆ ಯಾವುದು ಉತ್ತಮ ಕುಕ್ಕರ್ ಎಂಬ ಬಗ್ಗೆ ಮಾಹಿತಿ ಇಲ್ಲ. ನಾವಿಂದು ಯಾವ ಕುಕ್ಕರ್ ಒಳ್ಳೆಯದು ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೆವೆ.  

COOKING TIPS: ಗೃಹಿಣಿಯರೇ, ಅಪ್ಪಿತಪ್ಪಿಯೂ ಇಂಥಾ ಪದಾರ್ಥ ಮಿಕ್ಸಿಗೆ ಹಾಕ್ಬೇಡಿ !

ಪ್ರೆಶರ್ ಕುಕ್ಕರ್ ಅಂದ್ರೇನು? : ಪ್ರೆಶರ್ ಕುಕ್ಕರ್ ಒಂದು ರೀತಿಯ ಪಾತ್ರೆ. ಇದರಲ್ಲಿ ಹೆಚ್ಚಿನ ಒತ್ತಡದ ಸಹಾಯದಿಂದ ಆಹಾರವನ್ನು ಬೇಯಿಸಲಾಗುತ್ತದೆ. ಪ್ರೆಶರ್ ಕುಕ್ಕರ್‌ನ ಮುಚ್ಚಳವನ್ನು ಸರಿಯಾಗಿ ಮುಚ್ಚಿದ ನಂತರ, ಅದರಲ್ಲಿ ಉಗಿ ರೂಪುಗೊಳ್ಳಲು ಪ್ರಾರಂಭವಾಗುತ್ತದೆ. ಇದರಿಂದಾಗಿ ಆಹಾರವು ತ್ವರಿತವಾಗಿ ಬೇಯುತ್ತದೆ. ಕುಕ್ಕರ್‌ನಲ್ಲಿ ಸಾಕಷ್ಟು ಉಗಿ ಬಂದಾಗ  ಸೀಟಿ ಏರುತ್ತದೆ ಮತ್ತು ಶಿಳ್ಳೆ ಶುರುವಾಗುತ್ತದೆ. ಶಿಳ್ಳೆ (Whistle) ಹೊಡೆಯುತ್ತಿದೆ ಅಂದ್ರೆ ಆಹಾರ ಬೇಯ್ತಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಬಹುದು. 

ಯಾವ ಕುಕ್ಕರ್ ಬೆಸ್ಟ್ :  
ಸ್ಟೇನ್ಲೆಸ್ ಸ್ಟೆಲ್ (Stainless Steel ) ಪ್ರೆಶರ್ ಕುಕ್ಕರ್ :
 ಸ್ಟೇನ್‌ಲೆಸ್ ಸ್ಟೀಲ್ ಮತ್ತು ಅಲ್ಯೂಮಿನಿಯಂ ಪ್ರೆಶರ್ ಕುಕ್ಕರ್‌ ಒಂದೇ ಆಗಿದೆ ಎಂದು ಅನೇಕರು ಭಾವಿಸಿದ್ದಾರೆ. ಆದರೆ ಇದು ಸತ್ಯವಲ್ಲ. ಸ್ಟೇನ್ಲೆಸ್ ಸ್ಟೀಲ್ ಕುಕ್ಕರ್ ಭಾರವಾಗಿರುತ್ತದದೆ. ಇದನ್ನು ತಾಮ್ರ ಮತ್ತು ಅಲ್ಯೂಮಿನಿಯಂನಿಂದ ತಯಾರಿಸಲಾಗುತ್ತದೆ. ಆದ್ರೆ ಈ ಕುಕ್ಕರನ್ನುಕೂಡ ಸಾಮಾನ್ಯ ಕುಕ್ಕರ್‌ನಂತೆಯೇ ತಯಾರಿಸಲಾಗುತ್ತದೆ.  ಈ ಕುಕ್ಕರ್ ನಲ್ಲಿ ಅಡುಗೆ ಮಾಡಿದ್ರೆ ಯಾವುದೇ ರಾಸಾಯನಿಕ ಆಹಾರದಲ್ಲಿ ಸೇರುವುದಿಲ್ಲ ಎನ್ನಲಾಗುತ್ತದೆ.

ಅಲ್ಯೂಮಿನಿಯಂ (Aluminum) ಪ್ರೆಶರ್ ಕುಕ್ಕರ್ :  ಅಲ್ಯೂಮಿನಿಯಂ ಪ್ರೆಶರ್ ಕುಕ್ಕರ್‌ಗಳನ್ನು ಸಾಮಾನ್ಯವಾಗಿ ಭಾರತೀಯ ಮನೆಗಳಲ್ಲಿ ಬಳಸಲಾಗುತ್ತದೆ. ಈ ಕುಕ್ಕರ್‌ನಲ್ಲಿ ಆಹಾರ ಕೇವಲ ಸ್ಟೀಮ್ ಮೂಲಕ ಬೇಯುತ್ತದೆ. ಆದರೆ ಇದು ಅನೇಕ ಆಮ್ಲೀಯ ಅಂಶಗಳನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅಲ್ಯೂಮಿನಿಯಂ ಕುಕ್ಕರ್ ಬಳಸದಂತೆ ತಜ್ಞರು ಸಲಹೆ ನೀಡ್ತಾರೆ. ಅಲ್ಯೂಮಿನಿಯಂ ಕುಕ್ಕರ್ ನಲ್ಲಿ ಆಹಾರ ಬಹುಬೇಗ ಬೇಯುತ್ತದೆ.  ಏಕೆಂದರೆ ಅಲ್ಯೂಮಿನಿಯಂ ವೇಗ ಬಿಸಿಯಾಗುತ್ತದೆ.

Beauty tips : ಸ್ಕಿನ್ ಕೇರ್ ರೂಟೀನಲ್ಲಿ ಗೋಡಂಬಿ ಸೇರಿಸಿ, ಮುಖದ ಹೊಳಪು ಹೆಚ್ಚಿಸಿ

ಇಲೆಕ್ಟ್ರಿಕ್ (Electric) ಪ್ರೆಶರ್ ಕುಕ್ಕರ್ : ಮುಂದಿನ ದಿನಗಳಲ್ಲಿ ಇಲೆಕ್ಟ್ರಿಕ್ ಕುಕ್ಕರ್ ಹೆಚ್ಚು ಪ್ರಸಿದ್ಧಿಗೆ ಬರಲಿದೆ ಎನ್ನಲಾಗ್ತಿದೆ. ಇದ್ರಲ್ಲಿ ಸಿಟಿ ವ್ಯವಸ್ಥೆ ಇರೋದಿಲ್ಲ. ಟೈಮರ್ ಸೆಟ್ಟಿಂಗ್ ಇರುತ್ತದೆ. ಹಾಗೆಯೇ ಇದ್ರಲ್ಲಿ ಆಹಾರ ಕರಕಲಾಗುವ ಸಾಧ್ಯತೆಯಿರೋದಿಲ್ಲ. ಆದ್ರೆ ಮಾರುಕಟ್ಟೆಯಲ್ಲಿ ಬೇರೆ ಕುಕ್ಕರ್ ಗಿಂತ ಇದ್ರ ಬೆಲೆ ಹೆಚ್ಚಿದೆ.  

Latest Videos
Follow Us:
Download App:
  • android
  • ios